ಮಂಗಳವಾರ, ಮಾರ್ಚ್ 17, 2020

ಕೃಷಿ ವಿಜ್ಞಾನಿಗಳಿಂದ ಪಪ್ಪಾಯ ಬೆಳೆ ವೀಕ್ಷಣೆ
ಯಾದಗಿರಿ, ಮಾರ್ಚ್ 17 (ಕರ್ನಾಟಕ ವಾರ್ತೆ): ಶಹಾಪೂರ ತಾಲ್ಲೂಕಿನ ಮರಮಕಲ್ ಗ್ರಾಮದ ತಿಪ್ಪಣ್ಣ ಗುಂಡಳ್ಳಿ ತಾಂಡಾದ ಅನೀಲ್ ಚಿನ್ನಾ ರಾಠೋಡ್‍ರವರ ಜಮೀನಿನಲ್ಲಿ ಬೆಳೆದ ಪಪ್ಪಾಯ ಗಿಡದ ಹೂವುಗಳು ಉದರುತ್ತಿರುವುದನ್ನು ಭೀಮರಾಯನಗುಡಿಯ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಕೃಷಿ ವಿಜ್ಞಾನಿಗಳು ಭೇಟಿ ನೀಡಿ ವಿಕ್ಷಿಸಿದರು.
ರೈತರ ಜಮೀನಿನಲ್ಲಿ ಪಪ್ಪಾಯ ಗಿಡದ ಹೂವುಗಳು ಉದರುತ್ತಿವುದು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದ್ದು, ರೈತರು ಪಪ್ಪಾಯ ಗಿಡಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವುದು, ರಾಸಾಯನಿಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದರಿಂದ ಹಾಗೂ ಬಿಸಲು ಸಹ ಹೆಚ್ಚಾಗಿರುವದರಿಂದ ಹೂವುಗಳು ಉದುರುತ್ತವೆ ಎಂದು ಅವರು ಹೇಳಿದರು.
ಪಪ್ಪಾಯ ಬೆಳೆಗೆ ನೀರಿನ ಅವಶ್ಯಕತೆ ಇರುವಷ್ಟು ಮಾತ್ರ ನೀರು ಬಿಡಬೇಕು, ಗಿಡದ ಬೆಳೆವಣಿಗೆ ಕುಂಠಿತಗೊಳಿಸಲು ಅನಿಯಂತ್ರಿತ ಸಸ್ಯ ಪ್ರಚೋದಕ ಔಷದಿಗಳ ಬಳಸುವುದನ್ನು ನಿಲ್ಲಿಸಬೇಕು. ಇದರ ಬದಲಾಗಿ ಪಪಾಯ ಕ್ಷೇತ್ರದ ಸುತ್ತಲೂ ಗಾಳಿ ತಡೆಯುವ ಗಿಡಗಳನ್ನು ಬೆಳೆವುದರಿಂದ ಪಪ್ಪಾಯ ಗಿಡಗಳನ್ನು ಬಿಳದಂತೆ ರಕ್ಷಿಸಬಹುದು ಎಂದು ಸಲಹೆ ನಿಡಿದರು.
ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಯಾದಗಿರಿ, ಮಾರ್ಚ್ 17 (ಕರ್ನಾಟಕ ವಾರ್ತೆ): ಜಿಲ್ಲೆಯ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ, ಡಾ||ಬಿ.ಆರ್ ಅಂಬೇಡ್ಕರ್, ಇಂದಿರಾಗಾಂಧಿ ವಸತಿ ಶಾಲೆಗಳಲ್ಲಿ 2020-21ನೇ ಸಾಲಿನ 6ನೇ ತರಗತಿಯ ಪ್ರವೇಶಕ್ಕಾಗಿ ಅರ್ಜಿಆಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವೇಶ ಪರೀಕ್ಷೆ ಮತ್ತು ಆನ್‍ಲೈನ್ ಕೌನ್ಸಿಲಿಂಗ್‍ನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸಲಾಗುವುದು. 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು 6ನೇ ತರಗತಿಗೆ ವಸತಿ ಶಾಲೆಗಳಿಗೆ ದಾಖಲಿಸಲು ಮಾರ್ಚ್ 12ರಿಂದ ಏಪ್ರಿಲ್ 3ರವರೆಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಆದಾಯ ಮೀತಿ: ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ 2.50 ಲಕ್ಷ ರೂ. ಹಿಂದುಳಿದ ವರ್ಗದ ಪ್ರವರ್ಗ-1 2.50 ಲಕ್ಷ ರೂ.ಹಾಗೂ ಹಿಂದುಳಿದ ವರ್ಗ, 2ಎ, 2ಬಿ, 3ಎ, 3ಬಿ 1ಲಕ್ಷ ರೂ.ಗಳನ್ನು ಕುಟುಂಬದ ವಾರ್ಷಿಕ ಆದಾಯ ಮಿತಿ ಹೊಂದಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ ಹಾಗೂ ಮಾಹಿತಿ ಪುಸ್ತಕ-2020ರ ಪರೀಕ್ಷಾ ಪ್ರಾಧಿಕಾರದ ವೆಬ್‍ಸೈಟ್ http://kea.kar.nic.in ನಲ್ಲಿ ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ವೆಬ್‍ಸೈಟ್ http://kreis.kar.nic.xn--in-2vh3ba2fue/ನಲ್ಲಿ ಪ್ರಚುರ ಪಡಿಸಲಾಗಿದೆ.
 ಏಪ್ರಿಲ್ 20ರಿಂದ ಪರೀಕ್ಷೆಯ ಪ್ರವೇಶ ಪತ್ರಗಳನ್ನು ವಸತಿ ಶಿಕ್ಷಣ ಸಂಸ್ಥೆಗಳ ವೆಬ್‍ಸೈಟ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬೇಕು. ಮೇ 6ರಂದು ಬೆಳಿಗ್ಗೆ 11ರಿಂದ 1 ಗಂಟೆಯವರೆಗೆ 100 ಅಂಕಗಳ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಸೂಚನೆ: SಂಖಿS ಸಂಖ್ಯೆಯನ್ನು ಅಭ್ಯರ್ಥಿಯು ಈಗಾಗಲೇ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲೆಯಿಂದ ಪಡೆದು ಮತ್ತು ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳನ್ನು ತೆಗೆದುಕೊಂಡು ಅರ್ಜಿ ಸಲ್ಲಿಸುವ ಸಮಯದಲ್ಲಿ ಸಂಬಂಧಿಸಿದ ವಸತಿ ಶಾಲೆಯ ಮುಖ್ಯಸ್ಥರನ್ನು ಸಂಪರ್ಕಿಸಬೇಕು.
ವಸತಿ ಶಾಲೆಗಳನ್ನು ನಮೂದಿಸುವ ಕ್ರಮ: ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು/ಪೋಷಕರು ಯಾವ ಶಾಲೆಗಳಲ್ಲಿ ದಾಖಲಾತಿ ಬಯಸುತ್ತಾರೋ. ಅಂತಹ ಶಾಲೆಗಳನ್ನು ಕ್ರಮದಲ್ಲಿ ಆದ್ಯತೆಯ ಮೇರೆಗೆ ಆಯ್ಕೆ ಮಾಡಿಕೊಳ್ಳಬೇಕು. ಅದರಂತೆ ಮೆರಿಟ್ ಆಧಾರದ ಮೇಲೆ ಶಾಲೆಗಳ Computerised Auto Selection ಮೂಲಕ ಹಂಚಿಕೆಯನ್ನು ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೆಇಎ ಸಹಾಯವಾಣಿ ಸಂಖ್ಯೆ 080-23460460ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಮಾ. 20ರಂದು ನೇರ ಫೋನ್ ಇನ್ ಕಾರ್ಯಕ್ರಮ
ಯಾದಗಿರಿ, ಮಾರ್ಚ್ 17 (ಕರ್ನಾಟಕ ವಾರ್ತೆ): ಜಿಲ್ಲೆಯ ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಯ ಮಧ್ಯೆ ಉತ್ತಮ ಸಂಪರ್ಕ ಬೆಳೆಯುವ ನಿಟ್ಟಿನಲ್ಲಿ ಉತ್ತಮ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಸುಧಾರಿಸಲು ಮಾರ್ಚ್ 20 ರಂದು ಬೆಳಗ್ಗೆ 11ಗಂಟೆಯಿಂದ 12ರವರೆಗೆ ಜಿಲ್ಲಾ ಪೊಲೀಸ್  ಕಾರ್ಯಾಲಯದಲ್ಲಿ ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಎಲ್ಲಾ ಸಾರ್ವಜನಿಕರು, ಫಿರ್ಯಾದಿ, ನೊಂದವರು ಪೊಲೀಸ್  ಇಲಾಖೆಗೆ ಸಂಬಂಧಿಸಿದಂತಹ ಸಮಸ್ಯೆಗಳಿದ್ದಲ್ಲಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಸಂಚಾರ ವ್ಯವಸ್ಥೆ ಇನ್ನಿತರ ಸುಧಾರಣೆಗಳ ಬಗ್ಗೆ ಸಲಹೆಗಳಿದ್ದಲ್ಲಿ ನೇರವಾಗಿ ಮೊ.ನಂ 9480803600 ಹಾಗೂ ದೂರವಾಣಿ ಸಂಖ್ಯೆ 08473-253736ಗೆ ಕರೆ ಮಾಡಿ ತಮ್ಮ ಸಲಹೆ, ಸಮಸ್ಯೆಗಳು, ದೂರುಗಳನ್ನು ಹೇಳಿದ್ದಲ್ಲಿ ಅವುಗಳಿಗೆ ತಕ್ಷಣ ಪರಿಹಾರ ಕ್ರಮ ಕಂಡುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನಾವಣೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ.27ರಂದು ಬಹಿರಂಗ ಹರಾಜು
ಯಾದಗಿರಿ, ಮಾರ್ಚ್ 17 (ಕರ್ನಾಟಕ ವಾರ್ತೆ): ಶಹಾಪುರ ತಾಲೂಕಿನ ಭೀಮರಾಯನಗುಡಿಯ ಕೃಷಿ ಸಂಶೋಧನಾ ತೋಟಗಾರಿಕೆ ಕ್ಷೇತ್ರದಲ್ಲಿ ಮಾರ್ಚ್ 27ರಂದು ಬೆಳಗ್ಗೆ 11 ಗಂಟೆಗೆ ಚಿಕ್ಕು ಮತ್ತು ಮಾವು ಗಿಡಗಳ ಫಸಲಿನ ಜಾಹೀರ ಲೀಲಾವು ಮಾಡಲಾಗುವುದು ಎಂದು ಕೃಷಿ ಮಹಾವಿದ್ಯಾಲಯದ ಡೀನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರಲ್ಲಿ ಭಾಗವಹಿಸುವ ಸಾರ್ವಜನಿಕರು ಚಿಕ್ಕು ಮತ್ತು ಮಾವು ಫಸಲಿನ ಅವಧಿ ಹರಾಜು ಮಾಡಿದ ದಿನಾಂಕದಿಂದ ಮೂರು ತಿಂಗಳವರೆಗೆ ಮಾತ್ರ ಇರುತ್ತದೆ. 
ಹರಾಜಿನ ಕರಾರುಗಳು: ಹರಾಜಿನಲ್ಲಿ ಭಾಗವಹಿಸುವವರು 5 ಸಾವಿರ ರೂ. ಹಣವನ್ನು ಠೇವಣಿ ಇಡಬೇಕು, ಅತೀ ಹೆಚ್ಚಿನ ಹರಾಜು ಬೆಲೆ ಕೂಗಿದವರಿಗೆ ಅರ್ಧ ಹಣವನ್ನು 24 ಗಂಟೆಯೊಳಗೆ ಹಾಗೂ ಉಳಿದ ಹಣವನ್ನು 15 ದಿನಗಳೊಳಗೆ ನೀಡಬೇಕು, ಹರಾಜಿನ ಅವಧಿಯಲ್ಲಿ ಗಿಡಗಳಿಗೆ ಗೊಬ್ಬರ, ಔಷಧಿಗಳನ್ನು ಕೃಷಿ ಮಹಾವಿದ್ಯಾಲಯ ಒದಗಿಸುತ್ತೆದೆ. ಹೆಚ್ಚಿನ ಮಾಹಿತಿಗಾಗಿ ಆವರಣದ ಮುಖ್ಯಸ್ಥರು ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. 
ಮಾರ್ಚ್ 27ರಂದು ಬಹಿರಂಗ ಹರಾಜು
ಯಾದಗಿರಿ, ಮಾರ್ಚ್ 17 (ಕರ್ನಾಟಕ ವಾರ್ತೆ): ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ 2020-21ನೇ ಸಾಲಿನ ತರಕಾರಿ ಮಾರ್ಕೆಟ್ ಬಹಿರಂಗ ಹರಾಜು ಮಾರ್ಚ್ 27ರಂದು ಬೆಳಗ್ಗೆ 11 ಗಂಟೆಗೆ ಪುರಸಭೆ ಕಾರ್ಯಾಲಯದಲ್ಲಿ ನಡೆಯಲಿದೆ ಎಂದು ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತಿ  ಉಳ್ಳವರು ಹರಾಜಿನಲ್ಲಿ 1 ಲಕ್ಷ ರೂ. ಮುಂಗಡವಾಗಿ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಮುಖ್ಯಾಧಿಕಾರಿಗಳ ಹೆಸರಿನಲ್ಲಿ ಡಿಡಿ ತೆಗೆದುಕೊಂಡು, ಠೇವಣಿ ಕಟ್ಟಿ ಹರಾಜಿನಲ್ಲಿ ಭಾಗವಹಿಸಬೇಕೆಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪುರಸಭೆ ಕಾರ್ಯಾಲಯ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...