ಜಿಲ್ಲೆಯಲ್ಲಿ ೯.೯೩ ಲಕ್ಷ ಮತದಾರರು
ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಪ್ರಕಟ
-ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್
ಯಾದಗಿರಿ, ಫೆಬ್ರುವರಿ ೧೨ (ಕರ್ನಾಟಕ ವಾರ್ತೆ): ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ, ಮತದಾರರ ಪಟ್ಟಿ ಪರಿಶೀಲನಾ ಕಾರ್ಯ ಮುಕ್ತಾಯವಾಗಿದ್ದು, ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ೩೬ ಶೋರಾಪೂರ, ೩೭ ಶಹಾಪೂರ, ೩೮ ಯಾದಗರಿ ಹಾಗೂ ೩೯-ಗುರುಮಿಠಕಲ್ ವಿಧಾನಸಭಾ ಕ್ಷೇತ್ರಗಳ ಭಾವಚಿತ್ರವಿರುವ ಅಂತಿಮ ಅರ್ಹತಾ ಮತದಾರರ ಪಟ್ಟಿಯನ್ನು ಪ್ರಕಟಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ. ಕೂರ್ಮಾ ರಾವ್ ಅವರು ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಭಾವಚಿತ್ರವಿರುವ ಅಂತಿಮ ಮತದಾರರ ಪಟ್ಟಿ ಸ್ವೀಕರಿಸುವ ಕುರಿತು ಸಂಬAಧಪಟ್ಟ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರ ಜೊತೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು. ಚುನಾವಣಾ ಆಯೋಗದ ನಿರ್ದೇಶನದಂತೆ ಅರ್ಹತಾ ದಿನಾಂಕ: ೦೧.೦೧.೨೦೨೦ರಂತೆ ವಿಧಾನಸಭಾ ಕ್ಷೇತ್ರಗಳ ಭಾವಚಿತ್ರವಿರುವ ಕರಡು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ನಂತರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು. ಮತದಾರರ ಪಟ್ಟಿ ಪರಿಷ್ಕರಣೆ ನಿರಂತರವಾಗಿರಲಿದ್ದು, ಚುನಾವಣೆ ನಾಮಪತ್ರಗಳ ಸ್ವೀಕೃತಿಯ ಕೊನೆಯ ದಿನಾಂಕದವರೆಗೆ ಹೆಸರು ಸೇರ್ಪಡೆಗೆ ಅವಕಾಶ ಇರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಅಂತಿಮ ಮತದಾರರ ಪಟ್ಟಿಯ ವಿವರ: ೩೬ ಶೋರಾಪೂರ ವಿಧಾನಸಭಾ ಕ್ಷೇತ್ರದಲ್ಲಿ ೨,೭೦,೭೮೯ ಒಟ್ಟು ಮತದಾರರಿದ್ದು, ಇದರಲ್ಲಿ ೧,೩೬,೦೭೭ ಪುರುಷ, ೧,೩೪,೭೧೨ ಮಹಿಳಾ ಮತದಾರರು ಇದ್ದಾರೆ. ೩೭ ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ೨,೩೨,೮೬೩ ಒಟ್ಟು ಮತದಾರರಿದ್ದು, ಇದರಲ್ಲಿ ೧,೧೬,೭೨೭ ಪುರುಷ, ೧,೧೬,೧೩೬ ಮಹಿಳಾ ಮತದಾರರು ಇದ್ದಾರೆ. ೩೮ ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ೨,೪೧,೭೦೬ ಒಟ್ಟು ಮತದಾರರಿದ್ದು, ಇದರಲ್ಲಿ ೧,೨೦,೧೬೫ ಪುರುಷ, ೧,೨೧,೫೪೧ ಮಹಿಳಾ ಮತದಾರರು ಇದ್ದಾರೆ ಹಾಗೂ ೩೯ ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ೨,೪೮,೩೮೭ ಒಟ್ಟು ಮತದಾರರಿದ್ದು, ಇದರಲ್ಲಿ ೧,೨೩,೫೯೬ ಪುರುಷ, ೧,೨೪,೭೯೧ ಮಹಿಳಾ ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು ೪,೯೬,೫೬೫ ಪುರುಷ ಮತದಾರರು ಇದ್ದು, ೪,೯೭,೧೮೦ ಮಹಿಳಾ ಮತದಾರರಿದ್ದಾರೆ ಒಟ್ಟಾರೆಯಾಗಿ ಜಿಲ್ಲೆಯಲ್ಲಿ ೯,೯೩,೭೪೫ ಮತದಾರರು ಹೊಸ ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ಅವರು ತಿಳಿಸಿದರು.
ಸೇವಾ ಮತದಾರರು: ೩೬-ಶೋರಾಪೂರ ೫೯, ೩೭- ಶಹಾಪೂರ ೨೮, ೩೮ -ಯಾದಗಿರಿ ೧೧, ೩೯-ಗುರುಮಠಕಲ್ ೧೦ ಸೇರಿದಂತೆ ಅಂತಿಮ ಮತದಾರರ ಪಟ್ಟಿಯಲಿ ಒಟ್ಟು ೧೦೮ ಸೇವಾ ಮತದಾರರು ಇದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ ೯,೮೫,೨೭೧ ಮತದಾರರಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ೯,೯೩,೭೪೫ ಮತದಾರರು ಇರುವರು. ಕರಡು ಮತದಾರರ ಪಟ್ಟಿಯ ನಂತರ ೮,೪೭೪ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಅವರು ತಿಳಿಸಿದರು. ಅಂತಿಮ ಮತದಾರರ ಪಟ್ಟಿಯನ್ನು(http://ceokarnataka.kar.nic.in) ಹಾಗೂ ಜಿಲ್ಲೆಯ (yadgir.nic.in) ಅಂತರ್ಜಾಲದಲ್ಲಿಯೂ ಸಹ ಪರಿಶೀಲಿಸಿಕೊಳ್ಳಬಹುದಾಗಿದೆ. ೦೧.೦೧.೨೦೨೦ಕ್ಕೆ ೧೮ ವರ್ಷ ತುಂಬಿದವರು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಿಗಳಿಗೆ www.voterreg.kar.nic.in ಅಥವಾ nvsp.in. ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಅವರು ಹೇಳಿದರು. ಈಶನ್ಯಾ ಶಿಕ್ಷಕರ ಮತ ಕ್ಷೇತ್ರದ ಮತದಾರರು: ಒಟ್ಟು ೧,೬೩೭ ಮತದಾರರಿದ್ದು, ಅದರಲ್ಲಿ ೧೨೧೭ ಪುರಷರು, ೪೨೦ ಮಹಿಳಾ ಮತದಾರರು ಇದ್ದಾರೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಚುನಾವಣೆ ಶಾಖೆಯ ಖಲೀಲ್‌ಸಾಬ್, ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಜಿಲ್ಲಾ ಘಟಕದ ಶರಣಪ್ಪ ಎಂ.ಕೊಳ್ಳುರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ ಅಬ್ಬೆತುಮಕೂರ, ಜೆಡಿಎಸ್‌ನ ಶಾಮತಪ್ಪ, ಚಂದ್ರಶೇಖರ ಬಿಡದಿ ಅವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ