ಗುರುವಾರ, ಜನವರಿ 2, 2020

ಜ.೪, ೫ರಂದು ವಿದ್ಯುತ್ ವ್ಯತ್ಯಯ
ಯಾದಗಿರಿ, ಜನವರಿ ೦೨ (ಕರ್ನಾಟಕ ವಾರ್ತೆ): ೧೧ ಕೆವಿ ವಿದ್ಯುತ್ ಮಾರ್ಗಗಳ ಐ.ಪಿ.ಡಿ.ಎಸ್ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಯಾದಗಿರಿ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ಜನವರಿ ೪ ಮತ್ತು ೫ರಂದು ಬೆಳಿಗ್ಗೆ ೯ರಿಂದ ಸಂಜೆ ೫ ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಯಾದಗಿರಿ ಪಟ್ಟಣ ಏರಿಯಾ (ಎಫ್-೯) ವ್ಯಾಪ್ತಿಯ ಗಾಂಧಿಚೌಕ್, ಜೈನ್ ಕಾಲೊನಿ, ರಾಜೀವ ಗಾಂಧಿ ನಗರ, ಗಂಜ್ ಸರ್ಕಲ್, ಗಣೇಶ ನಗರ, ಮೈಲಾಪುರ ಬೇಸ್, ದುರ್ಗಾ ನಗರ, ಶಾಂತಿ ನಗರ, ಶಹಪೂರ ಪೇಠ, ಚಕ್ಕರ ಕಟ್ಟಾ, ರಂಗ ಮಹಲ್, ಚಟಾಣ್ ಏರಿಯಾ, ಪಟೇಲ್ ವಾಡಿ, ಹನುಮಾನ್ ನಗರ, ದಭೀರ್ ಕಾಲೊನಿ, ಆಸರ್ ಮೊಹಲ್ಲಾ ಹಾಗೂ ಮಾತಾ ಮಾಣಿಕೇಶ್ವರಿ ನಗರ (ಎಫ್-೧) ವ್ಯಾಪ್ತಿಯ ಶಹಜೀವನ್ ಶಾ ದರ್ಗಾ, ಅನಪೂರ ಮೌಲಾಲಿ ಲೇಔಟ್, ಆದರ್ಶ ನಗರ, ಹೊಸಳ್ಳಿ ಕ್ರಾಸ್ ಮತ್ತು ರಾಘವೇಂದ್ರ ಸ್ವಾಮಿ ದೇವಸ್ಥಾನ, ಶಶಿಧರ್ ಕಾಲೊನಿ, ನಜರತ್ ಗಾರ್ಡನ್, ಗಿರಿ ನಗರ ಅಪಾರ್ಟ್ಮೆಂಟ್ ಏರಿಯಾ, ಹನುಮಾನ ದೇವಸ್ಥಾನ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ. ಗ್ರಾಹಕರು ಜೆಸ್ಕಾಂನೊAದಿಗೆ ಸಹಕರಿಸಬೇಕಾಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಆಕ್ಷೇಪಣೆ ಆಹ್ವಾನ
ಯಾದಗಿರಿ, ಜನವರಿ ೦೨ (ಕರ್ನಾಟಕ ವಾರ್ತೆ): ಕೇಂದ್ರ ಪುರಸ್ಕೃತ ಯೋಜನೆಯಡಿ ಮೇಲ್ದರ್ಜೆಗೇರಿಸಲಾದ ತಾಲ್ಲೂಕು, ಜಿಲ್ಲಾ, ಉಪ ಜಿಲ್ಲಾ ಆಯುಷ್ ಆಸ್ಪತ್ರೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುತ್ತಿದ್ದು, ಅಂತಿಮ ಪೂರ್ವ ತಾತ್ಕಾಲಿಕ ನೇಮಕಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆ ಹೊರಡಿಸಿದ ೧೫ ದಿನಗಳ ಒಳಗಾಗಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲು ಜಿಲ್ಲಾ ಆಯುಷ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.೭ರಂದು ತಾ.ಪಂ ಕೆಡಿಪಿ ಸಭೆ
ಯಾದಗಿರಿ, ಜನವರಿ ೦೨ (ಕರ್ನಾಟಕ ವಾರ್ತೆ): ಯಾದಗಿರಿ ಮತಕ್ಷೇತ್ರದ ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆಡಿಪಿ)ಗಳ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಜನವರಿ ೭ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಳೆದ ಡಿಸೆಂಬರ್ ೩೧ರಂದು ನಿಗದಿಪಡಿಸಿದ್ದ ಸದರಿ ಸಭೆಯನ್ನು ಕಾರಣಾಂತರಗಳಿAದ ಮುಂದೂಡಲಾಗಿತ್ತು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.೬ರಿಂದ ಉದ್ಯಮಶೀಲತಾ ಉಚಿತ ತರಬೇತಿ
ಯಾದಗಿರಿ, ಜನವರಿ ೦೨ (ಕರ್ನಾಟಕ ವಾರ್ತೆ): ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್)- ದಿಶಾ ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರದ ವತಿಯಿಂದ ಉದ್ಯಮಶೀಲತಾ ಉಚಿತ ತರಬೇತಿಯನ್ನು ಜನವರಿ ೬ರಿಂದ ೯ರವರೆಗೆ ಹಮ್ಮಿಕೊಳ್ಳಲಾಗಿದ್ದು, ನಿರುದ್ಯೋಗ ಯುವಕ-ಯುವತಿಯರು ಹೆಸರು ನೋಂದಾಯಿಸಲು ತಿಳಿಸಲಾಗಿದೆ.
ಸಿಡಾಕ್-ದಿಶಾ ಉದ್ಯಮಶೀಲತಾ ಅಡಿಯಲ್ಲಿ ಸ್ವಂತ ಉದ್ಯಮ ಸ್ಥಾಪಿಸಲು ಇಚ್ಛಿಸುವ ನಿರುದ್ಯೋಗ ಯುವಕ-ಯುವತಿಯರಿಗೆ ಉದ್ಯಮಶೀಲತಾ ಕುರಿತು ಉಚಿತ ತರಬೇತಿ ನೀಡಲಾಗುವುದು. ವಿವಿಧ ಯೋಜನೆಗಳ ಮಾಹಿತಿ, ವ್ಯವಹಾರದ ಯೋಜನೆಗಳ ಆಯ್ಕೆ, ಹಣಕಾಸಿನ ಸಾಕ್ಷರತೆ, ಸ್ಥಳೀಯ ಸಂಪನ್ಮೂಲಗಳ ಬಳಕೆ, ನೋಂದಣೆ ಮಾಡುವ ವಿಧಾನಗಳು, ಸಂಭವನೀಯ ವ್ಯವಹಾರದ ಕಲ್ಪನೆಗಳು ಮತ್ತು ಮೌಲ್ಯಮಾಪನ, ಅನುಷ್ಠಾನ, ಸಾಲದ ಅರ್ಜಿ ಸಲ್ಲಿಸುವ ವಿಧಾನ, ತೆರಿಗೆ ನಿಯಮಗಳು, ಯೋಜನಾ ವರದಿ ತಯಾರಿಕೆ, ಜಾಹೀರಾತು ಮತ್ತು ಮಾರುಕಟ್ಟೆಯ ಕುರಿತು ಮತ್ತು ಯಶಸ್ವಿ ಉದ್ಯಮಿಗಳ ಜೊತೆ ಸಂವಾದ ಹೀಗೆ ಹಲವಾರು ರೀತಿಯ ಮಾರ್ಗದರ್ಶನ, ಮಾಹಿತಿಯನ್ನು ತರಬೇತಿಯಲ್ಲಿ ನೀಡಲಾಗುವುದು. ತರಬೇತಿ ಪಡೆಯಲು ಇಚ್ಛಿಸುವವರು ಎರಡು ಪಾಸ್‌ಪೋರ್ಟ್ ಫೋಟೋ ಮತ್ತು ಆಧಾರ್‌ಕಾರ್ಡ್ ಝರಾಕ್ಸ್ನೊಂದಿಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮಾಲೋಚಕರಾದ ಪದ್ಮಶ್ರೀ ಪೋತದಾರ ಮೊ:೭೮೪೭೮೭೧೦೬೭ ಅವರನ್ನು ಸಂಪರ್ಕಿಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಿಲ್ಲಾ ಸಂಯೋಜಕ ಹುದ್ದೆಗೆ ಅರ್ಜಿ ಆಹ್ವಾನ
ಯಾದಗಿರಿ, ಜನವರಿ ೦೨ (ಕರ್ನಾಟಕ ವಾರ್ತೆ): ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಸಂಯೋಜಕ ೧ ಹುದ್ದೆಯನ್ನು ಭರ್ತಿ ಮಾಡಲು ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಗುತ್ತಿಗೆ ಅವಧಿಯು ೧ ವರ್ಷದ ಅವಧಿಗೆ ಸೀಮಿತವಾಗಿದ್ದು, ಕಾರ್ಯಕ್ಷಮತೆಯ ಆಧಾರದ ಮೇಲೆ ಗರಿಷ್ಠ ೩ ವರ್ಷಗಳ ಅವಧಿಗೆ ವಿಸ್ತರಿಸಲಾಗುವುದು. ಸಂಬAಧಿಸಿದ ಕ್ಷೇತ್ರದಲ್ಲಿ ಕನಿಷ್ಠ ೩ ವರ್ಷಗಳ ಅನುಭವ ಇರಬೇಕು. ಎಂಬಿಬಿಎಸ್ ವಿದ್ಯಾರ್ಹತೆ (ವೇತನ ೫೦ ಸಾವಿರ ರೂ.) ಹೊಂದಿದವರು ಬರದಿದ್ದಲ್ಲಿ, ಬಿಡಿಎಸ್ ವಿದ್ಯಾರ್ಹತೆ (೪೫ ಸಾವಿರ ರೂ.) ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಬಿಡಿಎಸ್ ವಿದ್ಯಾರ್ಹತೆ ಇರುವವರು ಲಭ್ಯವಿಲ್ಲದಿದ್ದಲ್ಲಿ ಎಂಪಿಎಚ್ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು. ಅರ್ಜಿಯನ್ನು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳ ಕಾರ್ಯಾಲಯದಿಂದ ಪಡೆದು ಜನವರಿ ೧೫ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ:೦೮೪೭೩ ೨೫೩೭೬೫ ಸಂಪರ್ಕಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...