ಗುರುವಾರ, ಫೆಬ್ರವರಿ 13, 2020

 ಕ್ರಿಮಿನಾಶಕ ಬಳಕೆ ಕಡಿಮೆ ಮಾಡಿ: ಡಾ.ಅಮರೇಶ
ಯಾದಗಿರಿ, ಫೆಬ್ರುವರಿ ೧೩ (ಕರ್ನಾಟಕ ವಾರ್ತೆ): ಕೃಷಿಯಲ್ಲಿ ರಾಸಾಯನಿಕ ಕ್ರಿಮಿನಾಶಕಗಳ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಉಳಿಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಅಮರೇಶ ವೈ.ಎಸ್. ಅವರು ಸಲಹೆ ನೀಡಿದರು.
ಜಿಲ್ಲೆಯ ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟಿçÃಯ ಸಸ್ಯ ಆರೋಗ್ಯ ನಿರ್ವಹಣಾ ಸಂಸ್ಥೆ ಹೈದ್ರಾಬಾದ್ ಮತ್ತು ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ “ಕೃಷಿಯಲ್ಲಿ ರಾಸಾಯನಿಕ ಕ್ರಿಮಿನಾಶಕಗಳ ಬಳಕೆಯಲ್ಲಿ ಸುರಕ್ಷಿತ ಕ್ರಮಗಳು” ಕುರಿತು ಸುರಪುರ ತಾಲ್ಲೂಕಿನ ರೈತರಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಸಾಯನಿಕ ಕ್ರಿಮಿನಾಶಕ ಬಳಕೆ ಮಾಡುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅವರು  ವಿವರಿಸಿದರು. ಡಾ.ಉದಯ ಬಾನು ಅವರು ರಾಸಾಯನಿಕ ಕ್ರಿಮಿನಾಶಕಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು. ವಿಜ್ಞಾನಿಗಳಾದ ಡಾ.ಉಮೇಶ ಬಾರಿಕರ ಅವರು ಸುರಕ್ಷತಾ ಕವಚಗಳ ಬಳಕೆಯ ಪ್ರಾತ್ಯಕ್ಷಿತೆಯನ್ನು ಮಾಡಿ ತೋರಿಸಿದರು. ವಿಜ್ಞಾನಿಗಳಾದ ಡಾ.ಮಹೇಶ, ಡಾ.ಸತೀಶ, ಡಾ.ಶಾಂತವೀರಯ್ಯ, ಸುಮಂಗಲಾ ಮತ್ತು ಪಲ್ಲವಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತರಬೇತಿ ಕಾರ್ಯಕ್ರಮದಲ್ಲಿ ಸುಮಾರು ೩೦ ರೈತರು ಪಾಲ್ಗೊಂಡಿದ್ದರು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...