ಮಂಗಳವಾರ, ಫೆಬ್ರವರಿ 11, 2020


ನಾಳೆ ವಾಹನಗಳ ಬಹಿರಂಗ ಹರಾಜು
ಯಾದಗಿರಿ, ಫೆಬ್ರುವರಿ ೧೧ (ಕರ್ನಾಟಕ ವಾರ್ತೆ): ಅಬಕಾರಿ ಇಲಾಖೆಯಿಂದ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ ೧೨ ವಾಹನಗಳ ಹರಾಜು ಪ್ರಕ್ರಿಯೆಯನ್ನು ಫೆಬ್ರುವರಿ ೧೩ರಂದು ಬೆಳಿಗ್ಗೆ ೧೧ ಗಂಟೆಗೆ ಯಾದಗಿರಿ ನಗರದ ಲಾಡೀಸ್‌ಗಲ್ಲಿಯಲ್ಲಿರುವ ಅಬಕಾರಿ ನಿರೀಕ್ಷರ ವಲಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಹರಾಜಿನ ನಿರ್ವಹಣಾಧಿಕಾರಿಯನ್ನಾಗಿ ಶಹಾಪೂರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರನ್ನು ನೇಮಿಸಲಾಗಿದೆ. ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವ ಸಾರ್ವಜನಿಕರು ಹರಾಜು ದಿನದಂದು ಬೆಳಿಗ್ಗೆ ೧೧ ಗಂಟೆಯ ಒಳಗಾಗಿ ದ್ವಿಚಕ್ರ ವಾಹನಗಳಿಗೆ ೫೦೦೦ ರೂ., ತ್ರಿಚಕ್ರ ವಾಹನಗಳಿಗೆ ೮೦೦೦ ರೂ. ಮತ್ತು ನಾಲ್ಕು ಚಕ್ರದ ವಾಹನಗಳಿಗೆ ೧೦,೦೦೦ ರೂ. ಮುಂಗಡ ಠೇವಣಿಯನ್ನು ಪಾವತಿಸಿ ರಸೀದಿ ಪಡೆಯಬೇಕು.
ಯಶಸ್ವಿ ಸವಾಲುದಾರರು ಹರಾಜು ದಿನದಂದು ಸವಾಲು ಮೊತ್ತದ ಶೇ.೨೫ರಷ್ಟು ಹಣವನ್ನು ಪಾವತಿಸಿ ರಸೀದಿ ಪಡೆಯತಕ್ಕದ್ದು. ಉಳಿದ ಶೇ.೭೫ರಷ್ಟು ಹಣವನ್ನು ಸ್ಥಿರೀಕರಣ ಆದೇಶ ತಲುಪಿದ ಮೂರು ದಿನಗಳ ಒಳಗಾಗಿ ಪಾವತಿಸಿ, ವಾಹನವನ್ನು ಪಡೆಯಬೇಕು. ತಪ್ಪಿದ್ದಲ್ಲಿ ಶೇ.೨೫ರಷ್ಟು ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಮರು ಹರಾಜು ಕೈಗೊಳ್ಳುವ ಅಧಿಕಾರಿವನ್ನು ಅಬಕಾರಿ ಇಲಾಖೆಯ ಉಪ ಆಯುಕ್ತರು ಹೊಂದಿರುತ್ತಾರೆ. ಹರಾಜಿಗೆ ಒಳಪಡಿಸಿದ ವಾಹನಗಳನ್ನು ಕಚೇರಿ ಆವರಣದಲ್ಲಿ ಅದೇ ದಿನ ಬೆಳಿಗ್ಗೆ ೮ ಗಂಟೆಯಿAದ ನೋಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಫೆ.೧೫ರಂದು ವಾಹನಗಳ ಬಹಿರಂಗ ಹರಾಜು
ಯಾದಗಿರಿ, ಫೆಬ್ರುವರಿ ೧೧ (ಕರ್ನಾಟಕ ವಾರ್ತೆ): ಅಬಕಾರಿ ಇಲಾಖೆಯಿಂದ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ ೧೯ ವಾಹನಗಳ ಹರಾಜು ಪ್ರಕ್ರಿಯೆಯನ್ನು ಫೆಬ್ರುವರಿ ೧೫ರಂದು ಬೆಳಿಗ್ಗೆ ೧೧ ಗಂಟೆಗೆ ಸುರಪುರದ ಅಬಕಾರಿ ನಿರೀಕ್ಷರ ವಲಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಹರಾಜಿನ ನಿರ್ವಹಣಾಧಿಕಾರಿಯನ್ನಾಗಿ ಶಹಾಪೂರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರನ್ನು ನೇಮಿಸಲಾಗಿದೆ. ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವ ಸಾರ್ವಜನಿಕರು ಹರಾಜು ದಿನದಂದು ಬೆಳಿಗ್ಗೆ ೧೧ ಗಂಟೆಯ ಒಳಗಾಗಿ ದ್ವಿಚಕ್ರ ವಾಹನಗಳಿಗೆ ೫೦೦೦ ರೂ., ತ್ರಿಚಕ್ರ ವಾಹನಗಳಿಗೆ ೮೦೦೦ ರೂ. ಮತ್ತು ನಾಲ್ಕು ಚಕ್ರದ ವಾಹನಗಳಿಗೆ ೧೦,೦೦೦ ರೂ. ಮುಂಗಡ ಠೇವಣಿಯನ್ನು ಪಾವತಿಸಿ ರಸೀದಿ ಪಡೆಯಬೇಕು.ಯಶಸ್ವಿ ಸವಾಲುದಾರರು ಹರಾಜು ದಿನದಂದು ಸವಾಲು ಮೊತ್ತದ ಶೇ.೨೫ರಷ್ಟು ಹಣವನ್ನು ಪಾವತಿಸಿ ರಸೀದಿ ಪಡೆಯತಕ್ಕದ್ದು. ಉಳಿದ ಶೇ.೭೫ರಷ್ಟು ಹಣವನ್ನು ಸ್ಥಿರೀಕರಣ ಆದೇಶ ತಲುಪಿದ ಮೂರು ದಿನಗಳ ಒಳಗಾಗಿ ಪಾವತಿಸಿ, ವಾಹನವನ್ನು ಪಡೆಯಬೇಕು. ತಪ್ಪಿದ್ದಲ್ಲಿ ಶೇ.೨೫ರಷ್ಟು ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಮರು ಹರಾಜು ಕೈಗೊಳ್ಳುವ ಅಧಿಕಾರಿವನ್ನು ಅಬಕಾರಿ ಇಲಾಖೆಯ ಉಪ ಆಯುಕ್ತರು ಹೊಂದಿರುತ್ತಾರೆ. ಹರಾಜಿಗೆ ಒಳಪಡಿಸಿದ ವಾಹನಗಳನ್ನು ಕಚೇರಿ ಆವರಣದಲ್ಲಿ ಅದೇ ದಿನ ಬೆಳಿಗ್ಗೆ ೮ ಗಂಟೆಯಿAದ ನೋಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...