ಗುರುವಾರ, ಫೆಬ್ರವರಿ 13, 2020

ಪರಿಹಾರ ಧನದ ಚೆಕ್ ವಿತರಣೆ
ಯಾದಗಿರಿ, ಫೆಬ್ರುವರಿ ೧೩ (ಕರ್ನಾಟಕ ವಾರ್ತೆ): ಚಪೆಟ್ಲಾ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯುತ್ ಅವಘಡದಿಂದ ಮೃತಪಟ್ಟ ನರಸಿಂಹಲು ತಂದೆ ನರಸಯ್ಯ ಕಲಾಲ್ ಅವರ ಕುಟುಂಬದವರಿಗೆ ೫ ಲಕ್ಷ ರೂ. ಪರಿಹಾರದ ಚೆಕ್ ಅನ್ನು ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ನಾಗನಗೌಡ ಕಂದಕೂರ ಅವರು ಗುರುವಾರ ವಿತರಿಸಿದರು.
ನರಸಿಂಹಲು ಕಲಾಲ್ ಅವರ ಪತ್ನಿ ಆನಂದಮ್ಮ ಕಲಾಲ್ ಅವರು ಪರಿಹಾರ ಧನದ ಚೆಕ್ ಅನ್ನು ಸ್ವೀಕರಿಸಿದರು. ಜೆಸ್ಕಾಂನ ಗಾಜರಕೋಟ ಶಾಖಾಧಿಕಾರಿ ಸಂದೀಪ್ ಹಜಾರೆ, ಮುಖಂಡರಾದ ಜಿ.ತಮ್ಮಣ್ಣ, ಚಪೆಟ್ಲಾ ಗ್ರಾಮಸ್ಥರಾದ ಗುರುರಾಜ, ಅನಂತಯ್ಯ ಕಲಾಲ್ ಹಾಗೂ ವೆಂಕಟೇಶ ಕಲಾಲ್ ಅವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...