ಅಗ್ನಿ ದುರಂತಗಳ ಬಗ್ಗೆ ಉಚಿತ ಮಾಹಿತಿ
ಯಾದಗಿರಿ, ಮಾರ್ಚ್ 05 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಬೇಸಿಗೆ ಕಾಲ ಪ್ರಾರಂಭ ಆಗಿರುವುದರಿಂದ ಮಾರ್ಚ್ 2020 ರಿಂದ ಜೂನ್ ತಿಂಗಳವರೆಗೆ ಅತೀ ಹೆಚ್ಚು ಅಗ್ನಿ ಅವಘಡಗಳು ಸಂಭವಿಸುವುದರಿಂದ, ಅಗ್ನಿ ದುರಂತಗಳಾಗುವುದರಿಂದ ಸಾರ್ವಜನಿಕರ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ತುಂಬಾ ಜಾಗೃತದಿಂದ ಇರಬೇಕು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮನಗೌಡ ಪೊಲೀಸ್ ಪಾಟೀಲ್ ಅವರು ತಿಳಿಸಿದರು.
ಜಿಲ್ಲೆಯಾದ್ಯಂತ ಬರುವ ಸೂಕ್ಷ್ಮ, ಅತಿ ಸೂಕ್ಷ್ಮ ಸ್ಥಳಗಳಾದ ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಘಟಕಗಳು ಮತ್ತು ಟೈರ್ ಕಾರ್ಖಾನೆಗಳು, ಪಿಠೋಪಕರಣಗಳ ಮಳಿಗೆಗಳು, ಗೋದಾಮುಗಳು, ತೈಲ ಸಂಗ್ರಹಗಾರಗಳು, ಆಸ್ಪತ್ರೆಗಳು, ಶಾಲಾ-ಕಾಲೇಜುಗಳು ಬಹುಮಹಡಿ ಕಟ್ಟಡಗಳು, ವಾಣಿಜ್ಯ ಮಳಿಗೆಗಳು, ಇತ್ಯಾದಿ ಆವರಣಗಳಲ್ಲಿ ಅಗ್ನಿ ಅನಾಹುತಗಳನ್ನು ತಡೆಯಲು ಅಗ್ನಿಶಾಮಕ ಉಪಕರಣಗಳನ್ನು ಹಾಗೂ ಸಾಕಷ್ಟು ನೀರಿನ ಸಂಗ್ರಹಗಾರಗಳನ್ನು ಹೊಂದಲು ತುಂಬಾ ಅವಶ್ಯಕವಾಗಿರುತ್ತದೆ ಎಂದರು.
ಈ ಬಗ್ಗೆ ಸಾರ್ವಜನಿಕರಿಗೆ ಅಗ್ನಿ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಉಪನ್ಯಾಸ, ಅಣಕು ಪ್ರದರ್ಶನ ಹಾಗೂ ಅರಿವು ಮೂಡಿಸುವ ಕುರಿತು ಉಚಿತವಾಗಿ ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಅಗ್ನಿಶಾಮಕ ಠಾಣೆಗಳ ವತಿಯಿಂದ ಮಾಹಿತಿ ನೀಡಲಾಗುವುದು ಎಂದರು.
ಅಗ್ನಿಶಾಮಕ ಠಾಣೆಗಳ ದೂರವಾಣಿ ಸಂಖ್ಯೆಗಳಾದ ಯಾದಗಿರಿ ಅಗ್ನಿಶಾಮಕ ಠಾಣೆ 08473-252101/ 9480823687, ಶಹಾಪುರ ಅಗ್ನಿಶಾಮಕ ಠಾಣೆ 9481032101 / 9480823911 ಹಾಗೂ ಸುರಪುರ ಅಗ್ನಿಶಾಮಕ ಠಾಣೆ 9481744101 / 9480823912 ಮೊ. ನಂಬರ್‍ಗಳಿಗೆ ಆಯಾ ತಾಲೂಕಿನ ಜನರು ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ
ಯಾದಗಿರಿ, ಮಾರ್ಚ್ 05 (ಕರ್ನಾಟಕ ವಾರ್ತೆ): ಯಾದಗಿರಿ ನಗರದ ಹೊಸಹಳ್ಳಿ ಕ್ರಾಸ್ ಭಾರತೀಯ ಸ್ಟೇಟ್ ಬ್ಯಾಂಕ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಉಚಿತವಾಗಿ ಕುರಿ ಸಾಕಾಣಿಕೆ ತರಬೇತಿಯನ್ನು ಆಯೋಜಿಸಲಾಗಿದ್ದು, ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜಿಲ್ಲೆಯ 18 ರಿಂದ 45 ವರ್ಷ ವಯಸ್ಸಿನ ನಿರುದ್ಯೋಗ ಯುವಕ/ಯುವತಿಯರು ಹಾಗೂ ಮಹಿಳೆಯರು ಕನಿಷ್ಠ 7ನೇ ತರಗತಿ ವ್ಯಾಸಂಗ ಹೊಂದಿರಬೇಕು, ಕನ್ನಡ ಓದಲು, ಬರೆಯಲು ಬಲ್ಲವರಾಗಿದ್ದು, ವಿಶೇಷವಾಗಿ ಗ್ರಾಮೀಣ ಪ್ರದೇಶದವರಿಗೆ ಆದ್ಯತೆ ನೀಡಲಾಗುವುದರಿಂದ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಇನ್ನು ಮಾರ್ಚ್ 16ರಿಂದ 25ರವರೆಗೆ ಕುರಿ ಸಾಕಾಣಿಹೆ ತರಬೇತಿ ನಡೆಯಲಿದ್ದು, ಆಸಕ್ತರು ಸಂಸ್ಥೆಯ ಕಚೇರಿಗೆ ಅಂಕಪಟ್ಟಿ ಅಥವಾ ವರ್ಗಾವಣೆ ಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಇತ್ತೀಚಿನ ನಾಲ್ಕು ಪಾಸ್ ಪೊರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಈ ತರಬೇತಿ ಪಡೆಯುವವರಿಗೆ ತರಬೇತಿ ಅವಧಿಯಲ್ಲಿ ಉಚಿತವಾಗಿ ವಸತಿ, ಊಟ ಹಾಗೂ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ. ತರಬೇತಿ ನಂತರ ಪ್ರಮಾಣ ಪತ್ರ ನೀಡಲಾಗುವುದು ಎಂದು ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರಾದ ಎಸ್.ಆರ್. ನಾಡಗೇರಿ ಪ್ರಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ-0847-3253178, ಸಂಸ್ಥೆ ನಿರ್ದೇಶಕರಾದ ಎಸ್.ಆರ್ ನಾಡಿಗೇರಿ ಮೊ.9448994164, ಕಚೇರಿ ಸಹಾಯಕರಾದ ಭೀಮಬಾಯಿ ಮೊ. 9513183651 ಹಾಗೂ ಉಪನ್ಯಾಸಕರಾದ ಎಲ್ ಎನ್.ರೆಡ್ಡಿ ಮೊ. 9113643030 ಸಂಪರ್ಕಿಸಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ