ಇಂದು ಆದಾಯ ತೆರಿಗೆ ವಿಚಾರಗೋಷ್ಠಿ
ಯಾದಗಿರಿ, ಮಾರ್ಚ್ ೦೩ (ಕರ್ನಾಟಕ ವಾರ್ತೆ): ಯಾದಗಿರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಆದಾಯ ತೆರಿಗೆ ಹಾಗೂ ಮುಂಗಡ ಆದಾಯ ತೆರಿಗೆ ಪಾವತಿಸುವ ಬಗ್ಗೆ ಮಾರ್ಚ್ ೦೪ರಂದು ಸಂಜೆ ೪ ಗಂಟೆಗೆ ಜಿಲ್ಲೆಯ ಎಪಿಎಂಸಿ ಚೇಂಬರ್ ಕಚೇರಿಯಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಕಲಬುರಗಿ ಆದಾಯ ತೆರಿಗೆ ಇಲಾಖೆ ಉಪ ಆಯುಕ್ತರು, ಬಾಬುರಾಯ ಆರ್. ಹಾಗೂ ಯಾದಗಿರಿ ಆದಾಯ ತೆರಿಗೆ ಅಧಿಕಾರಿ ದೇಬಸುಂದರ ಗೋರೆ ಇವರೊಂದಿಗೆ ಸಂವಾದ ಕಾರ್ಯಕ್ರಮ ಜರುಗಲಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಯಾದಗಿರಿ, ಅಧ್ಯಕ್ಷರಾದ ಹನುಮಾನದಾಸ ಮುಂದಡಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಶಾಂತಿಪಾಲನೆ ಪೂರ್ವಭಾವಿ ಸಭೆ
ಯಾದಗಿರಿ, ಮಾರ್ಚ್ ೦೩ (ಕರ್ನಾಟಕ ವಾರ್ತೆ): ಮಾರ್ಚ್ ೯ ಮತ್ತು ೧೦ ರಂದು ಹೋಳಿ ಹಬ್ಬ ಆಚರಣೆ ಪ್ರಯುಕ್ತ ಜಿಲ್ಲಾಧಿಕಾರಿಗಳಾದ ಎಂ. ಕೂರ್ಮಾ ರಾವ್ ಅವರ ಅಧ್ಯಕ್ಷತೆಯಲ್ಲಿ ಹಬ್ಬದ ಶಾಂತಿಪಾಲನೆ ಪೂರ್ವಭಾವಿ ಸಭೆಯನ್ನು ಮಾರ್ಚ್ ೪ರಂದು ಮಧ್ಯಾಹ್ನ ೩.೩೦ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ