ಶನಿವಾರ, ಡಿಸೆಂಬರ್ 7, 2019

ವಿಶ್ವ ಮಣ್ಣು ಆರೋಗ್ಯ ದಿನಾಚರಣೆ
ಯಾದಗಿರಿ, ಡಿಸೆಂಬರ್ ೦೬ (ಕರ್ನಾಟಕ ವಾರ್ತೆ): ಶಹಪೂರ ತಾಲ್ಲೂಕಿನ ಹೊಸಕೇರಾ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ಕೋರಮಂಡಲ ರಸಗೊಬ್ಬರಗಳ ಸಂಸ್ಥೆ ಸಹಯೋಗದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನವನ್ನು ಆಚರಿಸಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಉಮೇಶ ಬಾರಿಕರ ಅವರು ಮಾತನಾಡಿ, ಮಣ್ಣು ರೈತನ ಕಣ್ಣು ಇದ್ದಂತೆ. ಅದನ್ನು ಆದಷ್ಟು ಹೆಚ್ಚಿನ ಕಾಳಜಿ ವಹಿಸಿ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು. ಬೆಳೆಗಳಿಗೆ ಪೋಷಕಾಂಶಗಳನ್ನು ಬಳಸುವ ಮುನ್ನ ಮಣ್ಣಿನ ಪರೀಕ್ಷೆ ಮಾಡಿಸಿ. ಅದರ ಫಲಿತಾಂಶ ಆಧರಿಸಿ ಬೆಳೆಗಳಿಗೆ ಪೋಷಕಾಂಶಗಳನ್ನು ಬಳಸಬೇಕು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಾವಯವ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿದರೆ ಉತ್ತಮ. ಬೆಳೆಗಳಿಗೆ ಅಗತ್ಯವಿರುವ ಸುಮಾರು ೧೬ ಪೋಷಕಾಂಶಗಳ ಕಾರ್ಯವನ್ನು ವಿವರಿಸಿದರು.

ಡಾ. ಮಹೇಶ ಅವರು ರೈತರಿಗೆ ಮಣ್ಣು ಪರೀಕ್ಷೆಯ ಮಾದರಿ ಸಂಗ್ರಹಿಸುವ ಪದ್ಧತಿಯನ್ನು ತಿಳಿಸಿದರು. ಲಘು ಪೋಷಕಾಂಶಗಳ ಮಹತ್ವದ ಬಗ್ಗೆ ತಿಳಿಸಿ, ಅವುಗಳ ಬಳಕೆಯ ಕುರಿತು ಮಾಹಿತಿ ನೀಡಲಾಯಿತು. 
ಜಿಲ್ಲಾ ಪಂಚಾಯಿತ ಸದಸ್ಯರಾದ ನಾಗಪ್ಪ ಕಾಶಿರಾಜ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚನ್ನಬಸಪ್ಪ ಮಾಲಿಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯರಾದ ಸಕ್ರಪ್ಪ ಹೂಗಾರ, ಕೃಷಿ ಇಲಾಖೆಯ ಕೃಷಿ ಅಧಿಕಾರಿ ಅಂಬರೀಶ, ಪ್ರಗತಿಪರ ರೈತರಾದ ಮಲ್ಲಿಕಾರ್ಜುನ ಸಾಹು, ದೇವೇಂದ್ರಪ್ಪ ರತ್ತಾಳ, ಸಹಾಯಕ ಕೃಷಿ ಅಧಿಕಾರಿಗಳಾದ ಪರಶುರಾಮ ಮತ್ತು ಕೃಷಿ ತಾಂತ್ರಿಕ ಅಧಿಕಾರಿಗಳಾದ ಜಗದೀಶ ಭಾಗವಹಿಸಿದ್ದರು. ಸುತ್ತಮುತ್ತಲಿನ ಗ್ರಾಮದ ಸುಮಾರು ೬೦ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...