ಬುಧವಾರ, ಆಗಸ್ಟ್ 4, 2021

 ಕೋವಿಡ್-19 ಕುರಿತು ಇಂಟರ್ನ್ಶಿಪ್: ಅರ್ಜಿ ಆಹ್ವಾನ

ಯಾದಗಿರಿ: ಆಗಸ್ಟ್.4 (ಕರ್ನಾಟಕ ವಾರ್ತಾ): ಲಸಿಕೆ ಆಡಳಿತದಲ್ಲಿ ನೆರೆಯ ಕುಟುಂಬಗಳನ್ನು ಬೆಂಬಲಿಸುವ ಮೂಲಕ ಸಮುದಾಯಕ್ಕೆ ವ್ಯಾಕ್ಸಿನ್ ರಾಯಬಾರಿಯಾಗಿ ಕೆಲಸ ನಿರ್ವಹಿಸುವುದಕ್ಕಾಗಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಕುಷ್ಠರೋಗಗಳ ನಿರ್ಮೂಲನೆ ಅಧಿಕಾರಿಗಳ ಕಚೇರಿ ವತಿಯಿಂದ ಇಂಟರ್ನ್ಶಿಪ್ (ಕಲಿಕೆ) ಹಮ್ಮಿಕೊಂಡಿದ್ದು, ಇದಕ್ಕಾಗಿ ಜಿಲ್ಲೆಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

       ಅರ್ಜಿಸಲ್ಲಿಸಲು ಆಸಕ್ತರು ಸೇವಾ ಮನೋಭಾವನೆ ಹೊಂದಿರುವ 12 ನೇ ತರಗತಿ ಉತ್ತೀರ್ಣರಾಗಿರುವ ಅಥವಾ  ಅದಕ್ಕಿಂತ ಹೆಚ್ಚಿನ ಶಿಕ್ಷಣ ಹೊಂದಿರುವ, ಕನ್ನಡ ಭಾಷೆ ಬಲ್ಲವರು ಹಾಗೂ ಜಿಲ್ಲೆಯ ನಿವಾಸಿಯಾಗಿರುವ ಅಭ್ಯರ್ಥಿಗಳು ಅರ್ಜಿಯನ್ನು ವೆಬ್‌ಸೈಟ್ ಥಿಚಿಜgiಡಿ.ಟಿiಛಿ.iಟಿ

ನ ಮೂಲಕ ಸಲ್ಲಿಸಬಹುದಾಗಿದೆ.

    ಈ ಇಂಟರ್ನ್ಶಿಪ್ ಅವಧಿ 6 ವಾರಗಳ ಕಾಲ ದಿನಕ್ಕೆ 2 ರಿಂದ 3ಗಂಟೆಗಳವರೆಗೆ ನಡೆಯಲಿದೆ. ಇಲ್ಲಿ ಇಂಟರ್ನ್ಶಿಪ್ ಪಡೆದವರು ಸರ್ಕಾರಿ ಅಧಿಕಾರಿಗಳ ನಾಯಕತ್ವದಲ್ಲಿ ಕೆಲಸ ಮಾಡಲು ವೃತ್ತಿಪರ ಮಾನ್ಯತೆ, ಅಭಿವೃದ್ಧಿ ಕ್ಷೇತ್ರದ ತಜ್ಞರಿಂದ ಕಲಿಯುವ ಅವಕಾಶ ಹಾಗೂ ಜಿಲ್ಲಾಡಳಿತದಿಂದ ಪ್ರಮಾಣಪತ್ರ ಸಹ ಪಡೆಯಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳ ಕಾರ್ಯಾಲಯಕ್ಕೆ  ಸಂಪಕಿಸಬಹುದಾಗಿದೆ ಎಂದು  ಪ್ರಕಟಣೆ ತಿಳಿಸಿದೆ.


ಕೃತಕ ಅಂಗಾಗಳ ಜೋಡಣೆಗೆ ಅರ್ಜಿ ಆಹ್ವಾನ

ಯಾದಗಿರಿ: ಆಗಸ್ಟ್.4 (ಕರ್ನಾಟಕ ವಾರ್ತಾ): ಯಾದಗಿರಿ ನಗರ ಸಭೆ ವ್ಯಾಪ್ತಿಯಲ್ಲಿ 2019-20ನೇ ಸಾಲಿನ ಶೇ.5% ಯೋಜನೆಯಡಿಯಲ್ಲಿ ಎಸ್.ಎಫ್.ಸಿ ಅನುದಾನದ ಅಡಿಯಲ್ಲಿ ವಿಕಲಚೇತನ ಹೊಂದಿರುವ ಫಲಾನುಭವಿಗಳಿಗೆ ಕೃತಕ ಅಂಗಾಗಳ ಜೋಡಣೆ ಸಲುವಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಸಲಾಗಿದೆ.

ಅರ್ಜಿ ಸಲ್ಲಿಸುವ ಫಲಾನುಭವಿಗಳು ಸ್ಥಳೀಯ ನಿವಾಸಿಯಾಗಿರಬೇಕು, ಅಂಗವಿಕಲರ ಪ್ರಮಾಣ ಪತ್ರ, ಜಾತಿ & ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ, ಬಿ.ಪಿ.ಎಲ್ ಕಾರ್ಡ & ಐಡಿ ಕಾರ್ಡ,  2 ಫೋಟೋ ಅರ್ಜಿಯನ್ನು  ಆಗಸ್ಟ್ 2 ರಿಂದ ಆಗಸ್ಟ್ 16ರೊಳಗೆ ನಗರಸಭೆ ಕಾರ್ಯಲಯಕ್ಕೆ ಸಲ್ಲಿಸಬೇಕು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ನಗರ ಸಭೆ ಕಾರ್ಯಾಲಯದ ದೂ.ಸಂ: 08473-252312 ಗೆ ಸಂಪರ್ಕಿಸಲು ಕೋರಿದಾರೆ. 


ಯಾದಗಿರಿ ನಗರಸಭೆ; ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ

ಯಾದಗಿರಿ: ಆಗಸ್ಟ್.4 (ಕರ್ನಾಟಕ ವಾರ್ತಾ): 2021-22ನೇ ಸಾಲಿನ ಡೇ-ನಲ್ಮ್ ಯೋಜನೆಯಡಿಯಲ್ಲಿ ವೈಯಕ್ತಿಕ ಬ್ಯಾಂಕ್ ಸಾಲಸೌಲಭ್ಯ, ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್ ಸಾಲಸೌಲಭ್ಯ, ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್ ಲಿಂಕೆಜ್ ಸಾಲಸೌಲಭ್ಯ ಮತ್ತು ಸ್ವಸಹಾಯ ಸಂಘಗಳ ರಚನೆ ವಿವಿಧ ಕಾರ್ಯಕ್ರಮಗಳ ಸೌಲಭ್ಯಗಳನ್ನು ಯಾದಗಿರಿ ನಗರಸಭೆ ವತಿಯಿಂದ ಕಲ್ಪಿಸಿಕೊಡಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಹರು ಮತ್ತು ಆಸ್ತಕಿ ಇರುವ ಅರ್ಜಿದಾರರು ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಕನಿಷ್ಟ ಮೂರು ವರ್ಷ ವಾಸವಾಗಿರಬೇಕು, ಬಡತನ ರೇಖೆಗಿಂತ ಕೆಳಗಿನವರಾಗಿರಬೇಕು, ಅರ್ಜಿದಾರರು ವಿವಿಧ ಕಾರ್ಯಾಕ್ತಮಗಳಿಗೆ ಪ್ರತ್ಯೇಕ ಅರ್ಜಿಗಳು ಸಲ್ಲಿಸಬೇಕು, ಅರ್ಜಿದಾರರು ಇತರೆ ದಾಖಲೆಗಳೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಚುನಾವಣೆ ಗುರುತಿನ ಪತ್ರ ಹಾಗೂ ಆಧಾರ ಕಾರ್ಡ್ ಕಡ್ಡಾಯವಾಗಿ ಲಗತ್ತಿಸಬೇಕು ಇವೆಲ್ಲಾ ಷರತ್ತುಗಳಿಗೆ ಅರ್ಜಿದಾರರು ಬದ್ಧರಾಗಿ ಆಗಸ್ಟ್ 17 ರೊಳಗಾಗಿ ನಗರಸಭೆ ಕಾರ್ಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪೌರಾಯುಕ್ತ/ಸಮುದಾಯ ಸಂಘಟನಾಧಿಕಾರಿಗಳನ್ನು ಸಂಪರ್ಕಿಸಬಹುದು. 


ಆಗಸ್ಟ್ 12 ರಂದು ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆ

ಯಾದಗಿರಿ,ಆಗಸ್ಟ್04,(ಕರ್ನಾಟಕ.ವಾರ್ತಾ): ಗುರುಮಿಠಕಲ್ ತಾಲೂಕ ಪಂಚಾಯತಿಯ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಶಾಸಕ ನಾಗನಗೌಡ ಕಂದಕೂರ ರವರ ಅಧ್ಯಕ್ಷತೆಯಲ್ಲಿ ಆಗಸ್ಟ್ 12 ರಂದು ಬೆಳಗ್ಗೆ 11.ಗಂಟೆಗೆ ಗುರುಮಿಠಕಲ್‌ನ ಪುರಸಭೆ ಸಭಾಂಗಣದಲ್ಲಿ ನಡೆಯಲಿದೆ ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

  ಈ ಸಭೆಯಲ್ಲಿ 2021 ಜುಲೈ 31 ರ ಅಂತ್ಯದವರೆಗಿನ ಪ್ರಗತಿ ಪರಿಶೀಲನಾ ಕುರಿತು ಚರ್ಚಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...