ಜಿಲ್ಲಾ ಸಮಾಲೋಚಕರ ಹುದ್ದೆಗೆ ಅರ್ಜಿ
ಯಾದಗಿರಿ, ಫೆಬ್ರುವರಿ ೧೧ (ಕರ್ನಾಟಕ ವಾರ್ತೆ): ಮಹತ್ವಾಕಾಂಕ್ಷೆ ಜಿಲ್ಲೆಯ ನೀತಿ ಆಯೋಗದ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಜಿಲ್ಲಾ ಸಮಾಲೋಚಕರ ೩ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಿಇ/ ಬಿ.ಟೆಕ್ ಅಥವಾ ಯಾವುದೇ ಸ್ನಾತಕೋತ್ತರ ಪದವೀಧರರಿಗೆ ಆದ್ಯತೆ ನೀಡಲಾಗುವುದು. ೧.ಆರೋಗ್ಯ ಮತ್ತು ಪೌಷ್ಟಿಕಾಂಶ ಕ್ಷೇತ್ರಕ್ಕೆ ಎಂ.ಪಿ.ಹೆಚ್, ೨.ಶಿಕ್ಷಣ ಕ್ಷೇತ್ರಕ್ಕೆ ಎಂ.ಬಿ.ಎ, ೩.ಕೃಷಿ ಮತ್ತು ಜಲಸಂಪನ್ಮೂಲ ಕ್ಷೇತ್ರಕ್ಕೆ ಎಂ.ಎಸ್ಸಿ ಅಗ್ರಿ ವಿದ್ಯಾರ್ಹತೆ ಇರಬೇಕು. ಸಂಬAಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ ೧ ವರ್ಷದ ಅನುಭವ ಹೊಂದಿರತಕ್ಕದ್ದು. ಜಿಲ್ಲಾ ಸಮಾಲೋಚಕರನ್ನು ೧ ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಒಡಂಬಡಿಕೆ ಮಾಡಿಕೊಂಡು ಮುಂದಿನ ೨ ವರ್ಷದ ಅವಧಿಗೆ ಅವರ ಕಾರ್ಯವೈಖರಿಯ ಆಧಾರದ ಮೇಲೆ ಗುತ್ತಿಗೆ ಅವಧಿಯನ್ನು ವಿಸ್ತರಿಸಲಾಗುವುದು. ಆಯ್ಕೆಯಾದ ಸಮಾಲೋಚಕರಿಗೆ ಮಾಸಿಕ ೪೫,೦೦೦ ರೂ.ಗಳನ್ನು ನಿಗದಿಪಡಿಸಲಾಗಿರುತ್ತದೆ. ಮತ್ತು ಕಾರ್ಯಕ್ಷಮತೆ ಆಧಾರದ ಮೇಲೆ ವರ್ಷಾಂತ್ಯದಲ್ಲಿ ಪ್ರೋತ್ಸಾಹ ಧನವನ್ನು ನೀಡಲಾಗುವುದು. ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಸ್ಕಾö್ಯನ್ ಕಾಪಿಗಳನ್ನು ಇ-ಮೇಲ್ ವಿಳಾಸ: nicyadgir@gmail.com ಗೆ ಕಳುಹಿಸಬೇಕು. ಹಾರ್ಡ್ ಕಾಪಿಯನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎನ್‌ಐಸಿ ಅಧಿಕಾರಿಗೆ ಖುದ್ದಾಗಿ ಫೆಬ್ರುವರಿ ೨೦ರೊಳಗೆ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬರುವ ಸ್ವೀಕೃತವಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಉದ್ಯಮಶೀಲತಾ ಉಚಿತ ತರಬೇತಿ
ಯಾದಗಿರಿ, ಫೆಬ್ರುವರಿ ೧೧ (ಕರ್ನಾಟಕ ವಾರ್ತೆ): ದಿಶಾ ಉದ್ಯಮಶೀಲತಾ ತರಬೇತಿಯ ಅಡಿಯಲ್ಲಿ “ಸ್ವಂತ ಉದ್ಯೋಗ ಸ್ಥಾಪಿಸಿ, ಸುಖ ಸಮೃದ್ಧಿ ಸಾಧಿಸಿ” ಎಂಬAತೆ ಯಾದಗಿರಿ ಜಿಲ್ಲೆಯ ಸಿಡಾಕ್-ದಿಶಾ ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರದಿAದ ಸ್ವಂತ ಉದ್ಯಮ ಸ್ಥಾಪಿಸಲು ಇಚ್ಛಿಸುವ ನಿರುದ್ಯೋಗ ಯುವಕ-ಯುವತಿಯರಿಗೆ ಉದ್ಯಮಶೀಲತಾ ಕುರಿತು ಉಚಿತ ತರಬೇತಿ ನೀಡಲಾಗುವುದು. ವಿವಿಧ ಯೋಜನೆಗಳ ಮಾಹಿತಿ, ವ್ಯವಹಾರದ ಯೋಜನೆಗಳ ಆಯ್ಕೆ, ಹಣಕಾಸಿನ ಸಾಕ್ಷರತೆ ಸ್ಥಳೀಯ ಸಂಪನ್ಮೂಲಗಳ ಬಳಕೆ, ನೋಂದಣೆ ಮಾಡುವ ವಿಧಾನಗಳು, ಸಂಭವನೀಯ ವ್ಯವಹಾರದ ಕಲ್ಪನೆಗಳು ಮತ್ತು ಮೌಲ್ಯಮಾಪನ, ಅನುಷ್ಠಾನ, ಸಾಲದ ಅರ್ಜಿ ಸಲ್ಲಿಸುವ ವಿಧಾನ, ತೆರಿಗೆ ನಿಯಮಗಳು, ಯೋಜನಾ ವರದಿ ತಯಾರಿಕೆ, ಜಾಹೀರಾತು ಮತ್ತು ಮಾರುಕಟ್ಟೆಯ ಕುರಿತು ಮತ್ತು ಯಶಸ್ವಿ ಉದ್ಯಮಿಗಳ ಜೊತೆ ಸಂವಾದ ಹೀಗೆ ಹಲವಾರು ರೀತಿಯ ಮಾರ್ಗದರ್ಶನ, ಮಾಹಿತಿಯನ್ನು ತರಬೇತಿಯಲ್ಲಿ ನೀಡಲಾಗುವುದು. ತರಬೇತಿ ಪಡೆಯಲು ಇಚ್ಛಿಸುವವರು ಎರಡು ಪಾಸ್‌ಪೋರ್ಟ್ ಅಳತೆಯ ಫೋಟೋ ಮತ್ತು ಆಧಾರ್‌ಕಾರ್ಡ್ ಝರಾಕ್ಸ್ನೊಂದಿಗೆ ಜಿಲ್ಲಾಡಳಿತ ಭವನದ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯಲ್ಲಿರುವ ದಿಶಾ ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರದಲ್ಲಿ ಫೆಬ್ರುವರಿ ೧೫ರವರೆಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮಾಲೋಚಕರಾದ ಪದ್ಮಶ್ರೀ ಪೋತದಾರ ಮೊ:೭೮೪೭೮೭೧೦೬೭, ಶಂಕರ ಕುಕ್ಕಾ ಪಾಟೀಲ್ ಮೊ:೯೫೩೫೪೦೧೯೩೩ ಸಂಪರ್ಕಿಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ