ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪ್ರಾಜೆಕ್ಟ್ಗಳ ಸ್ಪರ್ಧೆಗೆ ಚಾಲನೆ
ಮಕ್ಕಳು ವೈಜ್ಞಾನಿಕ ಕ್ಷೇತ್ರದತ್ತ ಮುಖ ಮಾಡಲು ಪ್ರೋತ್ಸಾಹಿಸಿ
-ಶಿವಲಿಂಗಪ್ಪ ಪುಟಗಿ
ಯಾದಗಿರಿ, ಜನವರಿ ೨೨ (ಕರ್ನಾಟಕ ವಾರ್ತೆ): ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ವೈಜ್ಞಾನಿಕ ಪ್ರತಿಭೆಯನ್ನು ಗುರುತಿಸಿ ಅವರ ಆವಿಷ್ಕಾರ, ಪ್ರಯೋಗಗಳಿಗೆ ಪ್ರೋತ್ಸಾಹ ನೀಡಬೇಕು. ವೈಜ್ಞಾನಿಕ ಕ್ಷೇತ್ರದತ್ತ ಮುಖ ಮಾಡುವ ನಿಟ್ಟಿನಲ್ಲಿ ಬೋಧನೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಿವಲಿಂಗಪ್ಪ ಪುಟಗಿ ಅವರು ಸಲಹೆ ನೀಡಿದರು.
ನಗರದ ಚಿತ್ತಾಪುರ ರಸ್ತೆ ಮಾರ್ಗದಲ್ಲಿರುವ ಆದರ್ಶ ವಿದ್ಯಾಲಯದಲ್ಲಿ ಬುಧವಾರ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ೨೦೧೯-೨೦ನೇ ಸಾಲಿನ ಜಿಲ್ಲಾ ಮಟ್ಟದ ಇನ್‌ಸ್ಪೆöÊರ್ ಅವಾರ್ಡ್ (ಮಾನಕ್) ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪ್ರಾಜೆಕ್ಟ್ಗಳ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಉನ್ನತ ಸ್ಥಾನ ಹೊಂದಿದೆ. ದಿನನಿತ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಿರಂತರ ಆವಿಷ್ಕಾರಗಳು ನಡೆಯುತ್ತಿವೆ. ಭಾರತದ ಕ್ಷಿಪಣಿತಜ್ಞ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ವಿದ್ಯಾರ್ಥಿಗಳು ಅವರ ಜೀವನ ಸಾಧನೆಗಳನ್ನು ತಿಳಿದುಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಹೇಳಿದರು.
ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ನಿರ್ಮಾಣವಾಗಲು ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಅವಶ್ಯವಾಗಿವೆ. ಮಕ್ಕಳು ಡಾಕ್ಟರ್, ಇಂಜಿನೀಯರ್, ನ್ಯಾಯಾಧೀಶರಂತಹ ಉನ್ನತ ಹುದ್ದೆಗಳನ್ನು ಪಡೆಯಲು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ಅಲ್ಲದೆ, ಪ್ರತಿ ವಿದ್ಯಾರ್ಥಿಯು ಜೀವನದಲ್ಲಿ ಗುರಿ ಇಟ್ಟುಕೊಂಡು ಆ ಗುರಿ ಸಾಧಿಸುವ ಛಲವಿರಬೇಕು ಎಂದು ಅವರು ತಿಳಿಸಿದರು. ರಾಯಚೂರು ಎಲ್‌ವಿಡಿ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಎಸ್.ಎಮ್. ಕೇಡದ್ ಅವರು ಮಾತನಾಡಿ, ಪ್ರತಿ ಮಗುವಿನಲ್ಲಿ ಪ್ರತಿಭೆ ಇರುತ್ತದೆ. ಅಂತಹ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದರಿಂದ ಹೊಸ ಆವಿಷ್ಕಾರ, ಪ್ರಯೋಗಗಳನ್ನು ಕಂಡುಕೊಳ್ಳಲು ಸಾಧ್ಯ. ವಿಜ್ಞಾನ ಕ್ಷೇತ್ರಕ್ಕೆ ಸಂಬAಧಿಸಿದAತೆ ಮಕ್ಕಳಲ್ಲಿ ಚೈತನ್ಯ ತುಂಬಲು ಇಂತಹ ಕಾರ್ಯಕ್ರಮಗಳು ಸ್ಫೂರ್ತಿಯಾಗುತ್ತವೆ. ಮಕ್ಕಳು ಆವಿಷ್ಕರಿಸಿದ ವೈಜ್ಞಾನಿಕ ಪ್ರಯೋಗಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂದು ಹೇಳಿದರು.
ಡಯಟ್ ಪ್ರಾಂಶುಪಾಲರಾದ ಶಿಭಾ ಅವರು ಮಾತನಾಡಿ, ಶಿಕ್ಷಕರು ಮಕ್ಕಳು ಯಾವ ವಿಷಯದಲ್ಲಿ ಆಸಕ್ತನಾಗಿದ್ದಾರೆ ಎಂದು ತಿಳಿದು ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಪ್ರತಿ ವಿದ್ಯಾರ್ಥಿಯು ಪ್ರಶ್ನೆ ಮಾಡುವ ಮೂಲಕ ವಿಷಯವನ್ನು ಚರ್ಚಿಸಿ, ಮನನ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ನವದೆಹಲಿಯ ಎನ್‌ಐಎಸ್‌ಎಫ್‌ಟಿಯ ಪ್ರತಿನಿಧಿ ಮಧುರಾ ಪಾಟೀಲ್, ಜಿಲ್ಲಾ ಮುಖ್ಯಗುರುಗಳ ಸಂಘದ ಅಧ್ಯಕ್ಷರಾದ ವೆಂಕೋಬ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಅಶೋಕ ಕೆಂಭಾವಿ, ಶಹಾಪುರ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಭೀಮಣ್ಣಗೌಡ, ಡಯಟ್ ಉಪನ್ಯಾಸಕರಾದ ಶಿವಪ್ಪ, ಚನ್ನಪ್ಪ, ಬಸ್ಸಣ್ಣಗೌಡ, ಎಂ.ಎಸ್.ಪಾಟೀಲ್, ಆದರ್ಶ ಶಾಲೆಯ ಮುಖ್ಯಗುರುಗಳಾದ ಭಗವಂತ, ಲಕ್ಷö್ಮಣ, ಕರ್ನಾಟಕ ರಾಜ್ಯ ನೌಕರರ ಸಂಘದ ಕಾರ್ಯದರ್ಶಿ ಮಹೇಶ್ ಪಾಟೀಲ್, ತಾಯಪ್ಪ, ಅಕ್ಕಮ್ಮ, ಮೌನೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು. ಸಂಗೀತ ಶಿಕ್ಷಕರಾದ ಶರಣಬಸವ ವಠಾರ್ ಹಾಗೂ ತಂಡದವರು ನಾಡಗೀತೆ ಹಾಡಿದರು. ಸಿಆರ್‌ಪಿ ಹಫೀಜ್ ಪಟೇಲ್ ಅವರು ನಿರೂಪಿಸಿದರು. ಬಿಆರ್‌ಪಿ ಬಸವರಾಜ ವಂದಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ