ರಾಷ್ಟ್ರೀಯ ಯುವ ದಿನಾಚರಣೆ
ಯಾದಗಿರಿ, ಜನವರಿ 23 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಶಾರದಾ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಚಿತ್ರಕಲಾ ಸ್ಪರ್ಧೆಯನ್ನು ನಗರದ ಶಾರದಾ ಆಯುರ್ವೇದಿಕ್ ಕಾಲೇಜಿನಲ್ಲಿ ಬುಧವಾರ ಆಚರಿಸಲಾಯಿತು. ಬಸವ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ನಾಗರತ್ನಾ ಕುಪ್ಪಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ತಿಳಿಸಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ಬಿ.ಎ.ಎಂ.ಎಸ್ ದ್ವಿತೀಯ ವರ್ಷದ ವಿದ್ಯಾಶ್ರೀ ಅವರಿಗೆ ಮೊದಲನೆಯ ಬಹುಮಾನ, ಬಿ.ಎ.ಎಂ.ಎಸ್ ದ್ವಿತೀಯ ವರ್ಷದ ಐಶ್ವರ್ಯಾ ಅವರಿಗೆ ಎರಡನೆಯ ಬಹುಮಾನ, ಬಿ.ಎ.ಎಂ.ಎಸ್. ಪ್ರಥಮ ವರ್ಷದ ರಾಜೇಶ ಅವರಿಗೆ ಮೂರನೆಯ ಬಹುಮಾನವನ್ನು ನಗದು ರೂಪದಲ್ಲಿ ವಿತರಿಸಲಾಯಿತು. ಶಾರದಾ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ರಾಹುಲ್ ಕುಲಕರ್ಣಿ, ಏಡ್ಸ್ ನಿಯಂತ್ರಣ ಕಚೇರಿಯ ಜಿಲ್ಲಾ ಮೇಲ್ವಿಚಾರಕರಾದ ಆರತಿ ಎಂ.ಧನಶ್ರೀ, ತೇಜಶ್ವಿನಿ, ಸಬಿತಾ, ಸಿರಿನಾ, ಅನುಷಾ, ಸಂಕೇತ, ನಿಕಿತಾ ಮತ್ತು ಯಲ್ಲಪ್ಪ ಅವರು ಉಪಸ್ಥಿತರಿದ್ದರು. ಅಂಕಿತಾ ಡಿ, ತಾರಾ, ಮತ್ತು ಶಶಾಂಕ ಟಿ. ಅವರು ನಿರೂಪಿಸಿದರು. ಶರತಗೌಡ ವಂದಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ