ಸೋಮವಾರ, ಫೆಬ್ರವರಿ 10, 2020

ಫೆ.೨೪ರೊಳಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆಗೆ ಸೂಚನೆ
ಯಾದಗಿರಿ, ಫೆಬ್ರುವರಿ ೧೦ (ಕರ್ನಾಟಕ ವಾರ್ತೆ): ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ಇದುವರೆಗೂ ಪಡೆಯದ ರೈತ ಫಲಾನುಭವಿಗಳಿಗೆ ಫೆಬ್ರುವರಿ ೨೪ರ ಒಳಗಾಗಿ ವಿತರಿಸುವಂತೆ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅವರು ಜಿಲ್ಲೆಯ ಎಲ್ಲಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ (ಪಿ.ಎಮ್. ಕಿಸಾನ) ಯೋಜನೆಯನ್ನು ಕೇಂದ್ರ ಸರ್ಕಾರ ೨೦೧೯ರ ಫೆಬ್ರುವರಿ ೧ರಂದು ದೇಶದ ಆಯ-ವ್ಯಯದಲ್ಲಿ ಘೋಷಣೆ ಮಾಡಿದ್ದು, ನಂತರ ಪ್ರಧಾನ ಮಂತ್ರಿಗಳು ಘೋರಕ್‌ಪುರದಲ್ಲಿ ೨೦೧೯ರ ಫೆಬ್ರುವರಿ ೨೪ರಂದು ದೇಶದ ರೈತರಿಗೆ ಅರ್ಪಣೆ ಮಾಡಿದರು.
ಕೇಂದ್ರ ಸರಕಾದ ಪ್ರಮುಖ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಒಂದು ವರ್ಷ ಪೂರೈಸುತ್ತಿರುವ ಈ ಸುಸಂದರ್ಭದಲ್ಲಿ ಬರುವ ಫೆಬ್ರುವರಿ ೨೪ರ ಒಳಗೆ ಒಂದು ಕೋಟಿ ಕಿಸಾನ ಕ್ರೆಡಿಟ್ ಕಾರ್ಡ್ಗಳನ್ನು (ಬೆಳೆಸಾಲ) ಸದರಿ ಯೋಜನೆಯ ಫಲಾನುಭವಿಗಳಿಗೆ ವಿತರಿಸಲು ಕೇಂದ್ರ ಸರಕಾರ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ. ಪ್ರಧಾನ ಮಂತ್ರಿ ಕಿಸಾನ ಯೋಜನೆಯಡಿಯಲ್ಲಿ ದೇಶಾದ್ಯಂತ ೯.೨೨ ಕೋಟಿ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ ೬.೭೬ ಕೋಟಿ ಫಲಾನುಭವಿಗಳು ಕಿಸಾನ್ ಕ್ರೆಡಿಟ್ ಕಾರ್ಡ್ (ಬೆಳೆಸಾಲ) ಪಡೆದಿದ್ದು, ೨.೪೭ ಕೋಟಿ ಫಲಾನುಭವಿಗಳು ಇದರ ಲಾಭ ಪಡೆಯಲು ಬಾಕಿ ಇರುತ್ತಾರೆ. ನಮ್ಮ ಜಿಲ್ಲೆಯಲ್ಲಿ ೧,೨೫,೯೦೪ ರೈತರು ಪ್ರಧಾನ ಮಂತ್ರಿ ಕಿಸಾನ ಯೋಜನೆಯಡಿಯಲ್ಲಿ ನೋಂದಣಿ ಮಾಡಿದ್ದಾರೆ. ಇವರಲ್ಲಿ ಕಿಸಾನ ಕ್ರೆಡಿಟ್ ಕಾರ್ಡ (ಕೆ.ಸಿ.ಸಿ) ಪಡೆಯದ ರೈತರು ತಮ್ಮ ಸೇವಾ ವಲಯದ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಬೆಳೆಸಾಲ (ಕೆ.ಸಿ.ಸಿ) ಪÀಡೆಯಲು ವಿನಂತಿಸಲಾಗಿದೆ. ಜಿಲ್ಲೆಯ ಎಲ್ಲಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಪ್ರಧಾನ ಮಂತ್ರಿ ಕಿಸಾನ ಫಲಾನುಭವಿಗಳಿಗೆ ನಿಯಮಾನುಸಾರ ಆದ್ಯತೆ ಮೇರೆಗೆ ಬೆಳೆಸಾಲ (ಕೆ.ಸಿ.ಸಿ) ವಿತರಿಸಿ ಕೇಂದ್ರ ಸರಕಾರದ ಫೆ.೨೪ರ ವರೆಗೆ ನಿಗದಿ ಪಡಿಸಿದ ಗುರಿ ಸಾಧನೆಗೆ ನಮ್ಮ ಜಿಲ್ಲೆಯಿಂದ ಅತಿ ಹೆಚ್ಚು ಕೊಡುಗೆ ನೀಡಲು ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದಾರೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...