ಬುಧವಾರ, ಮಾರ್ಚ್ 18, 2020

ಕೊರೊನಾ ಎಫೆಕ್ಟ್‍ಗೆ ಒಂದು ವಾರ ಶಹಾಪುರ ಬಂದ್
ಯಾದಗಿರಿ, ಮಾರ್ಚ್ 17 (ಕರ್ನಾಟಕ ವಾರ್ತೆ): ಜಿಲ್ಲೆಯ ಶಹಾಪುರದಲ್ಲಿ ಕೊರೊನಾ ಹರಡುವುದನ್ನು ತಡೆಗಟ್ಟುವ ಸಲುವಾಗಿ ಮುಂಜಾಗ್ರತಾ ಕ್ರಮಗಳು ಕೈಗೊಳ್ಳಲಾಗಿದ್ದು, ಒಂದು ವಾರದವರೆಗೆ ಪಟ್ಟಣದಲ್ಲಿ ವ್ಯಾಪ್ತಿಯಲ್ಲಿ ಬರುವ ಚಿತ್ರಮಂದಿರಗಳ ಪ್ರದರ್ಶನ, ಬಾರ್ ಮತ್ತು ಪಬ್‍ಗಳನ್ನು ಬಂದ್ ಮಾಡುವಂತೆ ಶಹಾಪುರ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಇನ್ನು ಸಾರ್ವಜನಿಕರು ಸೇರಿವ ಸ್ಥಳಗಳಾದ ಸಂತೆ, ಜಾತ್ರೆ, ಉದ್ಯಾನವನಗಳು, ಸಭೆ-ಸಮಾರಂಭಗಳ, ವಸ್ತು ಪ್ರದರ್ಶನ ಸೇರಿದಂತೆ ಇತ್ಯಾದಿಗಳನ್ನು ಬಂದ್ ಮಾಡಬೇಕು. ಅಲ್ಲದೇ ಕೋಳಿ ಮತ್ತು ಮಾಂಸ ಮಾರಾಟವನ್ನು ರಸ್ತೆಗಳ ಬದಿಯಲ್ಲಿ, ತೆರೆದ ಹಣ್ಣುಗಳು ಮಾರಾಟ, ಆಹಾರ ಮಾರಾಟವನ್ನು ಸಹ ಒಂದು ವಾರದ ಅವಧಿಗೆ ನಿಷೇಧಿಸಬೇಕೆಂದು ತಿಳಿಸಿದ್ದಾರೆ.
ಶಹಾಪುರ ಪಟ್ಟಣದ ಸಾರ್ವಜನಿಕರು, ವ್ಯಾಪರಸ್ಥರು ಪಟ್ಟಣದ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವು ನಿಟ್ಟಿನಲ್ಲಿ ಬಂದ್ ಮಾಡಲಾಗಿದ್ದು, ಈ ಎಲ್ಲಾ ಸೂಚನೆಗಳನ್ನು ತಪ್ಪದೆ ಪಾಲಿಸಬೇಕು. ಇದನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 
ಭೂಮಿ ಯೋಜನೆಯಡಿ ಜಿಲ್ಲೆಗೆ 2ನೇ ಸ್ಥಾನ 
ಯಾದಗಿರಿ, ಮಾರ್ಚ್ 17 (ಕರ್ನಾಟಕ ವಾರ್ತೆ) ಭೂಮಿ ಯೋಜನೆಯಡಿಯಲ್ಲಿ ಸಾರ್ವಜನಿಕರಿಂದ ಜಿಲ್ಲೆಯಲ್ಲಿ ಫೆಬ್ರುವರಿ-2020ರ ಮಾಹೆಯಲ್ಲಿ ಸ್ವೀಕರಿಸಲಾಗಿರುವ 7066ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಿ 3.16 ಸಿಗ್ಮಾ ಮೌಲ್ಯವನ್ನು ಪಡೆದಿರುವುದರಿಂದ ವಿಲೇವಾರಿ ಸೂಚ್ಯಂಕದ ಪ್ರಕಾರ ಯಾದಗಿರಿ ಜಿಲ್ಲೆಯು ರಾಜ್ಯ ಮಟ್ಟದಲ್ಲಿ ಫೆಬ್ರುವರಿ ಮಾಹೆಯಲ್ಲಿ ದ್ವೀತಿಯ ಸ್ಥಾನ ಪಡೆದಿರುವುದಕ್ಕೆ ಭೂಮಿ ಮತ್ತು ಯುಪಿಓಆರ್ ಪದನಿಮಿತ್ತ ನಿರ್ದೇಶಕರು ಹಾಗೂ ಭೂಮಾಪನ ಇಲಾಖೆಯ ಆಯುಕ್ತರು ಯಾದಗಿರಿ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾರಾವ್ ಅವರಿಗೆ ಶ್ಲಾಘಿಸಿ ಅಭಿನಂದನಾ ಪತ್ರವನ್ನು ನೀಡಿದ್ದಾರೆ.
ಜಿಲ್ಲೆಯ ಎಲ್ಲಾ ತಹಶೀಲ್ದಾರ ಕಚೇರಿಗಳನ್ನು ಒಳಗೊಂಡು ವಿವಿಧ ಭೂಮಿ ಸೇವೆಗಳನ್ನು ಸೇರಿ ಒಟ್ಟು 7066 ಅರ್ಜಿಗಳನ್ನು ನಿಗಧಿತ ಕಾಲಾವಧಿಯಲ್ಲಿ ವಿಲೇಗೊಳಿಸಿ ರಾಜ್ಯ ಮಟ್ಟದಲ್ಲಿ 3.16 ಸಿಗ್ಮಾ ಮೌಲ್ಯವನ್ನು ಪಡೆದಿದ್ದು, 3.01702 ಅರ್ಜಿಗಳ ವಿಲೇವಾರಿ ಸೂಚ್ಯಂಕದ ಪ್ರಕಾರ ಸ್ವೀಕೃತವಾದ ಅರ್ಜಿಗಳನ್ನು ಶೀಘ್ರ ವಿಲೇ ಮಾಡಿ ಫೆಬ್ರುವರಿ 2020 ಮಾಹೆಯಲ್ಲಿ ಯಾದಗಿರಿ ಜಿಲ್ಲೆಯು ರಾಜ್ಯ ಮಟ್ಟದಲ್ಲಿ ದ್ವೀತಿಯ ಸ್ಥಾನ ಪಡೆದಿರುವುದಕ್ಕೆ ಜಿಲ್ಲಾಧಿಕಾರಿಗಳು ಸಂತಸಗೊಂಡಿದ್ದಾರೆ.
 ಇನ್ನು ಜಿಲ್ಲೆಯ ತಹಶೀಲ್ದಾರರು, ತಾಲ್ಲೂಕು ಕಚೇರಿಯ ಅಧಿಕಾರಿ, ಸಿಬ್ಬಂದಿ ಕಾರ್ಯಸಾಧನೆ ಕಾರಣವಾಗಿರುತ್ತದೆ. ಅಲ್ಲದೇ  ಜಿಲ್ಲಾಡಳಿತದ ಪರವಾಗಿ ಸಹಾಯಕ ಆಯುಕ್ತರು, ಜಿಲ್ಲೆಯ ಆಯಾ ತಾಲ್ಲೂಕಿನ ಭೂಮಿ ಕೋಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿ ಬಗ್ಗೆ ಜಿಲ್ಲಾಧಿಕಾರಿಗಳು ಅಭಿನಂದನೆ ವ್ಯಕ್ತಪಡಿಸಿದ್ದಾರೆ. 
ಮುಂದಿನ ದಿನಗಳಲ್ಲಿಯೂ ಕೂಡ ಇದೇ ರೀತಿ ಪ್ರಗತಿಯನ್ನು ಸಾಧಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಬರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಅವರು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...