ಭಾನುವಾರ, ಜನವರಿ 19, 2020

ಇಂದು ಪೇಂಟಿAಗ್ ಸ್ಪರ್ಧೆ
ಯಾದಗಿರಿ, ಜನವರಿ ೧೮ (ಕರ್ನಾಟಕ ವಾರ್ತೆ): ೧೦ನೇ ರಾಷ್ಟಿçÃಯ ಮತದಾರರ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಕ್ಯಾನ್‌ವಾಸ್ ಪೇಂಟಿAಗ್ ಸ್ಪರ್ಧೆ ಹಾಗೂ ವಾಲ್ ಪೇಂಟಿAಗ್ ಸ್ಪರ್ಧೆಗಳನ್ನು ಜನವರಿ ೧೯ರಂದು ಬೆಳಿಗ್ಗೆ ೯.೩೦ ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಲಾಗಿದೆ.
ಸುರುಪುರ, ಶಹಾಪುರ ಮತ್ತು ಯಾದಗಿರಿ ತಾಲ್ಲೂಕಗಳ ಶಾಲಾ ಚಿತ್ರಕಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಹಾಗೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಖಾಸಗಿ ಚಿತ್ರಕಲಾವಿದರಿಂದ ಕ್ಯಾನ್‌ವಾಸ್ ಪೇಂಟಿAಗ್ ಸ್ಫರ್ಧೆಗಳನ್ನು ನಡೆಸಲಾಗುವುದು. ಅದರಂತೆ, ಶಾಲಾ ಚಿತ್ರಕಲಾ ಶಿಕ್ಷಕರಿಂದ ಹಾಗೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಖಾಸಗಿ ಚಿತ್ರಕಲಾವಿದರಿಂದ ಯಾದಗಿರಿ ನಗರದ ಸರಕಾರಿ ಪದವಿ ಪೂರ್ವ ಕಾಲೇಜು (ಬಾಲಕರ) ಸಪ್ನಾ ಚಿತ್ರಮಂದಿರ ಪಕ್ಕದಲ್ಲಿ ವಾಲ್ ಪೇಂಟಿAಗ್ ಸ್ಪರ್ಧೆಗಳನ್ನು ಭಾನುವಾರ ಬೆಳಿಗ್ಗೆ ೯.೩೦ ಗಂಟೆಗೆ ನಡೆಸಲಾಗುತ್ತಿದೆ. ಇದಕ್ಕೆ ಬೇಕಾಗುವ ಬಣ್ಣ, ಬ್ರಶ್‌ನ್ನು ನಗರಸಭೆಯವರು ಪೂರೈಸುತ್ತಾರೆ.
ಅತ್ಯುತ್ತಮವಾದ ವಾಲ್ ಪೇಂಟಿAಗ್ ಚಿತ್ರಗಳಿಗೆ ಮತ್ತು ಕ್ಯಾನ್‌ವಾಸ್ ಚಿತ್ರಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಆಯ್ಕೆ ಮಾಡಿ ಜನವರಿ ೨೫ರಂದು ಜಿಲ್ಲಾಡಳಿತ ಭವನದಲ್ಲಿ ನಡೆಯುವ ರಾಷ್ಟಿçÃಯ ಮತದಾರರ ದಿನಾಚರಣೆಯ ಸಮಾರಂಭದಲ್ಲಿ ವಿತರಿಸಲಾಗುತ್ತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ.೨೧ರಂದು ಪೂರ್ವಭಾವಿ ಸಭೆ
ಯಾದಗಿರಿ, ಜನವರಿ ೧೮ (ಕರ್ನಾಟಕ ವಾರ್ತೆ): ಸುರಪುರ ತಾಲ್ಲೂಕಿನ ತಿಂಥಣಿ ಗ್ರಾಮದ ಶ್ರೀ ಮೌನೇಶ್ವರ ದೇವಸ್ಥಾನದ ಜಾತ್ರೆ ಫೆಬ್ರುವರಿ ೩ರಿಂದ ೮ರವರೆಗೆ ಜರುಗಲಿದ್ದು, ಜಾತ್ರೆಗೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ಪೂರ್ವಭಾವಿ ಸಭೆಯನ್ನು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರ ಅಧ್ಯಕ್ಷತೆಯಲ್ಲಿ ಜನವರಿ ೨೧ರಂದು ಸಂಜೆ ೪ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದೆ.

ಜ.೨೩ರಂದು ಹರಾಜು
ಯಾದಗಿರಿ, ಜನವರಿ ೧೮ (ಕರ್ನಾಟಕ ವಾರ್ತೆ): ಯಾದಗಿರಿ ನಗರದ ನೂತನ ಬಸ್ ನಿಲ್ದಾಣದಲ್ಲಿ ಸಾಮಾನ್ಯ ಮಳಿಗೆ ಸಂಖ್ಯೆ ೬ರ ಪರವಾನಗಿದಾರರು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಬಾಕಿ ಮೊತ್ತ ೧,೧೯,೨೮೦ ರೂ. ಪಾವತಿಸಬೇಕಿರುವ ಕಾರಣ ಸದರಿಯವರ ಒಪ್ಪಂದವನ್ನು ರದ್ದುಗೊಳಿಸಲಾಗಿರುತ್ತದೆ. ಒಪ್ಪಂದದ ನಿಯಮಾವಳಿಗಳ ಪ್ರಕಾರ ಬಾಕಿ ಮೊತ್ತ ಮತ್ತು ಹರಾಜಿನಿಂದ ಉಂಟಾಗುವ ವೆಚ್ಚವನ್ನು ಭರಿಸಿಕೊಳ್ಳಲು ಮಳಿಗೆಯಲ್ಲಿರುವ ವಸ್ತುಗಳನ್ನು ಜನವರಿ ೨೩ರಂದು ಬೆಳಿಗ್ಗೆ ೧೧.೩೦ ಗಂಟೆಗೆ ಹರಾಜು ಮಾಡಲಾಗುವುದು ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೋಗೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ
ಯಾದಗಿರಿ, ಜನವರಿ ೧೮ (ಕರ್ನಾಟಕ ವಾರ್ತೆ): ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಯಕ್ಷಗಾನ (ತೆಂಕು, ಬಡಗು, ಬಡಾಬಡಗು, ಯಕ್ಷಗಾನ ಗೊಂಬೆಯಾಟ) ಮೂಡಲಪಾಯ ಯಕ್ಷಗಾನ, ಕೇಳಿಕೆ, ಘಟ್ಟದಕೋರೆ ಮತ್ತು ತಾಳಮದ್ದಲೆ ಮುಂತಾದ ಕಲಾಪ್ರಕಾರಗಳಲ್ಲಿ ೨೦೧೯ನೇ ಇಸ್ವಿಯಲ್ಲಿ ಪ್ರಕಟಿಸಿರುವ ಪುಸ್ತಕಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲು ಲೇಖಕರು ಮತ್ತು ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆಯಾದ ಪುಸ್ತಕಕ್ಕೆ ೨೫,೦೦೦ ರೂ.ಗಳ ಬಹುಮಾನ ನೀಡಲಾಗುತ್ತದೆ. ಯಕ್ಷಗಾನದ ವಿವಿಧ ಆಯಾಮಗಳ ಬಗ್ಗೆ ಸಂಗೀತ, ಆಹರ‍್ಯ, ಅಭಿನಯ, ಸಂಶೋಧನೆ, ವಿಮರ್ಶೆ, ಜೀವನಚರಿತ್ರೆ, ಪ್ರಸಂಗ ಪುಸ್ತಕ ಇತ್ಯಾದಿ ಪ್ರಕಾರಗಳ ಪುಸ್ತಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಿದೆ. ಬಹುಮಾನಕ್ಕೆ ಸಲ್ಲಿಸುವ ಪುಸ್ತಕವನ್ನು ಪಠ್ಯಕ್ಕಾಗಿ ಸಿದ್ಧಪಡಿಸಬಾರದು. ಸಂಪಾದಿತ, ಅಭಿನಂದನ ಕೃತಿಯಾಗಿರಬಾರದು. ಸ್ವರಚಿತ ಹಾಗೂ ಪ್ರಥಮ ಮುದ್ರಣ ಆವೃತ್ತಿಯಾಗಿರಬೇಕು. ಪುಸ್ತಕಗಳನ್ನು ರಿಜಿಸ್ಟಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ. ರಸ್ತೆ, ಬೆಂಗಳೂರು ೫೬೦೦೦೨, ಇವರಿಗೆ ಫೆಬ್ರುವರಿ ೭ರ ಒಳಗಾಗಿ ಅರ್ಜಿಯೊಂದಿಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಕಳುಹಿಸಬೇಕು. ಅರ್ಜಿಗಳನ್ನು ಅಕಾಡೆಮಿಯಿಂದ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂ:೦೮೦-೨೨೧೧೩೧೪೬ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...