ಸೋಮವಾರ, ಮಾರ್ಚ್ 2, 2020

6ನೇ ತರಗತಿ ಪ್ರವೇಶಕ್ಕೆ ಅರ್ಜಿ ಅಹ್ವಾನ
ಯಾದಗಿರಿ, ಮಾರ್ಚ್ 02 (ಕರ್ನಾಟಕ ವಾರ್ತೆ) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೌಲಾನಾ ಆಜಾದ ಮಾದರಿ (ಆಂಗ್ಲ ಮಾಧ್ಯಮ) ಶಾಲೆಗಳಲ್ಲಿ, 2020-21ನೇ ಸಾಲಿಗೆ ಜಿಲ್ಲೆಯ ಶಹಾಪುರ ಪಟ್ಟಣ, ಸುರಪುರದ(ರಂಗಂಪೇಠ), ಗುರಮಠಕಲ್, ಯಾದಗಿರಿ ಹಾಗೂ ಹುಣಸಗಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಆಜಾದ ಮಾದರಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಒಟ್ಟು ಸಂಖ್ಯಾಬಲ 60 ಇದ್ದು, ಈ ಶಾಲೆ ವಸತಿ ರಹಿತವಾಗಿದ್ದು, ಉಚಿತ ದಾಖಲಾತಿ, ಪಠ್ಯ ಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ, ಬ್ಯಾಗ್ ಇತರೆ ಮೂಲಭೂತ ಸೌಕರ್ಯಗಳನ್ನು  ಒದಗಿಸಲಾಗುವುದು. ಸದರಿ ಶಾಲೆಗಳಿಗೆ ಪ್ರವೇಶ ಬಯಸುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಸಿ.ಇ.ಟಿ ಪರೀಕ್ಷೆಯ ಮೂಲಕ ಭರ್ತಿಮಾಡಲು ಅರ್ಜಿ ಕರೆಯಲಾಗಿದೆ.
 ಪ್ರವೇಶ ಬಯಸುವ ವಿದ್ಯಾರ್ಥಿಗಳು, ಸಂಬಂಧ ಪಟ್ಟ ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯ / ಜಿಲ್ಲಾ ಮತ್ತು ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದಿಂದ ನಮೂನೆಗಳನ್ನು ಪಡೆದುಕೊಂಡು, ಭರ್ತಿಮಾಡಿ ಮಾಡಿ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಮಾರ್ಚ್ 31ರೊಳಗಾಗಿ ಅರ್ಜಿ ಪಡೆದ ಸ್ಥಳದಲ್ಲಿಯೇ ಸಲ್ಲಿಸಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಾರ್ಯಾಲಯ, ಯಾದಗಿರಿ ದೂರವಾಣಿ: 08473-253235 ಮೊ. 8095971486,9113624049, 9731090143 ಸಂಪರ್ಕಿಸಬಹುದು.

ಕುಡಿಯುವ ನೀರಿನ ಸಮಸ್ಯಗೆ ಸಹಾಯವಾಣಿ
ಯಾದಗಿರಿ, ಮಾರ್ಚ್ 02 (ಕರ್ನಾಟಕ ವಾರ್ತೆ) ಜಿಲ್ಲೆಯ ಶಹಾಪುರ, ಸುರಪುರ ಹಾಗೂ ಯಾದಗಿರಿ ತಾಲೂಕೂಗಳಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯು ನೀರಿನ ಹಾಗೂ ಶುದ್ಧ ಘಟಕ ಕುಡಿಯುವ ನೀರಿನ ಸಮಸ್ಯೆ ಕುರಿತು ದೂರು ನೀಡಲು
ಎಲ್ಲಾ ವಿಭಾಗದಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೇ ತಕ್ಷಣವೇ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿದ್ದಲ್ಲಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಯಾದಗಿರಿ ಅಧಿಕಾರಿಗಳು ತಿಳಿಸಿದ್ದಾರೆ. 
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಕಚೇರಿ ಶಹಾಪುರ 08479-244554 ತಾಲೂಕು ಪಂಚಾಯತ್ ಕಚೇರಿ ಶಹಾಪುರ 08479-243322, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಕಚೇರಿ ಸುರಪುರ 08443-257344 ತಾಲೂಕು ಪಂಚಾಯಿತಿ ಕಚೇರಿ 08443-256052, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಕಚೇರಿ  ಯಾದಗಿರಿ 08473- 250271 ತಾಲೂಕು ಪಂಚಾಯಿತಿ ಕಚೇರಿ 08473-250398 ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಯಾದಗಿರಿ ದೂರವಾಣಿ ಸಂಖ್ಯೆ 08473-253805 ಸಂಪರ್ಕಿಸಿ.


ಆಸ್ತಿ ತೆರಿಗೆ, ನೀರಿನ ಕರ ಪರಿಷ್ಕರಣೆ
ಯಾದಗಿರಿ, ಮಾರ್ಚ್ 02 (ಕರ್ನಾಟಕ ವಾರ್ತೆ): ಜಿಲ್ಲೆಯ ಶಹಾಪುರ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾಸ, ವಾಣಿಜ್ಯ ಕೈಗಾರಿಕೆ ಹಾಗೂ ಖಾಲಿ ನಿವೇಶನಗಳಿಗೆ ಪರಿಷ್ಕರಿಸಲಾದ ಆಸ್ತಿ ತೆರಿಗೆ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ಪುರಸಭೆಗಳ ಅಧಿನಿಯಮ 1964ರ ಕಲಂ 102ಎ ರಿತ್ಯ ಪ್ರತಿ ಮೂರು ವರ್ಷಕೊಮ್ಮೆ ಆಸ್ತಿ ತೆರಿಗೆಯನ್ನು ಶೇ.15 ರಿಂದ  30ರವರೆಗೆ 2020-21ನೇ ಸಾಲಿಗೆ ಅನ್ವಯವಾಗುವಂತೆ ಹೆಚ್ಚಿಸಲು ಸಾರ್ವಜನಿಕರ ಆಕ್ಷೇಪಣೆಯನ್ನು ಡಿಸೆಂಬರ್ 25 2019ರಂದು ದಿನಪತ್ರಿಕೆಗಳಲ್ಲಿ ಪ್ರಕಟಿಸಲಾಗಿತ್ತು.
ಆದರೆ ನಿಗಧಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಬರದೇ ಇರುವ ಕಾರಣ ವಾಸದ ಕಟ್ಟಡ ಶೇ. 25, ವಾಣಿಜ್ಯ ಶೇ.30,  ಕೈಗಾರಿಕೆ ಶೇ. 30ರಷ್ಟು ಹೆಚ್ಚಿಸಿದ್ದು, ಹಾಗೂ ಖಾಲಿ ನಿವೇಶನಗಳಿಗೆ ಸಂಬಂಧಿಸಿದಂತೆ 1,000 ಚ.ಮೀ.ಕ್ಕಿಂತ ಕಡಿಮೆ ಇದ್ದರೆ ಶೇ.20ರಷ್ಟು, 1000ರಿಂದ 4,000 ಚ.ಮೀ.ವರೆಗೆ ಶೇ.30ರಷ್ಟು, 4,000 ಚ.ಮೀ ಮೇಲ್ಪಟ್ಟು ಶೇ.30ರಷ್ಟು ಹೆಚ್ಚಿಸಿ ಪರಿಷ್ಕøರಿಸಲಾದ ಆಸ್ತಿ ತೆರಿಗೆಯನ್ನು ಏಪ್ರಿಲ್ 01ರಿಂದ ಜಾರಿಗೆ ಬರುವಂತೆ ಕಾನೂನು ರಿತ್ಯ ಕ್ರಮ ಜರುಗಿಸಲು ತಿಳಿಸಲಾಗಿದೆ. ಶಹಾಪುರ ನಗರಸಭೆ ವ್ಯಾಪ್ತಿಯಲ್ಲಿ ಬರುವ ಗೃಹ ಬಳಕೆ, ಗೃಹೇತರ ಬಳಕೆ, ವಾಣಿಜ್ಯ ಹಾಗೂ ಕೈಗಾರಿಕೆ ಬಳಕೆಯ ಕುಡಿಯುವ ನೀರಿನ ಪರಿಷ್ಕøರಿಸುವ ಬಗ್ಗೆ ಜುಲೈ 07 2011 ರಂತೆ ದರಗಳನ್ನು ಪರಿಷ್ಕøರಿಸುವ ಬಗ್ಗೆ ಡಿಸೆಂಬರ್ 20-2019ರಂದು ಮಾನ್ಯ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಶಹಾಪೂರ ಇವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಂತಿಮವಾಗಿ ನಿರ್ಣಯಿಸಿದಂತೆ ಮಾಸಿಕ ಗೃಹ ಬಳಕೆಗೆ 150 ರೂ., ಗೃಹೇತರ ಬಳಕೆ 300 ರೂ. ಹಾಗೂ ವಾಣಿಜ್ಯ/ ಕೈಗಾರಿಕೆ ಬಳಕೆಗೆ 600 ರೂ. ಹೆಚ್ಚಿಸಿ ಪರಿಷ್ಕøರಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...