ಭಾನುವಾರ, ಮಾರ್ಚ್ 1, 2020

ಜೆಸ್ಕಾಂ ಅತಿಥಿ ಗೃಹ ಉದ್ಘಾಟನೆ

ಯಾದಗಿರಿ, ಫೆಬ್ರುವರಿ 29 (ಕರ್ನಾಟಕ ವಾರ್ತೆ): ಯಾದಗಿರಿ ಜಿಲ್ಲಾ ಜೆಸ್ಕಾಂ ನೌಕರರ ವಸತಿ ಗೃಹಗಳ ಆವರಣದಲ್ಲಿ ನಿರ್ಮಿಸಿದ ಜೆಸ್ಕಾಂ ಅತಿಥಿ ಗೃಹವನ್ನು ಯಾದಗಿರಿ ವಿಧಾನಸಭಾ ಸದಸ್ಯರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್, ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಾದ ರಾಘವೇಂದ್ರ ಡಿ, ಕಲಬುರಗಿ ಜೆಸ್ಕಾಂ ವಿಭಾಗ-2ರ ಶ್ರೀ ಮಠಪತಿ, ಕಲಬುರಗಿ ಜೆಸ್ಕಾಂ ನಿಗಮ ಕಚೇರಿಯ ತಿಪ್ಪಣ್ಣ, ಯಾದಗಿರಿ ಜೆಸ್ಕಾಂ ವಿಭಾಗದ ಎಲ್ಲಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೆಕ್ಕಾಧಿಕಾರಿಗಳು ಹಾಗೂ ಜೆಸ್ಕಾಂ ನೌಕರರ ಸಂಘದ ಪದಾಧಿಕಾರಿಗಳಾದ ಮೋಹನ ಸಿ. ಪವಾರ, ವೀರಭದ್ರಯ್ಯಸ್ವಾಮಿ, ಯಮನಪ್ಪ, ಮಹಾದೇವ ಹಾಗೂ ಜೆಸ್ಕಾಂನ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...