ಶುಕ್ರವಾರ, ಜನವರಿ 24, 2020

ಇಂದು ರಸ್ತೆ ಅಡಿಗಲ್ಲು ಸಮಾರಂಭ
ಯಾದಗಿರಿ, ಜನವರಿ ೨೪ (ಕರ್ನಾಟಕ ವಾರ್ತೆ): ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ೨೦೧೯-೨೦ನೇ ಸಾಲಿನ ಎಸ್.ಡಿ.ಪಿ (ಟಿ.ಎಸ್.ಪಿ) ಯೋಜನೆಯಡಿಯಲ್ಲಿ ಯಾದಗಿರಿ ತಾಲ್ಲೂಕಿನ ವೆಂಕಟೇಶ ನಗರದಿಂದ ವಡ್ನಳ್ಳಿ ಗ್ರಾಮದವರೆಗೆ ಕಿ.ಮೀ ೧.೫೦ರಿಂದ ೨.೫೦ರವರೆಗೆ (ಕೆಲಸದ ಭಾಗ ಕಿ.ಮೀ ೦.೪೦ರಿಂದ ೧.೯೦ರವರೆಗೆ) ರಸ್ತೆ ಸುಧಾರಣೆ (೧೧೦ ಲಕ್ಷ ರೂ.) ಹಾಗೂ ೨೦೧೯-೨೦ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಮೈಕ್ರೋ) ಯೋಜನೆಯಡಿಯಲ್ಲಿ ಯಾಗಗಿರಿ ತಾಲ್ಲೂಕಿನ ವಡ್ನಳ್ಳಿಯಿಂದ ಮುನ್ಸಿ ತಾಂಡಾದವರೆಗೆ ಡಾಂಬರೀಕರಣ ನಿರ್ಮಾಣ ಕಾಮಾಗಾರಿಯ (೯೫ ಲಕ್ಷ ರೂ.) ಅಡಿಗಲ್ಲು ಸಮಾರಂಭವನ್ನು ಜನವರಿ ೨೫ರಂದು ಬೆಳಿಗ್ಗೆ ೧೧ ಗಂಟೆಗೆ ವಡ್ನಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಪಶುಸಂಗೋಪನೆ, ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ಹಜ್ ಮತ್ತು ವಕ್ಫ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ಶಿಲಾನ್ಯಾಸ ನೆರವೇರಿಸುವರು. ಶಾಸಕರಾದ ನಾಗನಗೌಡ ಕಂದಕೂರ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಲೋಕಸಭಾ ಸದಸ್ಯರಾದ ಡಾ.ಉಮೇಶ ಜಾಧವ್, ವಿಧಾನ ಪರಿಷತ್ ಸದಸ್ಯರಾದ ಶರಣಪ್ಪ ಮಟ್ಟೂರ, ಡಾ.ಚಂದ್ರಶೇಖರ ಬಿ.ಪಾಟೀಲ್, ಬಿ.ಜಿ.ಪಾಟೀಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಭೀಮವ್ವ ಮಲ್ಲೇಶಪ್ಪ ಅಚ್ಚೋಲಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರೇಮಕುಮಾರ ಚವ್ಹಾಣ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅನಿತಾಬಾಯಿ ಸುರೇಶ್ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು.

ನಾಳೆ ಗಣರಾಜ್ಯೋತ್ಸವ ದಿನಾಚರಣೆ
ಯಾದಗಿರಿ, ಜನವರಿ ೨೪ (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ ಹಾಗೂ ಭಾವೈಕ್ಯತಾ ಸಮಿತಿ ಸಂಯುಕ್ತಾಶ್ರಯದಲ್ಲಿ ೭೧ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಜನವರಿ ೨೬ರಂದು ಬೆಳಿಗ್ಗೆ ೯ ಗಂಟೆಗೆ ಯಾದಗಿರಿ ನಗರದ ಜಿಲ್ಲಾ ಕ್ರಿಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ರಾಷ್ಟç ಧ್ವಜಾರೋಹಣ ನೆರವೇರಿಸುವರು. ವಿಧಾನಸಭಾ ಸದಸ್ಯರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ ವಜ್ಜಲ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ, ಡಾ.ಉಮೇಶ ಜಿ. ಜಾಧವ್ ಅವರು ಅತಿಥಿಗಳಾಗಿ ಭಾಗವಹಿಸುವರು.
ವಿಧಾನಸಭಾ ಸದಸ್ಯರಾದ ಶರಣಬಸಪ್ಪಗೌಡ ದರ್ಶನಾಪುರ, ನರಸಿಂಹ ನಾಯಕ(ರಾಜುಗೌಡÀ), ನಾಗನಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯರಾದ ಶರಣಪ್ಪ ಮಟ್ಟೂರ, ಡಾ.ಚಂದ್ರಶೇಖರ ಪಾಟೀಲ್, ಬಿ.ಜಿ.ಪಾಟೀಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಭೀಮವ್ವ ಮಲ್ಲೇಶಪ್ಪ ಅಚ್ಚೋಲಾ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.

ನಾಳೆಯಿಂದ ಫಲಪುಷ್ಪ ಪ್ರದರ್ಶನ, ಸಿರಿಧಾನ್ಯ ಮೇಳ
ಯಾದಗಿರಿ, ಜನವರಿ ೨೪ (ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯಿತಿ, ತೋಟಗಾರಿಕೆ, ಕೃಷಿ ಹಾಗೂ ಕೃಷಿ ಸಂಬAಧಿತ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಫಲ ಪುಷ್ಪ ಪ್ರದರ್ಶನ ಹಾಗೂ ಸಾವಯವ ಸಿರಿಧಾನ್ಯ ಮೇಳ-೨೦೨೦ ವನ್ನು ಜನವರಿ ೨೬ ಮತ್ತು ೨೭ರಂದು ಯಾದಗಿರಿ ನಗರದ ಸ್ಟೇಷನ್ ರಸ್ತೆ ಮಾರ್ಗದಲ್ಲಿರುವ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಜನವರಿ ೨೬ ಬೆಳಿಗ್ಗೆ ೧೧ ಗಂಟೆಗೆ ಪಶುಸಂಗೋಪನೆ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಉದ್ಘಾಟಿಸುವರು. ವಿಧಾನಸಭಾ ಸದಸ್ಯರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಲೋಕಸಭಾ ಸದಸ್ಯರಾದ ಡಾ.ಉಮೇಶ ಜಿ.ಜಾಧವ, ರಾಜಾ ಅಮರೇಶ್ವರ ನಾಯಕ, ವಿಧಾನಸಭಾ ಸದಸ್ಯರಾದ ಶರಣಬಸಪ್ಪಗೌಡ ದರ್ಶನಾಪೂರ, ನರಸಿಂಹ ನಾಯಕ (ರಾಜುಗೌಡ), ನಾಗನಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯರಾದ ಶರಣಪ್ಪ ಮಟ್ಟೂರ, ಡಾ.ಚಂದ್ರಶೇಖರ ಪಾಟೀಲ, ಬಿ.ಜಿ.ಪಾಟೀಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಭೀಮವ್ವ ಮಲ್ಲೇಶಪ್ಪ ಅಚ್ಚೋಲಾ ಅವರು ಗೌರವಾನ್ವಿತ ಅತಿಥಿಗಳಾಗಿ ಆಗಮಿಸುವರು.
ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ರಾಜೇಂದ್ರಕುಮಾರ ಕಠಾರಿಯ, ತೋಟಗಾರಿಕೆ ಇಲಾಖೆ ನಿರ್ದೇಶಕರಾದ ಬಿ.ವೆಂಕಟೇಶ, ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ತಾಳೆ ಬೆಳೆ ಯೋಜನೆ ಹಾಗೂ ತೋಟಗಾರಿಕೆ ಅಪರ ನಿರ್ದೇಶಕರಾದ ಡಾ.ಪ್ರಕಾಶ ಎಂ.ಸೋಬರದ್, ರಾಷ್ಟಿçÃಯ ತೋಟಗಾರಿಕೆ ಮಿಷನ್ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕರಾದ ಕೆ.ಎಂ.ಪರಶಿವಮೂರ್ತಿ, ಹನಿ ನಿರಾವರಿ ಹಾಗೂ ಜಿಲ್ಲಾ ನೋಡಲ್ ಅಧಿಕಾರಿಗಳಾದ ಕದ್ರೆಗೌಡ, ತೋಟಗಾರಿಕೆ ವಿಭಾಗೀಯ ಜಂಟಿ ನಿರ್ದೇಶಕರಾದ ಎಸ್.ಬಿ.ದಿಡ್ಡಿಮನಿ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.

ಜ.೨೮ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ
ಯಾದಗಿರಿ, ಜನವರಿ ೨೪ (ಕರ್ನಾಟಕ ವಾರ್ತೆ): ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ವಿವಿಧ ಕಂಪನಿಗಳಿAದ ಉದ್ಯೋಗವನ್ನು ಕಲ್ಪಿಸಲು ಒಂದು ದಿನದ ನೇರ ಸಂದರ್ಶನವನ್ನು ಜನವರಿ ೨೮ರಂದು ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ಜಿಲ್ಲಾಡಳಿತ ಭವನದ ೨ನೇ ಮಹಡಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.
೧)ವಾಯಾ ಫೀನ್‌ಸರ್ವ್ ಪ್ರೆöÊ.ಲಿ.ನ ೨೫ ಸಂಘಮಿತ್ರ ಫೀಲ್ಡ್ ಆಫೀಸರ್ ಖಾಲಿ ಹುದ್ದೆಗಳಿಗೆ ೧೦ನೇ, ಪಿಯುಸಿ, ಯಾವುದೇ ಪದವಿ ಪೂರ್ಣಗೊಳಿಸಿರಬೇಕು. ಯಾದಗಿರಿ, ಕಲಬುರಗಿ ಕೆಲಸ ನಿರ್ವಹಿಸುವ ಸ್ಥಳಗಳಾಗಿದ್ದು, ಪುರುಷರಿಗೆ ಮಾತ್ರ ಅವಕಾಶ ಇರುತ್ತದೆ. ೨) ಸ್ವತಂತ್ರ ಮೈಕ್ರೋಫಿನ್ ಪ್ರೆöÊ.ಲಿ.ನ ೪೦ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಪಿಯುಸಿ ಪಾಸಾಗಿರಬೇಕು. ಬ್ರಾಂಚ್ ಆಪರೇಷನ್ ಮ್ಯಾನೇಜರ್-೫ ಹುದ್ದೆ, ಬ್ರಾಂಚ್ ಮ್ಯಾನೇಜರ್-೫ ಹುದ್ದೆ, ಸ್ವತಂತ್ರ ರಿಸ್ಕ್ ಆಫೀಸರ್-೫ ಹುದ್ದೆಗಳಿಗೆ ಯಾವುದೇ ಪದವಿ ಪಾಸಾಗಿರಬೇಕು. ಯಾದಗಿರಿ, ಕಲಬುರಗಿ, ಬೀದರ್, ರಾಯಚೂರು, ವಿಜಯಪೂರ ಕೆಲಸ ನಿರ್ವಹಿಸುವ ಸ್ಥಳಗಳಾಗಿವೆ. ೩) ಕಿಸಾನ್ ಕ್ರಾಫ್ಟ್ ಆಗ್ರೋ ಫರ್ಟಿಲೈಜರ್ ಪ್ರೆöÊ.ಲಿ ಕಲಬುರಗಿ ೨೫ ಫೀಲ್ಡ್ ಅಸಿಸ್ಟಂಟ್ ಹುದ್ದೆಗಳಿಗೆ ಡಿಪ್ಲೋಮಾ ಅಗ್ರಿಕಲ್ಚರ್ ಅಥವಾ ಯಾವುದೇ ಪದವಿ ಪಾಸಾಗಿರಬೇಕು. ಯಾದಗಿರಿ, ಕಲಬುರಗಿ, ರಾಯಚೂರು, ಬೀದರ್ ಕೆಲಸ ನಿರ್ವಹಿಸುವ ಸ್ಥಳಗಳಾಗಿವೆ. ೪) ಭಾರತ್ ಫೈನಾನ್ಸಿಯಲ್ ಇನ್‌ಕ್ಲೂಷನ್ ಲಿ.ನ ೫೦ ಫೀಲ್ಡ್ ಅಸಿಸ್ಟಂಟ್ ಹುದ್ದೆಗಳಿಗೆ ೧೦ನೇ, ೧೨ನೇ, ಯಾವುದೇ ಪದವಿ  ವಿದ್ಯಾರ್ಹತೆ ಇರಬೇಕು. ಪುರುಷರು ಮಾತ್ರ. ಯಾದಗಿರಿ, ರಾಯಚೂರು, ಬಳ್ಳಾರಿ ಕೆಲಸ ನಿರ್ವಹಿಸುವ ಸ್ಥಳಗಳಾಗಿವೆ.
ನೇರ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ವ್ಯಕ್ತಿ ಪರಿಚಯ (ರೆಸ್ಯುಮ್/ಬಯೋಡಾಟಾ) ಪತ್ರದ ಪ್ರತಿಗಳನ್ನು ಹಾಗೂ ವಿದ್ಯಾರ್ಹತೆ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರದ ಪ್ರತಿಗಳು ಹಾಗೂ ೨ ಭಾವಚಿತ್ರ, ಆಧಾರ್ ಕಾರ್ಡ ಕಡ್ಡಾಯವಾಗಿ ತರಬೇಕು. ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಥವಾ ದೂ:೦೮೪೭೩-೨೫೩೭೧೮, ಮೊ:೯೪೪೮೨೫೦೮೬೮ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಪಲ್ಸ್ ಪೋಲಿಯೊದಲ್ಲಿ ಶೇ.೧೦೦.೮ರಷ್ಟು ಸಾಧನೆ
ಯಾದಗಿರಿ, ಜನವರಿ ೨೪ (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಜನವರಿ ೧೯ರಿಂದ ೨೨ರವರೆಗೆ ನಡೆದ ರಾಷ್ಟಿçÃಯ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಒಟ್ಟು ೧,೬೩,೨೩೧ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದ್ದು, ಒಟ್ಟಾರೆ ಶೇ.೧೦೦.೮ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್ ಮತ್ತು ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಲಕ್ಷಿö್ಮÃಕಾಂತ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ೦-೫ ವರ್ಷದೊಳಗಿನ ಒಟ್ಟು ೧,೬೨,೨೫೫ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ೧,೨೯,೯೪೪ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದ್ದು, ಶೇ.೧೦೦.೮ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನು ನಗರ ಪ್ರದೇಶದಲ್ಲಿ ೩೩,೨೮೭ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದ್ದು, ಶೇ.೧೦೦.೫ರಷ್ಟು ಪ್ರಗತಿ ಸಾಧಿಸಲಾಗಿದೆ.
ಯಾದಗಿರಿ ತಾಲ್ಲೂಕಿನಲ್ಲಿ ಒಟ್ಟು ೫೭,೪೧೮ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದ್ದು, ಒಟ್ಟು ಶೇ.೧೦೦.೮ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ಪೈಕಿ ಗ್ರಾಮೀಣ ಪ್ರದೇಶದಲ್ಲಿ ೪೦,೫೧೮ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದ್ದು, ಶೇ.೧೦೧.೯ರಷ್ಟು ಪ್ರಗತಿ ಸಾಧಿಸಲಾಗಿದೆ. ಶಹಾಪೂರ ತಾಲ್ಲೂಕಿನಲ್ಲಿ ಒಟ್ಟು ೪೮,೫೨೯ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದ್ದು, ಶೇ.೧೦೦.೭ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ಪೈಕಿ ಗ್ರಾಮೀಣ ಪ್ರದೇಶದಲ್ಲಿ ೩೯,೧೫೯ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದ್ದು, ಶೇ.೯೯.೩ರಷ್ಟು ಪ್ರಗತಿ ಸಾಧಿಸಲಾಗಿದೆ. ಸುರಪೂರ ತಾಲ್ಲೂಕಿನಲ್ಲಿ ಒಟ್ಟು ೫೭,೨೮೪ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದ್ದು, ಶೇ.೧೦೦.೮ ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ಪೈಕಿ ಗ್ರಾಮೀಣ ಪ್ರದೇಶದಲ್ಲಿ ೫೦,೨೬೭ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದ್ದು, ಶೇ.೧೦೧.೨ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...