ಶುಕ್ರವಾರ, ಮಾರ್ಚ್ 6, 2020

ಕ್ರೀಡಾ ವಸತಿನಿಲಯ ಪ್ರವೇಶಕ್ಕೆ ಆಯ್ಕೆ ಪ್ರಕ್ರಿಯೆ
ಯಾದಗಿರಿ, ಮಾರ್ಚ್ 06 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ 2020-21ನೇ ಸಾಲಿನ ಜಿಲ್ಲಾ ಕ್ರೀಡಾ ವಸತಿ ನಿಲಯ ಪ್ರವೇಶಕ್ಕೆ ಅಥ್ಲೆಟಿಕ್ಸ್ ಮತ್ತು ವಾಲಿಬಾಲ್ ಕ್ರೀಡೆಗಳಲ್ಲಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯನ್ನು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಸಲು ಸ್ಥಳ ಹಾಗೂ ದಿನಾಂಕಗಳನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಸುಚೇತಾ ನೆಲವಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾಪಟುಗಳ ಆಯ್ಕೆಯನ್ನು ತರಬೇತುದಾರರಿಂದ ನಡೆಸಲಾಗುತ್ತಿದ್ದು, ತರಬೇತುದಾರ ಪ್ರಕಾಶ ಮೊ:9886675263, ಅಣ್ಣಪ್ಪ ಆರ್.ನಾಯ್ಕ ಮೊ:9663348911, ದೊಡ್ಡಪ್ಪ ನಾಯಕ ಮೊ:6362400143 ಅವರು ಸಂಚಾಲಕರಾಗಿರುತ್ತಾರೆ. ಮಾರ್ಚ್ 12ರಂದು ಬೆಳಿಗ್ಗೆ 10 ಗಂಟೆಗೆ ಶಹಾಪೂರ ತಾಲ್ಲೂಕು ಕ್ರೀಡಾಂಗಣದಲ್ಲಿ ಮತ್ತು ಅದೇ ದಿನ ಮಾರ್ಚ್ 12ರಂದು ಮಧ್ಯಾಹ್ನ 3 ಗಂಟೆಗೆ ಸುರಪುರದ ಎಸ್.ಬಿ.ಕಾಲೇಜು ಮೈದಾನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮಾರ್ಚ್ 14ರಂದು ಬೆಳಿಗ್ಗೆ 10 ಗಂಟೆಗೆ ಯಾದಗಿರಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಅರ್ಹತೆಗಳು: ಕಿರಿಯರ ವಿಭಾಗದ ಆಯ್ಕೆಗೆ 2020ರ ಜೂನ್ 1ರಂದು 11 ವರ್ಷದ ಒಳಗಿರಬೇಕು. ಅಂದರೆ 01-06-2009ರ ನಂತರ ಜನಿಸಿರಬೇಕು ಮತ್ತು ಪ್ರಸ್ತುತ 4ನೇ ತರಗತಿಯಲ್ಲಿ ಓದುತ್ತಿರಬೇಕು. ಅಥ್ಲೆಟಿಕ್ಸ್ ವಿಭಾಗದಲ್ಲಿ ಕನಿಷ್ಠ ಎತ್ತರದ ನಿರ್ಬಂಧವಿಲ್ಲ. ಆಯ್ಕೆಗಾಗಿ 60 ಮೀಟರ್ ಓಟ, ಸ್ಟ್ಯಾಂಡಿಂಗ್ ಬ್ರಾಡ್ ಜಂಪ್, 600 ಮೀಟರ್ ಓಟ ನಡೆಸಲಾಗುವುದು. ವಾಲಿಬಾಲ್ ವಿಭಾಗದಲ್ಲಿ ಬಾಲಕರ ಕನಿಷ್ಠ ಎತ್ತರ 145 ಸೆಂ.ಮೀ ಮೇಲ್ಪಟ್ಟು, ಬಾಲಕಿಯರ ಕನಿಷ್ಠ ಎತ್ತರ 140 ಸೆಂ.ಮೀ ಮೇಲ್ಪಟ್ಟು ಇರಬೇಕು. ಆಯ್ಕೆಗಾಗಿ 60 ಮೀಟರ್ ಓಟ, 6-8 ಷಟಲ್ ರನ್, ಸ್ಟ್ಯಾಂಡಿಂಗ್ ಬ್ರಾಡ್ ಜಂಪ್ ಕ್ರೀಡೆಗಳನ್ನು ನಡೆಸಲಾಗುವುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...