ಶುಕ್ರವಾರ, ಫೆಬ್ರವರಿ 28, 2020

೨೦೨೦ನೇ ಸಾಲಿನ ಬಜೆಟ್ ಅನುಮೋದನೆ
ಯಾದಗಿರಿ, ಫೆಬ್ರವರಿ ೨೮ (ಕರ್ನಾಟಕ ವಾರ್ತೆ): ಯಾದಗಿರಿ ನಗರಸಭೆೆ ೨೦೨೦-೨೧ನೇ ಸಾಲಿನ ಆಯವ್ಯಯ ಬಜೆಟ್ ಮಂಡನೆಯ ಮುಂಗಡ ಪತ್ರವನ್ನು ತಯಾರಿಸಿ, ಪೂರ್ವಭಾವಿಯಾಗಿ ಸಲಹೆ ಸೂಚನೆ ಪಡೆಯಲು ನಗರಸಭೆ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳÀ ಅಧ್ಯಕ್ಷತೆಯಲ್ಲಿ ಹಾಗೂ ಸಾರ್ವಜನಿಕರು, ನಗರಸಭೆ ಪ್ರತಿನಿಧಿಗಳ ಸಮಕ್ಷಮದಲ್ಲಿ ಜನವರಿ ೨೦ರಂದು ಜರುಗಿದ ಸಭೆಯಲ್ಲಿ ಬಜೆಟ್ ಮಂಡಿಸಲಾಯಿತು. ಸಾರ್ವಜನಿಕರ ಸಲಹೆ ಸೂಚನೆ ಮೆರೆಗೆ ಫೆಬ್ರವರಿ ೨೦ರಂದು ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆಯವ್ಯಯಬಜೆಟ್‌ಗೆ ಅನುಮೋದನೆ ನೀಡಿದ್ದಾರೆ. ಈ ಭಾರಿಯ ಆಯವ್ಯಯ ಬಜೆಟ್ ನಗರಸಭೆಯ ಕೊರತೆಯ ಅನುದಾನ ೨.೭೮ ಲಕ್ಷಗಳು ಇರುತ್ತದೆ. ಬಜೆಟ್‌ನಲ್ಲಿ ಸಂಪನ್ಮೂಲ ಕ್ರೂಢೀಕರಿಸುವುದು, ನೂತನ ನಗರಸಭೆಯ ಕಟ್ಟಡ ನಿರ್ಮಾಣ ಮಾಡುವುದು, ಶುದ್ಧ ನೀರು ಪೂರೈಕೆ ಮಾಡುವುದು, ಶೌಚಾಲಯ ನಿರ್ಮಾಣಕ್ಕೆ ಧನ ಸಹಾಯ ನೀಡುವುದು ಹಾಗೂ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡುವ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಯಿತು. 

ಪಿಯುಸಿ ವಾರ್ಷಿಕ ಪರೀಕ್ಷೆ ಜಾಗೃತದಳ ನೇಮಕ
ಯಾದಗಿರಿ, ಫೆಬ್ರುವರಿ ೨೮ (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಮಾರ್ಚ್ ೪ರಿಂದ ೨೩ರವರೆಗೆ ಬೆಳಿಗ್ಗೆ ೧೦ರಿಂದ ಮದ್ಯಾಹ್ನ ೧.೩೦ರವರೆಗೆ ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಅಕ್ರಮ ಚಟುವಟಿಕೆಗಳನ್ನು ತಡೆಯಲು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಜಾಗೃತದಳ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿಗಳನ್ನು ಸರ್ಕಾರಿ ಪಿಯು ಕಾಲೇಜು ಯಾದಗಿರಿಗೆ ನೇಮಕ ಮಾಡಲಾಗಿದೆ. ಮೊ. ೯೦೦೮೩೬೨೭೮೨, ಯಾದಗಿರಿ ತೋಟಗಾರಿಕೆ ಉಪನಿದೇರ್ಶಕರನ್ನು ನ್ಯೂ ಕನ್ನಡ ಸಂಯುಕ್ತ ಪಿಯು ಕಾಲೇಜಿಗೆ ನೇಮಕ ಮಾಡಲಾಗಿದೆ. ಮೊ: ೮೨೭೭೯೩೩೪೦೧, ಯಾದಗಿರಿ ಪಶು ಸಂಗೋಪನೆ ಮತ್ತು ಪಶು ವೈದ್ಯ ಇಲಾಖೆ ಉಪನಿರ್ದೇಶಕರನ್ನು ರಿಲಿಜಿಯಸ್ ಮೈನಾರಿಟಿ ಪಿಯು ಕಾಲೇಜು ಯಾದಗಿರಿಗೆ ನೇಮಕ ಮಾಡಲಾಗಿದೆ ಮೊ:೯೪೪೮೬೫೧೨೧೨, ಯಾದಗಿರಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರನ್ನು ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಯಾದಗಿರಿಗೆ ನೇಮಕ ಮಾಡಲಾಗಿದೆ ಮೊ: ೯೪೪೮೮೩೦೨೭೭, ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳನ್ನು ಗುರುಮಿಠಕಲ್ ಸರ್ಕಾರಿ ಪಿಯು ಕಾಲೇಜಿಗೆ ನೇಮಕ ಮಾಡಲಾಗಿದೆ ಮೊ: ೯೯೮೦೧೧೩೨೯೦, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರನ್ನು ಶಹಾಪೂರ ತಾಲ್ಲೂಕಿನ ಸರ್ಕಾರಿ ಪಿಯು ಕಾಲೇಜಿಗೆ ನೇಮಕ ಮಾಡಲಾಗಿದೆ ಮೊ: ೯೪೪೯೨೭೦೩೧೪, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳನ್ನು ಶಹಾಪೂರ ತಾಲ್ಲೂಕಿನ ಸರ್ಕಾರಿ ಪಿಯು ಕಾಲೇಜಿನ ಭೀüಮರಾಯಗುಡಿಗೆ ನೇಮಕ ಮಾಡಲಾಗಿದೆ ಮೊ: ೭೨೫೯೪೪೦೪೦೦, ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮ ನಿಯಮಿತ ಜಿಲ್ಲಾ ವ್ಯವಸ್ಥಾಪಕರನ್ನು ಶಹಾಪೂರ ತಾಲ್ಲೂಕಿನ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿಗೆ ನೇಮಕ ಮಾಡಲಾಗಿದೆ ಮೊ: ೯೯೮೦೩೯೮೦೧೫, ಯಾದಗಿರಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಪ್ರಾಂಶುಪಾಲರನ್ನು ಹುಣಸಗಿ ತಾಲ್ಲೂಕಿನ ಸರ್ಕಾರಿ ಪಿಯು ಕಾಲೇಜು ಹುಣಸಿಗಿಗೆ ನೇಮಕ ಮಾಡಲಾಗಿದೆ ಮೊ: ೯೧೦೮೦೮೮೮೬೫, ಯುವಜನ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸುರಪುರ  ಸರ್ಕಾರಿ ಪಿಯು ಕಾಲೇಜಿಗೆ ನೇಮಕ ಮಾಡಲಾಗಿದೆ. ಮೊ: ೯೪೪೯೯೬೭೫೬೧, ಜಿಲ್ಲಾ ಅಂಕಿತ ಅಧಿಕಾರಿಗಳನ್ನು (ಆಹಾರ ಸುರಕ್ಷತಾ ಅಧಿಕಾರಿಗಳು) ಸುರಪುರ ತಾಲ್ಲೂಕಿನ ಪ್ರಭು ಎ&ಎಸ್ & ಸಿ.ಪಿ.ಯು ಕಾಲೇಜಿಗೆ ನೇಮಕ ಮಾಡಲಾಗಿದೆ ಮೊ: ೯೧೬೪೩೨೨೯೯, ೮೩೧೦೬೩೨೧೩೭, ಸುರಪುರ ತಾಲ್ಲೂಕಿನ   ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರನ್ನು ಸುರಪುರದ ತಾಲ್ಲೂಕಿನ ಕೆಂಭಾವಿ ಸರ್ಕಾರಿ ಪಿಯು ಕಾಲೇಜಿಗೆ ನೇಮಕ ಮಾಡಲಾಗಿದೆ ಮೊ: ೮೬೬೦೭೮೯೩೪೨, ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿಯನ್ನು ಸುರಪುರ ತಾಲ್ಲೂಕಿನ ರಂಗAಪೇಠ ಅಂಬೇಡ್ಕರ್ ಸ್ವತಂತ್ರ ಪಿಯು ಕಾಲೇಜಿಗೆ ನೇಮಕ ಮಾಡಲಾಗಿದೆ ಮೊ: ೯೯೦೨೧೯೩೩೨೫.
ಎಲ್ಲ ಅಧಿಕಾರಿಗಳು ತಮಗೆ ವಹಿಸಲಾದ ಪರೀಕ್ಷಾ ಕೇಂದ್ರಕ್ಕೆ ಖುದ್ದಾಗಿ ಹಾಜರಾಗಬೇಕು. ಪರೀಕ್ಷಾ ಕೇಂದ್ರದೊಳಗೆ ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್‌ನ್ನು ತೆಗೆದುಕೊಂಡು ಹೋಗಬಾರದು ಎಂದು ಅವರು ತಿಳಿಸಿದ್ದಾರೆ.
.

ಏಪ್ರಿಲ್ 1ರಿಂದ ಪರಿಷ್ಕøತ ಆಸ್ತಿ ತೆರಿಗೆ ಜಾರಿ
*******
ಯಾದಗಿರಿ, ಫೆಬ್ರುವರಿ 28 (ಕರ್ನಾಟಕ ವಾರ್ತೆ): ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾಸದ ಕಟ್ಟಡಗಳಿಗೆ ಶೇ. 20ರಂತೆ ವಾಣಿಜ್ಯ, ಕೈಗಾರಿಕೆ, ಸಾರ್ವಜನಿಕ ಉಪಯೋಗದ ಕಟ್ಟಡಗಳಿಗೆ ಹಾಗೂ ಖಾಲಿ ನಿವೇಶನಗಳಿಗೆ ಶೇಕಡ 30ರಂತೆ ಆಸ್ತಿ ತೆರಿಗೆಯನ್ನು ಹೆಚ್ಚಿಸಿ ಪರಿಷ್ಕರಿಸಲಾದ ಆಸ್ತಿ ತೆರಿಗೆ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಕರ್ನಾಟಕ ಪುರಸಭೆಗಳ ಅಧಿನಿಯಮ 1964ರ ಕಲಂ 102ಎ ರಿತ್ಯ ಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆಯನ್ನು ಶೇ. 15 ರಿಂದ 30ರವರೆಗೆ ಹೆಚ್ಚಿಸಬೇಕಾಗಿರುತ್ತದೆ. ಅದರಂತೆ ದಿನಾಂಕ: 04-01-2020 ರಂದು ಮಾನ್ಯ ಆಡಳಿತಾಧಿಕಾರಿಗಳು ನಗರಸಭೆ ಯಾದಗಿರಿ ಹಾಗೂ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ ನಿರ್ಣಯದ ಪ್ರಕಾರÀ ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾಸದ ಕಟ್ಟಡಗಳಿಗೆ ಶೇ.20ರಂತೆ ಹಾಗೂ ವಾಣಿಜ್ಯ, ಕೈಗಾರಿಕೆ, ಸಾರ್ವಜನಿಕ ಉಪಯೋಗದ ಕಟ್ಟಡಗಳಿಗೆ ಹಾಗೂ ಖಾಲಿ ನಿವೇಶನಗಳಿಗೆ ಶೇ.30 ರಂತೆ 2020-21ನೇ ಸಾಲಿನಿಂದ ಪರಿಷ್ಕರಿಸಿ ಆಸ್ತಿ ತೆರಿಗೆ ಹೆಚ್ಚಿಸಿ ಸಭೆಯು ಒಪ್ಪಿಗೆ ನೀಡಿತು. 2020-21ನೇ ಸಾಲಿನಿಂದ 2022-23ನೇ ಸಾಲಿನ ವರೆಗೆ ಹೆಚ್ಚಿಸಿದ ಆಸ್ತಿ ತೆರಿಗೆಯನ್ನು ಏಪ್ರಿಲ್ 01ರಿಂದ ಜಾರಿಗೆ ಬರುವಂತೆ ಕಾನೂನು ರಿತ್ಯ ಕ್ರಮ ಜರುಗಿಸಲು ಸಭೆಯಲ್ಲಿ ನಿರ್ಣಯಿಸಿದಂತೆ ಹೆಚ್ಚಿಸಿದ ತೆರಿಗೆಯ ಬಗ್ಗೆ ಸಾರ್ವಜನಿಕರು ಅಥವಾ ಸಂಘ ಸಂಸ್ಥೆಗಳಿಂದ 30 ದಿನಗೊಳಗಾಗಿ ತಮ್ಮ ಸಲಹೆ ಅಥವಾ ಆಕ್ಷೇಪಣೆಗಳನ್ನು ಸಮರ್ಪಕವಾದ ಕಾರಣ ಹಾಗೂ ಅದನ್ನು ಪ್ರತಿಪಾದಿಸಲು ಸೂಕ್ತ  ದಾಖಲಾತಿಗಳೊಂದಿಗೆ ನಗರಸಭೆ ಕಾರ್ಯಾಲಯಕ್ಕೆ ಸಲ್ಲಿಸಲು ಜನೆವರಿ 07ರಂದು ಪ್ರಕಟಣೆ ಹೊರಡಿಸಲಾಗಿತ್ತು. ಈ ಬಗ್ಗೆ ಯಾವುದೇ ಸಲಹೆ ಹಾಗೂ ಆಕ್ಷೇಪಣೆಗಳು ಬಂದಿರದ ಕಾರಣ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾಸದ, ವಾಣಿಜ್ಯ, ಕೈಗಾರಿಕೆ, ಸಾರ್ವಜನಿಕ ಉಪಯೋಗದ ಕಟ್ಟಡಗಳಿಗೆ ಹಾಗೂ ಖಾಲಿ ನಿವೇಶನಗಳಿಗೆ 2020-21ನೇ ಸಾಲಿನಿಂದ 2022-23ನೇ ಸಾಲಿನವರೆಗೆ 2019-20ನೇ ಸಾಲಿನ ಆಸ್ತಿ ತೆರಿಗೆಯ ಮೇಲೆ ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾಸದ ಕಟ್ಟಡಗಳಿಗೆ ಶೇ. 20ರಂತೆ ಹಾಗೂ ವಾಣಿಜ್ಯ, ಕೈಗಾರಿಕೆ, ಸಾರ್ವಜನಿಕ ಉಪಯೋಗದ ಕಟ್ಟಡಗಳಿಗೆ ಹಾಗೂ ಖಾಲಿ ನಿವೇಶನಗಳಿಗೆ ಶೇಕಡ 30ರಂತೆ ಆಸ್ತಿ ತೆರಿಗೆಯನ್ನು ಹೆಚ್ಚಿಸಿ ಪರಿಷ್ಕರಿಸಲಾದ ಆಸ್ತಿ ತೆರಿಗೆಯನ್ನು ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಕಾನೂನು ರೀತ್ಯ ಕ್ರಮ ಜರುಗಿಸಲು 2020ರ ಫೆಬ್ರವರಿ 19ರಂದು ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂತಿಮವಾಗಿ ನಿರ್ಣಯಿಸಿದಂತೆ ನಗರಸಭೆ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ 2020ರ ಏಪ್ರಿಲ್ 1ರಿಂದ ಪರಿಷ್ಕøತ ಆಸ್ತಿತೆರಿಗೆ ಜಾರಿಗೆ ಬರುತ್ತದೆ ಎಂದು ನಗರಸಬೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುರುವಾರ, ಫೆಬ್ರವರಿ 27, 2020

ರಾಷ್ಟಿçÃಯ ಜನಸಂಖ್ಯಾ ನೋಂದಣಿ ಪರಿಷ್ಕರಣೆಯ ತರಬೇತಿ ಕಾರ್ಯಗಾರ
‘ನಿಖರ ಮಾಹಿತಿ ಸಂಗ್ರಹಿಸಿ ಜನಗಣತಿ ಪಟ್ಟಿ ಸಿದ್ಧಪಡಿಸಿ’
-ಜಿಲ್ಲಾಧಿಕಾರಿಗಳು ಎಂ. ಕೂರ್ಮಾರಾವ್
ಯಾದಗಿರಿ, ಫೆಬ್ರುವರಿ ೨೭ (ಕರ್ನಾಟಕ ವಾರ್ತೆ): ಹಿಂದಿನ ೨೦೧೧ರ ಜನಗಣತಿ ಹಾಗೂ ಈಗ ಇರುವ ಜನಗಣತಿಗೆ ತುಂಬಾ ವ್ಯತ್ಯಾಸವಿದೆ. ಆನ್‌ಲೈನ್, ಮೊಬೈಲ್ ಆಪ್ ಹಾಗೂ ವಿವಿಧ ಸಿಸ್ಟಂಗಳ ಮೂಲಕ ಸರಿಯಾದ ಮಾಹಿತಿ ಸಂಗ್ರಹಿಸಿ ರಾಷ್ಟಿçÃಯ ಜನಸಂಖ್ಯಾ ನೋಂದಣಿ ಪರಿಷ್ಕರಣೆ ಪಟ್ಟಿ ತಯಾರಿಸಬೇಕೆಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾರಾವ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಮನೆಪಟ್ಟಿ, ಮನೆಗಣತಿ ಹಾಗೂ ರಾಷ್ಟಿçÃಯ ಜನಸಂಖ್ಯಾ ನೋಂದಣಿ ಪರಿಷ್ಕರಣೆಯ ಜಿಲ್ಲಾ, ತಾಲೂಕು, ನಗರ ಹಾಗೂ ಪಟ್ಟಣ ಅಧಿಕಾರಿಗಳ ೨ ದಿನ ನಡೆಯುವ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಂಪ್ಯೂಟರ್ ಆಧಾರಿತ ಹಾಗೂ ಮೊಬೈಲ್ ಆಪ್ ಮುಖಾಂತರ ಮಾಹಿತಿ ಸಂಗ್ರಹಿಸಬೇಕು. ಯಾಕೆಂದರೆ ಇಡೀ ದೇಶದಲ್ಲಿ ಜನಗಣತಿ ನೋಂದಣಿ ಪರಿಷ್ಕರಣೆ ನಡೆಯುತ್ತಿರುವುದರಿಂದ ಎಲ್ಲಾ ಜಿಲ್ಲೆಗಳು, ತಾಲೂಕುಗಳಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ. ಹೀಗಾಗಿ ಯಾರಿಂದ ಮಾಹಿತಿ ಬಂದಿಲ್ಲ, ಏಕೆ ತಡವಾಗಿ ಬರುತ್ತಿದೆ, ಮೊದಲು ಬಂದಿದ್ದು ಯಾವುದು, ಯಾರು ಸರ್ವೆ ತಡವಾಗಿ ಮಾಡಿದ್ದಾರೆಂದು ಮಾಹಿತಿ ದಿನನಿತ್ಯ ಸಂಗ್ರಹಿಸಬೇಕು ಎಂದು ತಿಳಿಸಿದರು. ರಾಷ್ಟಿçÃಯ ಜನಸಂಖ್ಯಾ ನೋಂದಣಿ ಪರಿಷ್ಕರಣೆಯ ಪಟ್ಟಿ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ಸೂಚಿಸಿದರು. ಅಲ್ಲದೇ ಪ್ರತಿಯೊಂದು ಕಾಲಂ, ಪ್ರತಿಯೊಂದು ಫಾರ್ಮೆಟ್ ಹಾಗೂ ಸಂಪೂರ್ಣ ವರದಿಯನ್ನು ತಿಳಿದುಕೊಂಡು ಮಾಹಿತಿ ನೀಡಬೇಕು. ಜೊತೆಗೆ ಆನ್‌ಲೈನ್, ಮೊಬೈಲ್ ಆಪ್ ಮೂಲಕ ಸರಿಯಾಗಿ ಮಾಹಿತಿ ಪಡೆದು ಜನಗಣತಿ ನೋಂದಣಿ ಪರಿಷ್ಕರಣೆ ಪಟ್ಟಿ ಸಿದ್ಧಪಡಿಸಬೇಕು ಎಂದರು. ಇದಲ್ಲದೇ ತರಬೇತಿಯಲ್ಲಿ ನೀವು ಚೆನ್ನಾಗಿ ತಿಳಿದುಕೊಂಡರೆ ನಿಮ್ಮ ಸಹದ್ಯೋಗಿಗಳು ಹಾಗೂ ಕೆಳ ಹಂತದ ಅಧಿಕಾರಿಗಳಿಗೆ ತಿಳಿಸಲು ಸಾಧ್ಯವಾಗುತ್ತದೆ ಎಂದರು. ಮೊದಲ ದಿನದ ರಾಷ್ಟಿçÃಯ ಜನಸಂಖ್ಯಾ ನೋಂದಣಿ ಪರಿಷ್ಕರಣೆ ಕಾರ್ಯಗಾರಕ್ಕೆ ಆಗಮಿಸಿದ್ದ ತಾಲೂಕಿನ ಎಲ್ಲಾ ತಹಶೀಲ್ದಾರರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಉಪನಿರ್ದೇಶಕರು ಮತ್ತು ರಾಷ್ಟಿçÃಯ ಜನಗಣತಿ ತರಬೇತಿದಾರರಾದ ಎಸ್.ಚಿನ್ನದೊರೆ ಅವರು ಜನಗಣತಿ ಪರಿಷ್ಕರಣೆ ಬಗ್ಗೆ ದತ್ತಾಂಶದ ಆಧಾರದ ಮೇಲೆ ಮಾಹಿತಿ ನೀಡಿದರು. ಇನ್ನು ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಸೋಮನಾಳ, ಯಾದಗಿರಿ ನೋಡಲ್ ಅಧಿಕಾರಿ ಜಿ. ಗೋಪಾಲಕೃಷ್ಣ ಸೇರಿದಂತೆ ತಾಲೂಕಿನ ಎಲ್ಲಾ ತಹಶೀಲ್ದಾರರು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು. 
 



 ಮುಕ್ತ ವಿವಿಯಿಂದ ಸಂಪರ್ಕ ಕಾರ್ಯಕ್ರಮ
ಯಾದಗಿರಿ, ಫೆಬ್ರುವರಿ 27 (ಕರ್ನಾಟಕ ವಾರ್ತೆ): 2019-20ನೇ ಸಾಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರ ಕಲಬುರಗಿ. ಇದರ ವ್ಯಾಪ್ತಿಯಲ್ಲಿ ಪ್ರವೇಶಾತಿ ಪಡೆದಿರುವ ಎಂ.ಎ/ ಎಂ.ಕಾಂ ಪ್ರಥಮ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಫೆಬ್ರವರಿ 29 ರಿಂದ ಮಾರ್ಚ್ 4ರವೆರೆಗೆ ಸಂಪರ್ಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಲಬುರಗಿಯ ದರ್ಗಾ ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇಂಗ್ಲೀಷ್, ಕನ್ನಡ, ಹಿಂದಿ ಹಾಗೂ ಎಂ.ಕಾಂ ವಿಷಯಗಳ ಬಗ್ಗೆ ಸಂಪರ್ಕ ಕಾರ್ಯಕ್ರಮ ನಡೆಯಲಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಾದೇಶಿಕ ನಿರ್ದೇಶಕರಾದ ಡಾ. ಸಂಗಮೇಶ ಹಿರೇಮಠ ಅವರು ಪತ್ರಿಕಾ ಪ್ರಕಟೆಯಲ್ಲಿ ತಿಳಿಸಿದ್ದಾರೆ. ಹಾಗೂ ಹೆಚ್ಚಿನ ಮಾಹಿತಿಗಾಗಿ 9916783555 ಈ ನಂಬರ್‍ಗೆ ಸಂಪರ್ಕಿಸಿ.
ಟಿಇಟಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ
ಯಾದಗಿರಿ, ಫೆಬ್ರುವರಿ 27 (ಕರ್ನಾಟಕ ವಾರ್ತೆ): ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಿದೇಶಕರ ಆದೇಶದಂತೆ 2019-20ನೇ ಸಾಲಿನಲ್ಲಿ ಉರ್ದು ಶಾಲಾ ಶಿಕ್ಷಕರ ಹುದ್ದೆಗೆ ನೇಮಕಾತಿ ಬಯಸಿ ಟಿಇಟಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಜಿಲ್ಲಾ ಹಂತದಲ್ಲಿ ಡಯಟ್‍ಗಳ ಮೂಲಕ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
 ಟಿಇಟಿ ಪರೀಕ್ಷೆಯನ್ನು ಮಾರ್ಚ್ 15ರಂದು ಏರ್ಪಡಿಸಲಾಗಿದ್ದು, ಆದ್ದರಿಂದ ತರಬೇತಿಗೆ ಹಾಜರಾಗುವ ವಿದ್ಯಾರ್ಥಿಗಳು ಫೆಬ್ರವರಿ 10ರ ನಂತರÀ ತಮ್ಮ ನೋಂದಣಿ ಮಾಡಿಕೊಳ್ಳಬೇಕೆಂದು ಈಗಾಗಲೇ ಪ್ರಕಟಿಸಲಾಗಿತ್ತು. ಆದರೆ ವಿದ್ಯಾರ್ಥಿಗಳು ನಿರೀಕ್ಷಿತ ಸಂಖ್ಯೆಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳದೇ ಇರುವುದರಿಂದ ಉರ್ದು ಶಾಲಾ ಶಿಕ್ಷಕರ ಹುದ್ದೆಗೆ ನೇಮಕಾತಿ ಬಯಸಿ ಟಿಇಟಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಹೆಸರನ್ನು ಆಯಾ ಬ್ಲಾಕಿನ ಬಿಆರ್‍ಸಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು.
 ಹೆಚ್ಚಿನ ಮಾಹಿತಿಗಾಗಿ ಯಾದಗಿರಿ ಡಯಟ್‍ನ ಉಪನ್ಯಾಸಕರಾದ ಶಿವಪ್ಪ ಅವರ ಮೊ.9900845087 ಹಾಗೂ ಜಿಲ್ಲಾ ಉರ್ದು ಶಿಕ್ಷಣ ಸಂಯೋಜಕರಾದ ನುಸರತ್ ಜಾಹಾ ಉಪ ನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಯಾದಗಿರಿ ಮೊ.7337812159 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಪಿಯುಸಿ ಪರೀಕ್ಷೆಗೆ ‘ತ್ರಿ ಸದಸ್ಯ ಸಮಿತಿ ರಚನೆ’
ಯಾದಗಿರಿ, ಫೆಬ್ರುವರಿ 27 (ಕರ್ನಾಟಕ ವಾರ್ತೆ): ಮಾರ್ಚ್ 4 ರಿಂದ 23ರವರೆಗೆ ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಜಿಲ್ಲೆಯಾದ್ಯಂತ ನಡೆಯಲಿವೆ. ಪರೀಕ್ಷಾ ಸಮಯದಲ್ಲಿ ಯಾವುದೇ ಲೋಪದೋಷಗಳು, ನ್ಯೂನ್ಯತೆಗಳು ಕಂಡು ಬರದಂತೆ ಎಚ್ಚರವಹಿಸಲು ‘ತ್ರಿ ಸದಸ್ಯ ಸಮಿತಿ’ ರಚಿಸಲಾಗಿದೆ. ಅಲ್ಲದೇ ಪರೀಕ್ಷಾ ಸಾಮಾಗ್ರಿಗಳನ್ನು ಜಿಲ್ಲಾ ಖಜಾನೆಯಲ್ಲಿ ಸಂರಕ್ಷಿಸಿಡಲು ಹಾಗೂ ಪರೀಕ್ಷೆಗಳು ಸೂಸತ್ರವಾಗಿ ನಡೆಸಲು ಅಪರ ಜಿಲ್ಲಾಧಿಕಾರಿಗಳಾಧ ಪ್ರಕಾಶ ಜಿ. ರಜಪೂತ ಅವರÀ ನೇತೃತ್ವದಲ್ಲಿ ‘ತ್ರಿ ಸದಸ್ಯ ಸಮಿತಿ’ಯನ್ನು ರಚಿಸಿ, ಸಮಿತಿ ಸದಸ್ಯರಾದ ಜಿಲ್ಲಾ ಖಜಾನೆ ಉಪನಿರ್ದೇಶಕರಾದ ಮಹಾಲಿಂಗರಾಯ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಕರಾದ ಚಂದ್ರಕಾಂತ ಜೆ.ಹಿಳ್ಳಿ ಅವರಿಗೆ ವಹಿಸಿದ ಕೆಲಸ ಕಾರ್ಯವನ್ನು ಅಚ್ಚುಕಟ್ಟಾಗಿ ಯಾವುದೇ ಲೋಪವಾಗದಂತೆ ಎಚ್ಚರಿಕೆವಹಿಸಬೇಕೆಂದು ಜಿಲ್ಲಾಧಿಕಾರಿಗಳಾದ ಎಂ. ಕೂರ್ಮಾರಾವ್ ಅವರು ಆದೇಶ ಹೊರಡಿಸಿದ್ದಾರೆ.

ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಯಾದಗಿರಿ, ಫೆಬ್ರುವರಿ 27 (ಕರ್ನಾಟಕ ವಾರ್ತೆ): 2019-20 ನೇ ಸಾಲಿಗೆ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಆರ್ಯ ವೈಶ್ಯ ಸಮುದಾಯದವರಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ ಹಾಗೂ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಇಚ್ಚಿಸುವ ಅರ್ಹ ಅಭ್ಯರ್ಥಿಗಳಿಂದ ಅಗತ್ಯ ದಾಖಲೆಗಳೊಂದಿಗೆ ಆನ್‍ಲೈನ್ ಮೂಲಕ ಅರ್ಜಿ  ಆಹ್ವಾನಿಸಲಾಗಿದೆ.
ಮಹಿಳೆಯರಿಗೆ ಶೇ.33ರಷ್ಟು ಮತ್ತು ವಿಶೇಷಚೇತನರಿಗೆ ಶೇ. 5ರಷ್ಟು ಮೀಸಲಾತಿ ಇರುತ್ತದೆ. ಅರ್ಜಿ ಸಲ್ಲಿಸಲು ಮಾರ್ಚ 12 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ 94484 51111, ಇ-ಮೇಲ್ support.kacdc@karnataka.gov.in ಯೋಜನೆಗಳ ಮಾರ್ಗಸೂಚಿಗಳು ಹಾಗೂ ಸಲ್ಲಿಸಬೇಕಾದ ದಾಖಲಾತಿಗಳ ವಿವರಗಳನ್ನು ಪಡೆಯಲು www.kacdc.karnataka.gov.in ಸಂಪರ್ಕಿಸಬಹುದು ಎಂದು ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವ್ಯವಸ್ತಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಧನೆಯ ಹಾದಿಯಲ್ಲಿ ಯುವಕರು ಹೆಜ್ಜೆ ಇಡಬೇಕು

ಯಾದಗಿರಿ, ಫೆಬ್ರುವರಿ 27 (ಕರ್ನಾಟಕ ವಾರ್ತೆ): ಇಂದಿನ ಯುವಜನತೆ ತಮ್ಮ ಆಸೆ, ಆಕಾಂಕ್ಷೆ ಈಡೇರಿಸಿಕೊಳ್ಳಲಾಗದೇ ಅನಿಶ್ಚಿತ ಸಮಯ  ಸಂದರ್ಭಕ್ಕೆ  ಸಿಲುಕಿ ಬದುಕಿನ ಅನ್ಯ  ಮಾರ್ಗವನ್ನು  ತುಳಿದು ತಮ್ಮ ಜೀವನದ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಯುವ ಪರಿವರ್ತಕರಾದ ಶಿಲ್ಪಾದೇವಿ ಅವರು ಹೇಳಿದರು.
ಇತ್ತೀಚೆಗೆ ಜಿಲ್ಲೆಯ ಸುರಪುರÀ ತಾಲ್ಲೂಕಿನ ಶ್ರೀ ಜನನಿ ಮಹಿಳಾ ಕಲಾ ಮಹಾವಿದ್ಯಾಲಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ “ಜೀವನ ಕೌಶಲ್ಯ ಹಾಗೂ ಯುವ ಸ್ಪಂದನ ಅರಿವು” ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.
ಇಂದಿನ ದಿನಮಾನದಲ್ಲಿ ಯುವಕರು ತಮ್ಮ ಜೀವನದ ನಿಶ್ಚಿತ ಗುರಿ ನಿರ್ಧರಿಸಿರುವುದಿಲ್ಲ. ಗುರಿ ಇದ್ದರೂ ಅದನ್ನು ಹೇಗೆ ತಲುಪಬೇಕು ಎಂದು ತಿಳಿಯದೇ ಒತ್ತಡದ ಸ್ಥಿತಿಯಲ್ಲಿರುತ್ತಾರೆ. ಆ ಒತ್ತಡದಲ್ಲಿಯೇ ತಮ್ಮ ಬದುಕನ್ನು ಇನ್ನಷ್ಟು ಹಾಳು ಮಾಡಿಕೊಳ್ಳುತ್ತಾರೆ. ಇದರಿಂದ ಅವರ ಜೀವನದ ಗುರಿಯೇ ಬೇರೆ, ಮಾಡುವಂತ ಕೆಲಸವೇ ಬೇರೆ ಹೀಗಾಗಿ ಮಾಡುವ ಕೆಲಸದಲ್ಲಿ ಆಸಕ್ತಿಯಿರದೇ ತಮಗರಿಯದ ದಾರಿಯಲ್ಲಿ ಬದುಕು ಸಾಗಿಸುತ್ತಿರುತ್ತಾರೆ. 
ಇನ್ನು ಇದರ ಪರಿಣಾಮದಿಂದ ಸ್ನೇಹಿತರು ಹಾಗೂ ಸಂಬಂಧಿಕರು, ಸಮಾಜದ ಜೊತೆಗೆ ಸಹಬಾಳ್ವೆಯಿಂದ ಇರಲಾಗದೇ ಒಂಟಿಯಾಗಿ ಇರಬೇಕಾದ ಸಂಗತಿ ಸೃಷ್ಟಿಯಾಗುತ್ತದೆ. ಇಂಥ ಸಮಸ್ಯೆಗಳ ಬಗ್ಗೆ ಯುವ ಜನರಿಗೆ ಅರಿವು ಮೂಡಿಸಿದುವುದ ಜೊತೆಗೆ ಆಪ್ತ ಸಮಾಲೋಚನೆ ಮೂಲಕ ಪರಿಹಾರ ಮೂಡಿಸು ಕಾರ್ಯಕ್ರಮವೇ ಈ ಯುವ ಸ್ಪಂದನ ಕಾರ್ಯಕ್ರಮ ಎಂದು ಹೇಳಿದರು.
ಇನ್ನು ಈ ಕಾರ್ಯಕ್ರಮದಲಿ ಶ್ರೀ ಜನನಿ ಮಹಿಳಾ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಬಸವರಾಜೇಶ್ವರಿ ಘಂಟಿ, ಉಪನ್ಯಾಸಕ ಆದಿಶೇಷ ನಿಲಗಾರ, ಬೀರಲಿಂಗ ಕೊಡೆಸೂರ, ಸುವರ್ಣ ಆವಂಟಿ, ಶ್ರೀದೇವಿ ನಾಯಕ, ಯುವ ಪರಿವರ್ತಕರಾದ  ಶೀಲ್ಪಾ ಹರಸೂರ್  ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.

ಬುಧವಾರ, ಫೆಬ್ರವರಿ 26, 2020

ಇಂದಿನಿAದ ಜಿಲ್ಲೆಯಲ್ಲಿ ಜನಗಣತಿ ಕಾರ್ಯಚರಣೆ ತರಬೇತಿ 
ಯಾದಗಿರಿ, ಫೆಬ್ರುವರಿ ೨೬ (ಕರ್ನಾಟಕ ವಾರ್ತೆ):- ೨೦೨೧ನೇ ಸಾಲಿನ ಜನಗಣತಿಯ ಅಂಗವಾಗಿ ಜಿಲ್ಲಾಧಿಕಾರಿಗಳಾದ ಎಂ. ಕೂರ್ಮಾ ರಾವ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲಾ ಚಾರ್ಜ್ ಅಧಿಕಾರಿಗಳಾದ ತಹಸೀಲ್ದಾರರು, ಚೀಫ್ ಆಫಿರ‍್ಸ್ ಹಾಗೂ ನಗರಸಭೆ ಮುಖ್ಯಾಧಿಕಾರಿಗಳಿಗೆ ಎರಡು ದಿನದ ಜನಗಣತಿ ಕಾರ್ಯಚರಣೆ ತರಬೇತಿಯನ್ನು ಫೆಬ್ರುವರಿ ೨೭ ಹಾಗೂ ೨೮ರಂದು  ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜನಗಣತಿ ಕಾರ್ಯಾಚರಣೆ ತರಬೇತಿಯನ್ನು ಫೆ.೨೭ರ ಬೆಳಿಗ್ಗೆ ೧೦ ಗಂಟೆಗೆ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಚಾಲನೆ ನೀಡಲಾಗುವುದು. 
ರಾಷ್ಟಿçÃಯ ಜನಗಣತಿ ಇಲಾಖೆಯ ಉಪನಿರ್ದೇಶಕರಾದ ಎಸ್.ಚಿನ್ನದೊರೆ ಹಾಗೂ ಯಾದಗಿರಿ ಜಿಲ್ಲಾ ನೂಡಲ್ ಅಧಿಕಾರಿಗಳಾದ ಗೋಪಾಲ್‌ಕೃಷ್ಣ ಅವರು ತರಬೇತಿ ನೀಡಲಿದ್ದಾರೆ.
ಜಿಲ್ಲಾಧಿಕಾರಿಗಳಾದ ಎಂ. ಕೂರ್ಮಾ ರಾವ್ ಅವರು ಫ್ರಿನ್ಸಿಫಲ್ ಆಫಿಸರ್ ಆಗಿರುತ್ತಾರೆ. ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ ಜಿ.ರಜಪೂತ ಅವರು ಜಿಲ್ಲಾ ಜನಗಣತಿ ಅಧಿಕಾರಿಗಳಾಗಿರುತ್ತಾರೆ. ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳು ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಹೆಚ್ಚುವರಿ ಜಿಲ್ಲಾ ಜನಗಣತಿ ಅಧಿಕಾರಿಗಳಾಗಿರುತ್ತಾರೆ. ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಅವರು ಉಪ ವಿಭಾಗ ಜನಗಣತಿ ಚಾರ್ಜ್ ಅಧಿಕಾರಿಗಳಾಗಿರುತ್ತಾರೆ.
ಎಲ್ಲಾ ತಹಸೀಲ್ದಾರರು ಗ್ರಾಮೀಣ ಜನಗಣತಿ ಅಧಿಕಾರಿಗಳಾಗಿ ನೇಮಕಗೊಂಡಿರುತ್ತಾರೆ. ನಗರಸಭೆ ಹಾಗೂ ಪುರಸಭೆ ಅಧಿಕಾರಿಗಳು ನಗರ ಪ್ರದೇಶದ ಜನಗಣತಿ ಚಾರ್ಜ್ ಅಧಿಕಾರಿಗಳಾಗಿರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಎಸಿಬಿ ಅಧಿಕಾರಿಗಳಿಂದ ಅಹವಾಲು ಸ್ವೀಕಾರ
ಯಾದಗಿರಿ, ಫೆಬ್ರುವರಿ ೨೬ (ಕರ್ನಾಟಕ ವಾರ್ತೆ):- ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಜಿಲ್ಲೆಯ ವಿವಿಧೆಡೆ ಜನಸಂಪರ್ಕ ಸಭೆ ನಡೆಸಿ ಅರ್ಜಿ ಅಹವಾಲು ಸ್ವೀಕಾರ ಮಾಡಲಿದ್ದು, ನಿಗದಿಪಡಿಸಿದ ದಿನಾಂಕಗಳAದು ಸಾರ್ವಜನಿಕರು ಅಧಿಕಾರಿಗಳನ್ನು ಭೇಟಿಯಾಗಿ ಭ್ರಷ್ಟಾಚಾರಕ್ಕೆ ಸಂಬAಧಿಸಿದAತೆ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.
ಭ್ರಷ್ಟಾಚಾರ ನಿಗ್ರಹ ದಳದ ಡಿಎಸ್‌ಪಿ ಡಾ.ಸಂತೋಷ ಕೆ.ಎಂ (೯೪೮೦೮ ೦೬೨೪೨), ಪೊಲೀಸ್ ಇನ್‌ಸ್ಪೆಕ್ಟರ್ ಬಾಬಾಸಾಹೇಬ ಪಾಟೀಲ್ (ಮೊ:೯೪೮೦೮ ೦೬೩೧೩), ಪೊಲೀಸ್ ಇನ್‌ಸ್ಪೆಕ್ಟರ್ ಗುರುಪಾದ ಎಸ್.ಬಿರಾದಾರ (ಮೊ:೯೪೮೦೮ ೦೬೩೧೪) ಅವರು ಅಹವಾಲು ಸ್ವೀಕರಿಸುವರು. ಫೆಬ್ರುವರಿ ೨೭ರಂದು ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೨ಗಂಟೆ ವರೆಗೆ ವಾಗಣಗೇರಾ ಗ್ರಾಮ ಪಂಚಾಯಿತಿ ಕಾರ್ಯಲಯದಲ್ಲಿ ಹಾಗೂ ಫೆಬ್ರುವರಿ ೨೮ರಂದು ಗುರುಮಠಕಲ್ ತಾಲ್ಲೂಕಿನ ಕೊಂಕಲ್ ನಾಡಕಚೇರಿಯಲ್ಲಿ ಅಹವಾಲು ಸ್ವೀಕರಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಹಿರಂಗ ಹರಾಜು
ಯಾದಗಿರಿ, ಫೆಬ್ರುವರಿ ೨೬ (ಕರ್ನಾಟಕ ವಾರ್ತೆ):- ಶಹಾಪೂರ ನಗರ ಸಭೆ ಆವರಣದಲ್ಲಿರುವ ನೀರು ಸರಬರಾಜು ಮತ್ತು ವಿದ್ಯುತ್ ನೈರ್ಮಲ್ಯ ಶಾಖೆಯ ಅನುಪಯುಕ್ತ ಸಾಮಾಗ್ರಿಗಳ ಬಹಿರಂಗ ಹರಾಜು ಪ್ರಕ್ರಿಯೆ ಮಾರ್ಚ್ ೩ರಂದು ಬೆಳಿಗ್ಗೆ ೧೨ ಗಂಟೆಗೆ ನಗರಸಭೆ ಆವರಣದಲ್ಲಿ ನಡೆಯಲಿದೆ ಹೆಚ್ಚಿನ ಮಾಹಿತಿಗೆ ಶಹಾಪೂರ ನಗರಸಭೆ ಪೌರಾಯುಕ್ತರನ್ನು ಸಂಪರ್ಕಿಸಬಹುದಾಗಿದೆ.

ಆಕ್ಷೇಪಣೆಗೆ ಆಹ್ವಾನ
ಯಾದಗಿರಿ, ಫೆಬ್ರುವರಿ ೨೬ (ಕರ್ನಾಟಕ ವಾರ್ತೆ):- ಶಾಹಪೂರ ನಗರಸಭೆ ವ್ಯಾಪ್ತಿಯ ಹಳಪೇಟ ರಸ್ತೆಯ ಪೊಲೀಸ್ ಸ್ಟೇಷನ್ ಹತ್ತಿರ ಬರುವ  ಆಸ್ತಿ ಸಂಖ್ಯೆ ೨-೫೩/೧ ಸ್ವತ್ತಿನ ಸಂಖ್ಯೆ ೨-೫೦೧-೧೩೪ ಸೈಯದ್ ದರ್ಗಾ ಹಜರತ ಸೈಯದ ಅಸನ ಸಲಾರ ಹೆಸರಲ್ಲಿರುವ ವಕ್ಫ ಆಸ್ತಿಯ ಕಟ್ಟಡ  ಇದ್ದು, ಆಸ್ತಿಯ ಒಟ್ಟು ವಿಸ್ತೀರ್ಣ ೧೮೧.೫೦ ಚ.ಮೀ ಕಟ್ಟಡ ೧೩.೭೫ ಚ.ಮೀ ದಾಖಲಿದ್ದು, ಪ್ರಸ್ತುತ ಸದರಿ ಆಸ್ತಿಯ ಕಂಪೌAಡ್ ನಿರ್ಮಾಣ ಮಾಡಲು ಪರವಾನಿಗೆಗಾಗಿ ಆಸ್ತಿಗೆ ಸಂಬAಧಿಸಿದ ಮುತವಲ್ಲಿಯವರು ಆನ್‌ಲೈನ್ ಅರ್ಜಿ ಸಲ್ಲಿಸಿರುತ್ತಾರೆ.
ಜಿಲ್ಲಾ ವಕ್ಫ್ ಅಧಿಕಾರಿಗಳು ಕಾಂಪೌಡ್ ನಿರ್ಮಾಣಕ್ಕಾಗಿ ಪರವಾನಿಗೆಗೆ ಕೋರಿದ್ದು, ಈ ಹಿನ್ನೆಲೆಯಲ್ಲಿ ಸದರಿ ಆಸ್ತಿಯ ಕಾಂಪೌAಡ್ ನಿರ್ಮಾಣ ಮಾಡಲು ಯಾವುದಾದರು ಆಕ್ಷೇಪಣೆಗಳು ಇದ್ದಲ್ಲಿ ೧೫ ದಿನಗಳ ಒಳಗಾಗಿ ದೂರು ಸಲ್ಲಿಸಬೇಕು. ನಿಗದಿತ ಅವಧಿಯ ನಂತರ ಬಂದ ದೂರುಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಶಹಾಪುರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲ ಆಸ್ತಿ ತೆರಿಗೆ ಮೇಲೆ ದರ ಪರಿಷ್ಕರಣೆ  
ಯಾದಗಿರಿ, ಫೆಬ್ರುವರಿ ೨೬ (ಕರ್ನಾಟಕ ವಾರ್ತೆ):- ಜಿಲ್ಲೆಯ ಸುರಪುರ ನಗರಸಭೆ ವ್ಯಾಪ್ತಿಯಲ್ಲಿ ಬರುವ ಆಸ್ತಿ ಮಾಲೀಕರಿಗೆ ಪೌರಾಡಳಿತ ನಿರ್ದೇಶನಾಲಯ ೨೦೧೯ರ ಸೆಪ್ಟೆಂಬರ್ ೨೭ರಿಂದ ಹಣಕಾಸು ವರ್ಷದಿಂದ ಪ್ರಾರಂಭಿಸಿ ಪ್ರತಿ ೩ ವರ್ಷಕ್ಕೊಮ್ಮೆ ಮೂಲ ಆಸ್ತಿ ತೆರಿಗೆ ಮೇಲೆ ಶೇ.೧೫ ರಿಂದ ೩೦ರಷ್ಟು ಹೆಚ್ಚಳ ಮಾಡಬೇಕಾಗಿರುವುದರಿಂದ ದರ ಪರಿಷ್ಕರಣೆಯನ್ನು ೨೦೨೦-೨೧ನೇ ಸಾಲಿನಿಂದ  ಅನ್ವಯವಾಗುವಂತೆ ಕ್ರಮಕೈಗೊಳ್ಳಲಾಗುತ್ತಿದೆ.
ಈ ಬಗ್ಗೆ ತಕರಾರು ಇದ್ದಲ್ಲಿ ಮಾರ್ಚ್ ೫ರೊಳಗಾಗಿ ಲಿಖಿತವಾಗಿ ಆಕ್ಷೇಪಣೆಗಳನ್ನು ನಗರಸಭೆ ಕಾರ್ಯಲಯದ ಕಂದಾಯ ಶಾಖೆಯಲ್ಲಿ ಸಲ್ಲಿಸಬೇಕು. ಕೊನೆಯ ದಿನದ ನಂತರ ಬರುವ ಯಾವುದೇ ಆಕ್ಷೇಪಣೆಗಳು ಸ್ವೀಕರಿಸುವುದಿಲ್ಲವೆಂದು ಸುರುಪುರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮಂಗಳವಾರ, ಫೆಬ್ರವರಿ 25, 2020

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪೂರ್ವಸಿದ್ಧತಾ ಸಭೆ
ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ನಿಷೇಧ
-ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ 
ಯಾದಗಿರಿ, ಫೆಬ್ರುವರಿ 25 (ಕರ್ನಾಟಕ ವಾರ್ತೆ): ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್ 4ರಿಂದ 23ರ ವರೆಗೆ ಜಿಲ್ಲೆಯ ಒಟ್ಟು 13 ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು, ಅಧೀಕ್ಷಕರು ಹಾಗೂ ಸಿಬ್ಬಂದಿಗಳು ಮೊಬೈಲ್ ಫೋನ್ ಸೇರಿದಂತೆ ಇತರೆ ಯಾವುದೇ ವಿದ್ಯುನ್ಮಾನ ಸಾಧನಗಳನ್ನು ಬಳಸುವಂತಿಲ್ಲ ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಕಟ್ಟುನಿಟ್ಟಾಗಿ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-2020ರ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. 
ಪರೀಕ್ಷೆಗಳು ಮಕ್ಕಳ ಭವಿಷ್ಯ ನಿರ್ಧರಿಸುತ್ತವೆ. ಕೆಲವರ ತಪ್ಪಿನಿಂದ ಮುಗ್ದ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಮೊಬೈಲ್ ಫೋನ್‍ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿಯ ಮಾಹಿತಿ, ದಾಖಲೆಗಳನ್ನು ಚಿತ್ರೀಕರಿಸುವುದು, ಚಿತ್ರೀಕರಿಸಲು ಪ್ರಯತ್ನಿಸುವುದು ಮತ್ತು ಸಮೂಹ ಮಾಧ್ಯಮ ಅಥವಾ ಜಾಲತಾಣಗಳಲ್ಲಿ ಹರಿದಾಡುವಂತೆ ಮಾಡುವುದು ಅಪರಾಧವಾಗಿರುತ್ತದೆ. ಒಂದು ವೇಳೆ ಕಂಡುಬಂದಲ್ಲಿ ಇಲಾಖಾ ಕ್ರಮದಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿ, ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಮಾಧ್ಯಮದವರಿಗೂ ಕೂಡ ಪರೀಕ್ಷಾ ಕೇಂದ್ರದೊಳಗೆ ಪ್ರವೇಶವಿಲ್ಲ. ಯಾವುದೇ ಪ್ರಕರಣಗಳು ಕಂಡುಬಂದಾಗ ಸಿ.ಸಿ ಟಿವಿ ಕ್ಯಾಮೆರಾಗಳು ಸಾಕ್ಷ್ಯ ಒದಗಿಸುತ್ತವೆ. ಆದ್ದರಿಂದ ಪರೀಕ್ಷಾ ಕೇಂದ್ರಗಳಲ್ಲಿ ಇವುಗಳು ಕಾರ್ಯನಿರ್ವಹಿಸುತ್ತಿರುವ ಕುರಿತಂತೆ ಪರಿಶೀಲಿಸಬೇಕು. ಇನ್ನು ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ತ್ವರಿತಗತಿಯಲ್ಲಿ ವಿತರಿಸಬೇಕು ಎಂದು ಅವರು ನಿರ್ದೇಶಿಸಿದರು.
ಪರೀಕ್ಷೆ ಬರೆಯಲಿರುವ 7,467 ವಿದ್ಯಾರ್ಥಿಗಳು: ಜಿಲ್ಲೆಯ 13 ಪರೀಕ್ಷಾ ಕೇಂದ್ರಗಳಿಗೆ ಒಟ್ಟು 92 ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಜೋಡಿಸಲಾಗಿದೆ. 4360 ಬಾಲಕರು, 3107 ಬಾಲಕಿಯರು ಸೇರಿದಂತೆ ಒಟ್ಟು 7,467 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಅರ್ಹ ಎಲ್ಲಾ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಈಗಾಗಲೇ ಆನ್‍ಲೈನ್ ಮೂಲಕ ಕಾಲೇಜುಗಳಿಗೆ ವಿತರಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಕಾಂತ ಜಿ.ಹಿಳ್ಳಿ ಅವರು ಮಾಹಿತಿ ನೀಡಿದರು.
ಸೂಕ್ಷ್ಮ ಪರೀಕ್ಷಾ ಕೇಂದ್ರಗಳಾದ ಸುರಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರಭು ಪದವಿ ಪೂರ್ವ ಕಾಲೇಜು ಮತ್ತು ರಂಗಂಪೇಟನ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಕಾಲೇಜುಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕುಡಿಯುವ ನೀರು, ವಿದ್ಯುತ್ ಸೌಕರ್ಯ, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ಮಾಡಬೇಕು. ಪರೀಕ್ಷೆಗಳು ಅತೀ ಸೂಕ್ಷ್ಮವಾದ ಪ್ರಕ್ರಿಯೆಯಾಗಿದ್ದು, ಈ ನಿಟ್ಟಿನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಸಮಯದೊಳಗೆ ತಲುಪಬೇಕು. ಪ್ರಶ್ನೆಪತ್ರಿಕೆಗಳನ್ನು ತೆಗೆದುಕೊಂಡು ಹೋಗುವ ವಾಹನಗಳಿಗೆ ಜಿಪಿಎಸ್ ಅಳವಡಿಸುತ್ತಿದ್ದು, ನಿಗದಿಪಡಿಸಿದ ಮಾರ್ಗದಲ್ಲೆ ಚಲಿಸಬೇಕು ಎಂದು ಅವರು ಸೂಚಿಸಿದರು.
ಅಭ್ಯರ್ಥಿಗಳಿಗೆ ಆಸನ ವ್ಯವಸ್ಥೆಯನ್ನು ಕೊಠಡಿಯಿಂದ ಹೊರಗೆ, ಕಾರಿಡಾರ್ ಅಥವಾ ನೆಲದ ಮೇಲೆ ಕುಳಿತು ಪರೀಕ್ಷೆಗಳನ್ನು ಬರೆಸುವಂತಿಲ್ಲ. ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು. ಪರೀಕ್ಷಾ ಕೇಂದ್ರದ ಸಂಪೂರ್ಣ ಜವಾಬ್ದಾರಿಯು ಮುಖ್ಯ ಅಧೀಕ್ಷಕರಾಗಿ ನೇಮಕಗೊಂಡ ಅಧಿಕಾರಿಯದ್ದಾಗಿರುತ್ತದೆ. ಪರೀಕ್ಷಾ ಕಾರ್ಯಗಳಿಗಾಗಿ ನೇಮಕಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾತ್ರ ಕೇಂದ್ರದಲ್ಲಿ ಉಪಸ್ಥಿತರಿರಬೇಕು. ಅನ್ಯ ವ್ಯಕ್ತಿಗಳು ಕೇಂದ್ರದೊಳಗೆ ಕಂಡುಬಂದಲ್ಲಿ ಮುಖ್ಯ ಅಧೀಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ವಾಟರ್ ಬಾಯ್‍ಗಳ ನೇಮಕವನ್ನು ರದ್ದುಪಡಿಸಲಾಗಿರುತ್ತದೆ. ಕುಡಿಯುವ ನೀರಿನ ವ್ಯವಸ್ಥೆಯನ್ನು 2, 3 ಕೊಠಡಿಗಳ ಅಂತರದಲ್ಲಿ ಕೊಠಡಿಯ ಹೊರಗೆ ವ್ಯವಸ್ಥೆ ಮಾಡಬೇಕು. ಆಯಾ ದಿನದ ವಿಷಯ ಪರೀಕ್ಷೆಗಳು ಮುಗಿದ ತಕ್ಷಣವೇ ಉತ್ತರ ಪತ್ರಿಕೆಗಳನ್ನು ಕ್ರೂಢೀಕರಿಸಿ ಬಂಡಲುಗಳನ್ನು ಸೀಲು ಮಾಡಿ ರವಾನಿಸಬೇಕು ಎಂದು ಅವರು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ವಸಂತ ಚವ್ಹಾಣ, ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಏಕ್ ಭಾರತ-ಶ್ರೇಷ್ಠ ಭಾರತ ಕಾರ್ಯಕ್ರಮ
ಶಾಲಾ ಮಕ್ಕಳಲ್ಲಿ ದೇಶಪ್ರೇಮ ಬೆಳೆಸಲು ಸಲಹೆ
ಯಾದಗಿರಿ, ಫೆಬ್ರುವರಿ 25 (ಕರ್ನಾಟಕ ವಾರ್ತೆ): ಇತ್ತೀಚೆಗೆ ದೇಶಭಕ್ತಿ, ರಾಷ್ಟ್ರಪ್ರೇಮ ಕಡಿಮೆಯಾಗುತ್ತಿರುವುದರಿಂದ ಶಾಲಾ ಮಕ್ಕಳಲ್ಲಿ ದೇಶಪ್ರೇಮದ ಬಗ್ಗೆ ಅರಿವು ಮೂಡಿಸುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಶಾಸಕರಾದ ನಾಗನಗೌಡ ಕಂದಕೂರ ಅವರು ಅಭಿಪ್ರಾಯಪಟ್ಟರು.
ಯಾದಗಿರಿ ತಾಲ್ಲೂಕಿನ ಕಂದಕೂರ ಗ್ರಾಮದಲ್ಲಿ ಮಂಗಳವಾರ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಲಬುರಗಿ ವಿಭಾಗ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ, ಯಾದಗಿರಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗುರುಮಠಕಲ್ ಶಿಶು ಅಭಿವೃದ್ಧಿ ಯೋಜನೆ, ಕಂದಕೂರ ಗ್ರಾಮ ಪಂಚಾಯಿತಿ, ಸರಕಾರಿ ಪ್ರೌಢಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ಏಕ್ ಭಾರತ-ಶ್ರೇಷ್ಠ ಭಾರತ” ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್ ಅವರು ಮಾತನಾಡಿ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳು ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಖಂಡನೀಯವಾಗಿದೆ. ಇಂತಹ ವಿಚಾರಗಳನ್ನು ವಿದ್ಯಾರ್ಥಿಗಳಲ್ಲಿ ಮೂಡದ ಹಾಗೆ ಮತ್ತು ನಮ್ಮ ದೇಶಪ್ರೇಮವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅವಶ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಸರಸ್ವತಿ ಎಸ್.ಕಟಕಟಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಈಶ್ವರ್, ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ಕ್ಷೇತ್ರ ಪ್ರಚಾರ ಅಧಿಕಾರಿ ಶೃತಿ ಎಸ್.ಟಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವನಜಾಕ್ಷಿ ಬೆಂಡಿಗೇರಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಾಬವ್ವ ಶರಣಪ್ಪ, ಉಪಾಧ್ಯಕ್ಷರಾದ ಲಕ್ಷ್ಮೀ ನಿಂಗಪ್ಪ, ಪ್ರೌಢಶಾಲೆ ಮುಖ್ಯಗುರು ಎಸ್.ಎಂ.ಬೂತಲ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹ್ಮದ್ ಅಲಿ ಜಮಾದಾರ, ಸಿಆರ್‍ಪಿ ಹಣಮಾ ನಾಯಕ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸರಕಾರಿ ಪ್ರೌಢಶಾಲೆ ಸಹಶಿಕ್ಷಕರಾದ ಮಧುಮತಿ ಮತ್ತು ಗಂಗಾಧರ ಅವರು ಉಪನ್ಯಾಸ ನೀಡಿದರು. ಭಾಷಣ, ಚಿತ್ರಕಲಾ, ದೇಶಭಕ್ತಿ ಗೀತೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಏಕ್ ಭಾರತ-ಶ್ರೇಷ್ಠ ಭಾರತ ಕಾರ್ಯಕ್ರಮ ಅಂಗವಾಗಿ ಚಲನಚಿತ್ರ ಮತ್ತು ಛಾಯಾಚಿತ್ರ ಪ್ರದರ್ಶನ ಹಾಗೂ ಗ್ರಾಮದಲ್ಲಿ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.



ಭಾನುವಾರ, ಫೆಬ್ರವರಿ 23, 2020

ಜಿಲ್ಲಾಡಳಿತ ವತಿಯಿಂದ ದಲಿತ ವಚನಕಾರರ ಜಯಂತ್ಯೋತ್ಸವ
ಶರಣರು ಜನ್ಮ ತಾಳಿದ ನಾಡಲ್ಲಿ ಹುಟ್ಟಿದ ನಾವು ಪುಣ್ಯವಂತರು
-ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ
ಯಾದಗಿರಿ, ಫೆಬ್ರುವರಿ 21 (ಕರ್ನಾಟಕ ವಾರ್ತೆ): ಅನೇಕ ಶರಣರು ಜನ್ಮವೆತ್ತಿದ ಈ ಕರುನಾಡಿನಲ್ಲಿ ಹುಟ್ಟಿದ ನಾವು ಪುಣ್ಯವಂತರು. ದಲಿತ ವಚನಕಾರರಾದ ಢೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಚನ್ನಯ್ಯ, ಉರಿಲಿಂಗಪೆದ್ದಿ, ಮಾದಾರ ಧೂಳಯ್ಯ ಅವರ ವಚನಗಳ ಸಾರದಂತೆ ನಡೆದಾಗ ನಮ್ಮ ಜೀವನಕ್ಕೆ ಅರ್ಥ ಬರುತ್ತದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ ಅವರು ಹೇಳಿದರು. ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಶುಕ್ರವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶ್ರೀ ದಲಿತ ವಚನಕಾರರ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ದಲಿತ ವಚನಕಾರರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಎಲ್ಲಾ ಶರಣರು ಸರಳವಾದ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಮಾಡಿದರು. ಸಮಾಜದಲ್ಲಿನ ಅನಿಷ್ಠ ಪದ್ಧತಿಗಳನ್ನು ತೊಲಗಿಸಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದರು. ಎಲ್ಲರೂ ಸಮಾನರೆಂದು ಕೇವಲ ಮಾತಿನಲ್ಲಿ ಹೇಳದೆ ಆಚರಣೆಗೆ ತರುವ ಮೂಲಕ ತೋರಿಸಿಕೊಟ್ಟರು. ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಸಂದರ್ಭದಲ್ಲಿ ಶರಣರ ಸಮಾನತೆಯ ತತ್ವ- ಸಿದ್ಧಾಂತಗಳನ್ನು ಅಳವಡಿಸಿದ್ದಾರೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಸಮಾನತೆಯ ಸಂವಿಧಾನ ರಚನೆಗೆ ಇಂತಹ ಶರಣರ ವಚನಗಳು ಕೂಡ ಪ್ರೇರಣೆಯಾಗಿವೆ ಎಂದು ಅವರು ಹೇಳಿದರು. ಸುಬಮ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಗುರುಪ್ರಸಾದ ವೈದ್ಯ ಅವರು ಉಪನ್ಯಾಸ ನೀಡಿ, ಬಸವಣ್ಣನವರು ಇಷ್ಟಲಿಂಗ ಅನುಗ್ರಹಿಸಿದ್ದರಿಂದ ಕೆಳವರ್ಗದಲ್ಲಿ ಹುಟ್ಟಿದ ಕರ್ಮ ದೂರಾಯಿತು ಎಂದು ಹೇಳಿಕೊಳ್ಳುವ ಢೋಹರ ಕಕ್ಕಯ್ಯನವರ “ಅಭಿನವ ಮಲ್ಲಿಕಾರ್ಜುನ” ಎಂಬ ಅಂಕಿತನಾಮದ 6 ವಚನಗಳು ಲಭ್ಯವಾಗಿವೆ. ಅಧ್ಯಾತ್ಮ ಮತ್ತು ವೈಜ್ಞಾನಿಕ ವಿಚಾರವನ್ನು ಮೇಳೈಸುವ ಅಂಶಗಳು ಇವರ ವಚನಗಳಲ್ಲಿ ಕಂಡುಬರುತ್ತವೆ ಎಂದು ತಿಳಿಸಿದರು. ಸಮಾಜದಲ್ಲಿ ಸಮಾನತೆಯನ್ನು ಸಾಧಿಸ ಹೊರಟ ಬಸವಣ್ಣನವರಿಗೆ ಸಮಗಾರ ಹರಳಯ್ಯನವರು ಬೆಂಬಲವಾಗಿ ನಿಂತವರು. ಅಂತರ್ಜಾತಿ ವಿವಾಹದಿಂದ ಜಾತೀಯತೆ ತೊಡೆದು ಹಾಕಲು ಸಾಧ್ಯ ಎಂಬುದಾಗಿ ಸಾರಿದರು. ಇನ್ನು ಮಾದಾರ ಚನ್ನಯ್ಯನವರ ವಚನಗಳಲ್ಲಿ ದಲಿತ ಸಂವೇದನೆ, ಸಾಮಾಜಿಕ ಕಳಕಳಿಯನ್ನು ಕಾಣಬಹುದು ಎಂದರು.
ಉರಿಲಿಂಗ ಪೆದ್ದಿಯವರು ಉರಿಲಿಂಗ ದೇವನ ಶಿಷ್ಯ. ಉರಿಲಿಂಗ ದೇವನ ತರುವಾಯ ಇವರು ಗುರುಪೀಠವನ್ನು ಅಲಂಕರಿಸುತ್ತಾರೆ. ಜಾತಿಯಿಂದ ಅಸ್ಪøಶ್ಯನಾದ್ದರಿಂದ ಇವರ ಪೀಠಾರೋಹಣದ ಘಟನೆ ವಿಶೇಷವಾಗಿದೆ. ಪ್ರಸ್ತುತ ಹರಿಜನ ಶಿವಭಕ್ತರ ಅನೇಕ ಮಠಗಳು ಕರ್ನಾಟಕದಲ್ಲಿದ್ದು, ಅವರ 366 ವಚನಗಳು ದೊರೆತಿವೆ. ಮಾದಾರ ಧೂಳಯ್ಯನವರು ಕಲ್ಯಾಣದಲ್ಲಿ ಚರ್ಮವನ್ನು ಹದ ಮಾಡಿ ಪಾದರಕ್ಷೆ ಹೊಲೆಯುವ ಕಾಯಕ ಮಾಡುತ್ತಿದ್ದರು. “ಕಾಮಧೂಮ ಧೂಳೇಶ್ವರ” ಅಂಕಿತನಾಮದಿಂದ 106 ವಚನಗಳನ್ನು ರಚಿಸಿದ್ದಾರೆ. ಇವರ ಬಹುಪಾಲು ವಚನಗಳು ಕಾಯಕದ ಮಹತ್ವ ಹಾಗೂ ಭಕ್ತಿಯ ಸ್ವರೂಪಗಳನ್ನು ಸಾರುತ್ತವೆ ಎಂದು ಅವರು ವಿವರಿಸಿದರು. ಸಮಾಜದ ಮುಖಂಡರಾದ ಖಂಡಪ್ಪ ದಾಸನ್ ಅವರು ಮಾತನಾಡಿ, 12ನೇ ಶತಮಾನದಲ್ಲಿ ಮಹಾತ್ಮ ಬಸವೇಶ್ವರರಿಂದ ದಲಿತ ವಚನಕಾರರಿಗೆ ಶಿಕ್ಷಣ ಪ್ರಾಪ್ತವಾಯಿತು. ಇದರಿಂದ ಅಸಮಾನತೆಯ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಯಿತು. ಅದೇ ರೀತಿ ಆಧುನಿಕ ಯುಗದಲ್ಲಿ ಸಂವಿಧಾನವನ್ನು ನೀಡುವ ಮೂಲಕ ಡಾ.ಬಿ.ಆರ್.ಅಂಬೇಡ್ಕರರು ಎಲ್ಲರಿಗೂ ಸಮಾನತೆಯನ್ನು ಕಲ್ಪಿಸಿದ್ದಾರೆ. ಪ್ರತಿಯೊಬ್ಬರೂ ಸಂವಿಧಾನದ ಆಶಯದಂತೆ ನಡೆಯುತ್ತಾ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶರಣರ ಪುಸ್ತಕ, ವಚನಗಳನ್ನು ಓದಲು ತಿಳಿಸಬೇಕು ಎಂದು ಹೇಳಿದರು. ನಗರಸಭೆ ಪೌರಾಯುಕ್ತರಾದ ರಮೇಶ ಸುಣಗಾರ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಎಸ್.ಎಸ್.ಚನ್ನಬಸಪ್ಪ, ಸಮಾಜದ ಮುಖಂಡರಾದ ಮರೆಪ್ಪ ಚಟ್ಟರಕರ್, ವಕೀಲರಾದ ಶಾಂತಪ್ಪ ಖಾನಳ್ಳಿ ಅವರು ಉಪಸ್ಥಿತರಿದ್ದರು. ಲಿಂಗೇರಿ ಸ್ಟೇಷನ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕರಾದ ಚಂದ್ರಶೇಖರ ಗೋಗಿ ಹಾಗೂ ತಂಡದವರು  ನಾಡಗೀತೆ  ಹಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ ಅವರು ಸ್ವಾಗತಿಸಿದರು. ಸೈದಾಪುರ ಡಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಕರಬಸಯ್ಯ ದಂಡಗಿಮಠ ಅವರು ನಿರೂಪಿಸಿದರು.

ಕಡಲೆಕಾಳು ಖರೀದಿ ಕೇಂದ್ರಗಳ ಸ್ಥಾಪನೆ
ಯಾದಗಿರಿ, ಫೆಬ್ರುವರಿ 20 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ 2019-20ನೇ ಸಾಲಿನ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಹಂಗಾಮಿನ ಕಡಲೆಕಾಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಎಫ್.ಪಿ.ಓ.ಗಳ ಮುಖಾಂತರ ಖರೀದಿಗೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಡಲೆಕಾಳು ಪ್ರತಿ ಕ್ವಿಂಟಲ್‍ಗೆ ಸರ್ಕಾರದ ಬೆಂಬಲ ಬೆಲೆ 4875 ರೂ. ಇದ್ದು, ಪ್ರತಿಯೊಬ್ಬ ರೈತರಿಂದ ಎಕರೆಗೆ 3 ಕ್ವಿಂಟಲ್‍ನಂತೆ ಗರಿಷ್ಠ 10 ಕ್ವಿಂಟಲ್ ಖರೀದಿಸಲಾಗುವುದು. ಈ ಸಂಬಂಧ ಜಿಲ್ಲೆಯಲ್ಲಿ ಚಪೇಟ್ಲಾ, ಸೈದಾಪೂರ, ಬೆಂಡಬೆಂಬಳಿ, ಗಂಗನಾಳ, ಮಾಲಗತ್ತಿ, ಕಕ್ಕೇರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ನೋಂದಣಿಗೆ ಮಾರ್ಚ್ 13 ಕೊನೆಯ ದಿನಾಂಕವಾಗಿದ್ದು, ನೋಂದಾಯಿತ ರೈತರಿಂದ ಕಡಲೆ ಖರೀದಿ ಮಾಡಲು ಮಾರ್ಚ್ 23 ಕೊನೆಯ ದಿನಾಂಕವಾಗಿರುತ್ತದೆ. ಪ್ರಯುಕ್ತ, ರೈತರು ಕೃಷಿ ಇಲಾಖೆಯು ನೀಡುವ ಫ್ರೂಟ್ಸ್ ಐಡಿ (FRUITES ID) ಮತ್ತು ಆಧಾರ್ ಕಾರ್ಡ್ ನಕಲು ಪ್ರತಿಯನ್ನು ಖರೀದಿ ಕೇಂದ್ರದಲ್ಲಿ ನೀಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಒಬ್ಬ ರೈತನು ಒಂದೇ ಅರ್ಜಿಯನ್ನು ಖರೀದಿ ಕೇಂದ್ರಕ್ಕೆ ತರಬೇಕು. ಸರತಿ ಸಾಲಿನಲ್ಲಿ ಬಂದು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಕೋರಿದ್ದಾರೆ.

ಯೋಗ ತರಬೇತುದಾರ, ಆರೋಗ್ಯ ಕಾರ್ಯಕರ್ತರ ಹುದ್ದೆಗೆ ಅರ್ಜಿ
ಯಾದಗಿರಿ, ಫೆಬ್ರುವರಿ 20 (ಕರ್ನಾಟಕ ವಾರ್ತೆ): ಆಯುಷ್ಮಾನ್ ಭಾರತ್ ಯೋಜನೆಯಡಿ ಜಿಲ್ಲಾ ಆಯುಷ್ ಕಚೇರಿ ಅಧೀನದಲ್ಲಿ ಕಾರ್ಯನಿರ್ವಹಿಸುವ ಸರಕಾರಿ ಆಯುರ್ವೇದ ಚಿಕಿತ್ಸಾಲಯ ಹೊನಗೇರಾ ಮತ್ತು ಮಾಧ್ವಾರ ಇವುಗಳನ್ನು ಆಯುಷ್ ಕ್ಷೇಮ ಕೇಂದ್ರಗಳಾಗಿ ಮೇಲ್ದರ್ಜೇಗೇರಿಸಿದ್ದು, ಈ ಚಿಕಿತ್ಸಾಲಯಗಳಲ್ಲಿ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರೆಕಾಲಿಕ ಯೋಗ ತರಬೇತುದಾರರು-2 ಹುದ್ದೆ ಮತ್ತು ಬಹು ಉದ್ದೇಶಿತ ಆರೋಗ್ಯ ಕಾರ್ಯಕರ್ತರ- 2 ಹುದ್ದೆಗಳನ್ನು ನೇಮಕ ಮಾಡಲು ವಯೋಮಿತಿ ದಿನಾಂಕ: 20-02-2020 ರಂದು ಎಲ್ಲಾ ವರ್ಗದವರು ಕನಿಷ್ಠ 18 ವರ್ಷ ಪೂರ್ಣಗೊಂಡಿರತಕ್ಕದ್ದು. ವಯೋಮಿತಿ ಗರಿಷ್ಠ ಪ.ಜಾ ಮತ್ತು ಪ.ಪಂ 40 ವರ್ಷ, ಪ್ರವರ್ಗ-1, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ ಮೀರಿರಬಾರದು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಮೆರಿಟ್ ಹಾಗೂ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಮಾರ್ಚ್ 6ರಂದು ಸಂಜೆ 5 ಗಂಟೆಯೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಮಾರ್ಚ್ 10ರಂದು ಬೆಳಿಗ್ಗೆ 10.30 ಗಂಟೆಗೆ ನೇರವಾಗಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನೇರ ಸಂದರ್ಶನದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಆಯುಷ್ ನಿರ್ದೇಶನಾಲಯದ ಷರತ್ತು ಮತ್ತು ನಿಬಂಧನೆಗಳು ಅನ್ವಯಿಸುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶ್ರೀ ಸಂತಕವಿ ಸರ್ವಜ್ಞ ಜಯಂತ್ಯೋತ್ಸವ
ಸರ್ವಜ್ಞ ಕವಿಯ ಸಂದೇಶ ಅರಿತುಕೊಳ್ಳಿ
-ಶಂಕರಗೌಡ ಎಸ್.ಸೋಮನಾಳ

ಯಾದಗಿರಿ, ಫೆಬ್ರುವರಿ 20 (ಕರ್ನಾಟಕ ವಾರ್ತೆ): ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿರುವ ಅಸಮಾನತೆಯನ್ನು ಸಂತ ಕವಿ ಸರ್ವಜ್ಞರು ತ್ರಿಪದಿ ವಚನಗಳ ಮೂಲಕ ತಿದ್ದಿದರು. ಅವರ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ವಚನಗಳ ಸಂದೇಶವನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದು ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ ಅವರು ಹೇಳಿದರು. ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಂತಕವಿ ಸರ್ವಜ್ಞ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸಂತಕವಿ ಸರ್ವಜ್ಞ ರವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರು ಮಾತನಾಡಿದರು. ಸಮಾಜದಲ್ಲಿ ಬದಲಾವಣೆ ಬರಬೇಕಾದರೆ ಮೊದಲು ಪ್ರತಿಯೊಬ್ಬರ ಮನಸ್ಥಿತಿ ಬದಲಾಗಬೇಕು. ಲಿಂಗ, ಜಾತಿ ತಾರತಮ್ಯ ಹೋಗಲಾಡಿಸಿ ಸಮಾಜದಲ್ಲಿ ಸಮಾನತೆ ತರುವ ಸಲುವಾಗಿ ಜನಸಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತ್ರಿಪದಿ ವಚನಗಳನ್ನು ರಚಿಸಿದ್ದಾರೆ. ಅಂತಹ ಪ್ರತಿಯೊಂದು ವಚನಗಳನ್ನು ಮಕ್ಕಳಿಗೆ ಕಲಿಸಬೇಕು. ಜೊತೆಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಅವರು ಸಲಹೆ ನೀಡಿದರು. ಬಾಚವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಬಂಗಾರಪ್ಪ ಕುಂಬಾರ ಯರಗೋಳ ಅವರು ಉಪನ್ಯಾಸ ನೀಡಿ, ಸರ್ವಜ್ಞನು ಗರ್ವದಿಂದ ಕಲಿತವನಲ್ಲ, ಸರ್ವರೊಳು ಒಂದೊಂದು ನುಡಿ ಕಲಿತು ಸರ್ವಜ್ಞನಾದನು. 16ನೇ ಶತಮಾನದಲ್ಲಿ ಸರಳ ಭಾಷೆಯ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಮ್ಮ ತ್ರಿಪದಿಯ ವಚನಗಳ ಮೂಲಕ ತಿದ್ದುವ ಕೆಲಸ ಮಾಡಿದವರಲ್ಲಿ ಕವಿ ಸರ್ವಜ್ಞ ಒಬ್ಬರಾಗಿದ್ದಾರೆ. ಸರ್ವಜ್ಞ ಎಂಬುವುದು ಸರ್ವವವನ್ನು ತಿಳಿದವರು ಎಂದು ಉತ್ತಂಗಿ ಚನ್ನಪ್ಪನವರ ಬರೆದ ಪುಸ್ತಕದಲ್ಲಿ ಉಲ್ಲೇಖವಿದೆ. ತಂದೆ ಬಸವ ಅರಸ, ತಾಯಿ ಕುಂಬಾರ ಮಾಳಮ್ಮ ಅವರ ಮಗನಾಗಿ ಜನಿಸಿದ ಸರ್ವಜ್ಞ ಹಲವು ತ್ರಿಪದಿಗಳ ಮೂಲಕ ಹೆಸರಾಗಿದ್ದಾರೆ ಎಂದರು.
ಸರ್ವಜ್ಞ ಎಲ್ಲಾ ಸಮಸ್ಯೆಗಳಿಗೂ ವಚನಗಳ ಮೂಲಕ ಉತ್ತರ ನೀಡಿದ್ದಾರೆ. ಅವರ ವಚನಗಳನ್ನು ಪಾಲನೆ ಮಾಡಿದಲ್ಲಿ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ. ಕುಂಬಾರ ಸಮಾಜದವರು ಮುಗ್ದರು. ಯಾರಿಗೂ ಕೇಡು ಬಯಸಿದವರಲ್ಲ. ಎಲ್ಲರೊಂದಿಗೆ ಬೆರೆತು ಬದುಕುವ ಸಮಾಜವಾಗಿದೆ. ಪ್ರಸ್ತುತ ಸಮಾಜದಲ್ಲಿ ಎಲ್ಲವೂ ಡಿಜಿಟಲೀಕರಣವಾಗಿದೆ. ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಆದ್ದರಿಂದ ಪ್ರತಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಎಂದು ಅವರು ಹೇಳಿದರು. ಸಂತಕವಿಯ ಹಲವಾರು ತ್ರಿಪದಿ ವಚನಗಳು ಇಂದಿಗೂ ಪ್ರಕಾಶಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಭಜನಾ ಕಾರ್ಯಕ್ರಮಗಳಲ್ಲಿ ಸರ್ವಜ್ಞರ ವಚನಗಳು ಪ್ರಥಮದಲ್ಲೇ ಹೇಳುವರು. ಅದರಂತೆ ಕುಂಬಾರ ಸಮಾಜದ ಎಲ್ಲರೂ ಮಕ್ಕಳಿಗೆ ಸಂತಕವಿಯ ವಚನಗಳ ಬಗ್ಗೆ ತಿಳಿಸಬೇಕು ಎಂದರು. ಕುಂಬಾರ ಸಮಾಜದ ಜಿಲ್ಲಾಧ್ಯಕ್ಷರಾದ ದೇವಿಂದ್ರಪ್ಪ ಕುಂಬಾರ ದರ್ಶನಾಪುರ, ಸಮಾಜದ ಜಿಲ್ಲಾ ಗೌರವಾಧ್ಯಕ್ಷರಾದ ಹಣಮಂತಪ್ಪ ಮಿನಾಸ್‍ಪುರ ಅವರು ಸೇರಿದಂತೆ ಸಮಾಜದ ಮುಖಂಡರು, ಮಹಿಳೆಯರು, ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲಿಂಗೇರಿ ಸ್ಟೇಷನ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕರಾದ ಚಂದ್ರಶೇಖರ ಗೋಗಿ ಹಾಗೂ ತಂಡದವರು  ನಾಡಗೀತೆ  ಹಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಸುಬಮ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಗುರುಪ್ರಸಾದ ವೈದ್ಯ ಅವರು ನಿರೂಪಿಸಿದರು. ಕಾರ್ಯಕ್ರಮಕ್ಕೂ ಮೊದಲು ನಗರದ ಹೊಸಳ್ಳಿ ಕ್ರಾಸ್‍ನಿಂದ ಜಿಲ್ಲಾಡಳಿತ ಭವನದವರೆಗೆ ಕಲಾತಂಡಗಳೊಂದಿಗೆ ಶ್ರೀ ಸಂತಕವಿ ಸರ್ವಜ್ಞರ ಭಾವಚಿತ್ರದ ಮೆರವಣಿಗೆ ನಡೆಯಿತು.

ಗುರುವಾರ, ಫೆಬ್ರವರಿ 20, 2020

ಸುಕ್ಷೇತ್ರ ಶ್ರೀಶೈಲಕ್ಕೆ 10 ವಿಶೇಷ ಬಸ್
ಯಾದಗಿರಿ, ಫೆಬ್ರುವರಿ 20 (ಕರ್ನಾಟಕ ವಾರ್ತೆ): ಮಹಾ ಶಿವರಾತ್ರಿ ಪ್ರಯುಕ್ತ ಆಂಧ್ರಪ್ರದೇಶದಲ್ಲಿರುವ ಸುಕ್ಷೇತ್ರ ಶ್ರೀಶೈಲಕ್ಕೆ ಹೋಗಿ ಬರುವ ಭಕ್ತಾದಿ ಪ್ರಯಾಣಿಕರ ಅನುಕೂಲಕ್ಕಾಗಿ ಫೆಬ್ರುವರಿ 21ರಂದು ಯಾದಗಿರಿ ವಿಭಾಗದಿಂದ 10 ವಿಶೇಷ (ಹೆಚ್ಚಿನ) ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೋಗೇರಿ ಅವರು ತಿಳಿಸಿದ್ದಾರೆ.
ಈ ಬಸ್‍ಗಳು ಯಾದಗಿರಿ, ಶಹಾಪುರ, ಸುರಪುರ ಬಸ್ ನಿಲ್ದಾಣಗಳಿಂದ ಕಾರ್ಯಾಚರಣೆ ಮಾಡುತ್ತವೆ. ಭಕ್ತಾದಿ ಪ್ರಯಾಣಿಕರು ತಮ್ಮ ಸಾರಿಗೆ ಸೌಕರ್ಯಕ್ಕಾಗಿ ಘಟಕ ವ್ಯವಸ್ಥಾಪಕರ ದೂರವಾಣಿ ಸಂಖ್ಯೆ ಯಾದಗಿರಿ-7760992463, ಶಹಾಪುರ-7760992464, ಸುರಪುರ-7760992467, ಗುರುಮಠಕಲ್-7760992465, ಸಹಾಯಕ ಸಂಚಾರಿ ವ್ಯವಸ್ಥಾಪಕರ ದೂರವಾಣಿ ಸಂಖ್ಯೆ-7760992458, ವಿಭಾಗೀಯ ಸಂಚಲನಾಧಿಕಾರಿ ದೂ:7760992452, ವಿಭಾಗೀಯ ಕಚೇರಿ ದೂ:7760992449 ಸಂಪರ್ಕಿಸಬಹುದು. ಭಕ್ತಾದಿ ಪ್ರಯಾಣಿಕರು ವಿಶೇಷ ಬಸ್‍ಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಪೂರ್ವಭಾವಿ ತರಬೇತಿಗೆ ಅರ್ಜಿ ಆಹ್ವಾನ
ಯಾದಗಿರಿ, ಫೆಬ್ರುವರಿ 20 (ಕರ್ನಾಟಕ ವಾರ್ತೆ): ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭ್ಯರ್ಥಿಗಳಿಗೆ ಎಸ್‍ಸಿಪಿ/ ಟಿಎಸ್‍ಪಿ ಯೋಜನೆ ಅಡಿಯಲ್ಲಿ ಐ.ಬಿ.ಪಿ.ಎಸ್ ಮೂಲಕ ನಡೆಸುವ ಬ್ಯಾಂಕಿಂಗ್ ಪ್ರೊಬೆಷನರಿ ಆಫೀಸರ್ ಮತ್ತು ಕ್ಲರ್ಕ್ ಹುದ್ದೆಗಳ ಆಯ್ಕೆಗೆ ಪರೀಕ್ಷಾ ಪೂರ್ವಭಾವಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪರೀಕ್ಷಾ ಪೂರ್ವಭಾವಿ ತರಬೇತಿಗಳನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಆಯ್ಕೆ ಮಾಡಿರುವ ತರಬೇತಿ ಸಂಸ್ಥೆಗಳ ಎಂಪ್ಯಾನಲ್ ಪಟ್ಟಿ ((Empanel list) ) ಅನ್ವಯ ಆಯೋಜಿಸಲಾಗುತ್ತದೆ. ಪದವಿ ಪಡೆದಿರುವ ಅಭ್ಯರ್ಥಿಗಳು ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಯಾದಗಿರಿ ಇವರಿಗೆ ಭೇಟಿಯಾಗಿ ಫೆಬ್ರುವರಿ 27ರೊಳಗಾಗಿ ಹೆಸರು, ವಿದ್ಯಾರ್ಹತೆ, ಹುಟ್ಟಿದ ದಿನಾಂಕ, ವಿಳಾಸ, ಆಧಾರ್ ಕಾರ್ಡ್, ಮೀಸಲಾತಿ ಪ್ರಮಾಣ ಪತ್ರಗಳ ಅಸಲು ಪ್ರತಿ ಹಾಗೂ 2 ಸೆಟ್ ಝರಾಕ್ಸ್ ಮತ್ತು ಈಗಾಗಲೇ ಯಾವುದಾದರೂ ನೇಮಕಾತಿ ಅರ್ಜಿ ಸಲ್ಲಿಸಿದ್ದರೆ ವಿವರ ಇತ್ಯಾದಿ ಎಲ್ಲಾ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಯಾದಗಿರಿ, ಫೆಬ್ರುವರಿ 20 (ಕರ್ನಾಟಕ ವಾರ್ತೆ): ಜಿಲ್ಲೆಯ ಒನ್ ಸ್ಟಾಪ್ ಸೆಂಟರ್ (ಸಖಿ) ಯೋಜನೆಯನ್ನು  ಅನುಷ್ಠಾನಗೊಳಿಸಲು ತಾತ್ಕಾಲಿಕ ಹೊರಗುತ್ತಿಗೆ ಆಧಾರದ ಮೇಲೆ ಹುದ್ದೆಗಳ ಭರ್ತಿಗಾಗಿ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Centre Administrator-1 ಹುದ್ದೆ, Counsellor (Psycho- Social counseling)-1 ಹುದ್ದೆ, Case worker/Social Worker-2 ಹುದ್ದೆಗಳು, Paralegal Personnel/ Lawyer-2 ಹುದ್ದೆಗಳು, Multipurpose Cleaner/ Security-2 ಹುದ್ದೆಗಳು ಸೇರಿದಂತೆ ಒಟ್ಟು 08 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ವಿದ್ಯಾರ್ಹತೆ/ಅನುಭವ ಹಾಗೂ ಉಸ್ತುವಾರಿಯಲ್ಲಿ ಉತ್ತಮ ಕೆಲಸ ನಿರ್ವಹಿಸಬಲ್ಲ, ಗಣಕಯಂತ್ರ ನಿರ್ವಹಣೆಯಲ್ಲಿ ಪರಿಣಿತಿ, ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪರಿಪೂರ್ಣ ಹಿಡಿತವುಳ್ಳ ಮಹಿಳಾ ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನಕ್ಕೆ ಆಹ್ವಾನಿಸಿ ಸಂದರ್ಶನ/ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳು/ಅನುಭವ/ಕಂಪ್ಯೂಟರ್ ಪರೀಕ್ಷೆಗಳ ಮೂಲಕ ನೇಮಕಾತಿ ಮಾಡಲಾಗುತ್ತದೆ.
ಆಸಕ್ತ ಹಾಗೂ ಅರ್ಹ ಮಹಿಳಾ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಉಪನಿರ್ದೇಶಕ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯಾದಗಿರಿ ಅಥವಾ ಯಾದಗಿರಿ ಜಿಲ್ಲಾ ಎನ್.ಐ.ಸಿ. ವೆಬ್ ಸೈಟ್: http://yadgir.nic.in ನಲ್ಲಿ ಪಡೆದು ಮಾರ್ಚ್ 10ರವರೆಗೆ ಅಗತ್ಯ ದಾಖಲಾತಿಗಳೊಂದಿಗೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಈ ಕಚೇರಿಗೆ ಅರ್ಜಿಯನ್ನು ಸಲ್ಲಿಸಬೇಕು. ಮಾರ್ಚ್ 10ರ ನಂತರ ಯಾವುದೇ ಅಂಚೆ ಮೂಲಕ ಅಥವಾ ನೇರವಾಗಿ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲವೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಕ್ಷೇಪಣೆ ಸಲ್ಲಿಕೆಗೆ ಸೂಚನೆ
ಯಾದಗಿರಿ, ಫೆಬ್ರುವರಿ 20 (ಕರ್ನಾಟಕ ವಾರ್ತೆ): ಶಹಾಪುರ ನಗರದ ಖಾಜಿ ಲೇಔಟ್‍ನ ನಿವೇಶನ ನಂ. 43-76 ರಲ್ಲಿ ವಕ್ಫ್ ಆಸ್ತಿ ಜಮಾತೆ ಎ ಅಹ್ಲೆ ಹದೀಸ್ ಮಸ್ಜದ ಎ ಆಖ್ಸಾ ಸುನ್ನಿ ವಕ್ಫ್ ಇದ್ದು, ಸದರಿ ಆಸ್ತಿಯಲ್ಲಿ ಮಸ್ಜಿದ್ ನಿರ್ಮಾಣ ಮಾಡುತ್ತಿದ್ದು ಯಾವುದೇ ಸಾರ್ವಜನಿಕ ಆಕ್ಷೇಪಣೆ ಇದ್ದಲ್ಲಿ 15 ದಿನದೊಳಗಾಗಿ ದಾಖಲೆಗಳೊಂದಿಗೆ ಲಿಖಿತವಾಗಿ ಶಹಾಪುರ ಪೌರಾಯುಕ್ತರ ಕಚೇರಿಗೆ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬುಧವಾರ, ಫೆಬ್ರವರಿ 19, 2020

ಮಕ್ಕಳಲ್ಲಿ ಶಿಸ್ತು ಕಲಿಸುವುದೆ ಎಸ್‍ಪಿಸಿ ಉದ್ದೇಶ
  -ಡಿವೈಎಸ್‍ಪಿ ಯು.ಶರಣಪ್ಪ
ಯಾದಗಿರಿ, ಫೆಬ್ರುವರಿ 19 (ಕರ್ನಾಟಕ ವಾರ್ತೆ): ಮಕ್ಕಳಲ್ಲಿ ಶಿಸ್ತು, ತ್ಯಾಗ, ನಿμÉ್ಠ ಮೂಡಿಸುವುದೇ ಸ್ಟುಡೆಂಟ್ ಪೆÇಲೀಸ್ ಕೆಡೆಟ್ (ಎಸ್‍ಪಿಸಿ) ಉದ್ದೇಶವಾಗಿದೆ ಎಂದು ಡಿವೈಎಸ್‍ಪಿ ಯು.ಶರಣಪ್ಪ ಅವರು ಹೇಳಿದರು. ನಗರದ ಹೊರ ವಲಯದಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ರಾಜ್ಯ ಪೆÇಲೀಸ್ ಇಲಾಖೆಯ ಕೆಎಸ್‍ಆರ್‍ಪಿ ಕಮಾಂಡೆಟ್ 6ನೇ ಪಡೆ ಕಲಬುರಗಿ ವತಿಯಿಂದ ಮಕ್ಕಳಿಗೆ ಹಮ್ಮಿಕೊಂಡಿದ್ದ ಸ್ಟುಡೆಂಟ್ ಪೆÇಲೀಸ್ ಕೆಡೆಟ್‍ನ ಹನ್ನೊಂದು ವಾರಗಳ ಸಾಪ್ತಾಹಿಕ ತರಗತಿಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ಕೇವಲ ಶಾರಿರೀಕ ಶಿಸ್ತು ಅಲ್ಲದೇ ಮಾನಸಿಕ ದೃಢತೆ, ಕಾನೂನುಗಳ ಬಗ್ಗೆ ಜ್ಞಾನ, ದೇಶದ ಬಗ್ಗೆ ಹೆಮ್ಮೆ ಮೂಡುವಂತೆ ಮಾಡುವುದು ಕೂಡ ಈ ಸ್ಟುಡೆಂಟ್ ಪೆÇಲೀಸ್ ಕೆಡೆಟ್ ಉದ್ದೇಶವಾಗಿದೆ. ಇದರಿಂದ ಮಕ್ಕಳಲ್ಲಿ ಸಮಾಜಿಕ ಜಾಗೃತಿ ಮೂಡುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹನ್ನೊಂದು ವಾರಗಳ ತರಬೇತಿಯ ನೋಡಲ್ ಅಧಿಕಾರಿಗಳಾದ ಮತ್ತು ಎಎಸ್‍ಐ ಸತ್ಯನಾರಾಯಣರಾವ್ ಅವರು ತಮ್ಮ ಅನುಭವ ಹಂಚಿಕೊಂಡರು. ಮಕ್ಕಳಲ್ಲಿ ಇಂತಹ ವರ್ಗಗಳು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು. ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ಮತ್ತು ಶೀಲ್ಟ್ ಎಸ್‍ಪಿಸಿ ಕಡೆಯಿಂದ ವಿತರಿಸಲಾಯಿತು. ತರಬೇತಿ ಪಡೆದ ಮಕ್ಕಳಿಗೆ ಪದಕ ವಿತರಿಸಲಾಯಿತು. ಮುಖ್ಯಗುರು ಭಗವಂತ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಎಲ್ಲಾ ಸಹಶಿಕ್ಷಕರು, ಸಿಬ್ಬಂದಿ ಮತ್ತು ಮಕ್ಕಳು ಭಾಗವಹಿಸಿದ್ದರು. ಬಾಲಕೃಷ್ಣ ಪ್ರಾರ್ಥಿಸಿದರೆ, ದೇವಿಂದ್ರಪ್ಪ ಸ್ವಾಗತಿಸಿದರು. ಮಹೇಶ ದೀಕ್ಷಿತ ನಿರೂಪಿಸಿದರು.

ಉಪಮುಖ್ಯಮಂತ್ರಿಗಳ ಪ್ರವಾಸ
ಯಾದಗಿರಿ, ಫೆಬ್ರುವರಿ 19 (ಕರ್ನಾಟಕ ವಾರ್ತೆ): ರಾಜ್ಯದ ಉಪಮುಖ್ಯಮಂತ್ರಿಗಳು, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಗೋವಿಂದ ಎಂ.ಕಾರಜೋಳ ಅವರು ಫೆಬ್ರುವರಿ 23 ಮತ್ತು 24ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಫೆಬ್ರುವರಿ 23ರಂದು ಸಂಜೆ 5 ಗಂಟೆಗೆ ಯಾದಗಿರಿ ಜಿಲ್ಲೆಗೆ ಆಗಮಿಸಿ, ವಾಸ್ತವ್ಯ ಮಾಡುವರು. ಫೆ.24ರಂದು ಬೆಳಿಗ್ಗೆ 11 ಗಂಟೆಗೆ ಯಾದಗಿರಿ-ಸುರಪುರ ಸ್ಥಳೀಯ ಶಾಸಕರು ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ ಜಿಲ್ಲೆಯ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವರು. ಸಂಜೆ 5 ಗಂಟೆಗೆ ರಾಯಚೂರು ಜಿಲ್ಲೆಗೆ ಪ್ರಯಾಣ ಬೆಳೆಸುವರು.

ಉಚಿತ ಸಾಮೂಹಿಕ ವಿವಾಹ: ನೋಂದಣಿಗೆ ಸೂಚನೆ
ಯಾದಗಿರಿ, ಫೆಬ್ರುವರಿ 19 (ಕರ್ನಾಟಕ ವಾರ್ತೆ): ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಸುತ್ತೋಲೆಯಂತೆ ಯಾದಗಿರಿ ತಾಲ್ಲೂಕಿನ ಮೈಲಾಪೂರದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಏಪ್ರಿಲ್ 26ರಂದು ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದ್ದು, ಆಸಕ್ತ ವಧು-ವರರ ಹೆಸರು ನೋಂದಾಯಿಸಲು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಸರು ನೋಂದಾಯಿಸಿಕೊಳ್ಳಲು ಮಾರ್ಚ್ 27ರಂದು ಕೊನೆಯ ದಿನವಾಗಿದೆ. ಅರ್ಜಿ ಹಾಗೂ ಹೆಚ್ಚಿನ ವಿವರಗಳಿಗೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ (ಯಾದಗಿರಿ ತಹಶೀಲ್ದಾರರ ಕಾರ್ಯಾಲಯ) ಹಾಗೂ ದೂ:08473-252370 ಸಂಪರ್ಕಿಸಬಹುದು ಎಂದು ಅವರು ಕೋರಿದ್ದಾರೆ.

ಫೆ.24ರಿಂದ ಏರ್‍ಮನ್ ಹುದ್ದೆಗಳ ನೇಮಕಾತಿ ರ್ಯಾಲಿ
ಯಾದಗಿರಿ, ಫೆಬ್ರುವರಿ 19 (ಕರ್ನಾಟಕ ವಾರ್ತೆ): ಭಾರತೀಯ ವಾಯುಪಡೆಯ ಏರ್‍ಮನ್ ಗ್ರೂಪ್ “ಎಕ್ಸ್” ಹಾಗೂ ಗ್ರೂಪ್ “ವೈ” ಹುದ್ದೆಗಳ ನೇಮಕಾತಿಗಾಗಿ ಫೆಬ್ರುವರಿ 24ರಿಂದ 27ರ ವರೆಗೆ ಬೆಂಗಳೂರಿನ ಕಬ್ಬನ್ ರಸ್ತೆಯಲ್ಲಿರುವ ಮಾಣಿಕ ಷಾ ಪರೇಡ್ ಮೈದಾನದಲ್ಲಿ ಬೃಹತ್ ನೇಮಕಾತಿ ರ್ಯಾಲಿ ನಡೆಯಲಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆಬ್ರುವರಿ 24 ಹಾಗೂ 25ರಂದು ಗ್ರೂಪ್ “ವೈ” ಮೆಡಿಕಲ್ ಅಸಿಸ್ಟಂಟ್ ಹುದ್ದೆ ಭರ್ತಿಗೆ ರ್ಯಾಲಿ ನಡೆಯಲಿದ್ದು, ಅಭ್ಯರ್ಥಿಗಳು 2000ರ ಜನವರಿ 17ರಿಂದ 2003ರ ಡಿಸೆಂಬರ್ 30ರ ಅವಧಿಯಲ್ಲಿ ಜನಿಸಿರಬೇಕು. 152.5 ಸೆಂ.ಮೀ. ಎತ್ತರ ಹೊಂದಿರಬೇಕು.
ಫೆಬ್ರುವರಿ 26 ಹಾಗೂ 27 ರಂದು ಗ್ರೂಪ್ “ಎಕ್ಸ್” ಎಜ್ಯುಕೇಶನ್ ಇನ್‍ಸ್ಟ್ರಕ್ಟರ್ ಹುದ್ದೆಗಳ ಭರ್ತಿಗೆ ರ್ಯಾಲಿ ನಡೆಯಲಿದ್ದು,  ಪದವೀಧರ ಅಭ್ಯರ್ಥಿಗಳು 1996ರ ಜನವರಿ 17 ರಿಂದ 2000ರ ಡಿಸೆಂಬರ್ 30ರ ಅವಧಿಯಲ್ಲಿ ಜನಿಸಿರಬೇಕು. ಸ್ನಾತಕೋತ್ತರ ಅಭ್ಯರ್ಥಿಗಳು 1993ರ ಜನವರಿ 17 ರಿಂದ 2000 ರ ಡಿಸೆಂಬರ್ 30 ರ ಅವಧಿಯಲ್ಲಿ ಜನಿಸಿರಬೇಕು. ಈ ಹುದ್ದೆಗಳಿಗೆ ಅಭ್ಯರ್ಥಿಗಳು 152.5 ಸೆಂ.ಮೀ. ಎತ್ತರ ಹೊಂದಿರಬೇಕು. ರ್ಯಾಲಿಯಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ಅಭ್ಯರ್ಥಿಗಳು ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ, ರ್ಯಾಲಿ ಸಂದರ್ಭದಲ್ಲಿ ತರಬೇಕಾದ ದಾಖಲೆಗಳು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಭಾರತೀಯ ವಾಯುಪಡೆಯ www.airmenselection.cdac.in  ವೆಬ್‍ಸೈಟ್ ಅಥವಾ 7 ಏರಮೆನ್ ಸೆಲೆಕ್ಷನ್ ಸೆಂಟರ್, ನಂ.1, ಕಬ್ಬನ್ ರಸ್ತೆ, ಬೆಂಗಳೂರು-560001. ದೂರವಾಣಿ ಸಂಖ್ಯೆ 080-25592199 (ಪ್ರತಿದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ) ಸಂಪರ್ಕಿಸಲು ಕೋರಲಾಗಿದೆ.
ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ
ಛತ್ರಪತಿ ಶಿವಾಜಿ ಮಹಾರಾಜರ ದೇಶಪ್ರೇಮ ಅಳವಡಿಸಿಕೊಳ್ಳಿ
                                                                              -ಶಂಕರಗೌಡ ಎಸ್.ಸೋಮನಾಳ

ಯಾದಗಿರಿ, ಫೆಬ್ರುವರಿ 19 (ಕರ್ನಾಟಕ ವಾರ್ತೆ): ಗೆರಿಲ್ಲಾ ಯುದ್ಧತಂತ್ರದ ಪರಿಕಲ್ಪನೆಯ ಮೂಲಕ ದೇಶದ ಸಂರಕ್ಷಣೆಗೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರವರ ದೇಶಪ್ರೇಮ, ಜೀವನದ ತತ್ವಾದರ್ಶಗಳನ್ನು ಯುವ ಸಮುದಾಯ ಅಳವಡಿಸಿಕೊಂಡಾಗ ಸುಭದ್ರವಾದ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ ಅವರು ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಬುಧವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ರವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರು ಮಾತನಾಡಿದರು.
ಶಕ್ತಿ ಮತ್ತು ಯುಕ್ತಿಯ ಸಂಗಮವಾಗಿದ್ದ ಶಿವಾಜಿ ಮಹಾರಾಜರು ದೇಶಭಕ್ತಿಯ ಪ್ರತೀಕವಾಗಿದ್ದರು. ಸ್ವರಾಜ್ಯದ ಕಲ್ಪನೆಯನ್ನು ಮೊದಲು ಪ್ರತಿಪಾದಿಸಿದ್ದರು. ಪ್ರತಿದಿನವೂ ಶಿವಾಜಿ ಮಹಾರಾಜರ ಆಡಳಿತವನ್ನು ಮೆಲುಕು ಹಾಕಿದಾಗ ಮಾತ್ರ ನಾವು ರಾಷ್ಟ್ರ ರಕ್ಷಣೆಗೆ ಸಿದ್ಧರಾಗಲು ಸಾಧ್ಯವಾಗುತ್ತದೆ. ಅವರು ಯಾವುದೇ ಒಂದು ಸಮಾಜಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಇಡೀ ದೇಶಕ್ಕೆ ಒಂದು ಶಕ್ತಿ ಇದ್ದಂತೆ ಎಂದು ಅವರು ಅಭಿಪ್ರಾಯಪಟ್ಟರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಸರ್ವೋದಯ ಶಿವಪುತ್ರ ಅವರು ಉಪನ್ಯಾಸ ನೀಡಿ, ಶಿವಾಜಿ  ಮಹಾರಾಜರು 1627ರಲ್ಲಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಶಿವನೇರಿಯಲ್ಲಿ ಜನಿಸಿದರು. ತಾಯಿ ಜೀಜಾಬಾಯಿಯು ದೇವಗಿರಿಯ ಯಾದವ ರಾಜಮನೆತನ, ತಂದೆ ಶಹಾಜಿ ಬೋಸ್ಲೆಯು ಶಿಸೋಡಿಯ ರಾಜಮನೆತನದವರಾಗಿದ್ದರು. ಹೀಗಾಗಿ ಶಿವಾಜಿಗೆ ರಕ್ತಗತವಾಗಿ ಧೈರ್ಯ, ಶಕ್ತಿ ಹಾಗೂ ಕ್ಷತ್ರೀಯ ಗುಣಗಳಿದ್ದವು ಎಂದರು.
ರಾಷ್ಟ್ರದ ಸಂರಕ್ಷಣೆ, ಹಿಂದೂ ಸಂಸ್ಕøತಿ, ಹಿಂದೂ ಧರ್ಮದ ಉಳಿವಿಗೆ ಗುಡ್ಡಗಾಡಿನ ಮಾವಳಿ ಜನಾಂಗದವರೊಂದಿಗೆ ಸಂಪರ್ಕ ಹೊಂದಿ ಗೆರಿಲ್ಲಾ ಯುದ್ಧ ತಂತ್ರದಿಂದ ಮೋಘಲರು, ದೆಹಲಿಯ ಸುಲ್ತಾನ್, ವಿಜಯಪುರದ ಆದಿಲ್‍ಶಾಹಿ ಸುಲ್ತಾನರು ಹಾಗೂ ಪೋರ್ಚ್‍ಗೀಸರೊಂದಿಗೆ ಅನೇಕ ಯುದ್ಧಗಳನ್ನು ಮಾಡಿದರು ಎಂದು ತಿಳಿಸಿದರು.
ಜೀಜಾಬಾಯಿ ಅವರು ಶಿವಾಜಿ ಮಹಾರಾಜರಿಗೆ ಚಿಕ್ಕಂದಿನಲ್ಲೆ ರಾಮಾಯಣ, ಮಹಾಭಾರತದ ಕಥೆಗಳು, ದೇಶಕಟ್ಟುವಲ್ಲಿ ಹೋರಾಡಿದ ಮಹಾಪುರುಷರ ಜೀವನ ಸಾಧನೆಗಳನ್ನು ಹೇಳಿ ಶಿವಾಜಿಯಲ್ಲಿ ಧೈರ್ಯ ತುಂಬುತ್ತಿದ್ದರು. ಮರಾಠ ಸಮುದಾಯವನ್ನು ಸಂಘಟಿಸಿದ ಶಿವಾಜಿ ಮಹಾರಾಜರು ಸ್ತ್ರೀಯರಿಗೆ ಪ್ರಾಮುಖ್ಯತೆ ನೀಡಿದರು. ಸಾಮಾಜಿಕ, ರಾಜಕೀಯ, ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ರಕ್ಷಣೆ ಪಡೆಯಲು ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಅಗತ್ಯವಿದೆ. ಜೀಜಾಬಾಯಿಯವರಂತೆ ತಮ್ಮ ಮಕ್ಕಳಿಗೆ ಉತ್ತಮ ಜೀವನ ಮೌಲ್ಯಗಳನ್ನು ಹೇಳಿಕೊಡಬೇಕು ಎಂದು ಅವರು ಸಲಹೆ ನೀಡಿದರು.ತ್ರಪತಿ ಎಂದರೆ ರಾಜರ ರಾಜ, ಅರಸರ ಅರಸ ಎಂದು ಅರ್ಥವಾಗುತ್ತದೆ. ಛತ್ರಪತಿ ಶಿವಾಜಿ ಮಹಾರಾಜರು ಶಕ್ತಿಯಿಂದ ಮಾಡಲು ಆಗದ ಕೆಲಸವನ್ನು ಯುಕ್ತಿಯಿಂದ ಮಾಡುತ್ತಿದ್ದರು. ಕಲ್ಯಾಣ ಕರ್ನಾಟಕಕ್ಕೆ ಕೂಡ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ. ಮುಂದಾಲೋಚನೆ, ತೀಕ್ಷಣಮತಿಯುಳ್ಳವರಾಗಿದ್ದ ಶಿವಾಜಿ ಮಹಾರಾಜರು ಆಡಳಿತದ ಸುಧಾರಣೆಗೆ ಅಷ್ಟ ಪ್ರಧಾನರೆಂಬ ಮಂತ್ರಿಮಂಡಲ ರಚಿಸಿ ಆಡಳಿತಾತ್ಮಕವಾಗಿ ಅಪಾರ ಕೊಡುಗೆ ನೀಡಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಭಾಶ್ಚಂದ್ರ ಕೌಲಗಿ, ಸಮಾಜದ ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ ಚವ್ಹಾಣ, ನಗರಸಭೆ ಮಾಜಿ ಸದಸ್ಯರಾದ ನಾರಾಯಣರಾವ್ ಚವ್ಹಾಣ ಅವರು ಸೇರಿದಂತೆ ಸಮಾಜದ ಮುಖಂಡರು, ಮಹಿಳೆಯರು, ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಲಿಂಗೇರಿ ಸ್ಟೇಷನ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕರಾದ ಚಂದ್ರಶೇಖರ ಗೋಗಿ ಹಾಗೂ ತಂಡದವರು  ನಾಡಗೀತೆ  ಹಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಸುಬಮ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಗುರುಪ್ರಸಾದ ವೈದ್ಯ ಅವರು ನಿರೂಪಿಸಿದರು.

ಮಂಗಳವಾರ, ಫೆಬ್ರವರಿ 18, 2020

ನಾಳೆ ಬಹಿರಂಗ ಹರಾಜು
ಯಾದಗಿರಿ, ಫೆಬ್ರುವರಿ 18 (ಕರ್ನಾಟಕ ವಾರ್ತೆ): ಶಹಾಪುರ ನಗರಸಭೆಯ ನಿರುಪಯುಕ್ತವಾದ ನಗರಸಭೆ ಆವರಣದಲ್ಲಿರುವ ನೀರು ಸರಬರಾಜು ಮತ್ತು ವಿದ್ಯುತ್ ನೈರ್ಮಲ್ಯ ಶಾಖೆಯ ಸಾಮಗ್ರಿಗಳ ಹರಾಜು ಪ್ರಕ್ರಿಯೆಯನ್ನು ಫೆಬ್ರುವರಿ 20ರಂದು ಮಧ್ಯಾಹ್ನ 12 ಗಂಟೆಗೆ ನಗರಸಭೆ ಆವರಣದಲ್ಲಿ ನಡೆಸಲಾಗುವುದು.
ಆಸಕ್ತ ಏಜೆನ್ಸಿಯವರು 10,000 ರೂ. ಮುಂಗಡ ಠೇವಣಿಯನ್ನು ಫೆ.19ರೊಳಗೆ ನೈರ್ಮಲ್ಯ ಶಾಖೆಯ ಮುಖ್ಯಸ್ಥರಲ್ಲಿ ಜಮಾ ಮಾಡತಕ್ಕದ್ದು. ಹರಾಜು ಪ್ರಕ್ರಿಯೆ ಮುಗಿದ ಮೇಲೆ ಯಶಸ್ವಿ ಭಾಗಿದಾರರು ಅಂದೇ ಸಂಪೂರ್ಣ ಹಣವನ್ನು ನಗರಸಭೆಗೆ ಭರಿಸಬೇಕು ಮತ್ತು 2 ದಿನಗಳಲ್ಲಿ ಸಂಪೂರ್ಣ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗತಕ್ಕದ್ದು ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೈಕ್ಷಣಿಕ ಪ್ರವೇಶಕ್ಕೆ ಅರ್ಜಿ ಆಹ್ವಾನ
ಯಾದಗಿರಿ, ಫೆಬ್ರುವರಿ 18 (ಕರ್ನಾಟಕ ವಾರ್ತೆ): ಮೈಸೂರಿನಲ್ಲಿರುವ ಕೇಂದ್ರೀಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ ಸಿಪೆಟ್ ಸಂಸ್ಥೆಯು ಭಾರತದ ಸರ್ಕಾರದ ರಸಾಯನ ಪೆಟ್ರೋರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದೆ. ಸಂಸ್ಥೆಯು ದೇಶದ ಪ್ಲಾಸ್ಟಿಕ್ ಕೈಗಾರಿಕಾ ವಲಯಕ್ಕೆ ಬೇಕಾದ ಮಾನವ ಸಂಪನ್ಮೂಲಕ್ಕೆ ಶೈಕ್ಷಣಿಕ ತರಬೇತಿ ನೀಡುತ್ತಿದ್ದು, 2020-21ನೇ ಸಾಲಿನ ಡಿಪ್ಲೋಮಾ ಮತ್ತು ಪೋಸ್ಟ್ ಡಿಪ್ಲೋಮಾ ಪ್ರವೇಶಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮೇ 22 ಕೊನೆಯ ದಿನ. ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ (ಡಿಪಿಟಿ)-3 ವರ್ಷ, ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಮೌಲ್ಡ್ ಟೆಕ್ನಾಲಜಿ (ಡಿಪಿಎಂಟಿ)- 3 ವರ್ಷ, ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಪ್ರೊಸೆಸಿಂಗ್ ಆಂಡ್ ಟೆಸ್ಟಿಂಗ್ (ಪಿಜಿಡಿ- ಪಿಪಿಟಿ)- 2 ವರ್ಷಗಳ ಕೋರ್ಸ್‍ಗಳಿದ್ದು, ಎಸ್‍ಎಸ್‍ಎಲ್‍ಸಿ, ಪಿಯುಸಿ (ವಿಜ್ಞಾನ) ಮತ್ತು ಬಿ.ಎಸ್.ಸ್ಸಿ (ರಾಸಾಯನ) ಪರೀಕ್ಷೆಯಲ್ಲಿ ತೇರ್ಗಡೆಯಾದವರು /ಹಾಜರಾದವರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ http://eadmission.cipet.gov.in ಅಥವಾ ದೂ:0821-2510618, 9480253024, 9141075968 ಸಂಪರ್ಕಿಸಬಹುದು ಎಂದು ಸಿಪೆಟ್ ಸಂಸ್ಥೆಯ ನಿರ್ದೇಶಕರು ಮತ್ತು ಮುಖ್ಯಸ್ಥರಾದ ಆರ್.ಟಿ. ನಾಗರಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೈಬರ್ ಅಪರಾಧಗಳ ಜಾಗೃತಿ ಕಾರ್ಯಕ್ರಮ
ಆನ್‍ಲೈನ್ ಖರೀದಿ ಮುನ್ನ ವೆಬ್‍ಸೈಟ್ ನೈಜತೆ ಪರಿಶೀಲಿಸಿ
- ಡಿಎಸ್‍ಪಿ ವೆಂಕಟೇಶ್ ಉಗಿಬಂಡಿ
ಯಾದಗಿರಿ, ಫೆಬ್ರುವರಿ 18 (ಕರ್ನಾಟಕ ವಾರ್ತೆ): ಅಗತ್ಯವಿರುವ ವಸ್ತುಗಳನ್ನು ಆನ್‍ಲೈನ್ ಮೂಲಕ ಖರೀದಿಸುವಾಗ ವೆಬ್‍ಸೈಟ್‍ಗಳ ನೈಜತೆಯ ಬಗ್ಗೆ ಪರಿಶೀಲಿಸಿ ಖಚಿತಪಡಿಸಿಕೊಂಡು ವ್ಯವಹಾರ ಮಾಡಬೇಕು ಎಂದು ಸುರಪುರ ಡಿಎಸ್‍ಪಿ ವೆಂಕಟೇಶ್ ಉಗಿಬಂಡಿ ಅವರು ಸಲಹೆ ನೀಡಿದರು.ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಹಾಗೂ ಎಸ್‍ಬಿಐ ಬ್ಯಾಂಕ್ ಸಹಯೋಗದೊಂದಿಗೆ ಸೈಬರ್ ಅಪರಾಧಗಳ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಸಾಮಾಜಾಲತಾಣಗಳಿಂದಾಗುವ ದುರುಪಯೋಗ ಮತ್ತು ಕಾನೂನಿನ ಕ್ರಮಗಳ ಕುರಿತು ವಿವರಿಸಿದರು.ಸಾರ್ವಜನಿಕರು ಅಥವಾ ಗ್ರಾಹಕರು ತಮ್ಮ ಎಟಿಎಮ್ ಕಾರ್ಡ್‍ಗಳನ್ನು ಅಪರಿಚಿತ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಕೊಡಬಾರದು. ಯಾವುದೇ ಕಾರಣಕ್ಕೂ ಫೋನ್ ಕರೆ ಮೂಲಕ ಓಟಿಪಿ ಸಂಖ್ಯೆಗಳನ್ನು ಶೇರ್ ಮಾಡಬಾರದು. ಆನ್‍ಲೈನ್ ಮೂಲಕ ವ್ಯವಹಾರಗಳನ್ನು ಸ್ವತಃ ಮಾಡತಕ್ಕದ್ದು. ಬೇರೆಯವರ ಮೂಲಕ ಆನ್‍ಲೈನ್ ವ್ಯವಹಾರ ಮಾಡಿದರೆ ಮೋಸ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಒಂದು ವೇಳೆ ವಂಚನೆ ಬಗ್ಗೆ ಅನುಮಾನ ಇದ್ದಲ್ಲಿ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ, ನಿಮ್ಮ ಅಕೌಂಟನ್ನು ಬ್ಲಾಕ್ ಮಾಡಿಸಿ ಸಂಭವಿಸಬಹುದಾದ ಹೆಚ್ಚಿನ ನಷ್ಟವನ್ನು ತಡೆಯಬಹುದು ಎಂದು ಹೇಳಿದರು.
ಅವಹೇಳನಕಾರಿ, ಪ್ರಚೋದನಕಾರಿ ಅಥವಾ ಇನ್ನೊಬ್ಬರಿಗೆ ಮಾನಹಾನಿಯಾಗುವಂತಹ ಪೋಸ್ಟ್‍ಗಳನ್ನು ಹಾಕಿ ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಅವರು ಸಲಹೆ ನೀಡಿದರು.
ಎಸ್‍ಬಿಐ ಪ್ರಾದೇಶಿಕ ವ್ಯವಸ್ಥಾಪಕರಾದ ರಾಮಕೃಷ್ಣ ಶಣೈ ಅವರು ಮಾತನಾಡಿ, ಎಟಿಎಂ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳು ಬ್ಲಾಕ್ ಆಗಿದೆ ಎಂಬುದಾಗಿ ಎಲ್.ಐ.ಸಿ ಏಜೆಂಟ್ ಅಥವಾ ಬ್ಯಾಂಕ್ ಪ್ರತಿನಿಧಿಗಳೆಂದು ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಓಟಿಪಿ ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಇಂತಹ ಅಪರಿಚಿತ ಕರೆಗಳನ್ನು ಯಾವುದೇ ಕಾರಣಕ್ಕೂ ನಂಬಬಾರದು. ಎಟಿಎಂ ಕಾರ್ಡ್ ಬಳಕೆ ಮಾಡಲು ಗೊತ್ತಿಲ್ಲದಿದ್ದಾಗ ಅಪರಿಚಿತ ವ್ಯಕ್ತಿಗಳ ಕೈಯಲ್ಲಿ ಎಟಿಎಮ್ ಕಾರ್ಡ್ ಕೊಟ್ಟರೆ ಅವರು ನಿಮ್ಮ ಗಮನಕ್ಕೆ ಬಾರದಂತೆ ಅದನ್ನು ಕ್ಲೋನಿಂಗ್ ಮಾಡುವ, ಎಟಿಎಂ ಕಾರ್ಡನ್ನೇ ಬದಲಾಯಿಸುವ ಸಾಧ್ಯತೆಗಳಿರುತ್ತವೆ ಎಂದು ತಿಳಿಸಿದರು.
ಬ್ಯಾಂಕ್ ಖಾತೆ ಮಾಹಿತಿಗಳನ್ನು ಹೊಂದಿದ ಎಸ್.ಎಂ.ಎಸ್, ವಾಟ್ಸ್‍ಆ್ಯಪ್, ಇ-ಮೇಲ್ ಸಂದೇಶಗಳ ಲಿಂಕ್‍ಗಳನ್ನು ಕ್ಲಿಕ್ ಮಾಡಬಾರದು. ಎಸ್.ಎಂ.ಎಸ್, ವಾಟ್ಸ್‍ಆ್ಯಪ್, ಇ-ಮೇಲ್ ಮುಖಾಂತರ ನಿಮಗೆ ಲಾಟರಿ ಹತ್ತಿದೆ ಎಂದು ಸಂದೇಶಗಳು ಬಂದಾಗ ಯಾವುದೇ ಕಾರಣಕ್ಕೂ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನೀಡಬಾರದು ಎಂದು ಅವರು ಸಲಹೆ ನೀಡಿದರು.
ಎಸ್‍ಬಿಐ ಬೆಂಗಳೂರು ಐಟಿಎಸ್ ವಿಭಾಗದ ಮುಖ್ಯ ವ್ಯವಸ್ಥಾಪಕರಾದ ರವಿ ಕುಸಬಿ ಅವರು ಆನ್‍ಲೈನ್ ಅಪರಾಧ ವಿಧಗಳು ಹಾಗೂ ಸೈಬರ್ ಅಪರಾಧಗಳನ್ನು ತಡೆಗಟ್ಟುವ ವಿಧಾನಗಳನ್ನು ಪವರ್ ಪಾಯಿಂಟ್ ಪ್ರೆಜೆಂಟೇಶನ್ ಮೂಲಕ ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ವಿವರಿಸಿ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿಯನ್ನು ಮೂಡಿಸಿದರು.
ಯಾದಗಿರಿ ಡಿಎಸ್‍ಪಿ ಯು.ಶರಣಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಬಿ.ಎ.ಕೃಷ್ಣ ಅವರು ಉಪಸ್ಥಿತರಿದ್ದರು. ಯಾದಗಿರಿ ಸುತ್ತಮುತ್ತಲಿನ ಗ್ರಾಮಸ್ಥರು, ಸಾರ್ವಜನಿಕರು, ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ನಿವೃತ್ತ ಸರಕಾರಿ ಅಧಿಕಾರಿ ಮತ್ತು ಸಿಬ್ಬಂದಿಯವರು, ಹಿರಿಯ ನಾಗರಿಕರು ಸೇರಿದಂತೆ ಕಾರ್ಯಕ್ರಮದಲ್ಲಿ ಸುಮಾರು 500-600 ಜನ ಭಾಗವಹಿಸಿದ್ದರು.ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ದೌಲತ್ ಎನ್.ಕೆ. ಅವರು ಸ್ವಾಗತಿಸಿದರು. ಸಂತೋಷ ಜಯಕರ ಅವರು ನಿರೂಪಣೆ ಮಾಡಿದರು. ಗಿರೀಶ್ ಪಾಟೀಲ್ ಅವರು ವಂದಿಸಿದರು.

ಅಜರ್‍ಬೈಜಾನ್, ಇರಾನ್, ಜಾರ್ಜಿಯಾ ಸೇರಿ ವಿಶ್ವದ ಹೆಸರಾಂತ ಕುಸ್ತಿಪಟುಗಳು ಭಾಗಿ
ಫೆ.22ರಿಂದ 25ರವರೆಗೆ ಧಾರವಾಡದಲ್ಲಿ ಕರ್ನಾಟಕ ಕುಸ್ತಿ ಹಬ್ಬ

ಯಾದಗಿರಿ, ಫೆಬ್ರುವರಿ 18 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕರ್ನಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘದ ಸಹಯೋಗದಲ್ಲಿ ಫೆಬ್ರುವರಿ
 22ರಿಂದ 25ರವರೆಗೆ 4 ದಿನಗಳ ಕಾಲ ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಿದೆ.
ದೇಶದ ಹೆಸರಾಂತ ಸುಮಾರು 1200ಕ್ಕೂ ಹೆಚ್ಚು ಕುಸ್ತಿಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ವಿವಿಧ 3 ಅಖಾಡಗಳಲ್ಲಿ 30 ಪ್ರತ್ಯೇಕ ತೂಕಗಳ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 80 ಲಕ್ಷ ರೂ. ಮೌಲ್ಯದ ನಗದು ಬಹುಮಾನ, ಪಾರಿತೋಷಕಗಳನ್ನು ನೀಡಲಾಗುವುದು. ಅಜರ್‍ಬೈಜಾನ್, ಜಾರ್ಜಿಯಾ, ಇರಾನ್ ದೇಶಗಳ ಕುಸ್ತಿಪಟುಗಳ ಜೊತೆಗೆ ಭಾರತದ ಪದ್ಮಶ್ರೀ, ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಒಲಂಪಿಕ್ ಪಂದ್ಯ ವಿಜೇತ್, ಯೋಗೇಶ್ವರ ದತ್, ಪದ್ಮಶ್ರೀ, ಅರ್ಜುನ್ ಪ್ರಶಸ್ತಿ ವಿಜೇತರು ಹಾಗೂ ನಿವೃತ್ತ ಐಜಿಪಿ ಕರ್ತಾರ ಸಿಂಗ್, ಪದ್ಮಶ್ರೀ, ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ ಒಲಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್, ಅಂತರಾಷ್ಟ್ರೀಯ ಕುಸ್ತಿಪಟು ಮಹ್ಮದ್ ಮುರಾಡಿ, ಭಾರತ ಕೇಸರಿ ಉಮೇಶ ಚೌಧರಿ, ಅಂತಾರಾಷ್ಟ್ರೀಯ ಮಹಿಳಾ ಕುಸ್ತಿಪಟುಗಳಾದ ಅಂಶು ಮಲ್ಲಿಕ್, ಜೈಲಾ ನಾಗೀಜಡೆ, ನೈನಾ, ಸಭೀರಾ ಅಲಿಯೆವಾ ಅಲಹವರ್ಡಿ ಮೊದಲಾದ ಹೆಸರಾಂತ ಕುಸ್ತಿ ಪಟುಗಳು ಈ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಅರಸರು ನವರಾತ್ರಿ ಸಂದರ್ಭದಲ್ಲಿ ಕುಸ್ತಿ ಕ್ರೀಡೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಮುಂದೆ ಮೈಸೂರು ಒಡೆಯರು ದಸರಾ ಉತ್ಸವಗಳಲ್ಲಿ ಇದನ್ನು ಸೇರಿಸುವ ಮೂಲಕ ದೊಡ್ಡ ಕ್ರೀಡೆಯನ್ನಾಗಿ ಮಾಡಿದರು. ಈ ಪರಂಪರೆಯನ್ನು ಕರ್ನಾಟಕದ ಎಲ್ಲಾ ರಾಜ ಮನೆತನದವರು ಮುಂದುವರೆಸಿಕೊಂಡು ಬಂದಿದ್ದು ಮೈಸೂರು ಒಡೆಯರ ಕಾಲದಲ್ಲಿ ಕುಸ್ತಿಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ದೊರೆಯಿತು. ಕುಸ್ತಿ ಒಲಂಪಿಕ್ ಕ್ರೀಡೆಯಾಗಿದ್ದು, ಯುವ ಪ್ರತಿಭೆಗಳನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಕರ್ನಾಟಕ ಸರ್ಕಾರವು ಪ್ರತಿ ವರ್ಷ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಈ ಕುಸ್ತಿ ಹಬ್ಬವನ್ನು ಆಚರಿಸುತ್ತಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2018-19ನೇ ಸಾಲಿನಿಂದ “ಕರ್ನಾಟಕ ಕುಸ್ತಿ ಹಬ್ಬ”ವನ್ನು ರಾಜ್ಯ ಮಟ್ಟದಲ್ಲಿ ಆಯೋಜಿಸಿಕೊಂಡು ಬರುತ್ತಿದೆ. 2019-20ನೇ ಸಾಲಿನ ಈ ವರ್ಷದ ಎರಡನೇ ಕರ್ನಾಟಕ ಕುಸ್ತಿ ಹಬ್ಬವು ಸಾಂಸ್ಕøತಿಕ ನಗರಿ ಧಾರವಾಡದಲ್ಲಿ ಜರುಗುತ್ತಿದೆ.
ವಯೋಮಿತಿ: ಕರ್ನಾಟಕ ಕುಸ್ತಿ ಹಬ್ಬದಲ್ಲಿ 14, 17 ವರ್ಷದೊಳಗಿನ ಹಾಗೂ 18 ವರ್ಷ ಮೇಲ್ಪಟ್ಟವರ ವಿಭಾಗಗಳಲ್ಲಿ ವಿವಿಧ ತೂಕದ ವಿಭಾಗಗಳಲ್ಲಿ ಕುಸ್ತಿಗಳನ್ನು ಆಯೋಜಿಸಲಾಗಿದೆ. ಕರ್ನಾಟಕ ಕುಸ್ತಿ ಹಬ್ಬದ ಕುಸ್ತಿಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು ಆಸಕ್ತ ಕುಸ್ತಿಪಟುಗಳು ತಮ್ಮ ಜಿಲ್ಲೆಗಳಿಂದ ನೇರವಾಗಿ ಬಂದು ಭಾಗವಹಿಸಬಹುದು. ಕರ್ನಾಟಕದ ಎಲ್ಲ ಜಿಲ್ಲೆಗಳ ಕುಸ್ತಿಪಟುಗಳು ಈ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಬಹುದು. ಕರ್ನಾಟಕ ಕುಸ್ತಿ ಹಬ್ಬವನ್ನು ಭಾರತೀಯ ಶೈಲಿಯ ಕುಸ್ತಿ ಸಂಘದ ನಿಯಮದ ಪ್ರಕಾರ ಅಂಕಗಳ ಆಧಾರದಲ್ಲಿ ಮಣ್ಣಿನ ಮೇಲೆ ಕುಸ್ತಿಯನ್ನು ನಡೆಸಲಾಗುವುದು. 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ 2006, 2007 ಮತ್ತು 2008ನೇ ಇಸವಿಯಲ್ಲಿ ಜನಿಸಿದವರು ಮಾತ್ರ ಭಾಗವಹಿಸಬಹುದು. 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ 2003, 2004 ಮತ್ತು 2005ನೇ ಇಸವಿಯಲ್ಲಿ ಜನಿಸಿದವರು ಹಾಗೂ ಹಿರಿಯರ ವಿಭಾಗದಲ್ಲಿ 18 ವರ್ಷ ಮೇಲ್ಪಟ್ಟ ಅಂದರೆ 2002ರ ಇಸವಿ ಹಾಗೂ ಅದಕ್ಕೂ ಮೊದಲು ಜನಿಸಿದ ಪುರುಷ ಮತ್ತು ಮಹಿಳೆಯರು ಮಾತ್ರ ಭಾಗವಹಿಸಬಹುದು.
ಪ್ರಶಸ್ತಿಗಳು: 14 ವರ್ಷದೊಳಗಿನ ಬಾಲಕರ 52 ಕೆ.ಜಿ ಮತ್ತು ಬಾಲಕಿಯರ 46 ಕೆ.ಜಿ ವಿಭಾಗದಲ್ಲಿ ಅಂತಿಮವಾಗಿ ವಿಜೇತರಾಗುವ ಕುಸ್ತಿಪಟುಗಳಿಗೆ “ಕರ್ನಾಟಕ ಬಾಲ ಕೇಸರಿ” ಪ್ರಶಸ್ತಿ ನೀಡಲಾಗುವುದು.
17 ವರ್ಷದೊಳಗಿನ ಬಾಲಕರ 60 ಕೆ.ಜಿ. ಮತ್ತು ಬಾಲಕಿಯರ 53 ಕೆ.ಜಿ ವಿಭಾಗದಲ್ಲಿ ಅಂತಿಮವಾಗಿ ವಿಜೇತರಾಗುವ ಕುಸ್ತಿಪಟುಗಳಿಗೆ “ಕರ್ನಾಟಕ ಕಿಶೋರ ಮತ್ತು ಕಿಶೋರಿ” ಪ್ರಶಸ್ತಿ ನೀಡಲಾಗುವುದು. ಹಿರಿಯರ ವಿಭಾಗದಲ್ಲಿ “ಕರ್ನಾಟಕ ಕೇಸರಿ ಪ್ರಶಸ್ತಿಗಾಗಿ 86 ಕೆ.ಜಿಯಿಂದ 125 ಕೆ.ಜಿ ವರೆಗಿನ ಪುರುಷ ಕುಸ್ತಿಪಟುಗಳು ಭಾಗವಹಿಸಬಹುದು. ಮಹಿಳಾ ಕರ್ನಾಟಕ ಕೇಸರಿ ಪ್ರಶಸ್ತಿಗಾಗಿ 59 ಕೆಜಿ ಯಿಂದ 76 ಕೆಜಿ ತೂಕದ ವರೆಗಿನ ಮಹಿಳೆಯರು ಭಾಗವಹಿಸಬಹುದು. ಕರ್ನಾಟಕ ಕೇಸರಿ ವಿಭಾಗದಲ್ಲಿ ಭಾಗವಹಿಸುವ ಪುರುಷ ಮತ್ತು ಮಹಿಳಾ ಕುಸ್ತಿಪಟುಗಳು ಇತರೆ ತೂಕದ ವಿಭಾಗಗಳಲ್ಲಿ ಭಾಗವಹಿಸುವಂತಿಲ್ಲ. ಭಾಗವಹಿಸುವ ಕುಸ್ತಿಪಟುಗಳಿಗೆ ಪ್ರಯಾಣ ಭತ್ಯೆ ಹಾಗೂ ವಸತಿ ಊಟೋಪಹಾರ ವ್ಯವಸ್ಥೆಯನ್ನು ಮಾಡಲಾಗಿದೆ. ಕುಸ್ತಿ ಪಂದ್ಯದ ಸಮಯದಲ್ಲಿ ಗೈರುಹಾಜರಾಗುವ ಕುಸ್ತಿಪಟುಗಳಿಗೆ ಕರ್ನಾಟಕ ಕುಸ್ತಿ ಹಬ್ಬದ ಯಾವುದೇ ಸವಲತ್ತುಗಳನ್ನು ನೀಡಲಾಗುವುದಿಲ್ಲ. ಭಾಗವಹಿಸುವ ಕುಸ್ತಿಪಟುಗಳ ಉದ್ದೀಪನಾ ಮದ್ದು ಪರೀಕ್ಷೆಯನ್ನು ಓಂಆಂ NADA (National Anti Doping Agency ಪರೀಕ್ಷಾ ತಂಡದಿಂದ ನಡೆಸಲಾಗುವುದು. ಪರೀಕ್ಷೆಯಲ್ಲಿ ಉದ್ದೀಪನಾ ಮದ್ದು ಸೇವನೆ ರುಜುವಾತಾದಲ್ಲಿ 4 ವರ್ಷಗಳ ಅವಧಿಗೆ ಸ್ಪರ್ಧೆ/ಆಯ್ಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗುವುದು. ಕುಸ್ತಿ ಪ್ರಾರಂಭದ ಪ್ರಥಮ ಸುತ್ತಿನಿಂದಲೇ ನಾಡಾದವರು ಉದ್ದಿಪನ ಮದ್ದು ಪರೀಕ್ಷೆಯನ್ನು ನಡೆಸುವರು. ಆರು ಪ್ರಶಸ್ತಿಗಳ (ಟೈಟಲನ್) ವಿಜೇತ ಪೈಲ್ವಾನರ ನಗದು ಬಹುಮಾನ ಮತ್ತು ಬೆಳ್ಳಿ ಗಧೆಯನ್ನು ನಾಡಾದಿಂದ (NADA) ಉದ್ದೀಪನಾ ಮದ್ದು ಪರೀಕ್ಷೆಯ ವರದಿ ಬಂದ ಮೇಲೆ ಕುಸ್ತಿಪಟುಗಳ ಖಾತೆಗೆ ಜಮಾ ಮಾಡಲಾಗುವುದು.
ಸರ್ಕಾರಿ ಸೇವೆಯಲ್ಲಿರುವ ಕರ್ನಾಟಕ ರಾಜ್ಯದ ಕುಸ್ತಿಪಟುಗಳು ಒಂದು ತೂಕದ ವಿಭಾಗದಲ್ಲಿ ಒಬ್ಬರು ಭಾಗವಹಿಸಬಹುದು. ಕುಸ್ತಿಪಟುಗಳು ಸೇವೆ ಸಲ್ಲಿಸುತ್ತಿರುವ ಇಲಾಖೆಯ ಕ್ರೀಡಾಧಿಕಾರಿಯವರಿಂದ ಅಥವಾ ಇಲಾಖೆಯ ಮುಖ್ಯಸ್ಥರಿಂದ ಸ್ಪರ್ಧೆಯಲ್ಲಿ ಭಾಗವಹಿಸಲು ಒಪ್ಪಿಗೆ ಪತ್ರ ಕಡ್ಡಾಯವಾಗಿ ತರಬೇಕು. ಭಾಗವಹಿಸುವ ಕುಸ್ತಿಪಟುಗಳು ಕರ್ನಾಟಕ ಕುಸ್ತಿ ಹಬ್ಬದ ಕುಸ್ತಿ ಸಮಿತಿಯ ಎಲ್ಲ ನಿಯಮ ಮತ್ತು ನಿರ್ಣಯ, ತೀರ್ಪುಗಳಿಗೆ ಬದ್ಧರಾಗಬೇಕು.ನೋಂದಣಿ: ಫೆ.22ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ ಕರ್ನಾಟಕ ಕಾಲೇಜು ಮೈದಾನದಲ್ಲಿ ಕುಸ್ತಿಪಟುಗಳ ದೇಹ ತೂಕವನ್ನು ತೆಗೆದುಕೊಳ್ಳಲಾಗುವುದು. ವಯೋಮಿತಿಯಲ್ಲಿ ಭಾಗವಹಿಸುವ ಕುಸ್ತಿಪಟುಗಳು ಜನನ ನೋಂದಣಿ ಅಧಿಕಾರಿಗಳಿಂದ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, 4 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಹಾಗೂ ಬ್ಯಾಂಕ್ ಖಾತೆಯ ಪ್ರತಿಯನ್ನು ತರಬೇಕು.ಸಾರಿಗೆ ವ್ಯವಸ್ಥೆ: ಫೆ.22 ಬೆಳಿಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಧಾರವಾಡದ ಕೇಂದ್ರಿಯ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣ ಕರ್ನಾಟಕ ಕಾಲೇಜು ಮೈದಾನದವರೆಗೆ ಕುಸ್ತಿಪಟುಗಳ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ವಿವರಗಳಿಗೆ 94485 90935, 9964245769, 7892042714, 9481966245 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.

ರಾಷ್ಟ್ರೀಯ ಗ್ರಾಹಕರ ದಿನಾಚರಣೆ
ಗ್ರಾಹಕರು ತಮ್ಮ ಹಕ್ಕು ತಿಳಿದುಕೊಳ್ಳಲು ಸಲಹೆ
ಯಾದಗಿರಿ, ಫೆಬ್ರುವರಿ 17 (ಕರ್ನಾಟಕ ವಾರ್ತೆ): ಗ್ರಾಹಕರು ತಾವು ಖರೀದಿಸಿದ ವಸ್ತುವಿನಲ್ಲಿ ಕಂಡುಬರುವ ಅಸಂಪೂರ್ಣತೆ, ಕಳಪೆ ಗುಣಮಟ್ಟ, ಕಡಿಮೆ ಪ್ರಮಾಣ, ಶುದ್ಧತೆಯಲ್ಲಿರುವ ಲೋಪ ಇದ್ದರೆ ಅದಕ್ಕೆ ಕಾರಣವಾಗಿರುವ ವ್ಯಕ್ತಿ ಮತ್ತು ಸಂಸ್ಥೆಯ ವಿರುದ್ಧ ಕಾನೂನಿನ ಮೂಲಕ ಸೂಕ್ತ ಪರಿಹಾರ ಪಡೆಯುವ ಹಕ್ಕು ಗ್ರಾಹಕರಿಗಿದೆ. ಗ್ರಾಹಕರು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಸಲಹೆ ನೀಡಿದರು.ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮತ್ತು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.ಯಾವುದೇ ಗ್ರಾಹಕರು ತಾವು ಪಡೆಯುವ ಸರಕು ಸೇವೆಗಳಲ್ಲಿ ನ್ಯೂನತೆಗಳು ಕಂಡುಬಂದರೆ, ಬೆಲೆಯಲ್ಲಿ ಅಥವಾ ಮೋಸದ ವಹಿವಾಟು ಕಂಡುಬಂದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ಸಲ್ಲಿಸುವ ಮೂಲಕ ಪರಿಹಾರ ಪಡೆಯಬೇಕು. ಇದಕ್ಕೂ ಮೊದಲು ಗ್ರಾಹಕರು ತಾವು ಖರೀದಿಸುವ ವಸ್ತುವಿನ ರಸೀದಿಯನ್ನು ಪಡೆದಿರಬೇಕು. ಅಂದಾಗ ಮಾತ್ರ ಗ್ರಾಹಕರ ವೇದಿಕೆಯಲ್ಲಿ ದೂರು ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.ಪ್ರತಿಯೊಬ್ಬರೂ ಗ್ರಾಹಕರು ಹಾಗೂ ವಿತಕರಾಗಿರುತ್ತಾರೆ. ಮೋಸ ಹೋದಲ್ಲಿ ಎಲ್ಲಿ? ಯಾವ ರೀತಿ ಧ್ವನಿ ಎತ್ತಬೇಕು ಎಂಬುವುದರ ಬಗ್ಗೆ ಮಾಹಿತಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಗ್ರಾಹಕರ ದಿನಾಚರಣೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. 
ಖಾಸಗಿ ಅಂಗಡಿ, ಸರಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸುವ ವಸ್ತುಗಳ ತೂಕದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಲ್ಲ ಅಂಗಡಿಗಳಲ್ಲಿ ಡಿಜಿಟಲ್ ತೂಕದ ಯಂತ್ರವನ್ನು ಅಳಡಿಸಿಕೊಳ್ಳಬೇಕು. ಯಾವುದೇ ಒಂದು ವಸ್ತುವನ್ನು ಖರೀದಿಸುವ ಮುನ್ನ ಆ ವಸ್ತುವಿನ ಉತ್ಪದನಾ ದಿನಾಂಕ, ಅದರ ಮುಕ್ತಾಯ ದಿನಾಂಕವನ್ನು ಅರಿತುಕೊಳ್ಳಬೇಕು. ಇದರಿಂದ ವಸ್ತುವಿನ ಬಳಕೆಯಿಂದಾಗುವ ಅನಾಹುತವನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಅಲ್ಲದೆ ವಸ್ತು ಖರೀದಿಸಿದ ರಸೀದಿ ಇದ್ದರೆ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ಇತ್ತೀಚಿಗೆ ಜಿಲ್ಲೆಯಲ್ಲಿ ನಕಲಿ ಬಿತ್ತನೆ ಬೀಜಗಳ ಮಾರಾಟದ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ ಅರ್ಜುನ ಬನಸೊಡೆ ಅವರು “ಭಾರತೀಯ ಗ್ರಾಹಕರಿಗೆ ಮಹತ್ವದ ತಿರುವು: ಗ್ರಾಹಕ ರಕ್ಷಣಾ ಕಾಯ್ದೆ-2019” ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, 1986ರ ಗ್ರಾಹಕರ ಸಂರಕ್ಷಣಾ ಕಾಯ್ದೆಯಂತೆ ಗ್ರಾಹಕರು ತಾವು ಖರೀದಿಸಿದ ವಸ್ತುವಿನಿಂದ ನಷ್ಟ ಉಂಟಾದರೆ ವ್ಯಾಜ್ಯ ಉಂಟಾದ ದಿನದಿಂದ ಎರಡು ವರ್ಷಗಳ ಒಳಗಾಗಿ ದೂರನ್ನು ಸಲ್ಲಿಸಬಹುದು. ಒಂದು ವೇಳೆ ವಿಳಂಬವಾದರೆ, ವಿಳಂಬಕ್ಕೆ ಕಾರಣ ಸಹಿತವಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರನ್ನು ಸಲ್ಲಿಸುವ ಮೂಲಕ ಪರಿಹಾರವನ್ನು ಪಡೆಯಬಹುದು ಎಂದು ತಿಳಿಸಿದರು.
ಎಲ್ಲಿ ದೂರು ಸಲ್ಲಿಸಬೇಕು?: ಸರಕು ಅಥವಾ ಸೇವೆಗಳ ಮೌಲ್ಯ ಮತ್ತು ಕೇಳಲಾದ ಪರಿಹಾರದ ಮೊತ್ತವು 20 ಲಕ್ಷ ರೂ.ಗಳಿಗಿಂತ ಕಡಿಮೆ ಇದ್ದರೆ ಪ್ರತಿವಾದಿಯು ವಾಸಿಸುವ ಅಥವಾ ಘಟನೆ ನಡೆದ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರನ್ನು ಸಲ್ಲಿಸಬಹುದು. ಕೇಳಲಾದ ಸರಕು-ಸೇವೆಯ ಮೌಲ್ಯ ಮತ್ತು ಕೇಳಲಾದ ಪರಿಹಾರದ ಮೊತ್ತವು 1 ಕೋಟಿ ರೂ. ಹೆಚ್ಚಿದ್ದರೆ ರಾಷ್ಟ್ರೀಯ ಗ್ರಾಹಕರ ರಕ್ಷಣಾ ಆಯೋಗಕ್ಕೆ ದೂರನ್ನು ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.ಮೇಲ್ಮನವಿ ಯಾರಿಗೆ ಮಾಡಬೇಕು?: ಜಿಲ್ಲಾ ಗ್ರಾಹಕರ ವೇದಿಕೆಯ ವಿರುದ್ಧ ತೀರ್ಪು ತಲುಪಿದ 30 ದಿನದೊಳಗಾಗಿ ರಾಜ್ಯ ಆಯೋಗಕ್ಕೆ ಮನವಿ ಮಾಡಬಹುದು. ರಾಜ್ಯ ಆಯೋಗದ ನಿರ್ಣಯದ ವಿರುದ್ಧ ತೀರ್ಪು ತಲುಪಿದ 30 ದಿನದೊಳಗಾಗಿ ರಾಷ್ಟ್ರೀಯ ಆಯೋಗಕ್ಕೆ ಮನವಿ ಮಾಡಬಹುದು. ರಾಷ್ಟ್ರೀಯ ಆಯೋಗದ ತೀರ್ಪಿನ ಮೇಲ್ಮನವಿ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಬಹುದು ಎಂದು ಅವರು ವಿವರಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಅವರು ಮಾತನಾಡಿ, ಪ್ರತಿಯೊಬ್ಬ ಗ್ರಾಹಕ ಯಾವುದೇ ವಸ್ತುವನ್ನು ಖರೀದಿಸುವಾಗ ಸರಕಾರಕ್ಕೆ ತೆರಿಗೆ ಕಟ್ಟುತ್ತಾನೆ. ಗ್ರಾಹಕರು ವಸ್ತುವಿನ ಗುಣಮಟ್ಟವನ್ನು ಅರಿತುಕೊಳ್ಳುವುದು ಅಗತ್ಯವಿದೆ. ಬಹಳಷ್ಟು ಗ್ರಾಹಕರು ತಾವು ಖರೀದಿಸಿದ ವಸ್ತುವಿನ ದೋಷದ ಕುರಿತು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಲು ಬರುತ್ತಾರೆ. ನಮ್ಮಲಿ ದೂರು ಸಲ್ಲಿಸುವುದರಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಕೇವಲ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ. ಆದರೆ ದೂರನ್ನು ಜಿಲ್ಲಾ ಗ್ರಾಹಕರ ರಕ್ಷಣಾ ವೇದಿಕೆಯಲ್ಲಿ ಸಲ್ಲಿಸಿದರೆ ಪರಿಹಾರ ಪಡೆಯುವ ಜೊತೆಗೆ ವಸ್ತುವಿನ ಮಾರಾಟಗಾರನಿಗೆ ಶಿಕ್ಷೆ ಮತ್ತು ದಂಡವನ್ನು ಕೊಡಿಸಬಹುದು ಎಂದು ಹೇಳಿದರು.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆಡಳಿತಾಧಿಕಾರಿ ಪಿ.ಎಸ್.ಅಮರದೀಪ್ ಅವರು ವಿಶೇಷ ಉಪನ್ಯಾಸ ನೀಡಿದರು.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರಾದ ನೆಲ್ದಾಳ ಶರಣಪ್ಪ, ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆಯ ಸದಸ್ಯರಾದ ಅಶೋಕಕುಮಾರ, ನಂದಾ ಈಶ್ವರಚಂದ್ರ ಕೊಲ್ಲುರ್ ಅವರು ಉಪಸ್ಥಿತರಿದ್ದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರಾದ ದತ್ತಪ್ಪ ಕಲ್ಲೂರ್ ಅವರು ಸ್ವಾಗತಿಸಿದರು. ಸುಬಮ ಪದವಿ ಕಾಲೇಜಿನ ಉಪನ್ಯಾಸಕರಾದ ಗುರುಪ್ರಸಾದ ವೈದ್ಯ ನಿರೂಪಿಸಿದರು. ಆಹಾರ ಇಲಾಖೆಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ ವಂದಿಸಿದರು.

ಸೋಮವಾರ, ಫೆಬ್ರವರಿ 17, 2020

ರಾಜಶೇಖರಗೌಡ ಪಾಟೀಲ್ ಅಧ್ಯಕ್ಷತೆಯಲ್ಲಿ ಜಿ.ಪಂ ಸಾಮಾನ್ಯ ಸಭೆ
ಸಮರ್ಪಕ ಅನುಪಾಲನಾ ವರದಿ ಸಲ್ಲಿಕೆಗೆ ಸೂಚನೆ
ಯಾದಗಿರಿ, ಫೆಬ್ರುವರಿ 17 (ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯಿತಿಯ ಕೆ.ಡಿ.ಪಿ ಮತ್ತು ಸಾಮಾನ್ಯ ಸಭೆಗಳಲ್ಲಿ ಚರ್ಚೆ ನಡೆಸಿ ಕೈಗೊಳ್ಳುವ ನಿರ್ಣಯಗಳ ಅನುಸಾರವಾಗಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಸಮರ್ಪಕ ಅನುಪಾಲನಾ ವರದಿಯನ್ನು ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್ ಅವರು ಸೂಚಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಹಿಂದಿನ ಸಭೆಯಲ್ಲಿ ಅಧ್ಯಕ್ಷರು ಸೇರಿದಂತೆ ಸದಸ್ಯರು ಗಮನ ಸೆಳೆದ ವಿಷಯಗಳಿಗೆ ಬಿಇಒ ರವರಿಗೆ ಪತ್ರ ಬರೆಯಲಾಗಿದೆ. ವರದಿ ಪಡೆದು ಸಲ್ಲಿಸಲಾಗುವುದು ಎಂದು ಅನುಪಾಲನಾ ವರದಿಯನ್ನು ನೀಡಲಾಗಿದೆ. ಸೆಪ್ಟೆಂಬರ್ 20ರಂದು ಕಳೆದ ಸಾಮಾನ್ಯ ಸಭೆ ನಡೆದಿದೆ. ಐದು ತಿಂಗಳು ಕಳೆದರೂ ಪತ್ರ ಬರೆಯಲಾಗಿದೆ. ವರದಿ ಪಡೆಯಲಾಗುವುದು ಎಂಬುದಾಗಿ ಅನುಪಾಲನಾ ವರದಿ ನೀಡಿದರೆ ಹೇಗೆ? ಎಂದು ಡಿಡಿಪಿಐ ಶ್ರೀನಿವಾಸರೆಡ್ಡಿ ಅವರನ್ನು ಪ್ರಶ್ನಿಸಿದರು.ಸಭೆಗಳಲ್ಲಿ ಗಮನ ಸೆಳೆಯುವ ವಿಷಯಗಳಿಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಆದರೆ, ಪ್ರತಿ ಸಭೆಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಮತ್ತು ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂಬುದಾಗಿ ಅಧಿಕಾರಿಗಳು ಭರವಸೆ ನೀಡುತ್ತಾರೆ. ಇದರಲ್ಲೇ ಸಭೆ ಮುಕ್ತಾಯವಾಗುತ್ತದೆ. ಮತ್ತೆ ಮುಂದಿನ ಸಭೆಯಲ್ಲಿ ಇದೇ ಭರವಸೆ ಮಾತುಗಳು ಕೇಳಿಬರುತ್ತವೆ. ಹಾಗಾಗಿ, ಕೆಲಸದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ಶಿವಲಿಂಗಪ್ಪ ಪುಟಗಿ, ಬಸರೆಡ್ಡಿಗೌಡ ಮಾಲಿಪಾಟೀಲ್, ಕಿಶನ್ ರಾಠೋಡ್, ಬಸನಗೌಡ ಪಾಟೀಲ್ ಯಡಿಯಾಪುರ, ಅಮರದೀಪ್, ಅನಿತಾಬಾಯಿ ಸುರೇಶ್ ರಾಠೋಡ್, ಶಶಿಕಲಾ ಕ್ಯಾತನಾಳ ಅವರು ಒತ್ತಾಯಿಸಿದರು.ಶಿಕ್ಷಕರ ನೇಮಕಾತಿಗೆ ನಿಯೋಗ: ಜಿಲ್ಲೆಯಾದ್ಯಂತ ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಜಿಲ್ಲೆಯು ಪ್ರತಿ ಬಾರಿ ಕೊನೆಯ ಸ್ಥಾನ ಪಡೆಯುತ್ತಿದೆ. ಮಹತ್ವಾಕಾಂಕ್ಷೆ ಜಿಲ್ಲೆ ಆಗಿರುವುದರಿಂದ ಆದ್ಯತೆಯ ಮೇರೆಗೆ ಜಿಲ್ಲೆಯ ಎಲ್ಲಾ ಹುದ್ದೆಗಳ ಭರ್ತಿಗೆ ಒತ್ತಾಯಿಸಲು ಬೆಂಗಳೂರಿಗೆ ನಿಯೋಗ ತೆರಳಲು ನಿರ್ಣಯ ಕೈಗೊಳ್ಳುವಂತೆ ಸದಸ್ಯರಾದ ಬಸನಗೌಡ ಪಾಟೀಲ್ ಯಡಿಯಾಪುರ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ ಅವರು ಮಾತನಾಡಿ, ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಶಿಕ್ಷಕರ ಕೊರತೆ ಕುರಿತಂತೆ ಗಮನಕ್ಕೆ ತರಲಾಗಿದೆ. ನಿಯೋಗ ಕೂಡ ಹೋದರೆ ಶಿಕ್ಷಕರ ಭರ್ತಿಗೆ ಅನುಕೂಲವಾಗಬಹುದು ಎಂದು ಅಭಿಪ್ರಾಯಪಟ್ಟರು.ಹೊಸ ತಾಲ್ಲೂಕುಗಳಿಗೆ ಅನುದಾನ ಹಂಚಿಕೆ ಮಾಡಬೇಕು. ಸೋರುವ ಶಾಲೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸದಸ್ಯರಾದ ಶಿವಲಿಂಗಪ್ಪ ಪುಟಗಿ ಅವರು ಒತ್ತಾಯಿಸಿದರೆ, ಹುಣಸಗಿಯಲ್ಲಿ ಬಿಇಒ ಕಚೇರಿಯನ್ನು ಕಾರ್ಯಗತಗೊಳಿಸುವಂತೆ ಸದಸ್ಯರಾದ ಬಸವರಾಜ ಸ್ಥಾವರಮಠ ಅವರು ಮನವಿ ಮಾಡಿದರು.ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ಅವರು ಮಾತನಾಡಿ, ಜಿಲ್ಲೆಯ ಅವಶ್ಯವಿರುವ ಎಲ್ಲಾ ಶಾಲೆಗಳಿಗೆ ಪ್ಲೇಟು ಮತ್ತು ಗ್ಲಾಸ್‍ಗಳನ್ನು ಖರೀದಿ ಮಾಡಬೇಕು. ಅಕ್ಷರ ದಾಸೋಹ ಮತ್ತು ಕ್ಷೀರಭಾಗ್ಯ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ನಿಯಮಾನುಸಾರ ಖರ್ಚು ಮಾಡಬೇಕು. ವಯಸ್ಕರ ಶಿಕ್ಷಣ ಇಲಾಖೆಗೆ ನಿಗದಿಪಡಿಸಿದ ಗುರಿಯನ್ನು ಅನುಷ್ಠಾನಗೊಳಿಸಬೇಕು. ಕಷ್ಟ ಪರಿಸ್ಥಿತಿಯಲ್ಲಿರುವ ಕ್ರೀಡಾಪಟುಗಳು ಮತ್ತು ಕುಸ್ತಿ ಪಟುಗಳಿಗೆ ಆರ್ಥಿಕ ನೆರವು ನೀಡಬೇಕು. ಅದರಂತೆ ಕ್ರೀಡಾ ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು ಮತ್ತು ಶುಶ್ರೂಷಕರ ನೇಮಕಾತಿಗಾಗಿ ಕ್ರಮ ಕೈಗೊಳ್ಳಬೇಕು. ಬಿಪಿಎಲ್ ಕುಟುಂಬಗಳು 5 ಲಕ್ಷ ರೂ. ಹಾಗೂ ಎಪಿಎಲ್ ಕುಟುಂಬಗಳು 1.5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಪಡೆಯಲು ಸಾರ್ವಜನಿಕರು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ಮಾಡಿಸಬೇಕು. ಇದಕ್ಕಾಗಿ ಹೆಚ್ಚಿನ ಜಾಗೃತಿ ಮೂಡಿಸಿ ಎಂದು ಅವರು ನಿರ್ದೇಶಿಸಿದರು.
ಬಾಣಂತಿಯರಿಗೆ ಆಹಾರ ವಿತರಿಸಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಾಣಂತಿ ಮತ್ತು ಅವರ ಜೊತೆಗಿರುವ ಒಬ್ಬರಿಗೆ ಬಿಸಿಯೂಟ ನೀಡಬೇಕು. ಆದರೆ, ಜಿಲ್ಲೆಯ ಯಾವ ಆಸ್ಪತ್ರೆಗಳಲ್ಲೂ ಇದನ್ನು ಪಾಲಿಸುತ್ತಿಲ್ಲ. ಇದಕ್ಕೆ ಮೀಸಲಿರುವ ಅನುದಾನ ವಾಪಸ್ ಹೋಗದಂತೆ ಕ್ರಮ ಕೈಗೊಳ್ಳಲು ಸದಸ್ಯರಾದ ಶಿವಲಿಂಗಪ್ಪ ಪುಟಗಿ ಅವರು ಒತ್ತಾಯಿಸಿದರು.
ಡಿಎಚ್‍ಒ ಡಾ.ಎಂ.ಎಸ್.ಪಾಟೀಲ್ ಅವರು ಮಾತನಾಡಿ, ಜಿಲ್ಲೆಯಲ್ಲಿ ವರ್ಷಕ್ಕೆ ಸುಮಾರು 34 ಸಾವಿರ ಹೆರಿಗೆ ಆಗುತ್ತವೆ. ಬಾಣಂತಿ ಮತ್ತು ಇವರ ಜೊತೆಗಿರುವ ಒಬ್ಬ ಸಹಾಯಕರಿಗೆ ಎರಡು ದಿನ ಊಟ ಕೊಡಬೇಕಿದೆ. ಇದಕ್ಕಾಗಿ ಒಂದು ದಿನಕ್ಕೆ ಒಬ್ಬ ಬಾಣಂತಿಗೆ 100 ರೂ. ಅನುದಾನ ಇರುತ್ತದೆ. ಆದರೆ, ಸ್ಥಳೀಯ ಖಾನಾವಳಿ ಅಥವಾ ಹೋಟೆಲ್‍ನವರು ಊಟ ನೀಡಲು ಮುಂದೆ ಬರುತ್ತಿಲ್ಲ ಎಂಬುದಾಗಿ ತಿಳಿಸಿದರು.ಸದಸ್ಯರಾದ ಬಸನಗೌಡ ಪಾಟೀಲ್ ಯಡಿಯಾಪುರ ಅವರು ಮಾತನಾಡಿ, ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಶಿಶುಗಳ ಸಾವಿನ ಸಂಖ್ಯೆ ವರದಿ ನೀಡಬೇಕು ಮತ್ತು ಕಿರದಳ್ಳಿಯಲ್ಲಿ ಅರ್ಸೇನಿಕ್ ನೀರಿನ ಬಳಕೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಜಿಲ್ಲಾ ಪಂಚಾಯಿತಿಯ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಮಾ.21ರಂದು ಮೊಬೈಲ್, ವಾಹನ ಹರಾಜು
ಯಾದಗಿರಿ, ಫೆಬ್ರುವರಿ 17 (ಕರ್ನಾಟಕ ವಾರ್ತೆ): ಸುರಪುರದ ಸಿವಿಲ್ ನ್ಯಾಯಾಧೀಶರ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳವರ ನ್ಯಾಯಾಲಯದ ವಿವಿಧ ಪ್ರಕರಣಗಳಲ್ಲಿನ ಮೊಬೈಲ್‍ಗಳ ಸಾರ್ವಜನಿಕ ಹರಾಜು ಪ್ರಕ್ರಿಯೆಯನ್ನು ಮಾರ್ಚ್ 21ರಂದು ಬೆಳಿಗ್ಗೆ 10.30 ಗಂಟೆಗೆ ಮತ್ತು ವಾಹನಗಳ ಹರಾಜು ಪ್ರಕ್ರಿಯೆಯನ್ನು ಬೆಳಿಗ್ಗೆ 11 ಗಂಟೆಗೆ ಕೋರ್ಟ್ ಆವರಣದಲ್ಲಿ ನಡೆಸಲಾಗುತ್ತಿದ್ದು, ಆಸಕ್ತ ಸಾರ್ವಜನಿಕರು ಹರಾಜಿನಲ್ಲಿ ಭಾಗವಹಿಸಬಹುದು ಎಂದು ಸಿವಿಲ್ ನ್ಯಾಯಾಧೀಶರಾದ ಶ್ರೀ ಅಮರನಾಥ ಬಿ.ಎನ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.20ರಂದು ಸಂತಕವಿ ಸರ್ವಜ್ಞ ಜಯಂತಿ
ಯಾದಗಿರಿ, ಫೆಬ್ರುವರಿ 17 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶ್ರೀ ಸಂತಕವಿ ಸರ್ವಜ್ಞ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಶ್ರೀ ಸಂತಕವಿ ಸರ್ವಜ್ಞ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮವನ್ನು ಫೆಬ್ರುವರಿ 20ರಂದು ಬೆಳಿಗ್ಗೆ 11 ಗಂಟೆಗೆ ಯಾದಗಿರಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಪಶುಸಂಗೋಪನೆ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿಧಾನಸಭಾ ಸದಸ್ಯರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ, ಡಾ.ಉಮೇಶ ಜಿ.ಜಾಧವ ಅವರು ಅತಿಥಿಗಳಾಗಿ ಆಗಮಿಸುವರು.
ವಿಧಾನಸಭಾ ಸದಸ್ಯರಾದ ಶರಣಬಸಪ್ಪಗೌಡ ದರ್ಶನಾಪೂರ, ನರಸಿಂಹ ನಾಯಕ (ರಾಜುಗೌಡ), ನಾಗನಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯರಾದ ಶರಣಪ್ಪ ಮಟ್ಟೂರ, ಡಾ.ಚಂದ್ರಶೇಖರ ಪಾಟೀಲ, ಬಿ.ಜಿ.ಪಾಟೀಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಭೀಮವ್ವ ಮಲ್ಲೇಶಪ್ಪ ಅಚ್ಚೋಲಾ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಬಾಚವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಬಂಗಾರಪ್ಪ ಕುಂಬಾರ ಯರಗೋಳ ಅವರು ವಿಶೇಷ ಉಪನ್ಯಾಸ ನೀಡುವರು.

ಫೆ.21ರಂದು ದಲಿತ ವಚನಕಾರರ ಜಯಂತಿ
ಯಾದಗಿರಿ, ಫೆಬ್ರುವರಿ 17 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶ್ರೀ ದಲಿತ ವಚನಕಾರರ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಶ್ರೀ ದಲಿತ ವಚನಕಾರರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಕಾರ್ಯಕ್ರಮವನ್ನು ಫೆಬ್ರುವರಿ 21ರಂದು ಬೆಳಿಗ್ಗೆ 11 ಗಂಟೆಗೆ ಯಾದಗಿರಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಪಶುಸಂಗೋಪನೆ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿಧಾನಸಭಾ ಸದಸ್ಯರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ, ಡಾ.ಉಮೇಶ ಜಿ.ಜಾಧವ ಅವರು ಅತಿಥಿಗಳಾಗಿ ಆಗಮಿಸುವರು.
ವಿಧಾನಸಭಾ ಸದಸ್ಯರಾದ ಶರಣಬಸಪ್ಪಗೌಡ ದರ್ಶನಾಪೂರ, ನರಸಿಂಹ ನಾಯಕ (ರಾಜುಗೌಡ), ನಾಗನಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯರಾದ ಶರಣಪ್ಪ ಮಟ್ಟೂರ, ಡಾ.ಚಂದ್ರಶೇಖರ ಪಾಟೀಲ, ಬಿ.ಜಿ.ಪಾಟೀಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಭೀಮವ್ವ ಮಲ್ಲೇಶಪ್ಪ ಅಚ್ಚೋಲಾ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಸುಬಮ ಪದವಿ ಪೂರ್ವ ಕಾಲೇಜಿನ ಗುರುಪ್ರಸಾದ ವೈದ್ಯ ಅವರು ವಿಶೇಷ ಉಪನ್ಯಾಸ ನೀಡುವರು.

ಶನಿವಾರ, ಫೆಬ್ರವರಿ 15, 2020

ನಾಳೆ ರಾಷ್ಟ್ರೀಯ ಗ್ರಾಹಕರ ದಿನಾಚರಣೆ
ಯಾದಗಿರಿ, ಫೆಬ್ರುವರಿ 15 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮತ್ತು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಫೆಬ್ರುವರಿ 17ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ ಅರ್ಜುನ ಬನಸೊಡೆ ಅವರು ಕರಪತ್ರ ಬಿಡುಗಡೆ ಮಾಡುವರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರಾದ ನೆಲ್ಹಾಳ್ ಶರಣಪ್ಪ ಅವರು ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯರಾದ ಅಶೋಕ ಕುಮಾರ, ನಂದಾ ಈಶ್ವರಚಂದ್ರ ಕೊಲುರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆಡಳಿತಾಧಿಕಾರಿ ಪಿ.ಎಸ್.ಅಮರದೀಪ್ ಅವರು ವಿಶೇಷ ಉಪನ್ಯಾಸ ನೀಡುವರು.

ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಯಾದಗಿರಿ, ಫೆಬ್ರುವರಿ 15 (ಕರ್ನಾಟಕ ವಾರ್ತೆ): ಐಸಿಐಸಿಐ ಅಕಾಡೆಮಿ ಫಾರ್ ಸ್ಕಿಲ್ಸ್, ಐಸಿಐಸಿಐ ಫೌಂಡೇಶನ್ ಬೆಂಗಳೂರು ಸಂಸ್ಥೆ ವತಿಯಿಂದ ಬ್ಯಾಂಕಿಂಗ್ ಸಾಫ್ಟ್‍ವೇರ್‍ಗೆ ಸಂಬಂಧಿಸಿದಂತೆ ಆಫೀಸ್ ಅಡ್ಮಿನಿಸ್ಟ್ರೇಶನ್ ಮತ್ತು ರಿಟೈಲ್ ಸೇಲ್ಸ್ ಕೋರ್ಸ್‍ಗಳಿಗೆ ಬೆಂಗಳೂರು ಹಾಗೂ ಮೈಸೂರಿನಲ್ಲಿ 3 ತಿಂಗಳ ಉಚಿತ ತರಬೇತಿ ನೀಡಲು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ, ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತರಬೇತಿ ವೇಳೆ ಎರಡು ಜೊತೆ ಸಮವಸ್ತ್ರ, ಒಂದು ಹೊತ್ತಿನ ಊಟವನ್ನು ಸಂಸ್ಥೆಯಿಂದ ನೀಡಲಾಗುತ್ತಿದ್ದು, ತರಬೇತಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪ್ರತಿ ಮಾಹೆ ವಸತಿ ವೆಚ್ಚವಾಗಿ 5000 ರೂ.ಗಳನ್ನು ಅಭ್ಯರ್ಥಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. 10ನೇ ತರಗತಿಯಿಂದ ಪದವಿ ವಿದ್ಯಾರ್ಹತೆ ಹೊಂದಿರುವ 18ರಿಂದ 30 ವಯೋಮಿತಿಯವರು ಅರ್ಜಿ ಸಲ್ಲಿಸಬಹುದು. ಸ್ಪೋಕನ್ ಇಂಗ್ಲಿಷ್, ಕಂಪ್ಯೂಟರ್, ಬೇಸಿಕ್ ಜಿಎಸ್‍ಟಿ, ಟ್ಯಾಲಿ ಮತ್ತು ಅಕೌಂಟ್ಸ್, ಬ್ಯಾಂಕಿಂಗ್, ಸಂವಹನ ಮತ್ತು ವ್ಯಕ್ತಿತ್ವ ವಿಕಸನ ಕೌಶಲ, ಜೀವನ ಕೌಶಲ, ಸಂದರ್ಶನ ಕೌಶಲ, ಗ್ರಾಹಕರ ಸೇವೆ, ರಿಟೇಲ್ ಸೇಲ್ಸ್ ಇತಿಕ್ವಿಟಿ ಮತ್ತು ಗ್ರೂಮಿಂಗ್ ಸ್ಟ್ಯಾಂಡಡ್ರ್ಸ್ ವಿಷಯಗಳಡಿ ತರಬೇತಿ ನೀಡಿ ಉದ್ಯೋಗಾವಕಾಶವನ್ನು ಸಹ ಒದಗಿಸಲು ಕ್ರಮವಹಿಸಲಾಗುವುದು.
ಅರ್ಹ ಅಭ್ಯರ್ಥಿಗಳು ಯಾದಗಿರಿ ಜಿಲ್ಲಾಡಳಿತ ಭವನದ ಎರಡನೇ ಮಹಡಿಯಲ್ಲಿರುವ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಿಂದ ಅರ್ಜಿ ಪಡೆದು ಫೆಬ್ರುವರಿ 20ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ:08473 253271, ಬೆಂಗಳೂರಿನ ದೊಮ್ಮನಹಳ್ಳಿಯ ಮಧು ಮೊ:9611075559 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶುಕ್ರವಾರ, ಫೆಬ್ರವರಿ 14, 2020

ಸುರಪುರ ಮೀಸಲು ಕ್ಷೇತ್ರದಲ್ಲಿ ಆರೋಗ್ಯ ಕಾರ್ಯಕ್ರಮಗಳ ಪ್ರಚಾರಕ್ಕೆ 6.30 ಲಕ್ಷ ರೂ. ನಿಗದಿ
ದೇವರಗೋನಾಲದಲ್ಲಿ ಆರೋಗ್ಯ ಮೇಳ ಆಯೋಜನೆಗೆ ನಿರ್ಣಯ
ಯಾದಗಿರಿ, ಫೆಬ್ರುವರಿ 15 (ಕರ್ನಾಟಕ ವಾರ್ತೆ): ಪರಿಶಿಷ್ಟ ಪಂಗಡದ ಜನರು ಅತಿ ಹೆಚ್ಚಾಗಿರುವ ಸುರಪುರ ಮೀಸಲು ವಿಧಾಸಭಾ ಕ್ಷೇತ್ರದ ದೇವರಗೋನಾಲ ಗ್ರಾಮದಲ್ಲಿ ಆರೋಗ್ಯ ಮೇಳ ಆಯೋಜಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆ ನಿರ್ಣಯಿಸಿತು. ಜಿಲ್ಲಾ ಪಂಚಾಯಿತಿಯ ತಮ್ಮ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿಇಒ ಶಿಲ್ಪಾ ಶರ್ಮಾ ಅವರು, 2019-20ನೇ ಸಾಲಿನಲ್ಲಿ ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಮತ್ತು ಬುಡಕಟ್ಟು ಜನಸಂಖ್ಯೆ ಜಾಸ್ತಿ ಇರುವ 51 ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ/ ಯೋಜನೆಗಳ ಅರಿವು ಮೂಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯವು ಸೂಚಿಸಿದೆ. ನಮ್ಮ ಜಿಲ್ಲೆಯ ಸುರಪುರ ಮೀಸಲು ವಿಧಾಸಭಾ ಕ್ಷೇತ್ರವನ್ನು ಆಯ್ಕೆ ಮಾಡಲಾಗಿದ್ದು, ಈ ಸಂಬಂಧ ಜಿಲ್ಲೆಗೆ 6.30 ಲಕ್ಷ ರೂ. ಅನುದಾನ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಒಟ್ಟು 6.30 ಲಕ್ಷ ರೂ. ಅನುದಾನ ಪೈಕಿ 2.50 ಲಕ್ಷ ರೂ.ಗಳಲ್ಲಿ ಆರೋಗ್ಯ ಮೇಳವನ್ನು ಮಾರ್ಚ್ 15ರೊಳಗೆ ಆಯೋಜಿಸಬೇಕಿದೆ. ಈ ಅನುದಾನವನ್ನು ಟಿಎಸ್‍ಪಿ ಅಡಿಯಲ್ಲಿ ಖರ್ಚು ಮಾಡಬೇಕಿದ್ದು, ಪರಿಶಿಷ್ಟ ಪಂಗಡದ ಜನರು ಅತಿ ಹೆಚ್ಚಾಗಿರುವ ದೇವರಗೋನಾಲದಲ್ಲಿ ಆರೋಗ್ಯ ಮೇಳ ನಡೆಸುವುದು ಸೂಕ್ತ. ಮೇಳದಲ್ಲಿ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕು. ಅಲ್ಲದೆ, ಆರೋಗ್ಯ ಮೇಳದಲ್ಲಿ ಆರೋಗ್ಯ ಇಲಾಖೆಯ ಯೋಜನೆಗಳ ಕುರಿತು ವಸ್ತು ಪ್ರದರ್ಶನ ಏರ್ಪಾಡು ಹಾಗೂ ಸಂಬಂಧಪಟ್ಟ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅವರು ಸೂಚಿಸಿದರು.
ಆರೋಗ್ಯ ಮೇಳದಲ್ಲಿ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಆರೋಗ್ಯ ಕಾರ್ಡ್‍ಗಳ ವಿತರಣೆಗೆ ಕೌಂಟರ್ ತೆರೆಯಬೇಕು. ಅನೀಮಿಯಾ ಮುಕ್ತ ಭಾರತ, ಪೋಷಣ್ ಅಭಿಯಾನದ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮೇಳ ಆಯೋಜನೆ ಬಗ್ಗೆ ಗ್ರಾಮದಲ್ಲಿ ಡಂಗೂರ ಸಾರಬೇಕು. ಇನ್ನು ಪರಿಶಿಷ್ಟ ಪಂಗಡದ ಜನರು ಅತಿ ಹೆಚ್ಚಾಗಿರುವ 25 ಗ್ರಾಮಗಳಲ್ಲಿ ಗೋಡೆ ಬರಹಗಳನ್ನು ಬರೆಸಬೇಕು. ಪ್ರತಿ ಗೋಡೆ ಬರಹಕ್ಕೆ 2 ಸಾವಿರ ರೂ. ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು. ಎಸ್‍ಸಿಪಿ ಅಡಿಯಲ್ಲಿ 10 ತಾತ್ಕಾಲಿಕ ಹೋರ್ಡಿಂಗ್ಸ್‍ಗಳ ಸ್ಥಾಪನೆ ಹಾಗೂ ಫ್ಲೆಕ್ಸ್ ಮುದ್ರಿಸಿ ಅಳವಡಿಸುವುದು, 30 ಜನಪದ ಕಲಾ ಪ್ರದರ್ಶನ, 20 ತಾಯಂದಿರ ಸಭೆ ಹಾಗೂ ಪೌಷ್ಟಿಕ ಆಹಾರದ ಪ್ರಾತ್ಯಕ್ಷಿತೆ ಶಬಿರಗಳನ್ನು ಆಯೋಜಿಸಲು ಸೂಚಿಸಲಾಗಿದೆ. ಪ್ರತಿ ಹೋರ್ಡಿಂಗ್ಸ್/ ಫ್ಲೆಕ್ಸ್‍ಗೆ 12,000 ರೂ., ಪ್ರತಿ ಜನಪದ ಕಲಾ ಪ್ರದರ್ಶನಕ್ಕೆ 5,000 ರೂ., ಪ್ರತಿ ತಾಯಂದಿರ ಸಭೆಗೆ 3,000 ರೂ.ಗಳಂತೆ ಅನುದಾನ ನಿಗದಿಯಾಗಿದೆ. ಅನುದಾನಕ್ಕೆ ಅನುಗುಣವಾಗಿ ಪರಿಶಿಷ್ಟ ಜಾತಿ ಜನಾಂಗದವರು ಹೆಚ್ಚಾಗಿರುವ ಗ್ರಾಮಗಳನ್ನು ಆಯ್ಕೆ ಮಾಡಿ ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಅವರು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಭು ದೊರೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿದ್ದನಗೌಡ ಬಿರಾದಾರ ಅವರು ಸಭೆಯಲ್ಲಿ ಹಾಜರಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...