ಭಾನುವಾರ, ಫೆಬ್ರವರಿ 2, 2020


ಹಿಂಗಾರು ಬೆಳೆ ಸಮೀಕ್ಷೆ
ಯಾದಗಿರಿ, ಫೆಬ್ರುವರಿ ೦೧ (ಕರ್ನಾಟಕ ವಾರ್ತೆ): ೨೦೧೯-೨೦ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ ರೈತರು ಬೆಳೆದ ಹಿಂಗಾರು ಬೆಳೆ ಮಾಹಿತಿಯನ್ನು ಸಮೀಕ್ಷೆ ಮೂಲಕ ಸಂಗ್ರಹಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶÀಕರಾದ ದೇವಿಕಾ ಆರ್. ಅವರು ತಿಳಿಸಿದ್ದಾರೆ. ಜಿಲ್ಲೆಯ ಒಟ್ಟು ೫೦೭ ಗ್ರಾಮಗಳಲ್ಲಿ ಸ್ಥಳೀಯ ಯುವಕರನ್ನು ತೊಡಗಿಸಿಕೊಂಡು ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ. ಒಟ್ಟು ೫೪೬ ಸಮೀಕ್ಷೆಗಾರರು ಸಮೀಕ್ಷೆ ನಡೆಸಲಿದ್ದಾರೆ. ಸಮೀಕ್ಷೆ ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ, ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಇತ್ಯಾದಿಗಳು ನಿರ್ಧಾರವಾಗುವುದರಿಂದ ರೈತರು ಖುದ್ದು ಹಾಜರಿದ್ದು, ಬೆಳೆಗಳ ನಿಖರ ಮಾಹಿತಿ ನೀಡಬೇಕಿದೆ. ಸರ್ಕಾರವು ದಾಖಲಿಸಿರುವ ಬೆಳೆ ಮಾಹಿತಿಯನ್ನು ರೈತರು ಛಾಯಾಚಿತ್ರದ ಸಮೇತ ಬೆಳೆ ದರ್ಶಕ್ ಆ್ಯಪ್‌ನಲ್ಲಿ ವೀಕ್ಷಿಸಿ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಮೊಬೈಲ್ ಆ್ಯಪ್‌ನಲ್ಲಿ ದಾಖಲಿಸುವ ಮೂಲಕ ಅಥವಾ ಧ್ವನಿ ಮುದ್ರಣ ಮಾಡುವುದರ ಮೂಲಕ ಅಥವಾ ತಾಲ್ಲೂಕು ಕಚೇರಿಯಲ್ಲಿ ಲಿಖಿತವಾಗಿ ಸಹ ದಾಖಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸುವAತೆ ಅವರು ಕೋರಿದ್ದಾರೆ.

ಯುವ ಕೌಶಲ್ಯ ಕಾರ್ಯಾಗಾರಕ್ಕೆ ನೋಂದಾಯಿಸಲು ಸೂಚನೆ
ಯಾದಗಿರಿ, ಫೆಬ್ರುವರಿ ೦೧ (ಕರ್ನಾಟಕ ವಾರ್ತೆ): ಜಿಲ್ಲಾ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ಮತ್ತು ತರಬೇತಿ ಇಲಾಖೆ ಸಹಭಾಗಿತ್ವದಡಿ ``ಯುವ ಕೌಶಲ್ಯ ಕರ್ನಾಟಕ” ತರಬೇತಿ ಕಾರ್ಯಾಗಾರವನ್ನು ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಫೆಬ್ರುವರಿ ೫ರಿಂದ ೧೦ರ ವರೆಗೆ ಆಯೋಜಿಸಲಾಗಿದ್ದು, ಯುವಕ-ಯುವತಿಯರು ನೋಂದಾಯಿಸಲು ತಿಳಿಸಲಾಗಿದೆ.
ಫೆ.೫ರಂದು ಶಹಾಪೂರ ನಗರದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ, ಫೆ.೭ರಂದು ಸುರಪೂರ ನಗರದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಹಾಗೂ ಫೆ.೧೦ರಂದು ಯಾದಗಿರಿ ನಗರದ ಸರಕಾರಿ ಪದವಿ ಮಾಹಾವಿದ್ಯಾಲಯದಲ್ಲಿ ಬೆಳಿಗ್ಗೆ ೯.೩೦ ರಿಂದ ಸಾಯಂಕಾಲ ೫ ಗಂಟೆಯ ವರೆಗೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಎಸ್‌ಎಸ್‌ಎಲ್‌ಸಿ ಉತ್ತೀರ್ಣ, ಪಿಯುಸಿ ದ್ವಿತೀಯ, ಪದವಿ, ಐಟಿಐ, ಡಿಪ್ಲೋಮಾ ಅಂತಿಮ ಹಾಗೂ ಸ್ನಾತಕೋತ್ತರ ಪದವಿ ಹೊಂದಿರುವ ೧೮ ರಿಂದ ೩೫ ವಯಸ್ಸಿನ ಅಭ್ಯರ್ಥಿಗಳಿಗೆ ಉದ್ಯೋಗ ಮಾರ್ಗದರ್ಶನ, ಅಭ್ಯರ್ಥಿಗಳೊಂದಿಗೆ ಸಮಾಲೋಚನೆ, ಮೃದು ಕೌಶಲ್ಯ ತರಬೇತಿ, ಉದ್ಯೋಗಾಕಾಂಕ್ಷಿತ ಅಭ್ಯರ್ಥಿಗಳಿಗೆ ಮೌಲ್ಯಮಾಪನ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ``ಯುವ ಕೌಶಲ್ಯ” ಕಾರ್ಯಾಗಾರಕ್ಕೆ ಬರುವ ಮೊದಲು ವೆಬ್‌ಸೈಟ್: www.kaushalkar.com ನಲ್ಲಿ ಉಚಿತವಾಗಿ ನೋಂದಾಯಿಸಿಕೊAಡು ಸಿಎಎಫ್ ಸಂಖ್ಯೆ ತರಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ:೦೮೪೭೩-೨೫೩೭೧೮, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳ ಮೊ:೯೩೮೦೪೩೨೮೯೪ ಅಥವಾ ಜಿಲ್ಲಾ ಉದ್ಯೋಗಾಧಿಕಾರಿಗಳ ಮೊ:೮೦೭೩೩೮೨೨೨೫ ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...