ಶಿಕ್ಷಕರ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಅವಕಾಶ
ಯಾದಗಿರಿ, ಜನವರಿ ೩೧ (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಜನವರಿ ೧೬ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದ್ದು, ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಇನ್ನೂ ಅವಕಾಶ ಇರುತ್ತದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಮತದಾರರ ಪಟ್ಟಿಗಳ ನಿರಂತರ ಕಾಲೋಚಿತಗೊಳಿಸಲು ಪ್ರಜಾ ಪ್ರಾತಿನಿಧ್ಯ ಕಾಯ್ದೆ ೧೯೫೦ರ ಕಲಂ ೨೨ ಮತ್ತು ೨೩ರಡಿ ನಾಮಪತ್ರಗಳ ಸ್ವೀಕೃತಿಯ ಕೊನೆಯ ದಿನಾಂಕದವರೆಗೆ ಹೆಸರು ಸೇರ್ಪಡೆಗೆ ಅವಕಾಶಗಳಿದ್ದು, ಮತದಾರರ ಯಾದಿಯಲ್ಲಿ ಹೆಸರು ಸೇರಿಸಲು ಶಿಕ್ಷಕರ ಮತಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ನಮೂನೆ- ೧೯ರಲ್ಲಿ ದ್ವೀಪ್ರತಿಯಲ್ಲಿ ಸಂಬAಧಿಸಿದ ನೋಂದಣಾಧಿಕಾರಿಗಳಿಗೆ, ನಿರ್ದಿಷ್ಟ ಅಧಿಕಾರಿಗಳಿಗೆ ಅವಶ್ಯಕ ದಾಖಲಾತಿಗಳೊಂದಿಗೆ ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.
ಗರ್ಭಿಣಿ, ಬಾಣಂತಿಯರು ಸೌಲಭ್ಯ ಪಡೆಯಲು ಸಲಹೆ
ಯಾದಗಿರಿ, ಜನವರಿ ೩೧ (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ “ಮುಖ್ಯಮಂತ್ರಿ ಮಾತೃಶ್ರೀ” ಯೋಜನೆ ಮತ್ತು “ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ” ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯ ನಾಲ್ಕೂ ಶಿಶು ಅಭಿವೃದ್ಧಿ ಯೋಜನೆಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಅರ್ಹ ಫಲಾನುಭವಿಗಳು ಸೌಲಭ್ಯ ಪಡೆದುಕೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಭಾಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಬಿ.ಪಿ.ಎಲ್./ಎ.ಪಿ.ಎಲ್ ಕುಟುಂಬದ ಮೊದಲ ಪ್ರಸವದ ಗರ್ಭಿಣಿ/ಬಾಣಂತಿ ಮಹಿಳೆಯರಿಗೆ ನೀಡುವ ಸೌಲಭ್ಯವಾಗಿದ್ದು ೫,೦೦೦ ರೂ.ಗಳನ್ನು ಮೂರು ಕಂತುಗಳಲ್ಲಿ ಫಲಾನುಭವಿಗಳ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.
ರಾಜ್ಯ ಸರ್ಕಾರವು ೨೦೧೮-೧೯ನೇ ಸಾಲಿನ ಆಯ-ವ್ಯಯದಲ್ಲಿ ಘೋಷಿಸಿರುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಗರ್ಭಿಣಿ ಮತ್ತು ಬಾಣಂತಿಯರ ಪೌಷ್ಟಿಕ ಮತ್ತು ಆರೋಗ್ಯದ ಮಟ್ಟವನ್ನು ಸುಧಾರಿಸಲು “ಮುಖ್ಯಮಂತ್ರಿ ಮಾತೃಶ್ರೀ” ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ (ಬಿ.ಪಿ.ಎಲ್. ಕುಟುಂಬ) ಗರ್ಭಿಣಿ ಹಾಗೂ ಬಾಣಂತಿ (ಮೊದಲ ಎರಡು ಜೀವಂತ ಹೆರಿಗೆಗೆ ಮಾತ್ರ) ಮಹಿಳೆಯರಿಗೆ ೬,೦೦೦ ರೂ.ಗಳ ನೇರ ನಗದು ವರ್ಗಾವಣೆ ಸೌಲಭ್ಯ ಒದಗಿಸಲಿದೆ. ಹೆರಿಗೆ ಪೂರ್ವದ ಕಡೆಯ ೩ ತಿಂಗಳು ಹಾಗೂ ಬಾಣಂತಿಯರಿಗೆ ಹೆರಿಗೆ ನಂತರದ ೩ ತಿಂಗಳ ಕಾಲ ಮಾಸಿಕ ೧,೦೦೦ ರೂ.ಗಳನ್ನು ಅವರ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು. ಸದರಿ ಯೋಜನೆಯು ಮೊದಲ ಎರಡು ಮಕ್ಕಳಿಗೆ ಅನ್ವಯವಾಗುತ್ತದೆ. ಎಲ್.ಎಂ.ಪಿ. ದಿನಾಂಕ:೦೧-೦೫-೨೦೧೮ರ ನಂತರದ ಹಾಗೂ ಹೆರಿಗೆ ದಿನಾಂಕ:೦೧-೧೧-೨೦೧೮ರ ನಂತರದ ಗರ್ಭಿಣಿ ಹಾಗೂ ಬಾಣಂತಿಯರು ಈ ಯೋಜನೆ ಸೌಲಭ್ಯ ಪಡೆಯಬಹುದಾಗಿದೆ.
ಸೌಲಭ್ಯಗಳನ್ನು ಪಡೆಯಲಿಚ್ಛಿಸುವ ಅರ್ಹರು ನಿಗದಿತ ನಮೂನೆಯನ್ನು ಸಮೀಪದ ಅಂಗನವಾಡಿ ಕೇಂದ್ರಗಳಿAದ ಉಚಿತವಾಗಿ ಪಡೆದು, ಅಗತ್ಯ ದಾಖಲಾತಿಗಳೊಂದಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸಲ್ಲಿಸಲು ಅವರು ಕೋರಿದ್ದಾರೆ.
ಜಿಲ್ಲೆಯಲ್ಲಿ ೩೫ ತೊಗರಿ ಖರೀದಿ ಕೇಂದ್ರಗಳ ಸ್ಥಾಪನೆ
ತೊಗರಿ ಖರೀದಿಗೆ ರೈತರ ನೋಂದಣಿ ಅವಧಿ ವಿಸ್ತರಣೆ
ಯಾದಗಿರಿ, ಜನವರಿ ೩೧ (ಕರ್ನಾಟಕ ವಾರ್ತೆ): ೨೦೧೯-೨೦ನೇ ಸಾಲಿನ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಕಾಳನ್ನು ಖರೀದಿಸಲು ಜಿಲ್ಲೆಯಲ್ಲಿ ಒಟ್ಟು ೩೫ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರ ನೋಂದಣಿ ಅವಧಿಯನ್ನು ಫೆಬ್ರುವರಿ ೮ರ ವರೆಗೆ ವಿಸ್ತರಿಸಲಾಗಿದೆ ಎಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರಾದ ಭೀಮರಾಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೋಂದಣಿ ಮಾಡಿದ ರೈತರ ತೊಗರಿಯನ್ನು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಎಫ್.ಪಿ.ಓ.ಗಳ ಮುಖಾಂತರ ತೊಗರಿ ಖರೀದಿಸಲಾಗುವುದು. ಪ್ರತಿ ಕ್ವಿಂಟಲ್ ತೊಗರಿಗೆ ಸರ್ಕಾರದ ಬೆಂಬಲ ಬೆಲೆ ೬,೧೦೦ ರೂ. ಇದ್ದು, ಪ್ರತಿಯೊಬ್ಬ ರೈತರಿಂದ ಎಕೆರೆಗೆ ೫ ಕ್ವಿಂಟಲ್‌ನAತೆ ಗರಿಷ್ಠ ೧೦ ಕ್ವಿಂಟಲ್ ಖರೀದಿಸಲಾಗುವುದು. ಜಿಲ್ಲೆಯಲ್ಲಿ ಯಾದಗಿರಿ, ರಾಮಸಮುದ್ರ, ಸೈದಾಪೂರ, ಗುರುಮಠಕಲ್, ಕೊಂಕಲ್, ಚಪೇಟ್ಲಾ, ಗಣಪೂರ, ಹತ್ತಿಕುಣಿ, ಅಲ್ಲಿಪುರ, ಯಲ್ಹೇರಿ, ಅನಪೂರ, ಯರಗೋಳ, ಪುಟಪಾಕ್, ಶಹಾಪೂರ, ರಸ್ತಾಪುರ, ಬೆಂಡೆಬೆAಬಳಿ, ಗಂಗನಾಳ, ಚಾಮನಾಳ, ಹೈಯಾಳ್, ದೋರನಹಳ್ಳಿ, ಶಿರವಾಳ, ಟೊಕಾಪೂರ, ಹೊಸಕೇರಾ, ಮದ್ರಿಕಿ, ಸುರಪುರ, ಏವೂರು, ಯಾಳಗಿ, ಕಕ್ಕೇರಾ, ಕೊಡೇಕಲ್, ನಗನೂರು, ಮಾಲಗತ್ತಿ, ರಾಜನಕೋಳೂರು, ಹುಣಸಗಿ, ಕೆಂಭಾವಿ-೧ ಮತ್ತು ಕೆಂಭಾವಿ-೨ರಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ರೈತ ಬಾಂಧವರು ಕೊನೆಯ ದಿನಾಂಕದವರೆಗೆ ಕಾಯದೆ ಹತ್ತಿರದ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಒಬ್ಬ ರೈತ ಒಂದೇ ಅರ್ಜಿಯನ್ನು ಖರೀದಿ ಕೇಂದ್ರಕ್ಕೆ ತರಬೇಕು ಮತ್ತು ಸರತಿ ಸಾಲಿನಲ್ಲಿ ಬಂದು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಅವರು ಕೋರಿದ್ದಾರೆ.
ಶಿಕ್ಷಕರ ಬಡ್ತಿಗೆ ಪ್ರಸ್ತಾವನೆ ಆಹ್ವಾನ
ಯಾದಗಿರಿ, ಜನವರಿ ೩೧ (ಕರ್ನಾಟಕ ವಾರ್ತೆ): ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತರಬೇತಿ ಹೊಂದಿದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-೧ ಇವರಿಗೆ ಕ್ರಮವಾಗಿ ಪ್ರೌಢ ಶಾಲಾ ಸಹ ಶಿಕ್ಷಕರು ಗ್ರೇಡ್-೨ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-೧ ಹುದ್ದೆಗೆ ೨೦೧೫ನೇ ಬ್ಲಾಕ್ ಅವಧಿಯಿಂದ ೨೦೧೯ನೇ ಬ್ಲಾಕ್ ಅವಧಿಗೆ ಆಯಾ ವರ್ಷದ ಅಂದರೆ ಜನವರಿಯಿಂದ ಡಿಸೆಂಬರ್ ಅಂತ್ಯದಲ್ಲಿ ಬಿ.ಇಡಿ/ಬಿ.ಪಿ.ಇಡಿ ಉತ್ತೀರ್ಣರಾವ ಜೇಷ್ಠತಾ ಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ಅರ್ಹ ಶಿಕ್ಷಕರಿಂದ ಫೆಬ್ರುವರಿ ೧೦ರೊಳಗೆ ಪ್ರಸ್ತಾವನೆ ಆಹ್ವಾನಿಸಲಾಗಿದೆ.
ಆಯಾ ಬ್ಲಾಕ್ ಅವಧಿಗೆ ಅಂದರೆ ದಿನಾಂಕ ೧-೧-೨೦೧೫ರಿಂದ ೩೧-೧೨-೨೦೧೫ರ ವರೆಗೆ ೨೦೧೫ನೇ ಬ್ಲಾಕ್ ಅವಧಿ, ಅದರಂತೆ ೨೦೧೬ನೇ, ೨೦೧೭ನೇ, ೨೦೧೮ನೇ ಮತ್ತು ೨೦೧೯ನೇ ಬ್ಲಾಕ್ ಅವಧಿಯ ಮಧ್ಯದಲ್ಲಿ ಬಿ.ಇಡಿ/ಬಿ.ಪಿ.ಇಡಿ ವಿದ್ಯಾರ್ಹತೆಯನ್ನು ಹೊಂದಿರುವ ಶಿಕ್ಷಕರು ಮಾತ್ರ ಪ್ರಸ್ತಾವನೆಯನ್ನು ಸಲ್ಲಿಸಬಹುದು. ನೇಮಕಾತಿ ನಿಯಮ ೨೦೧೬ರನ್ವಯ ಸಂಬAಧಪಟ್ಟ ಬೋಧನಾ ವಿಷಯದನÀ್ವಯ ಜೇಷ್ಠತಾ ಪಟ್ಟಿಗೆ ತಮ್ಮ ಹೆಸರು ಸೇರಿಸಲು ನಿಗಧಿತ ನಮೂನೆ ಹಾಗೂ ಸಲ್ಲಿಸಬೇಕಾದ ದಾಖಲೆಗಳ ಚೆಕ್ ಲಿಸ್ಟ್ ಅನ್ನು ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಬೇಕು. (೧.ಪ್ರಸ್ತಾವನೆ ನಮೂನೆ ೨.ನೇಮಕಾತಿ ಆದೇಶ ಪ್ರತಿ. ೩.ಪರಿವೀಕ್ಷಣಾ ಅವಧಿ ಘೋಷಣೆಯಾದ ಜ್ಞಾಪನ ಪತ್ರದ ಪ್ರತಿ. ೪.ಎಸ್.ಎಸ್.ಎಲ್.ಸಿ ಅಂಕಪಟ್ಟಿ ಪ್ರತಿ. ೫.ಪಿ.ಯು.ಸಿ ದ್ವಿತೀಯ ವರ್ಷದ ಅಂಕಪಟ್ಟಿ ಪ್ರತಿ. ೬.ಪದವಿ ವಿದ್ಯಾರ್ಹತೆ ದೃಢೀಕೃತ ಪ್ರತಿಗಳು ಪಾಸಿಂಗ್ ಪ್ರಮಾಣ ಪತ್ರ ಪ್ರತಿಯೊಂದಿಗೆ. ೭.ಬಿ.ಇ.ಡಿ/ ಬಿ.ಪಿ.ಇಡಿ ವಿದ್ಯಾರ್ಹತೆ ದೃಢೀಕೃತ ಪ್ರತಿಗಳು ಪಾಸಿಂಗ್ ಪ್ರಮಾಣ ಪತ್ರ ಪ್ರತಿಯೊಂದಿಗೆ. ೮.ಬಿ.ಎ ಅಥವಾ ಬಿ.ಇಡಿ ರೆಗ್ಯುಲರ್ ಅಭ್ಯರ್ಥಿಯಾಗಿ ವ್ಯಾಸಂಗ ಮಾಡಿದ್ದಲ್ಲಿ ಇಲಾಖೆಯಿಂದ ನೀಡಿದ ಅನುಮತಿ ಪತ್ರ. ೯.ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಯಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಪ್ರತಿ. ೧೦.ಕಲ್ಯಾಣ-ಕರ್ನಾಟಕ ಪ್ರದೇಶದ ಸ್ಥಳೀಯ ಅಭ್ಯರ್ಥಿಗಳಿಗೆ ನೀಡಿದ ಸ್ವಗ್ರಾಮ ಪ್ರಮಾಣ ಪತ್ರದ ಪ್ರತಿ ಅನುಬಂಧ-ಎ ಮತ್ತು ಶಿಕ್ಷಕರು ಸಲ್ಲಿಸಿದ ಇಚ್ಛಾ ಪತ್ರ “ಸಿ” ೧೧.ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಆಯ್ಕೆಯಾದ ಅಂತಿಮ ಆಯ್ಕೆ ಪಟ್ಟಿಯಲ್ಲಿ ಹೆಸರು ಶಿಕ್ಷಕರ ಇರುವ ಸಂಬAಧಿಸಿದ ಪುಟದ ದೃಢೀಕೃತ ಪ್ರತಿ) ನಂತರ ಸಲ್ಲಿಸಲಾಗುವ ಪ್ರಸ್ತಾವನೆ ಸ್ವೀಕರಿಸುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ