ಗುರುವಾರ, ಮಾರ್ಚ್ 19, 2020

ಮೊಬೈಲ್, ವಾಹನ ಹರಾಜು ಮುಂದೂಡಿಕೆ
ಯಾದಗಿರಿ, ಮಾರ್ಚ್ 19 (ಕರ್ನಾಟಕ ವಾರ್ತೆ): ಸುರಪುರದ ಸಿವಿಲ್ ನ್ಯಾಯಾಧೀಶರ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳವರ ನ್ಯಾಯಾಲಯದ ವಿವಿಧ ಪ್ರಕರಣಗಳಲ್ಲಿನ ಮೊಬೈಲ್ ಮತ್ತು ವಾಹನಗಳ ಸಾರ್ವಜನಿಕ ಹರಾಜು ಪ್ರಕ್ರಿಯೆಯನ್ನು ಮಾರ್ಚ್ 21ರಂದು ಕೋರ್ಟ್ ಆವರಣದಲ್ಲಿ ನಿಗದಿಪಡಿಸಲಾಗಿತ್ತು. ಕೋವಿಡ್-19 (ಕೊರೊನಾ) ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಸಂದಣಿ ನಿರ್ಬಂಧಿಸಿದ ಪ್ರಯುಕ್ತ ಹರಾಜು ಪ್ರಕ್ರಿಯೆಯನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಸಿವಿಲ್ ನ್ಯಾಯಾಧೀಶರಾದ ಶ್ರೀ ಚಿದಾನಂದ ಬಡಿಗೇರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟ್ಯಾಂಕರ್ ನೀರು ಪೂರೈಕೆಗೆ ಅರ್ಜಿ ಆಹ್ವಾನ
ಯಾದಗಿರಿ, ಮಾರ್ಚ್ 19 (ಕರ್ನಾಟಕ ವಾರ್ತೆ): 2020ನೇ ಸಾಲಿನ ಬೇಸಿಗೆ ಕಾಲದಲ್ಲಿ ಶಹಾಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಗ್ರಾಮ, ಜನವಸತಿ ಪ್ರದೇಶಗಳಲ್ಲಿ ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸೂಚಿಸುವ ಗ್ರಾಮ, ಜನವಸತಿ ಪ್ರದೇಶಗಳಿಗೆ ಮೊಬೈಲ್ ಆ್ಯಪ್ ಆಧಾರಿತ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಪೊರೈಸುವ ಅರ್ಹ ಸರಬರಾಜುದಾರರಿಂದ ಅಲ್ಪಾವಧಿ ಟೆಂಡರ್ ಆಹ್ವಾನಿಸಲಾಗಿದೆ.
2020ನೇ ಸಾಲಿನ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವವರೆಗೆ ಸರಬರಾಜು ಮಾಡಲು ಪೂರ್ವ ಸಿದ್ಧತೆಗಾಗಿ ಹಾಗೂ ಮುಂಜಾಗ್ರತೆಗಾಗಿ ನೀರಿನ ಟ್ಯಾಂಕರ್‍ಗಳನ್ನು ಕಾಯ್ದಿರಿಸಲು ಕೆ.ಟಿ.ಪಿ.ಪಿ ಕಾಯ್ದೆ ಪ್ರಕಾರ ಅರ್ಹ ಸರಬರಾಜುದಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 21ರ ಸಾಯಂಕಾಲ 5.30 ಗಂಟೆಯವರೆಗೆ ಟೆಂಡರ್ ಅರ್ಜಿ ಪಡೆಯಬಹುದು. ಮಾರ್ಚ್ 23ರಂದು ಸಂಜೆ 4 ಗಂಟೆಯವರೆಗೆ ಭರ್ತಿ ಮಾಡಿದ ಟೆಂಡರ್‍ಗಳನ್ನು ಸಲ್ಲಿಸಬಹುದು. ಮಾರ್ಚ್ 27ರ ಸಾಯಂಕಾಲ 4 ಗಂಟೆಗೆ ಸೀಲ್ಡ್ ಟೆಂಡರ್‍ಗಳನ್ನು ತೆರೆಯಲಾಗುವುದು. 3000, 4000, 5000 ಲೀಟರ್ ಸಾಮಥ್ರ್ಯದ ಟ್ರಿಪ್ ಆಧಾರಿತ ಟ್ಯಾಂಕರ್ ಮೂಲಕ ಕುಡಿಯಲು ಯೋಗ್ಯವಾದ ನೀರನ್ನು ಬೇಸಿಗೆ ಅವಧಿಯಲ್ಲಿ ಅಥವಾ ಕುಡಿಯುವ ನೀರಿನ ಸಮಸ್ಯೆ ಬಗೆಹರೆಯುವವರೆಗೆ ಸರಬರಾಜು ಮಾಡಬೇಕು ಎಂದು ಶಹಾಪುರ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...