ರೈಲ್ವೇ, ಬಸ್ ನಿಲ್ದಾಣಗಳಿಗೆ ಎಂ. ಕೂರ್ಮಾರಾವ್ ಭೇಟಿ, ಪರಿಶೀಲನೆ
‘ಮಾಹಿತಿ ಕೇಂದ್ರಗಳ ಮೂಲಕ ಕೊರೊನಾ ವೈರಸ್ ಬಗ್ಗೆ ಜಾಗೃತಿ’
-ಜಿಲ್ಲಾಧಿಕಾರಿಗಳು ಎಂ ಕೂರ್ಮಾರಾವ್
ಯಾದಗಿರಿ, ಮಾರ್ಚ್ 17 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಯಾವುದೇ ರೀತಿಯ ಕೊರೊನಾ ವೈರಸ್ ಸೋಂಕು ಇಲ್ಲ. ಎಲ್ಲಾ ರೀತಿ ಮುಂಜಾಂಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳಾದ ಎಂ. ಕೂರ್ಮಾರಾವ್ ಹೇಳಿದರು.ರೈಲ್ವೇ ಸ್ಟೇಷನ್ ಹಾಗೂ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ಕೊಟ್ಟ ಜಿಲ್ಲಾಧಿಕಾರಿಗಳು, ರೈಲ್ವೇ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಬೇಕು ಜೊತೆಗೆ ಮಾಹಿತಿ ಕೇಂದ್ರ ತೆರೆದು ಕರೊನಾ ವೈರಸ್ ಬಗ್ಗೆ ಜನರಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಜೊತೆಗೆ ವಿವಿಧೆಡೆಯಿಂದ ಪ್ರಯಾಣಿಸುವ ಪ್ರಯಾಣಿಕರನ್ನು ತಪಾಸಣೆ ಮಾಡಬೇಕು ಎಂದು ರೈಲ್ವೇ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ನಂತರ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ಕೊಟ್ಟ ಜಿಲ್ಲಾಧಿಕಾರಿಗಳು ಬಸ್ ನಿಲ್ದಾಣವನ್ನು ಪರಿಶೀಲಿಸಿ, ಹೊಸದಾಗಿ ನಿರ್ಮಿಸಿದ ಮಾಹಿತಿ ಕೇಂದ್ರವನ್ನು ವೀಕ್ಷಣೆ ಮಾಡಿದರು. ಇದಲ್ಲದೇ ಯಾದಗಿರಿ, ಶಹಾಪುರ, ಸುರಪುಕ್ಕೆ ಹೋಗುವ ಬಸ್‍ಗಳನ್ನು ಸ್ವಚ್ಛತೆ ಹಾಗೂ ಸುರಕ್ಷತವಾಗಿಡಬೇಕು ಎಂದು ವಿಭಾಗೀಯ ನಿಯಂತ್ರಣ ಸಂಚಾಲಕರಾದ ರಮೇಶ್ ಪಾಟೀಲ್ ಅವರಿಗೆ ಸೂಚಿಸಿದರು.ಇನ್ನು ಮಾಹಿತಿ ಕೇಂದ್ರದಲ್ಲಿ ಕೆಎಸ್‍ಆರ್‍ಟಿಸಿ ಸಿಬ್ಬಂದಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಓರ್ವ ವೈದ್ಯರು ಕಾರ್ಯನಿರ್ವಹಿಸಬೇಕು ಜೊತೆಗೆ ಕೊರೊನಾ ವೈರಸ್ ಸೋಂಕು ಲಕ್ಷಣಗಳು ಕಂಡು ಬರುವ ವ್ಯಕ್ತಿಗಳು ಹಾಗೂ ಅನುಮಾನಾಸ್ಪದ ನಿಶ್ಯಕ್ತ ವ್ಯಕ್ತಿಗಳು ಕಂಡು ಬಂದರೆ ಅಂಥವರನ್ನ ತಕ್ಷಣ ಹಿಡಿದು ಆರೋಗ್ಯ ತಪಾಸಣೆ ಮಾಡಬೇಕು ಎಂದರು. ಹೈದರಾಬಾದ್, ಕಲಬುರಗಿ, ಮಹಾರಾಷ್ಟ್ರದಿಂದ ಬಸ್‍ಗಳಲ್ಲಿ ಬರುವ ಜನರನ್ನ ತಪಾಸಣೆ ಮಾಡಿ ಬಿಡಲು ಜಿಲ್ಲೆಯ ಯರಗೋಳದಲ್ಲಿ ಈಗಾಗಲೇ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಜೊತೆಗೆ ಗುರಮಠಕಲ್ ಹಾಗೂ ಶಹಾಪುರ ತಾಲೂಕಿನ ಮೂಡಬೂಳದಲ್ಲಿ ಚೆಕ್ ಪೋಸ್ಟ್ ನಿರ್ಮಿಸಿಲಾಗುವುದು ಎಂದು ಹೇಳಿದರು.
ಇದಾದ ನಂತರ ನೂತನವಾಗಿ ನಿರ್ಮಾಣವಾದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆಯಲ್ಲಿರುವ ರೋಗಿಗಳ ವಿಶೇಷ ಘಟಕ, ತುರ್ತು ಚಿಕಿತ್ಸಾ ಘಟಕ, ಪ್ರಯೋಗಾಲಯ ಸೇರಿದಂತೆ ವಿವಿಧ ಕೊಠಡಿಗಳನ್ನು ವೀಕ್ಷಿಸಿದರು.ಇದೇ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಮಲ್ಲನಗೌಡ ಎಸ್. ಪಾಟೀಲ್, ಜಿಲ್ಲಾ ಶಸ್ತ್ರ ಚಿಕಿತ್ಸಕರು ಡಾ. ನಾರಾಯಣಪ್ಪ, ಯಾದಗಿರಿ ತಹಶೀಲ್ದಾರರಾದ ಚನ್ನಮಲ್ಲಪ್ಪಘಂಟಿ ಹಾಗೂ ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ