ಭಾನುವಾರ, ಜನವರಿ 19, 2020

ಜಿಲ್ಲೆಯಲ್ಲಿ ೩೫ ತೊಗರಿ ಖರೀದಿ ಕೇಂದ್ರಗಳ ಸ್ಥಾಪನೆ
ತೊಗರಿ ಖರೀದಿಗೆ ರೈತರ ನೋಂದಣಿ ಆರಂಭ
ಯಾದಗಿರಿ, ಜನವರಿ ೧೮ (ಕರ್ನಾಟಕ ವಾರ್ತೆ): ೨೦೧೯-೨೦ನೇ ಸಾಲಿನ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಕಾಳನ್ನು ಖರೀದಿಸಲು ಜಿಲ್ಲೆಯಲ್ಲಿ ಒಟ್ಟು ೩೫ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರ ನೋಂದಣಿ ಪ್ರಕ್ರಿಯೆ ಜನವರಿ ೧೬ರಿಂದ ಆರಂಭವಾಗಿದೆ. ರೈತರ ಹೆಸರು ನೋಂದಾಯಿಸಲು ಜನವರಿ ೩೧ ಕೊನೆಯ ದಿನವಾಗಿದೆ ಎಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರಾದ ಭೀಮರಾಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೋಂದಣಿ ಮಾಡಿದ ರೈತರ ತೊಗರಿಯನ್ನು ಫೆಬ್ರುವರಿ ೨೦ರ ವರೆಗೆ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಎಫ್.ಪಿ.ಓ.ಗಳ ಮುಖಾಂತರ ತೊಗರಿ ಖರೀದಿಸಲಾಗುವುದು. ಪ್ರತಿ ಕ್ವಿಂಟಲ್ ತೊಗರಿಗೆ ಸರ್ಕಾರದ ಬೆಂಬಲ ಬೆಲೆ ೬,೧೦೦ ರೂ. ಇದ್ದು, ಪ್ರತಿಯೊಬ್ಬ ರೈತರಿಂದ ಎಕೆರೆಗೆ ೫ ಕ್ವಿಂಟಲ್‌ನAತೆ ಗರಿಷ್ಠ ೧೦ ಕ್ವಿಂಟಲ್ ಖರೀದಿಸಲಾಗುವುದು. ಜಿಲ್ಲೆಯಲ್ಲಿ ಯಾದಗಿರಿ, ರಾಮಸಮುದ್ರ, ಸೈದಾಪೂರ, ಗುರುಮಠಕಲ್, ಕೊಂಕಲ್, ಚಪೇಟ್ಲಾ, ಗಣಪೂರ, ಹತ್ತಿಕುಣಿ, ಅಲ್ಲಿಪುರ, ಯಲ್ಹೇರಿ, ಅನಪೂರ, ಯರಗೋಳ, ಪುಟಪಾಕ್, ಶಹಾಪೂರ, ರಸ್ತಾಪುರ, ಬೆಂಡೆಬೆAಬಳಿ, ಗಂಗನಾಳ, ಚಾಮನಾಳ, ಹೈಯಾಳ್, ದೋರನಹಳ್ಳಿ, ಶಿರವಾಳ, ಟೊಕಾಪೂರ, ಹೊಸಕೇರಾ, ಮದ್ರಿಕಿ, ಸುರಪುರ, ಏವೂರು, ಯಾಳಗಿ, ಕಕ್ಕೇರಾ, ಕೊಡೇಕಲ್, ನಗನೂರು, ಮಾಲಗತ್ತಿ, ರಾಜನಕೋಳೂರು, ಹುಣಸಗಿ, ಕೆಂಭಾವಿ-೧ ಮತ್ತು ಕೆಂಭಾವಿ-೨ರಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ರೈತ ಬಾಂಧವರು ಕೂಡಲೇ ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ಕೃಷಿ ಇಲಾಖೆಯು ನೀಡುವ ಫ್ರೂಟ್ಸ್ (ಈಖUIಖಿS) ಐಡಿ ಮತ್ತು ಆಧಾರ್ ಕಾರ್ಡ್ ಝರಾಕ್ಸ್ ಪ್ರತಿಯನ್ನು ನೀಡಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಒಬ್ಬ ರೈತ ಒಂದೇ ಅರ್ಜಿಯನ್ನು ಖರೀದಿ ಕೇಂದ್ರಕ್ಕೆ ತರಬೇಕು ಮತ್ತು ಸರತಿ ಸಾಲಿನಲ್ಲಿ ಬಂದು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...