ಸೋಮವಾರ, ಡಿಸೆಂಬರ್ 23, 2019

ಇಂದು ಬಜೆಟ್ ಸಿದ್ಧತಾ ಸಭೆ
ಯಾದಗಿರಿ, ಡಿಸೆಂಬರ್ ೨೩ (ಕರ್ನಾಟಕ ವಾರ್ತೆ): ಶಹಾಪುರ ನಗರಸಭೆಯ ೨೦೨೦-೨೧ನೇ ಸಾಲಿನ ಮುಂಗಡ ಪತ್ರ (ಬಜೆಟ್) ತಯಾರಿಸಲು ಸಾರ್ವಜನಿಕರು, ರಿಜಿಸ್ರ‍್ಡ್ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್, ಟ್ರೇಡ್ ಆ್ಯಂಡ್ ಇಂಡಸ್ಟಿçÃಯಲ್ ಅಸೋಸಿಯೇಷನ್, ಇತರೆ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಪ್ರೋಮಿನೆಂಟ್ ಸಿಟಿಜನ್‌ಗಳಿಗೆ ೨ನೇ ಸಿದ್ಧತಾ ಸಭೆಯನ್ನು ಡಿಸೆಂಬರ್ ೨೪ರಂದು ಮಧ್ಯಾಹ್ನ ೩ ಗಂಟೆಗೆ ನಗರಸಭೆ ಸಭಾಂಗಣದಲ್ಲಿ ಕರೆಯಲಾಗಿದೆ. ಈ ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಲು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.೩೧ರಂದು ತಾ.ಪಂ ಕೆಡಿಪಿ ಸಭೆ
ಯಾದಗಿರಿ, ಡಿಸೆಂಬರ್ ೨೩ (ಕರ್ನಾಟಕ ವಾರ್ತೆ): ಯಾದಗಿರಿ ಮತಕ್ಷೇತ್ರದ ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆಡಿಪಿ)ಗಳ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಡಿಸೆಂಬರ್ ೩೧ರಂದು ಬೆಳಿಗ್ಗೆ ೧೧ ಗಂಟೆಗೆ ಯಾದಗಿರಿ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.೨೬ರಿಂದ ವಿಕಲಚೇತನರ ಬಸ್ ಪಾಸ್ ನವೀಕರಣ
ಯಾದಗಿರಿ, ಡಿಸೆಂಬರ್ ೨೩ (ಕರ್ನಾಟಕ ವಾರ್ತೆ): ೨೦೨೦ನೇ ಸಾಲಿನ ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್‌ಗಳನ್ನು ಡಿಸೆಂಬರ್ ೨೬ರಿಂದ ನವೀಕರಿಸಲಾಗುತ್ತಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೋಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೨೦೧೯ನೇ ಸಾಲಿನಲ್ಲಿ ತೆಗೆದುಕೊಂಡ ಪಾಸಿನ ನಕಲು ಪ್ರತಿ, ಇತ್ತೀಚಿನ ೨ ಭಾವಚಿತ್ರ, ಅಂಗವಿಕಲರ ಗುರುತಿನ ಚೀಟಿ, ಆಧಾರ್ ಕಾರ್ಡ್, ಮಾಸಾಶನ ನಕಲು ಪ್ರತಿಗಳು ಹಾಗೂ ಅನುಬಂಧ-೧ ರೊಂದಿಗೆ ೬೬೦ ರೂ. ನಗದು ಶುಲ್ಕ ಸಲ್ಲಿಸಬೇಕು. ಈ ಎಲ್ಲಾ ದಾಖಲಾತಿಗಳನ್ನು ಆಯಾ ತಾಲ್ಲೂಕಿನ ಬಸ್ ನಿಲ್ದಾಣಗಳಲ್ಲಿ ೨೦೨೦ರ ಫೆಬ್ರುವರಿ ೨೯ರೊಳಗಾಗಿ ಸಲ್ಲಿಸಿ, ನವೀಕರಣಗೊಳಿಸಿಕೊಳ್ಳಬೇಕು. ಪ್ರಸ್ತುತ ೨೦೧೯ನೇ ಸಾಲಿನ ಪಾಸ್ ೨೦೨೦ರ ಫೆಬ್ರುವರಿ ೨೯ರ ವರೆಗೆ ಮಾನ್ಯತೆ ಹೊಂದಿರುತ್ತದೆ. ಕೊನೆಯ ದಿನಾಂಕದ ನಂತರ ಬಸ್ ಪಾಸ್ ನವೀಕರಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಸಂಘಟಿತ ಕಾರ್ಮಿಕರು ನೋಂದಣಿಗೆ ಸೂಚನೆ
ಯಾದಗಿರಿ, ಡಿಸೆಂಬರ್ ೨೩ (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಯಾದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯಲ್ಲಿ ಅಸಂಘಟಿತ ವಲಯದ ಕಾರ್ಮಿಕರು ನೋಂದಣಿ ಮಾಡಿಕೊಳ್ಳಲು ಯಾದಗಿರಿ ಉಪ ವಿಭಾಗದ ಕಾರ್ಮಿಕ ಅಧಿಕಾರಿಗಳು ಕೋರಿದ್ದಾರೆ.
ಯೋಜನೆಗೆ ಒಳಪಡುವ ಕಾರ್ಮಿಕರು ಅಸಂಘಟಿತ ವಲಯದ ಕಾರ್ಮಿಕರಾಗಿದ್ದು, ೧೮ ರಿಂದ ೪೦ ವರ್ಷದೊಳಗಿರಬೇಕು. ಮಾಸಿಕ ಆದಾಯ ೧೫,೦೦೦ ರೂ. ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಆದಾಯ ತೆರಿಗೆ ಇಎಸ್‌ಐ/ಪಿಎಫ್/ಎನ್‌ಪಿಎಸ್ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರಬಾರದು. ಬ್ಯಾಂಕ್ ಉಳಿತಾಯ ಖಾತೆ ಮತ್ತು ಆಧಾರ್ ಸಂಖ್ಯೆ ಹೊಂದಿರಬೇಕು. ಅರ್ಹ ಅಸಂಘಟಿತ ಕಾರ್ಮಿಕರು ಹತ್ತಿರದ ಕಾಮನ್ ಸರ್ವಿಸ್ ಸೆಂಟರ್(ಸಿಎಸ್‌ಸಿ) ಗಳಲ್ಲಿ ನೋಂದಾಯಿಸಬಹುದು.
ಯಾರು ಅರ್ಹರು?: ಆಟೋ ಚಾಲಕರು, ವಾಣಿಜ್ಯ ವಾಹನ ಚಾಲಕರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಹಮಾಲರು, ಟೇಲರ್‌ಗಳು, ಚಿಂದಿ ಆಯುವವರು, ಗೃಹ ಕಾರ್ಮಿಕರು, ಮೆಕ್ಯಾನಿಕ್‌ಗಳು, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಬಿಸಿಯೂಟ ಸಿದ್ಧಪಡಿಸುವ ಅಡುಗೆ ಸಹಾಯಕರು, ಬೀದಿ ಬದಿ ವ್ಯಾಪಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತರು, ಕೃಷಿ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು, ಗೃಹ ಆಧಾರಿತ ಕಾರ್ಮಿಕರು ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯಡಿ ನೋಂದಣಿ ಮಾಡಬಹುದು.
ಕಾಮನ್ ಸರ್ವಿಸ್ ಸೆಂಟರ್‌ಗಳ ವಿವರಗಳನ್ನು ಹತ್ತಿರದ ಎಲ್‌ಐಸಿ ಶಾಖೆಗಳು, ಕಾರ್ಮಿಕ ಇಲಾಖೆ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ, ಇಎಸ್‌ಐ ಕಾರ್ಪೋರೇಷನ್ ಮತ್ತು ಭವಿಷ್ಯನಿಧಿ ಸಂಘಟನೆಯ ಕಚೇರಿಗಳು ಹಾಗೂ ಇಲಾಖೆಯ ವೆಬ್ ವಿಳಾಸ http//locator.csccloud.in  ಮತ್ತು maandan.in  ನಲ್ಲಿ ಪಡೆಯಬಹುದು. ಟೋಲ್ ಫ್ರೀ ಸಂಖ್ಯೆ ೧೮೮೦೦-೨೭೬-೬೮೮೮ ಗೆ ಕರೆ ಮಾಡಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...