ಮಂಗಳವಾರ, ಜನವರಿ 7, 2020


ಗೃಹ ಮಂಡಳಿ ಆಯುಕ್ತರ ಪ್ರವಾಸ
ಯಾದಗಿರಿ, ಜನವರಿ ೦೮ (ಕರ್ನಾಟಕ ವಾರ್ತೆ): ಕರ್ನಾಟಕ ಗೃಹ ಮಂಡಳಿ ಆಯುಕ್ತರಾದ ಡಿ.ಎಸ್.ರಮೇಶ ಅವರು ಜನವರಿ ೯ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಗುರುವಾರ ಬೆಳಿಗ್ಗೆ ೯.೩೦ ಗಂಟೆಗೆ ಗುರುಮಠಕಲ್‌ನಲ್ಲಿ ಅನುಪಾತದಡಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಜಮೀನಿನ ಪರಿವೀಕ್ಷಣೆ ನಡೆಸುವರು. ಬೆಳಿಗ್ಗೆ ೧೦.೩೦ ಗಂಟೆಗೆ ಯಾದಗಿರಿಯ ಎಂ.ಹೊಸಹಳ್ಳಿ, ಸುರಪುರ, ವಣಕಿಹಾಳ ಬಡಾವಣೆಗಳ ಮನೆ/ ನಿವೇಶನಗಳು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ ೨.೪೦ ಗಂಟೆಗೆ ಶಹಾಪುರ ಸರ್ಕಾರಿ ನೂತನ ಮಾದರಿಯ ಪ್ರಥಮ ದರ್ಜೆ ಕಾಲೇಜು (ರೂಸಾ) ಕಾಮಗಾರಿ ಪರಿವೀಕ್ಷಣೆ ಮಾಡುವರು. ನಂತರ ಜೇವರ್ಗಿಗೆ ಪ್ರಯಾಣ ಬೆಳೆಸುವರು.
ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕುರಿ ಹಾರಿಸುವುದು ನಿಷೇಧ
ಯಾದಗಿರಿ, ಜನವರಿ ೦೮ (ಕರ್ನಾಟಕ ವಾರ್ತೆ): ಯಾದಗಿರಿ ತಾಲ್ಲೂಕಿನ ಮೈಲಾಪುರ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಜಾತ್ರೆಯು ಜನವರಿ ೧೧ರಿಂದ ಜ.೧೮ರವರೆಗೆ ನಡೆಯಲಿದ್ದು, ಜಾತ್ರೆಯಲ್ಲಿ ದೇವರ ಪಲ್ಲಕ್ಕಿಗೆ ಕುರಿಗಳನ್ನು ಹಾರಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಆದೇಶ ಹೊರಡಿಸಿದ್ದಾರೆ.
ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಯಾವುದೇ ಕಾರಣಕ್ಕೂ “ಪ್ರಾಣಿ ಹಕ್ಕು ಕಾಯ್ದೆ ೧೯೬೦”, “ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ ೧೯೬೦” ಅನ್ನು ಉಲ್ಲಂಘನೆಯಾಗದAತೆ ನೋಡಿಕೊಳ್ಳಬೇಕು. ಜ.೧೧ರ ಮಧ್ಯರಾತ್ರಿಯಿಂದ ಜ.೧೮ರ ಮಧ್ಯರಾತ್ರಿಯ ವರೆಗೆ ಗ್ರಾಮಕ್ಕೆ ಹೊಂದಿಕೊAಡಿರುವ, ಕೂಡು ರಸ್ತೆಗಳಲ್ಲಿ ಚೆಕ್‌ಪೋಸ್ಟ್ಗಳನ್ನು ನಿರ್ಮಿಸಿ ಕುರಿಗಳನ್ನು ಜಾತ್ರೆಯಲ್ಲಿ ತೆಗೆದುಕೊಂಡು ಹೋಗದಂತೆ ತಡೆಯಬೇಕು ಎಂದು ಸಂಬAಧಪಟ್ಟ ಇಲಾಖೆ ಅಧಿಕಾರಿಗಳಿಗೆ ಆದೇಶದಲ್ಲಿ ಸೂಚಿಸಿದ್ದಾರೆ.
ಮೈಲಾಪುರ: ಮದ್ಯ ಮಾರಾಟ ನಿಷೇಧ
ಯಾದಗಿರಿ, ಜನವರಿ ೦೮ (ಕರ್ನಾಟಕ ವಾರ್ತೆ): ಯಾದಗಿರಿ ತಾಲ್ಲೂಕಿನ ಮೈಲಾಪುರ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ಮೈಲಾಪುರ ಗ್ರಾಮ ಹಾಗೂ ಗ್ರಾಮದ ಸುತ್ತಮುತ್ತಲಿನ ೫ ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಜನವರಿ ೧೨ರ ಮಧ್ಯರಾತ್ರಿಯಿಂದ ಜ.೧೫ರ ಮಧ್ಯರಾತ್ರಿಯ ವರೆಗೆ ಮದ್ಯಪಾನ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಅಬಕಾರಿ ಕಾಯ್ದೆ ೧೯೬೫ರ ಕಲಂ ೨೧ರ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಮೈಲಾಪುರ ಗ್ರಾಮ ಹಾಗೂ ಗ್ರಾಮದ ಸುತ್ತಮುತ್ತಲಿನ ೫ ಕಿ.ಮೀ ವ್ಯಾಪ್ತಿಯ ಎಲ್ಲಾ ವೈನ್‌ಶಾಪ್‌ಗಳು, ಬಾರ್‌ಗಳು, ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಮೈಲಾಪುರ ಜಾತ್ರೆಗೆ ೬೦ ವಿಶೇಷ ಬಸ್ ವ್ಯವಸ್ಥೆ
ಯಾದಗಿರಿ, ಜನವರಿ ೦೮ (ಕರ್ನಾಟಕ ವಾರ್ತೆ): ಯಾದಗಿರಿ ತಾಲ್ಲೂಕಿನ ಮೈಲಾಪುರ ಶ್ರೀ ಮೈಲಾರಲಿಂಗೇಶ್ವರ ದೇವರ ಜಾತ್ರೆಯು ಜನವರಿ ೧೨ರಿಂದ ೧೭ರವರೆಗೆ ಜರುಗಲಿರುವ ಪ್ರಯುಕ್ತ ಜಾತ್ರೆಗೆ ಬರುವ ಭಕ್ತಾಧಿ ಪ್ರಯಾಣಿಕರ ಸಾರಿಗೆ ಅನುಕೂಲಕ್ಕಾಗಿ ಯಾದಗಿರಿ ವಿಭಾಗದಿಂದ ಸುಮಾರು ೬೦ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಈ ವಿಶೇಷ ಬಸ್‌ಗಳು ಯಾದಗಿರಿ, ಶಹಾಪೂರ, ಸುರಪೂರ, ಗುರುಮಠಕಲ್, ವಾಡಿ, ಸೇಡಂ, ಕೊಡಂಗಲ್, ನಾರಾಯಣಪೇಟ, ತಾಳಿಕೋಟ, ಹುಣಸಗಿ, ಕೆಂಭಾವಿ, ಸಿಂದಗಿ, ಹುಬ್ಬಳ್ಳಿ, ಗದಗ ಮುಂತಾದ ಸ್ಥಳಗಳಿಂದ ಕಾರ್ಯಾಚರಣೆ ಮಾಡಲಿವೆ. ಭಕ್ತರು ವಿಶೇಷ ಬಸ್‌ಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೊಗೇರಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಜ.೧೬ರಂದು ಹಣಕಾಸು ಸಮಿತಿ ಸಭೆ
ಯಾದಗಿರಿ, ಜನವರಿ ೦೮ (ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯಿತಿಯ ಹಣಕಾಸು, ಲೆಕ್ಕ ಪರಿಶೋಧನೆ ಹಾಗೂ ಯೋಜನಾ ಸ್ಥಾಯಿ ಸಮಿತಿಯ ಸಭೆಯನ್ನು ಜನವರಿ ೧೬ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಸಮಿತಿಯ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಕಲಚೇತನರ ಬಸ್ ಪಾಸ್ ನವೀಕರಣ ಆರಂಭ
ಯಾದಗಿರಿ, ಜನವರಿ ೦೮ (ಕರ್ನಾಟಕ ವಾರ್ತೆ): ೨೦೨೦ನೇ ಸಾಲಿನ ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್‌ಗಳನ್ನು ಡಿಸೆಂಬರ್ ೨೬ರಿಂದ ನವೀಕರಿಸಲಾಗುತ್ತಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೋಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೨೦೧೯ನೇ ಸಾಲಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ವಿತರಿಸುವ ಗುರುತಿನ ಚೀಟಿಯ ನಕಲು ಪ್ರತಿ, ವಾಸಸ್ಥಳ ಅಥವಾ ಆಧಾರ್ ಕಾರ್ಡ್ ನಕಲು, ಇತ್ತೀಚಿನ ೨ ಭಾವಚಿತ್ರ ಹಾಗೂ ೬೬೦ ರೂ. ನಗದು/ ಡಿ.ಡಿ ಜೊತೆಗೆ ವಿಕಲಚೇತನ ಫಲಾನುಭವಿಗಳು ಖುದ್ದಾಗಿ ಹಾಜರಿರಬೇಕು. ಈ ಎಲ್ಲಾ ದಾಖಲಾತಿಗಳನ್ನು ಆಯಾ ತಾಲ್ಲೂಕಿನ ಬಸ್ ನಿಲ್ದಾಣಗಳಲ್ಲಿ ಫೆಬ್ರುವರಿ ೨೯ರೊಳಗಾಗಿ ಸಲ್ಲಿಸಿ ನವೀಕರಿಸಿಕೊಳ್ಳಬೇಕು. ಪ್ರಸ್ತುತ ೨೦೧೯ನೇ ಸಾಲಿನ ಪಾಸ್ ೨೦೨೦ರ ಫೆಬ್ರುವರಿ ೨೯ರ ವರೆಗೆ ಮಾನ್ಯತೆ ಹೊಂದಿರುತ್ತದೆ. ಕೊನೆಯ ದಿನಾಂಕದ ನಂತರ ಬಸ್ ಪಾಸ್ ನವೀಕರಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...