ಬುಧವಾರ, ಮಾರ್ಚ್ 4, 2020

ಆದಾಯ ತೆರಿಗೆ ಮತ್ತು ಮುಂಗಡ ಆದಾಯ ತೆರಿಗೆ ಪಾವತಿಸುವ ವಿಚಾರಗೋಷ್ಠಿ
ನಿಗಧಿತ ಸಮಯದಲ್ಲಿ ಆದಾಯ ತೆರಿಗೆ ಪಾವತಿಸಿ
                                 ಆದಾಯ ತೆರಿಗೆ ಇಲಾಖೆಯ ಅಧಿಕಾರಿ ನಾಗರಾಜ
ಯಾದಗಿರಿ, ಮಾರ್ಚ್ 04 (ಕರ್ನಾಟಕ ವಾರ್ತೆ): ಜಿಲ್ಲೆಯ ಸಾರ್ವಜನಿಕರು, ವ್ಯಾಪಾರಸ್ಥರು, ಆದಾಯ ತೆರಿಗೆ ಪಾವತಿದಾರರು ನಿಗಧಿತ ಕಾಲಮಿತಿಯೊಳಗೆ ಆದಾಯ ತೆರಿಗೆಯನ್ನು ಪಾವತಿಸುವ ಮೂಲಕ ಹೆಚ್ಚನ ದಂಡ ಪಾವತಿಸುವದು ತಪ್ಪುತ್ತದೆ ಎಂದು ಕಲಬುರಗಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ನಾಗರಾಜ ಅವರು ಹೇಳಿದರು.
ಯಾದಗಿರಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿರುವ ಚೇಂಬರ್ ಕಚೇರಿಯಲ್ಲಿ ಬುಧವಾರ ಯಾದಗಿರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಆದಾಯ ತೆರಿಗೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆದಾಯ ತೆರಿಗೆ ಮತ್ತು ಮುಂಗಡ ಆದಾಯ ತೆರಿಗೆ ಪಾವತಿಸುವ ಕುರಿತು ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಆದಾಯ ತೆರಿಗೆಯನ್ನು ಸರಿಯಾದ ಸಮಯಕ್ಕೆ ಪಾವತಿಸಬೇಕು. ಪಾವತಿಸದೆ ಇರುವವರಿಗೆ  ನೋಟಿಸ್ ನೀಡುವ ಮೂಲಕ ಕಾನೂನು ಕ್ರಮ ಜರುಗಿಸಲಾಗುತ್ತದೆ. ಹೀಗಾಗಿ ಯಾರೂ ದಂಡ ಕಟ್ಟುವ ಮಟ್ಟಕ್ಕೆ  ಹೋಗದೆ ಅವಧಿ ಪೂರ್ವದಲ್ಲೇ ಆದಾಯ ತೆರಿಗೆಯನ್ನು ಪಾವತಿಸಬೇಕು. ಈ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದವರು ಬೇರೆಯವರಿಗೂ ಸಹಿತ ಆದಾಯ ತೆರಿಗೆ  ಪಾವತಿಸುವ ಕುರಿತು ತಿಳುವಳಿಕೆ ನೀಡಬೇಕು ಎಂದು ಅವರು ಹೇಳಿದರು.
ಯಾದಗಿರಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಾದ ದೇಬಸುಂದರ ಗೋರೆ ಅವರು ಮಾತನಾಡಿ, ಪ್ರಸ್ತುತ ಬಜೆಟ್‍ನಲ್ಲಿ ‘ವಿವಾದ್ ಸೇ ವಿಶ್ವಾಸ’ ಎನ್ನುವ ಹೊಸ ಯೋಜನೆಯನ್ನು ಪರಿಚಯಿಸಿದ್ದು. ಕಲಂ 139ರ ಪ್ರಕಾರ ನಿಗಧಿತ ಅವಧಿಯಲ್ಲಿ ಇನ್‍ಕಮ್ ಟ್ಯಾಕ್ಸ್ ರಿಟನ್‍ಫೈಲ್ ಮಾಡಬೇಕು. ಕಲಂ 208 ರ ಪ್ರಕಾರ ಮುಂಗಡ ಆದಾಯ ತೆರಿಗೆ ಪಾವತಿಸಬೇಕು. ಕಲಂ 234(ಬಿ) ರ ಪ್ರಕಾರ ಇನ್‍ಟ್ರಸ್ಟ್ ಫಾರ್ ಲೆಸ್ ಪೇಮೆಂಟ್ ಆಫ್ ಅಡ್ವಾನ್ಸ್ ಟ್ಯಾಕ್ಸ್, ಕಲಂ ಪ್ರಕಾರ 234(ಇ) ಪ್ರಕಾರ ಇನ್‍ಟ್ರಸ್ಟ್ ಫಾರ್ ಲೆಸ್ ಪೇಮೆಂಟ್ ಆಫ್ ಅಡ್ವಾನ್ಸ್ ಟ್ಯಾಕ್ಸ್ ಇನ್‍ಸ್ಟಾಲ್‍ಮೆಂಟ್ ಇರುತ್ತದೆ ಎಂದು ಆದಾಯ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಕಾನೂನು ಕುರಿತು ಮಾಹಿತಿ ನೀಡಿ, ತೆರಿಗೆ ಪಾವತಿದಾರರು ಆಗಾಗ ಆದಾಯ ತೆರಿಗೆ ಇಲಾಖೆಯ ಅಂತರ್ಜಾಲದ ವೆಬ್‍ಸೈಟ್‍ಗೆ ಬೇಟಿ ನೀಡುವ ಮೂಲಕ ಮಾಹಿತಿ ಪಡೆಯಬಹುದು ಎಂದು ಅವರು ಮಾಹಿತಿ ನೀಡಿದರು. 
ಇದೆ ಸಂದರ್ಭದಲ್ಲಿ ಶಶಿಧರ ಪಾಟೀಲ್ ಅವರು ಮಾತನಾಡಿ, ಆದಾಯ ತೆರಿಗೆ ಪಾವತಿದಾರರು ಇದೇ ಮಾಚ್ 31ರವರೆಗೆ ಆದಾಯ ತೆರಿಗೆ ಪಾವತಿಸಲು ಕಾಲಾವಕಾಶವಿದ್ದು ಸಮಯದ ಸದುಪಯೋಗ ಪಡೆದು ಸ್ವಯಂ ಪ್ರೇರಿತರಾಗಿ ಆದಾಯ ತೆರಿಗೆ ಪಾವತಿಸಬೇಕು. ಮುಂದಿನ ವರ್ಷದಿಂದ ಆದಾಯ ತೆರಿಗೆ ಪಾವತಿಸುವ ಕುರಿತು ಹೊಸ ಯೋಜನೆಗಳು ಜಾರಿಯಾಗುತ್ತಿದ್ದು ಅವುಗಳ ಕುರಿತು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ವ್ಯಾಪಾರಸ್ಥರು, ಲೆಕ್ಕಪರಿಶೋಧಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಅಕ್ಕಿ ನಿರೂಪಿಸಿದರು, ಹನುಮಾನದಾಸ ಮುದಂಡಾ ಸ್ವಾಗತಿಸಿದರು. ತೆರಿಗೆ ಕಮಿಟಿ ಅಧ್ಯಕ್ಷರಾದ ಗಾಂಧಿ ರಾಜೇಂದ್ರ ಜೈನ್ ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...