ಮಂಗಳವಾರ, ಜನವರಿ 21, 2020


ಕೆಕೆಆರ್‌ಡಿಬಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ
ಜ.೩೧ರೊಳಗೆ ಪೂರ್ಣಗೊಳಿಸದ ಕಾಮಗಾರಿಗಳಿಗೆ ಅನುದಾನ ಇಲ್ಲ
-ಸುಬೋಧ್ ಯಾದವ್
ಯಾದಗಿರಿ, ಜನವರಿ ೨೧ (ಕರ್ನಾಟಕ ವಾರ್ತೆ): ೨೦೧೪-೧೫ನೇ ಸಾಲಿನಿಂದ ೨೦೧೭-೧೮ನೇ ಸಾಲಿನ ಕಾಮಗಾರಿಗಳನ್ನು ಜನವರಿ ೩೧ರೊಳಗೆ ಪೂರ್ಣಗೊಳಿಸಬೇಕು. ಈ ಅವಧಿಯಲ್ಲಿ ಪೂರ್ಣಗೊಳಿಸದ ಕಾಮಗಾರಿಗಳಿಗೆ ಮಂಡಳಿಯಿAದ ಅನುದಾನ ನೀಡುವುದಿಲ್ಲ ಎಂದು ಪ್ರಾದೇಶಿಕ ಆಯುಕ್ತರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗಳಾದ ಸುಬೋಧ್ ಯಾದವ್ ಅವರು ತಿಳಿಸಿದರು.  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಡಿ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿAದ ಜಿಲ್ಲೆಯಲ್ಲಿ ೨೦೧೪-೧೫ನೇ ಸಾಲಿನಿಂದ ೨೦೧೭-೧೮ನೇ ಸಾಲಿನವರೆಗೆ ಒಟ್ಟು ೧,೫೬೨ ಕಾಮಗಾರಿಗಳನ್ನು ಕೈಗೊಂಡಿದ್ದು, ಈ ಪೈಕಿ ೧,೪೩೨ ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನೂ ೧೩೦ ಕಾಮಗಾರಿಗಳು ಬಾಕಿ ಇದ್ದು, ಬಾಕಿಗಿಂತ ಹೆಚ್ಚಿನ ಕಾಮಗಾರಿಗಳ ಆರ್ಥಿಕ ಪ್ರಗತಿ ಕೂಡ ಸಾಧಿಸಿಲ್ಲ. ಈ ಕಾಮಗಾರಿಗಳನ್ನು ಇನ್ನು ೧೦ ದಿನಗಳಲ್ಲಿ ಪೂರ್ಣಗೊಳಿಸಿ, ವರದಿ ಸಲ್ಲಿಸದಿದ್ದಲ್ಲಿ ಮಂಡಳಿಯಿAದ ಅನುದಾನ ನೀಡುವುದಿಲ್ಲ ಎಂಬುದಾಗಿ ಅವರು ಸ್ಪಷ್ಟಪಡಿಸಿದರು.
ಕೆಆರ್‌ಐಡಿಎಲ್ ಇಂಜಿನೀಯರ್‌ಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರಾದೇಶಿಕ ಆಯುಕ್ತರು, ಒಂದು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ೪ ವರ್ಷಗಳು ಬೇಕೆ? ಎಂದು ಪ್ರಶ್ನಿಸಿದರು. ಇಂಜಿನೀಯರ್‌ಗಳು ಸರಿಯಾಗಿ ಕೆಲಸ ಮಾಡಿದರೆ ೬ ತಿಂಗಳಲ್ಲಿ ಒಂದು ಕಾಮಗಾರಿ ಪೂರ್ಣಗೊಳಿಸಬಹುದು. ನಿರ್ಲಕ್ಷö್ಯ ಮುಂದುವರೆದರೆ ಸಂಬAಧಪಟ್ಟ ಇಂಜಿನೀಯರ್‌ಗಳು ಪ್ರತಿ ಕಾಮಗಾರಿಯಂತೆ ದಂಡ ಪಾವತಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ ಮತ್ತು ಪೂರ್ಣಗೊಂಡಿರುವುದಾಗಿ ವಿವಿಧ ಇಲಾಖೆಯ ಇಂಜಿನೀಯರ್‌ಗಳು ಪ್ರತಿ ಸಭೆಯಲ್ಲಿ ಸಮಜಾಯಿಷಿ ನೀಡುತ್ತಿರುವಿರಿ. ಆದರೆ, ಕೆಲವು ಕಾಮಗಾರಿಗಳ ಆರ್ಥಿಕ ಪ್ರಗತಿ ಅನೇಕ ತಿಂಗಳುಗಳಿAದ ಶೂನ್ಯ ಇದೆ. ಭೌತಿಕ ಪ್ರಗತಿಗೆ ತಕ್ಕಂತೆ ಆರ್ಥಿಕ ಪ್ರಗತಿ ಕೂಡ ಸಾಧಿಸಬೇಕು. ಕೆಕೆಆರ್‌ಡಿಬಿಗೆ ನಿಯಮಾನುಸಾರ ಬಿಲ್ ಸಲ್ಲಿಸಿದರೆ ಒಂದೇ ದಿನದಲ್ಲಿ ಹಣ ಪಾವತಿಸಲಾಗುತ್ತದೆ. ಪ್ರತಿ ಬಿಲ್ ಜೊತೆಗೆ ಮೂರನೇ ತನಿಖಾ ತಂಡದ ವರದಿ ಕೂಡ ಇರಬೇಕು ಎಂದು ಅವರು ನಿರ್ದೇಶಿಸಿದರು. “ನಮ್ಮ ಹೊಲ ನಮ್ಮ ದಾರಿ” ಅಡಿ ೪ ಕಾಮಗಾರಿಗಳನ್ನು ಪೂರ್ಣಗೊಳಿಸಿದರೂ ಆರ್ಥಿಕ ಪ್ರಗತಿ ಶೂನ್ಯ ಇದೆ. ಮಂಡಳಿ ಸುತ್ತೋಲೆಯನ್ವಯ ಕೆಲಸ ನಿರ್ವಹಿಸಿದ ಗುತ್ತಿಗೆದಾರರಿಗೆ ಹಣ ನೀಡುವಂತೆ ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಅಧಿಕಾರಿಗಳಿಗೆ ಕಳೆದ ಸಭೆಯಲ್ಲಿ ತಾಕೀತು ಮಾಡಿದರೂ ಕ್ರಮ ವಹಿಸಿಲ್ಲ. ಆದೇಶ ಪಾಲಿಸುವಲ್ಲಿ ನಿರ್ಲಕ್ಷö್ಯ ವಹಿಸಿದ ವಿಭಾಗದ ಸಂಬAಧಪಟ್ಟ ಅಧಿಕಾರಿಗೆ ಅಮಾನತು ಮಾಡಲು ಸೂಚಿಸಿದರು.
೨೦೨೦-೨೧ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಪ್ರಸಕ್ತ ವರ್ಷಕ್ಕಿಂತ ಶೇ.೩೩ರಷ್ಟು ಹೆಚ್ಚು ಅನುದಾನ ಹಂಚಿಕೆ ಇರುತ್ತದೆ. ಈ ಬಗ್ಗೆ ಸದ್ಯದಲ್ಲಿ ಮಂಡಳಿಯಿAದ ಸೂಕ್ತ ನಿರ್ದೇಶನ ನೀಡಲಾಗುವುದು. ಸಂಬAಧಪಟ್ಟ ಇಲಾಖೆಯ ಇಂಜಿನೀಯರ್‌ಗಳು ಅನುದಾನಕ್ಕೆ ತಕ್ಕಂತೆ ಕಾಮಗಾರಿಗಳ ಕ್ರಿಯಾಯೋಜನೆ ಸಿದ್ಧತೆ ಮಾಡಿಕೊಳ್ಳುವಂತೆ ಅವರು ತಿಳಿಸಿದರು. ಜಿಲ್ಲಾ ಆಸ್ಪತ್ರೆಗೆ ಶುದ್ಧ ಕುಡಿಯುವ ನೀರಿನ ಘಟಕ, ಯಂತ್ರೋಪಕರಣ ಹಾಗೂ ಪೀಠೋಪಕರಣಗಳ ಸರಬರಾಜಿಗೆ ಸೆಪ್ಟೆಂಬರ್ ತಿಂಗಳಲ್ಲಿಯೆ ಟೆಂಡರ್ ಕರೆಯಲಾಗಿದೆ. ಆದರೆ, ಇದುವರೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ತಕ್ಷಣ ಇದರ ಆರ್ಥಿಕ ಬಿಡ್ ತೆರೆದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಜಿಲ್ಲಾ ಶಸ್ತçಚಿಕಿತ್ಸಕರಿಗೆ ಅವರು ತಾಕೀತು ಮಾಡಿದರು. ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸುನೀಲ್ ಬಿಸ್ವಾಸ್, ಕೆಕೆಆರ್‌ಡಿಬಿ ಸುಪರಿಂಟೆAಡೆಟ್ ಇಂಜಿನೀಯರ್ ಶಿವಶಂಕರಪ್ಪ ಗುರಗುಂಟಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು, ಇಂಜಿನೀಯರ್‌ಗಳು ಸಭೆಯಲ್ಲಿ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...