೬ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಯಾದಗಿರಿ, ಫೆಬ್ರುವರಿ ೦೬ (ಕರ್ನಾಟಕ ವಾರ್ತೆ):ನಗರದ ಹೊರವಲಯದಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯದ ೨೦೨೦-೨೧ನೇ ಸಾಲಿನ ೬ನೇ ತರಗತಿ ಪ್ರವೇಶಕ್ಕಾಗಿ ೫ನೇ ತರಗತಿ ಓದುತ್ತಿರುವ ಯಾದಗಿರಿ ತಾಲ್ಲೂಕಿನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಫೆಬ್ರುವರಿ ೧೭ರ ವರೆಗೆ ವೆಬ್‌ಸೈಟ್: schooleducation.kar.nic.in ಅಥವಾ www.vidyavahini.karnataka.gov.in ಮೂಲಕ ಸಲ್ಲಿಸಬಹುದು. ಅಗತ್ಯವಿರುವ ಎಸ್‌ಟಿಎಸ್ ನಂ, ಪೋಷಕರ ಮೊಬೈಲ್ ಸಂಖ್ಯೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ಇತರೆ ಅಗತ್ಯವಿರುವ ಪ್ರಮಾಣ ಪತ್ರಗಳನ್ನು ತಪ್ಪಾಗದಂತೆ ಅರ್ಜಿ ಸಲ್ಲಿಸಬೇಕು. ಪ್ರತಿಯೊಂದು ಮಾಹಿತಿಯು ಮೊಬೈಲ್ ಸಂಖ್ಯೆಗೆ ಬರುವುದರಿಂದ ಪೋಷಕರದ್ದೇ ಮೊಬೈಲ್ ಸಂಖ್ಯೆ ನಮೂದಿಸಬೇಕು. ಪ್ರವೇಶ ಪರೀಕ್ಷೆಗಳು ಮಾರ್ಚ್ ೧೫ರಂದು ಬೆಳಿಗ್ಗೆ ೧೦.೩೦ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ ಮುಖ್ಯಗುರುಗಳಾದ ಭಗವಂತ ಮೊ:೭೭೬೦೬೭೬೬೫೪ ಅವರನ್ನು ಸಂಪರ್ಕಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತ ಉತ್ಪಾದಕ ಸಂಸ್ಥೆಗಳಿAದ ಅರ್ಜಿ ಆಹ್ವಾನ
ಯಾದಗಿರಿ, ಫೆಬ್ರುವರಿ ೦೬ (ಕರ್ನಾಟಕ ವಾರ್ತೆ): ೨೦೧೯-೨೦ನೇ ಸಾಲಿನಲ್ಲಿ ಮಹತ್ವಾಕಾಂಕ್ಷೆ ಜಿಲ್ಲೆಯ ಕೃಷಿ ಇಲಾಖೆಯ ಸಮಗ್ರ ಸುಸ್ಥಿರ ಕೃಷಿ ಪದ್ಧತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಕ್ರಿಯ ರೈತ ಉತ್ಪಾದಕ ಸಂಸ್ಥೆಗಳಿAದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿನ ರೈತರ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡು ಇಚ್ಛೆಯುಳ್ಳ ಜಿಲ್ಲೆಯ ರೈತ ಉತ್ಪಾದಕ ಸಂಸ್ಥೆಗಳು ಸಂಪೂರ್ಣ ವಿವರಗಳೊಂದಿಗೆ ೧೫ ದಿನಗಳಲ್ಲಿ ಜಿಲ್ಲಾಡಳಿತ ಭವನದಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.
ವಿಕಲಚೇತನರಿಂದ ಅರ್ಜಿ ಆಹ್ವಾನ
ಯಾದಗಿರಿ, ಫೆಬ್ರುವರಿ ೦೬ (ಕರ್ನಾಟಕ ವಾರ್ತೆ): ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸ್ಪರ್ಧಾಚೇತನ ಯೋಜನೆಯಡಿ ಐಎಎಸ್, ಕೆಎಎಸ್, ಎಸ್‌ಡಿಎ, ಎಫ್‌ಡಿಎ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ಉಚಿತ ತರಬೇತಿಗಾಗಿ ಪಿಯುಸಿ ಮೇಲ್ಪಟ್ಟ ಆಸಕ್ತ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಂಗವಿಕಲತೆ ಗುರುತಿನ ಚೀಟಿ ಶೇ.೪೦ಕ್ಕಿಂತ ಮೇಲ್ಪಟ್ಟು, ಆಧಾರ್ ಕಾರ್ಡ್, ವಾಸಸ್ಥಳ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಿಕಲತೆ ತೋರುವ ೨ ಭಾವಚಿತ್ರ, ವಿದ್ಯಾರ್ಹತೆಯ ಎಲ್ಲಾ ಅಂಕಪಟ್ಟಿಗಳೊAದಿಗೆ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂ:೦೮೪೭೩-೨೫೩೫೩೧ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.
ದರಪಟ್ಟಿ ಆಹ್ವಾನ
ಯಾದಗಿರಿ, ಫೆಬ್ರುವರಿ ೦೬ (ಕರ್ನಾಟಕ ವಾರ್ತೆ): ೨೦೧೮-೧೯ನೇ ಸಾಲಿನ ಜಿಲ್ಲಾ ಅಂಕಿ ಅಂಶಗಳ ನೋಟ ೩೦೦ ಪುಸ್ತಕಗಳು ಹಾಗೂ ಆರ್ಥಿಕ ಮತ್ತು ಸಾಮಾಜಿಕ ಅವಲೋಕನ ೨೦೦ ಪುಸ್ತಕಗಳನ್ನು ಎ೪ ಅಳತೆಯಲ್ಲಿ ಮುದ್ರಣಕ್ಕಾಗಿ ದರಪಟ್ಟಿಯನ್ನು ಆಹ್ವಾನಿಸಲಾಗಿದೆ.
ಅರ್ಹ ಮುದ್ರಣಾಲಯದವರು ಫೆಬ್ರುವರಿ ೧೪ರಂದು ಸಂಜೆ ೪ ಗಂಟೆಯೊಳಗಾಗಿ ಕಚೇರಿಗೆ ದರಪಟ್ಟಿಯನ್ನು ಸಲ್ಲಿಸಬೇಕು. ಷರತ್ತುಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಡಳಿತ ಭವನದ ೨ನೇ ಮಹಡಿಯಲ್ಲಿರುವ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.
ಜಾಹೀರಾತು ಪ್ರದರ್ಶಿಸಲು ಟೆಂಡರ್ ಆಹ್ವಾನ
ಯಾದಗಿರಿ, ಫೆಬ್ರುವರಿ ೦೬ (ಕರ್ನಾಟಕ ವಾರ್ತೆ): ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯಾದಗಿರಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಯಾದಗಿರಿ ಕೇಂದ್ರ, ಶಹಾಪೂರ ಹೊಸ, ಹತ್ತಿಗುಡೂರ, ಸುರಪೂರ, ಗುರುಮಠಕಲ್, ಹುಣಸಗಿ ಬಸ್ ನಿಲ್ದಾಣಗಳ ಒಳ ಆವರಣ ಹಾಗೂ ಹೊರ ಆವರಣದ ತೆರೆದ ಜಾಗಗಳಲ್ಲಿ Hoardings,
Neon Sign, Video Walls, Pillar Boards, Platform Boards, Signages, Glow Signs,
Unipoles, Arch ಇತ್ಯಾದಿ ಜಾಹೀರಾತು ಪ್ರದರ್ಶಿಸುವ ಸಂಬAಧ ೫ ವರ್ಷದ ಅವಧಿಗೆ ಮ್ಯಾನುವಲ್ ಸಂಧಾನದ ಮುಖಾಂತರ ಟೆಂಡರ್ ಆಹ್ವಾನಿಸಲಾಗಿದೆ.
ಟೆಂಡರ್ ಅರ್ಜಿಗಳನ್ನು ಫೆಬ್ರುವರಿ ೨೨ರಂದು ಮಧ್ಯಾಹ್ನ ೧.೩೦ ಗಂಟೆಯವರೆಗೆ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಫೆಬ್ರುವರಿ ೨೪ರಂದು ಬೆಳಿಗ್ಗೆ ೧೧.೩೦ ಗಂಟೆಯವರೆಗೆ ಸಂಚಾರ ಶಾಖೆಯ ವಿಷಯ ನಿರ್ವಾಹಕರಿಗೆ ಸಲ್ಲಿಸಬೇಕು. ಫೆಬ್ರುವರಿ ೨೪ರಂದು ಮಧ್ಯಾಹ್ನ ೧೨.೩೦ ಗಂಟೆಗೆ ವಿಭಾಗೀಯ ಕಚೇರಿಯಲ್ಲಿ ಸಂಧಾನ ನಡೆಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ವಿಭಾಗೀಯ ಕಚೇರಿ ಅಥವಾ ದೂ:೭೭೬೦೯೯೨೪೫೨, ೯೭೪೧೮೭೭೯೮೬ ಸಂಪರ್ಕಿಸಬಹುದು ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ