ಉಪಮುಖ್ಯಮಂತ್ರಿಗಳ ಪ್ರವಾಸ
ಯಾದಗಿರಿ, ಜನವರಿ ೦೭ (ಕರ್ನಾಟಕ ವಾರ್ತೆ): ರಾಜ್ಯದ ಉಪಮುಖ್ಯಮಂತ್ರಿಗಳು, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಗೋವಿಂದ ಎಂ.ಕಾರಜೋಳ ಅವರು ಜನವರಿ ೧೦ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಶುಕ್ರವಾರ ಸಂಜೆ ೪ ಗಂಟೆಗೆ ಜಿಲ್ಲೆಯ ಸೈದಾಪುರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ ೯ ಗಂಟೆಗೆ ಸೈದಾಪುರದಿಂದ ರೈಲು ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.
ಚಿತ್ರಕಲಾವಿದರಿಂದ ಅರ್ಜಿ ಆಹ್ವಾನ
ಯಾದಗಿರಿ, ಜನವರಿ ೦೭ (ಕರ್ನಾಟಕ ವಾರ್ತೆ): ಯಾದಗಿರಿ ನಗರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಕಟ್ಟಡಗಳ ಗೋಡೆಗಳ ಮೇಲೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತಹ ಕಲಾಕೃತಿಗಳನ್ನು ಚಿತ್ರೀಕರಿಸಲು ಸ್ವಯಂಪ್ರೇರಣೆಯಿAದ ಭಾಗವಹಿಸುವ ಕಲಾವಿದರಿಗೆ ಯಾದಗಿರಿ ನಗರಸಭೆಯಿಂದ ಅವಕಾಶ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ ಅವರು ತಿಳಿಸಿದ್ದಾರೆ.
ಸರ್ಕಾರಿ ಕಟ್ಟಡಗಳ ಗೋಡೆಗಳ ಮೇಲೆ ಪ್ಲಾಸ್ಟಿಕ್ ಬಳಕೆ ನಿಷೇಧ, ಟ್ರಾಫಿಕ್ ರೂಲ್ಸ್, ಕಸ ವಿಲೇವಾರಿ ಹಾಗೂ ನೀರಿನ ಸದ್ಬಳಕೆ, ಸ್ವಚ್ಛತಾ, ಆರೋಗ್ಯ, ಶಿಕ್ಷಣ, ಚುನಾವಣೆ ಮತದಾನ, ವಿದ್ಯುತ್ ಉಳಿತಾಯ ಇತರೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತಹ ಕಲಾಕೃತಿಗಳನ್ನು ಚಿತ್ರೀಕರಿಸಲು ಸ್ವಯಂಪ್ರೇರಣೆಯಿAದ ಭಾಗವಹಿಸುವ ಕಲಾವಿದರಿಗೆ ಯಾದಗಿರಿ ನಗರಸಭೆಯಿಂದ ಅವಕಾಶ ಮಾಡಲಾಗಿದೆ. ಚಿತ್ರಕಲೆಗೆ ಬೇಕಾಗುವ ಸಾಮಗ್ರಿಗಳನ್ನು ನಗರಸಭೆ ಒದಗಿಸಲಿದೆ. ತಮಗೆ ನೀಡಿದ ಸ್ಥಳದಲ್ಲಿ ಬಿಡಿಸಲಾದ ಸುಂದರ ಕಲಾಕೃತಿಗಳಿಗೆ ಬಹುಮಾನ ನೀಡಲಾಗುವುದು. ಕಲಾವಿದರು ಜನವರಿ ೧೪ರೊಳಗಾಗಿ ಗೂಗಲ್ ಫಾರಂ ಅನ್ನು ಭರ್ತಿ ಮಾಡಿ ನೀವು ಬಿಡಿಸಿದ ಯಾವುದಾದರೂ ಚಿತ್ರಕಲೆಗಳನ್ನು ಅಪ್ಲೋಡ್ ಮಾಡಬೇಕು. ಗೂಗಲ್ ಫಾರಂ ಲಿಂಕ್‌ನ್ನು ಎನ್.ಐ.ಸಿ. ವೆಬ್‌ಸೈಟ್: http://yadgir.nic.in ನಲ್ಲಿ ವೀಕ್ಷಿಸಬಹುದಾಗಿದೆ. ಆಯ್ಕೆಯಾದ ಕಲಾವಿದರಿಗೆ ಫೋನ್ ಅಥವಾ ಇ-ಮೇಲ್ ಮುಖಾಂತರ ಮಾಹಿತಿ ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.೧೦, ೧೧ರಂದು ವಿದ್ಯುತ್ ವ್ಯತ್ಯಯ
ಯಾದಗಿರಿ, ಜನವರಿ ೦೭ (ಕರ್ನಾಟಕ ವಾರ್ತೆ): ೧೧ ಕೆವಿ ವಿದ್ಯುತ್ ಮಾರ್ಗಗಳ ಐ.ಪಿ.ಡಿ.ಎಸ್ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಯಾದಗಿರಿ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ಜನವರಿ ೧೦ ಮತ್ತು ೧೧ರಂದು ಬೆಳಿಗ್ಗೆ ೯ರಿಂದ ಸಂಜೆ ೫ ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಲಕ್ಷಿö್ಮÃ ನಗರ (ಎಫ್-೫) ವ್ಯಾಪ್ತಿಯ ಮಿಲತ್ ನಗರ, ಅಮರ ಲೇಔಟ್, ಲಕ್ಷಿö್ಮÃ ನಗರ, ಚಿತ್ತಾಪುರ ರೋಡ್, ಆರ್.ವಿ.ಶಾಲೆ, ಲಕ್ಕಿ ನಗರ, ಬಾಲಾಜಿ ನಗರ, ವಾಲ್ಮೀಕಿ ಭವನ, ಜಗಜೀವನ್‌ರಾಮ ನಗರ, ವಿಶ್ವರಾದ್ಯ ನಗರ, ಪಿ.ಡಬ್ಲುö್ಯ.ಡಿ ಕ್ವಾಟ್ರಸ್, ಗಾಂಧಿನಗರ ಮತ್ತು ಬಸವೇಶ್ವರ ನಗರ.
ರೈಲ್ವೆ ಸ್ಟೇಷನ್ ಏರಿಯಾ (ಎಫ್-೨) ವ್ಯಾಪ್ತಿಯ ಮದನಪುರಗಲ್ಲಿ, ಲಾಡಿಜ್‌ಗಲ್ಲಿ, ಅಜೀಜ ಕಾಲೋನಿ, ಸ್ಟೇಶನ್ ಏರಿಯಾ, ವಿವೇಕಾನಂದ ನಗರ, ಸಾಯಿ ನಗರ, ಸಹರಾ ಕಾಲೋನಿ ಮತ್ತು ಹೊಸಳ್ಳಿ ಕ್ರಾಸ್.
ಅಂಬೇಡ್ಕರ್ ನಗರ (ಎಫ್-೧೦) ವ್ಯಾಪ್ತಿಯ ಅಂಬೇಡ್ಕರ್ ನಗರ, ಚಾಮಾ ಲೇಔಟ್, ಕನಕ ನಗರ, ಬಾಲಾಜಿ ನಗರ, ಹತ್ತಿಕುಣಿ ರೋಡ್, ಹಳೆ ಪೊಲೀಸ್ ಸ್ಟೇಷನ್, ಮುಸ್ಲಿಂಪುರ, ಗಂಗಾ ನಗರ, ರಾಯಚೂರು ಮೊಹಲ್ಲಾ ಮತ್ತು ಹತ್ತಿಕುಣಿ ರೋಡ್ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ. ಗ್ರಾಹಕರು ಜೆಸ್ಕಾಂನೊAದಿಗೆ ಸಹಕರಿಸಬೇಕಾಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ