ಬುಧವಾರ, ಜನವರಿ 22, 2020

ಸಾರಿಗೆ ಸಂಸ್ಥೆಯಿAದ ಸಹಾಯವಾಣಿ ಆರಂಭ
ಯಾದಗಿರಿ, ಜನವರಿ ೨೨ (ಕರ್ನಾಟಕ ವಾರ್ತೆ): ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ೯ ವಿಭಾಗ ಮತ್ತು ಕೇಂದ್ರ ಕಚೇರಿಯಲ್ಲಿ ಸಂಸ್ಥೆಗೆ ಸಂಬAಧಪಟ್ಟ ಕುಂದು ಕೊರತೆಗಳ ನಿವಾರಣೆಗಾಗಿ ೨೪*೭ ನಿಯಂತ್ರಣ ಕೊಠಡಿ ಕಂ. ಸಹಾಯವಾಣಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
ಕೇAದ್ರ ಕಚೇರಿ ದೂರವಾಣಿ ಸಂಖ್ಯೆ: ೬೩೬೬೪೨೩೮೭೮, ಕಲಬುರಗಿ ವಿಭಾಗ-೧ ೬೩೬೬೪೨೩೮೭೯, ಕಲಬುರಗಿ ವಿಭಾಗ-೨ ೬೩೬೬೪೨೩೮೮೦, ಯಾದಗಿರಿ ೬೩೬೬೪೨೩೮೮೨, ಬೀದರ್ ೬೩೬೬೪೨೩೮೮೧, ರಾಯಚೂರು ೬೩೬೬೪೨೩೮೮೩, ಕೊಪ್ಪಳ ೬೩೬೬೪೨೩೮೮೪, ಬಳ್ಳಾರಿ ೬೩೬೬೪೨೩೮೮೫, ಹೊಸಪೇಟೆ ೬೩೬೬೪೨೩೮೮೬, ವಿಜಯಪುರ ೬೩೬೬೪೨೩೮೮೭ ಈ ಸಂಖ್ಯೆಗಳಿಗೆ ಸಾರ್ವಜನಿಕರು ಸಾರಿಗೆ ಸಂಸ್ಥೆಗೆ ಸಂಬAಧಪಟ್ಟ ಕುಂದು ಕೊರತೆಗಳಿದ್ದಲ್ಲಿ ಎಸ್‌ಎಂಎಸ್ ಅಥವಾ ವಾಟ್ಸ್ಆ್ಯಪ್ ಮಾಡಬಹುದು ಎಂದು ಅಪರ ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ.೨೬ರಿಂದ ಫಲಪುಷ್ಪ ಪ್ರದರ್ಶನ, ಸಿರಿಧಾನ್ಯ ಮೇಳ
ಯಾದಗಿರಿ, ಜನವರಿ ೨೨ (ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯಿತಿ, ತೋಟಗಾರಿಕೆ, ಕೃಷಿ ಹಾಗೂ ಕೃಷಿ ಸಂಬAಧಿತ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಫಲ ಪುಷ್ಪ ಪ್ರದರ್ಶನ ಹಾಗೂ ಸಾವಯವ ಸಿರಿಧಾನ್ಯ ಮೇಳ-೨೦೨೦ ವನ್ನು ಜನವರಿ ೨೬ ಮತ್ತು ೨೭ರಂದು ಯಾದಗಿರಿ ನಗರದ ಸ್ಟೇಷನ್ ರಸ್ತೆ ಮಾರ್ಗದಲ್ಲಿರುವ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫಲ ಪುಷ್ಪ ಪ್ರದರ್ಶನ ಹಾಗೂ ಸಾವಯವ ಸಿರಿಧಾನ್ಯ ಮೇಳಗಳ ಕಾರ್ಯಕ್ರಮದಡಿ ಇಲಾಖೆ ವತಿಯಿಂದ ರೈತರು ಬೆಳೆದಿರುವ ವಿವಿಧ ನಮೂನೆಯ ಹೂವು, ಹಣ್ಣು ಮತ್ತು ತರಕಾರಿ ಪ್ರದರ್ಶಿಸಲಾಗುವುದು. ಮಿನಿ ವಿಧಾನಸೌಧ ಎದುರುಗಡೆ ಹೂವಿನಿಂದ ಸಂವಿಧಾನ ಅರ್ಪಣೆ ಮಾಡುವ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಮೂರ್ತಿ ನಿರ್ಮಿಸಲಾಗುವುದು. ಹಣ್ಣು ಮತ್ತು ತರಕಾರಿಗಳಿಂದ ವಿವಿಧ ರೀತಿಯ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಯಲ್ಲಿ ಬೆಳೆದಿರುವ ವಿವಿಧ ಜಾತಿಯ ಹಣ್ಣಿನ ಮತ್ತು ಅಲಂಕಾರಿಕ ಸಸ್ಯಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಸರ್ಕಾರ ನಿಗದಿಪಡಿಸಿದ ಅತೀ ಕಡಿಮೆ ದರದಲ್ಲಿ ಮಾರಾಟಕ್ಕೆ ಇಡಲಾಗುವುದು. ತುಂತುರು ಮತ್ತು ಸೂಕ್ಷö್ಮ ಹನಿ ನೀರಾವರಿ ಹಾಗೂ ಜಲ ಕೃಷಿ ಅಳವಡಿಕೆ ಪದ್ಧತಿ ಕುರಿತು ತಾಂತ್ರಿಕವಾಗಿ ರೈತರಿಗೆ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...