ಸುಕ್ಷೇತ್ರ ಶ್ರೀಶೈಲಕ್ಕೆ 10 ವಿಶೇಷ ಬಸ್
ಯಾದಗಿರಿ, ಫೆಬ್ರುವರಿ 20 (ಕರ್ನಾಟಕ ವಾರ್ತೆ): ಮಹಾ ಶಿವರಾತ್ರಿ ಪ್ರಯುಕ್ತ ಆಂಧ್ರಪ್ರದೇಶದಲ್ಲಿರುವ ಸುಕ್ಷೇತ್ರ ಶ್ರೀಶೈಲಕ್ಕೆ ಹೋಗಿ ಬರುವ ಭಕ್ತಾದಿ ಪ್ರಯಾಣಿಕರ ಅನುಕೂಲಕ್ಕಾಗಿ ಫೆಬ್ರುವರಿ 21ರಂದು ಯಾದಗಿರಿ ವಿಭಾಗದಿಂದ 10 ವಿಶೇಷ (ಹೆಚ್ಚಿನ) ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೋಗೇರಿ ಅವರು ತಿಳಿಸಿದ್ದಾರೆ.ಈ ಬಸ್‍ಗಳು ಯಾದಗಿರಿ, ಶಹಾಪುರ, ಸುರಪುರ ಬಸ್ ನಿಲ್ದಾಣಗಳಿಂದ ಕಾರ್ಯಾಚರಣೆ ಮಾಡುತ್ತವೆ. ಭಕ್ತಾದಿ ಪ್ರಯಾಣಿಕರು ತಮ್ಮ ಸಾರಿಗೆ ಸೌಕರ್ಯಕ್ಕಾಗಿ ಘಟಕ ವ್ಯವಸ್ಥಾಪಕರ ದೂರವಾಣಿ ಸಂಖ್ಯೆ ಯಾದಗಿರಿ-7760992463, ಶಹಾಪುರ-7760992464, ಸುರಪುರ-7760992467, ಗುರುಮಠಕಲ್-7760992465, ಸಹಾಯಕ ಸಂಚಾರಿ ವ್ಯವಸ್ಥಾಪಕರ ದೂರವಾಣಿ ಸಂಖ್ಯೆ-7760992458, ವಿಭಾಗೀಯ ಸಂಚಲನಾಧಿಕಾರಿ ದೂ:7760992452, ವಿಭಾಗೀಯ ಕಚೇರಿ ದೂ:7760992449 ಸಂಪರ್ಕಿಸಬಹುದು. ಭಕ್ತಾದಿ ಪ್ರಯಾಣಿಕರು ವಿಶೇಷ ಬಸ್‍ಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಪೂರ್ವಭಾವಿ ತರಬೇತಿಗೆ ಅರ್ಜಿ ಆಹ್ವಾನ
ಯಾದಗಿರಿ, ಫೆಬ್ರುವರಿ 20 (ಕರ್ನಾಟಕ ವಾರ್ತೆ): ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭ್ಯರ್ಥಿಗಳಿಗೆ ಎಸ್‍ಸಿಪಿ/ ಟಿಎಸ್‍ಪಿ ಯೋಜನೆ ಅಡಿಯಲ್ಲಿ ಐ.ಬಿ.ಪಿ.ಎಸ್ ಮೂಲಕ ನಡೆಸುವ ಬ್ಯಾಂಕಿಂಗ್ ಪ್ರೊಬೆಷನರಿ ಆಫೀಸರ್ ಮತ್ತು ಕ್ಲರ್ಕ್ ಹುದ್ದೆಗಳ ಆಯ್ಕೆಗೆ ಪರೀಕ್ಷಾ ಪೂರ್ವಭಾವಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಪರೀಕ್ಷಾ ಪೂರ್ವಭಾವಿ ತರಬೇತಿಗಳನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಆಯ್ಕೆ ಮಾಡಿರುವ ತರಬೇತಿ ಸಂಸ್ಥೆಗಳ ಎಂಪ್ಯಾನಲ್ ಪಟ್ಟಿ ((Empanel list) ) ಅನ್ವಯ ಆಯೋಜಿಸಲಾಗುತ್ತದೆ. ಪದವಿ ಪಡೆದಿರುವ ಅಭ್ಯರ್ಥಿಗಳು ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಯಾದಗಿರಿ ಇವರಿಗೆ ಭೇಟಿಯಾಗಿ ಫೆಬ್ರುವರಿ 27ರೊಳಗಾಗಿ ಹೆಸರು, ವಿದ್ಯಾರ್ಹತೆ, ಹುಟ್ಟಿದ ದಿನಾಂಕ, ವಿಳಾಸ, ಆಧಾರ್ ಕಾರ್ಡ್, ಮೀಸಲಾತಿ ಪ್ರಮಾಣ ಪತ್ರಗಳ ಅಸಲು ಪ್ರತಿ ಹಾಗೂ 2 ಸೆಟ್ ಝರಾಕ್ಸ್ ಮತ್ತು ಈಗಾಗಲೇ ಯಾವುದಾದರೂ ನೇಮಕಾತಿ ಅರ್ಜಿ ಸಲ್ಲಿಸಿದ್ದರೆ ವಿವರ ಇತ್ಯಾದಿ ಎಲ್ಲಾ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಯಾದಗಿರಿ, ಫೆಬ್ರುವರಿ 20 (ಕರ್ನಾಟಕ ವಾರ್ತೆ): ಜಿಲ್ಲೆಯ ಒನ್ ಸ್ಟಾಪ್ ಸೆಂಟರ್ (ಸಖಿ) ಯೋಜನೆಯನ್ನು ಅನುಷ್ಠಾನಗೊಳಿಸಲು ತಾತ್ಕಾಲಿಕ ಹೊರಗುತ್ತಿಗೆ ಆಧಾರದ ಮೇಲೆ ಹುದ್ದೆಗಳ ಭರ್ತಿಗಾಗಿ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.Centre Administrator-1 ಹುದ್ದೆ, Counsellor (Psycho- Social counseling)-1 ಹುದ್ದೆ, Case worker/Social Worker-2 ಹುದ್ದೆಗಳು, Paralegal Personnel/ Lawyer-2 ಹುದ್ದೆಗಳು, Multipurpose Cleaner/ Security-2 ಹುದ್ದೆಗಳು ಸೇರಿದಂತೆ ಒಟ್ಟು 08 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ವಿದ್ಯಾರ್ಹತೆ/ಅನುಭವ ಹಾಗೂ ಉಸ್ತುವಾರಿಯಲ್ಲಿ ಉತ್ತಮ ಕೆಲಸ ನಿರ್ವಹಿಸಬಲ್ಲ, ಗಣಕಯಂತ್ರ ನಿರ್ವಹಣೆಯಲ್ಲಿ ಪರಿಣಿತಿ, ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪರಿಪೂರ್ಣ ಹಿಡಿತವುಳ್ಳ ಮಹಿಳಾ ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನಕ್ಕೆ ಆಹ್ವಾನಿಸಿ ಸಂದರ್ಶನ/ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳು/ಅನುಭವ/ಕಂಪ್ಯೂಟರ್ ಪರೀಕ್ಷೆಗಳ ಮೂಲಕ ನೇಮಕಾತಿ ಮಾಡಲಾಗುತ್ತದೆ.
ಆಸಕ್ತ ಹಾಗೂ ಅರ್ಹ ಮಹಿಳಾ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಉಪನಿರ್ದೇಶಕ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯಾದಗಿರಿ ಅಥವಾ ಯಾದಗಿರಿ ಜಿಲ್ಲಾ ಎನ್.ಐ.ಸಿ. ವೆಬ್ ಸೈಟ್: http://yadgir.nic.in ನಲ್ಲಿ ಪಡೆದು ಮಾರ್ಚ್ 10ರವರೆಗೆ ಅಗತ್ಯ ದಾಖಲಾತಿಗಳೊಂದಿಗೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಈ ಕಚೇರಿಗೆ ಅರ್ಜಿಯನ್ನು ಸಲ್ಲಿಸಬೇಕು. ಮಾರ್ಚ್ 10ರ ನಂತರ ಯಾವುದೇ ಅಂಚೆ ಮೂಲಕ ಅಥವಾ ನೇರವಾಗಿ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲವೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಕ್ಷೇಪಣೆ ಸಲ್ಲಿಕೆಗೆ ಸೂಚನೆ
ಯಾದಗಿರಿ, ಫೆಬ್ರುವರಿ 20 (ಕರ್ನಾಟಕ ವಾರ್ತೆ): ಶಹಾಪುರ ನಗರದ ಖಾಜಿ ಲೇಔಟ್‍ನ ನಿವೇಶನ ನಂ. 43-76 ರಲ್ಲಿ ವಕ್ಫ್ ಆಸ್ತಿ ಜಮಾತೆ ಎ ಅಹ್ಲೆ ಹದೀಸ್ ಮಸ್ಜದ ಎ ಆಖ್ಸಾ ಸುನ್ನಿ ವಕ್ಫ್ ಇದ್ದು, ಸದರಿ ಆಸ್ತಿಯಲ್ಲಿ ಮಸ್ಜಿದ್ ನಿರ್ಮಾಣ ಮಾಡುತ್ತಿದ್ದು ಯಾವುದೇ ಸಾರ್ವಜನಿಕ ಆಕ್ಷೇಪಣೆ ಇದ್ದಲ್ಲಿ 15 ದಿನದೊಳಗಾಗಿ ದಾಖಲೆಗಳೊಂದಿಗೆ ಲಿಖಿತವಾಗಿ ಶಹಾಪುರ ಪೌರಾಯುಕ್ತರ ಕಚೇರಿಗೆ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ