ಅಬಕಾರಿ ಅಕ್ರಮ ಚಟುವಟಿಕೆ ಕಂಡುಬಂದರೆ ದೂರು ನೀಡಿ
ಯಾದಗಿರಿ, ಮಾರ್ಚ್ 27 (ಕರ್ನಾಟಕ ವಾರ್ತೆ): ರಾಜ್ಯದಾದ್ಯಂತ ಕೊರೊನಾ ವೈರಸ್ (ಕೋವಿಡ್-19) ನಿಯಂತ್ರಿಸಲು ಅನುಕೂಲವಾಗುವಂತೆ ರಾಜ್ಯದಲ್ಲಿ ಸಂಪೂರ್ಣ ಲಾಕ್‍ಡೌನ್ ಪರಿಸ್ಥಿತಿ ಘೋಷಿಸಿದ್ದು, ಅದರ ಅಂಗವಾಗಿ ಯಾದಗಿರಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಪರಿಸ್ಥಿತಿಯ ದುರುಪಯೋಗಪಡಿಸಿಕೊಂಡು ಕೆಲ ದುಷ್ಕರ್ಮಿಗಳು ಹಣ ಮಾಡುವ ದಂಧೆಯಲ್ಲಿ ತೊಡಗುವ ಸಾಧ್ಯತೆಗಳು ಇರುವುದರಿಂದ ಜಿಲ್ಲೆಯಲ್ಲಿನ ಯಾವುದೇ ಗ್ರಾಮಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಬಕಾರಿ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ಈ ಕೆಳಕಂಡ ಅಧಿಕಾರಿಗಳ ದೂರವಾಣಿ ಅಥವಾ ಕಂಟ್ರೋಲ್ ರೂಮಿಗೆ ದೂರು ನೀಡಲು ತಿಳಿಸಲಾಗಿದೆ.
ಯಾದಗಿರಿ ವಲಯ ಅಬಕಾರಿ ನಿರೀಕ್ಷಕರಾದ ಪ್ರಕಾಶ ಮಾಕೊಂಡ ಮೊ:9902747011, ಶಹಾಪೂರ ವಲಯ ಭೀಮಣ್ಣ ರಾಠೋಡ ಮೊ:9449690873, ಸುರಪೂರ ವಲಯ ಶ್ರೀಶೈಲ್ ಒಡೆಯರ್ ಮೊ:9480289919 ಇವರನ್ನು ಸಾರ್ವಜನಿಕರು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಹಾಗೂ ದೂರುಗಳನ್ನು ನೀಡಬಹುದು.
ಇದಲ್ಲದೇ ಜಿಲ್ಲಾ ವ್ಯಾಪ್ತಿಯ ಮಾಹಿತಿ ಮತ್ತು ದೂರುಗಳಿಗೆ ಸಂಬಂಧಿಸಿದಂತೆ, ಶಹಾಪುರ ಉಪ ವಿಭಾಗದ ಅಬಕಾರಿ ನಿರೀಕ್ಷಕರಾದ ಭಾರತಿ ಮೊ:9449597151 ಹಾಗೂ ಶಹಾಪೂರ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರಾದ ಮಹ್ಮದ್ ಇಸ್ಮಾಯಿಲ್ ಇನಾಮದಾರ ಮೊ:9449597160 ಹಾಗೂ ಜಿಲ್ಲಾ ಅಬಕಾರಿ ಸ್ಕ್ವಾಡ್ ಇನ್‍ಸ್ಪೆಕ್ಟರ್ ಕೇದಾರನಾಥ ಮೊ:9449597171 ಇವರನ್ನು ಸಂಪರ್ಕಿಸಬಹುದು.
ಕಂಟ್ರೋಲ್ ರೂಮ್ ಸಂಖ್ಯೆಗಳು: ಯಾದಗಿರಿ ಅಬಕಾರಿ ಉಪ ಆಯುಕ್ತರ ಕಚೇರಿ ದೂ: 08473-250479, ಯಾದಗಿರಿ ವಲಯ ಅಬಕಾರಿ ನಿರೀಕ್ಷಕರ ಕಚೇರಿ 08473-253709, ಶಹಾಪೂರ ವಲಯ ಅಬಕಾರಿ ನಿರೀಕ್ಷಕರ ಕಚೇರಿ 9591312374, ಸುರಪೂರ ವಲಯ ಅಬಕಾರಿ ನಿರೀಕ್ಷಕರ ಕಚೇರಿ 9449942987, ಶಹಾಪೂರ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರ ಕಚೇರಿ 8792389759 ಸಂಪರ್ಕಿಸಿ ದೂರು ಅಥವಾ ಮಾಹಿತಿ ನೀಡಿ ಅಬಕಾರಿ ಅಕ್ರಮ ತಡೆಯುವಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕಾಗಿ ಜಿಲ್ಲೆಯ ಪ್ರಭಾರಿ ಅಬಕಾರಿ ಉಪ ಆಯುಕ್ತರಾದ ಶಶಿಕಲಾ ಒಡೆಯರ್ (ಮೊ:9449597150) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ