ಆರೋಗ್ಯ ಯೋಜನೆಗಳ ಪ್ರಚಾರ
ಯಾದಗಿರಿ, ಫೆಬ್ರುವರಿ 07 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಎಲ್.ಇ.ಡಿ ಮೊಬೈಲ್ ವಾಹನಗಳ ಮೂಲಕ ಆರೋಗ್ಯ ಇಲಾಖೆಯ ಯೋಜನೆ/ ಕಾರ್ಯಕ್ರಮಗಳ ಪ್ರಚಾರ ಕಾರ್ಯಕ್ರಮಕ್ಕೆ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಲಕ್ಷ್ಮೀಕಾಂತ ಅವರು ಚಾಲನೆ ನೀಡಿದರು.
ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ, ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ಕಾರ್ಯಕ್ರಮ, ಡೆಂಗ್ಯೂ ಜಾಗೃತಿ, ನವಜಾತ ಶಿಶು ಮತ್ತು ಗರ್ಭಿಣಿ ಆರೈಕೆ ಸೇರಿದಂತೆ ಮುಂತಾದ ಕಾರ್ಯಕ್ರಮಗಳನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಗುರುವಾರ ಯಾದಗಿರಿ ನಗರದ ಗಾಂಧಿ ಚೌಕ್, ಗಂಜ್, ಹತ್ತಿಕುಣಿ ಗ್ರಾಮದಲ್ಲಿ ಮತ್ತು ಶುಕ್ರವಾರ ಗುರುಮಠಕಲ್ ತಾಲ್ಲೂಕಿನ ಗ್ರಾಮಗಳಾದ ಇಮಾಲಪೂರ, ಧರ್ಮಪೂರ, ಮುಗ್ಧಂಪೂರ, ಚಿನ್ನಕಾರ, ಬಾಂದೆಪಲ್ಲಿ ಪ್ರದರ್ಶನ ಮಾಡಲಾಗಿದೆ. ಫೆಬ್ರುವರಿ 8ರಂದು ಶಹಾಪೂರ ತಾಲ್ಲೂಕಿನ ಚಟ್ನಳ್ಳಿ, ಮುಡಬಾಳ, ನಾಗನಟಗಿ, ಚಾಮನಾಳ, ಬೀರನೂರ ಗ್ರಾಮಗಳಲ್ಲಿ ಪ್ರದರ್ಶನ ನಡೆಯಲಿದೆ.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದರ ಶಂಕರ, ಸಿಬ್ಬಂದಿಗಳಾದ ಸುದರ್ಶನ, ವಿದ್ಯಾ, ಅರುಣಾ, ಜಾವೀದ್, ಮೌನೇಶ ಅವರು ಚಾಲನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ