ಸೋಮವಾರ, ಮಾರ್ಚ್ 16, 2020

ಅಕ್ರಮ ಮದ್ಯ ಮಾರಾಟ: ಬಂಧನ
ಯಾದಗಿರಿ, ಮಾರ್ಚ್ 16 (ಕರ್ನಾಟಕ ವಾರ್ತೆ): ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಜೈ ಭವಾನಿ ಮತ್ತು ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಟಾನಿಕ್ ದಾಭಾಗಳ ಮೇಲೆ ದಾಳಿ ನಡೆಸಿ, ದಾಭಾ ಮಾಲೀಕರನ್ನು ಬಂಧಿಸಲಾಗಿದೆ.
ಶಹಾಪೂರ ಹಾಗೂ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕೆಲವು ದಾಭಾಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಅಪರಾಧ ಪತ್ತೆ ದಳದ ಪೊಲೀಸ್ ಇನ್‍ಸ್ಪೆಕ್ಟರ್ ಸದಾಶಿವ ಎಸ್. ಮತ್ತು ಸಿಬ್ಬಂದಿ ಮಹಾಂತೇಶ, ನಾಗರಾಜ ಹಾಗೂ ಮಹೇಶ ಅವರೊಂದಿಗೆ ದಾಳಿ ನಡೆಸಲಾಗಿದೆ.
ರಬನಳ್ಳಿ ಕ್ರಾಸ್ ಹತ್ತಿರ ಇರುವ ಜೈ ಭವಾನಿ ದಾಭಾದ ಮೇಲೆ ದಾಳಿ ಮಾಡಿ ಆರೋಪಿತನಿಂದ 5,509 ರೂ. ಮೌಲ್ಯದ ವಿವಿಧ ಮಾದರಿಯ ಮದ್ಯ ಹಾಗೂ 530 ರೂ. ನಗದು ಜಪ್ತಿ ಮಾಡಿದ್ದು, ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದೇ ರೀತಿ ಶಹಾಪುರ ಹೊಸ ತಹಸೀಲ್ ಕಚೇರಿ ಹತ್ತಿರ ಇರುವ ಟಾನಿಕ್ ದಾಭಾದ ಮೇಲೆ ದಾಳಿ ಮಾಡಿ ಆರೋಪಿತರಿಂದ 8067.32 ರೂ. ಮೌಲ್ಯದ ವಿವಿಧ ಮಾದರಿಯ ಮದ್ಯ ಹಾಗೂ 3,400 ರೂ. ನಗದು ಜಪ್ತಿ ಮಾಡಿದ್ದು, ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ ಭಗವಾನ್ ಸೋನವಣೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ವಿದ್ಯುತ್ ವ್ಯತ್ಯಯ
ಯಾದಗಿರಿ, ಮಾರ್ಚ್ 16 (ಕರ್ನಾಟಕ ವಾರ್ತೆ): ನಿರಂತರ ವಿದ್ಯುತ್ ಪೂರೈಸಲು ಹಾಗೂ ವಿದ್ಯುತ್ ಅವಘಡ ಆಗದಂತೆ ತಡೆಯಲು ಕೊಂಕಲ್ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ಕೆಲಸದ ಪ್ರಯುಕ್ತ ಮಾರ್ಚ್ 18ರಂದು ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯ ವರೆಗೆ ವಿತರಣಾ ಕೇಂದ್ರದಿಂದ ಹೊರ ಹೋಗುವ ಎಲ್ಲಾ 11 ಕೆ.ವಿ ವಿದ್ಯುತ್ ಮಾರ್ಗಗಳಿಗೆ ವಿದ್ಯುತ್ ಸರಬರಾಜು ನಿಲುಗಡೆಗೊಳಿಸಲಾಗುವುದು. ಆದ್ದರಿಂದ ಸದರಿ ವಿದ್ಯುತ್ ಮಾರ್ಗಗಳಿಂದ ಸರಬರಾಜಾಗುವ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಜೆಸ್ಕಾಂನೊಂದಿಗೆ ಸಹಕರಿಸಬೇಕಾಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಮಾ.19ರಂದು ವಿದ್ಯುತ್ ವ್ಯತ್ಯಯ
ಯಾದಗಿರಿ, ಮಾರ್ಚ್ 16 (ಕರ್ನಾಟಕ ವಾರ್ತೆ): ನಿರಂತರ ವಿದ್ಯುತ್ ಪೂರೈಸಲು ಹಾಗೂ ವಿದ್ಯುತ್ ಅವಘಡÀ ಆಗದಂತೆ ತಡೆಯಲು ಗುರುಮಠಕಲ್ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ಕೆಲಸದ ಪ್ರಯುಕ್ತ ಮಾರ್ಚ್ 19ರಂದು ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯ ವರೆಗೆ ವಿತರಣಾ ಕೇಂದ್ರದಿಂದ ಹೊರ ಹೋಗುವ ಎಲ್ಲಾ 11 ಕೆ.ವಿ ವಿದ್ಯುತ್ ಮಾರ್ಗಗಳಿಗೆ ವಿದ್ಯುತ್ ಸರಬರಾಜು ನಿಲುಗಡೆಗೊಳಿಸಲಾಗುವುದು. ಆದ್ದರಿಂದ ಸದರಿ ವಿದ್ಯುತ್ ಮಾರ್ಗಗಳಿಂದ ಸರಬರಾಜಾಗುವ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಜೆಸ್ಕಾಂನೊಂದಿಗೆ ಸಹಕರಿಸಬೇಕಾಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರಶಸ್ತಿಗೆ ಅರ್ಜಿ ಆಹ್ವಾನ
ಯಾದಗಿರಿ, ಮಾರ್ಚ್ 16 (ಕರ್ನಾಟಕ ವಾರ್ತೆ): 2020-21ನೇ ಸಾಲಿನ ಡಾ.ಬಾಬು ಜಗಜೀವನರಾಮ ರವರ 113ನೇ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ 129ನೇ ಜನ್ಮ ದಿನಾಚರಣೆ ಅಂಗವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಶ್ರೇಯಸ್ಸಿಗಾಗಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲು ಅರ್ಜಿ ಆಹ್ವಾನಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರತಿ ವರ್ಷ ಏಪ್ರಿಲ್ 5ರಂದು ಡಾ.ಬಾಬು ಜಗಜೀವನರಾಮ ರವರ ಹಾಗೂ ಏಪ್ರಿಲ್ 14ರಂದು ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ರಾಜ್ಯ ಮಟ್ಟದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದರಂತೆ 2020-21ನೇ ಸಾಲಿನಲ್ಲೂ ಜನ್ಮ ದಿನಾಚರಣೆ ಅಂಗವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನಾಂಗದವರ ಶ್ರೇಯಸ್ಸಿಗಾಗಿ ಪ್ರೋತ್ಸಾಹಿಸಿ, ಶ್ರಮಿಸಿ, ಗಣನೀಯ ಸೇವೆ ಸಲ್ಲಿಸಿದ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿದೆ. ಪ್ರಯುಕ್ತ ಯಾದಗಿರಿ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಶಸ್ತಿಗೆ ಅರ್ಹರಿರುವವರು ಅರ್ಜಿಗಳನ್ನು ಸಮಾಜ ಕಲ್ಯಾಣ ಇಲಾಖೆಯ ಸಂಬಂಧಪಟ್ಟ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ದಾಖಲಾತಿಗಳೊಂದಿಗೆ ಮಾರ್ಚ್ 20ರೊಳಗಾಗಿ ಸಮಾಜ ಕಲ್ಯಾಣ ಇಲಾಖೆಯ ಯಾದಗಿರಿ, ಶಹಾಪುರ, ಸುರಪುರ ಸಹಾಯಕ ನಿರ್ದೇಶಕರಿಗೆ ಸಲ್ಲಿಸಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಮೊ:94808 43048 ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...