ಮಂಗಳವಾರ, ಮಾರ್ಚ್ 3, 2020

ಮಾ.೦೭ರಂದು ತ್ರೆöÊಮಾಸಿಕ ಕೆಡಿಪಿ ಸಭೆ
ಯಾದಗಿರಿ, ಮಾರ್ಚ್ ೦೩ (ಕರ್ನಾಟಕ ವಾರ್ತೆ): ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ)ಗಳ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಪಶುಸಂಗೋಪನೆ, ಅಲ್ಪ ಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ ೦೭ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ. ೧೮ರಂದು ಬಹಿರಂಗ ಹರಾಜು
ಯಾದಗಿರಿ, ಮಾರ್ಚ್ ೦೩ (ಕರ್ನಾಟಕ ವಾರ್ತೆ): ಶಹಾಪುರ ನಗರಸಭೆಯ ಆವರಣದಲ್ಲಿರುವ ನಿರುಪಯುಕ್ತವಾದ ನೀರು ಸರಬರಾಜು ಅನುಪಯುಕ್ತ ಸಾಮಾಗ್ರಿಗಳ ವಿದ್ಯುತ ಮತ್ತು ನೈರ್ಮಲ್ಯ ಸಾಮಾಗ್ರಿಗಳನ್ನು ಮಾರ್ಚ್ ೧೮ರಂದು ಬೆಳಿಗ್ಗೆ ೧೨ ಗಂಟೆಗೆ ನಗರಸಭೆಯ ಆವರಣದಲ್ಲಿ ಬಹಿರಂಗವಾಗಿ ಹರಾಜು ನಡೆಸಲಾಗುವುದು ಎಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಆಸಕ್ತರು  ೧೦,೦೦೦/- ರೂ. ಮುಂಗಡ ಠೇವಣಿಯನ್ನು ಡಿ.ಡಿ ಮುಖಾಂತರ ಮಾರ್ಚ್ ೧೭ರಂದು ಸಾಯಂಕಾಲ ೫.೩೦ ಗಂಟೆಯೊಳಗೆ ನೈರ್ಮಲ್ಯ ಶಾಖೆಯ ಮುಖ್ಯಸ್ಥರಲ್ಲಿ ಜಮೆ ಮಾಡಬೇಕು. ಹರಾಜು ಪ್ರಕ್ರೀಯೆ ಮುಗಿದ ಮೇಲೆ ಯಶಸ್ವಿ ಭಾಗಿದಾರರು ಅಂದೇ ಸಂಪೂರ್ಣ ಹಣವನ್ನು ನಗರಸಭೆಗೆ ಭರಿಸಬೇಕು. ಯಶಸ್ವಿ ಹರಾಜುದಾರರು ಹರಾಜು ಪ್ರಕ್ರೀಯೆ ಮುಗಿದ ೦೨ ದಿನಗಳಲ್ಲಿ ಸಂಪೂರ್ಣ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬೇಕು ಎಂದು ಅವರು ತಿಳಿಸಿದ್ದಾರೆ.

ಅಲ್ಪಾವಧಿ ಟೆಂಡರ್ ಆಹ್ವಾನ
ಯಾದಗಿರಿ, ಮಾರ್ಚ್ ೦೩ (ಕರ್ನಾಟಕ ವಾರ್ತೆ): ಯಾದಗಿರಿ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಕಛೇರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅರ್ಹ ಟೆಂಡರುದಾರರಿAದ ಮೊಹರಿನೊಂದಿಗೆ ದ್ವಿ-ಲಕೋಟೆ ಪದ್ದತಿಯಲ್ಲಿ ಅಲ್ಪಾವಧಿ ಟೆಂಡರ್ ಆಹ್ವಾನಿಸಲಾಗಿದೆ ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಜಿ ಸ್ವೀಕರಿಸುವ ಪ್ರಾರಂಭದ ದಿನಾಂಕ ೦೪-೦೩-೨೦೨೦, ಭರ್ತಿ ಮಾಡಿದ ಅರ್ಜಿ ಸಲ್ಲಿಸುವ ಕೊನೆಯ ೧೧-೦೩-೨೦೨೦ ಸಾಯಂಕಾಲ ೫ ಗಂಟೆಗೆ, ಟೆಕ್ನಿಕಲ್ ಬಿಡ್ಡ್ನ್ನು ತೆರೆಯುವ ದಿನಾಂಕ ೧೩-೦೩-೨೦೨೦ ಹಾಗೂ ಫೈನಾನ್ಸಿಯಲ್ ಬಿಡ್ಡ್ನ್ನು ತೆರೆಯುವ ದಿನಾಂಕ ೧೬-೦೩-೨೦೨೦ ಇರುತ್ತದೆ.
ಟೆಂಡರ್ ವಿವರಗಳಿಗಾಗಿ ಅರ್ಜಿ ಸಲ್ಲಿಸುವ ಆಸಕ್ತರು ನಿಗಧಿಪಡಿಸಿದ ದಿನಾಂಕಕ್ಕೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಹೆಸರಿಗೆ ೫೦೦ ರೂ. ಗಳ ಡಿಡಿಯನ್ನು ಪಡೆದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅರ್ಜಿಯನ್ನು ಪಡೆದು ದ್ವಿ-ಲಕೋಟೆಯಲ್ಲಿ ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬೇಕು.
ಕ್ರಮ ಸಂಖ್ಯೆ ೦೩ ಮತ್ತು ೦೪ ರಲ್ಲಿ ಇರುವ ದಿನಾಂಕಗಳನ್ನು ಟೆಂಡರ್ ಸಮಿತಿಯ/ಟೆಂಡರ್ ಸಮಿತಿಯ ಅಧ್ಯಕ್ಷರ ಆಡಳಿತಾತ್ಮಕ ಅನುಕೂಲತೆಗೆ ಅನುಗುಣವಾಗಿ (ಅನಿವಾರ್ಯ ಸಂದರ್ಭದಲ್ಲಿ) ಬದಲಾವಣೆಗೊಳಿಸಬಹುದಾಗಿದೆ. ಟೆಂಡರ್ ಬಿಡ್‌ಗಳನ್ನು ತೆರೆಯುವ ದಿನಾಂಕ ಬದಲಾದಲ್ಲಿ ಅದನ್ನು ಕಾರ್ಯಾಲಯದಿಂದ ಅಧಿಕೃತವಾಗಿ ತಿಳಿಸಲಾಗುವುದು. ಟೆಂಡರ್ ತೆರೆಯುವ ಸಂದರ್ಭದಲ್ಲಿ ಆಸಕ್ತ ಹಾಗೂ ಉಪಸ್ಥಿತರಿದ್ದ ಟೆಂಡರ್‌ದಾರರ ಸಮಕ್ಷಮದಲ್ಲಿ ತೆರೆಯಲಾಗುವುದು. (ಅನಿವಾರ್ಯ ಕಾರಣದಿಂದಾಗಿ ಭಾಗವಹಿಸಿದ ಟೆಂಡರ್‌ದಾರರು ಅನುಪಸ್ಥಿತರಿದ್ದರೂ ಕೂಡ ಟೆಂಡರ್ ತೆರೆಯುವ ಕಾರ್ಯ ಮುಂದುವರೆಯುತ್ತದೆ.) ಟೆಂಡರ್‌ನಲ್ಲಿ ನಿಗದಿತ ಇ.ಎಂ.ಡಿ/ಟೆAಡರ್ ಬುಕ್‌ಲೆಟ್‌ಗಾಗಿ ನಿಗದಿಪಡಿಸಿದ ಶುಲ್ಕಗಳಿಗಾಗಿ ಬ್ಯಾಂಕ್ ಡಿಡಿ(ಹುಂಡಿ)ಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳು ಯಾದಗಿರಿ ಇವರ ಹೆಸರಿಗೆ ಪಡೆದು ಬುಕ್‌ಲೆಟ್‌ನೊಂದಿಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.

ಪಿಯುಸಿ ಪರೀಕ್ಷೆ: ಬಸ್‌ಗಳಲ್ಲಿ ಉಚಿತ ಪ್ರಯಾಣ
ಯಾದಗಿರಿ, ಮಾರ್ಚ್ ೦೩ (ಕರ್ನಾಟಕ ವಾರ್ತೆ): ಮಾರ್ಚ್ ೦೪ರಿಂದ ೨೩ರವರೆಗೆ ನಡೆಯುವ ದ್ವೀತಿಯ ಪಿಯುಸಿ ಅಂತಿಮ ಪರೀಕ್ಷೆಗಳು, ಮಾರ್ಚ್ ೨೭ರಿಂದ ಏಪ್ರಿಲ್ ೯ರವರೆಗೆ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದ ವರೆಗೆ ಹಾಗೂ ಪರೀಕ್ಷಾ ಕೇಂದ್ರದಿAದ ಹಿಂದಿರುಗುವಾಗ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ಸಂಸ್ಥೆಯ ನಗರ, ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಸಂತೋಷ ಗೊಗೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಎಲ್ಲಾ ಘಟಕ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದ್ದು. ವಿದ್ಯಾರ್ಥಿಗಳು ಈ ಸೇವೆಯನ್ನು ಸದುಪಯೋಗ ಪಡೆದುಕೊಳ್ಳಬೇಕು. ಏನಾದರೂ ಅನಾನುಕೂಲತೆಯಾದಲ್ಲಿ ಯಾದಗಿರಿ ಘಟಕ ವ್ಯವಸ್ಥಾಪಕರ ದೂ. ಸಂಖ್ಯೆ ೭೭೬೦೯ ೯೨೪೬೩, ಶಹಾಪುರ  ಘಟಕ ವ್ಯವಸ್ಥಾಪಕರ ದೂ. ಸಂಖ್ಯೆ ೭೭೬೦೯ ೯೨೪೬೪, ಸುರಪುರ ಘಟಕ ವ್ಯವಸ್ಥಾಪಕರ ದೂ. ಸಂಖ್ಯೆ ೭೭೬೦೯ ೯೨೪೬೭, ಗುರುಮಠಕಲ್ ಘಟಕ ವ್ಯವಸ್ಥಾಪಕರ ದೂ. ಸಂಖ್ಯೆ ೭೭೬೦೯ ೯೨೪೬೫, ಸಹಾಯಕ ಸಂಚಾರ ವ್ಯವಸ್ಥಾಪಕರ ದೂ. ಸಂಖ್ಯೆ ೭೭೬೦೯ ೯೨೪೫೮, ವಿಭಾಗೀಯ ಸಂಚಲನಾಧಿಕಾರಿ ದೂ. ಸಂಖ್ಯೆ ೭೭೬೦೯ ೯೨೪೫೨ ಹಾಗೂ ವಿಭಾಗೀಯ ಕಚೇರಿ ದೂ. ಸಂಖ್ಯೆ ೭೭೬೦೯ ೯೨೪೪೯ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...