ಗುರುವಾರ, ಡಿಸೆಂಬರ್ 19, 2019

ಇಂದು ಸಲಕರಣೆ ವಿತರಣೆ ಶಿಬಿರ
ಯಾದಗಿರಿ, ಡಿಸೆಂಬರ್ ೧೯ (ಕರ್ನಾಟಕ ವಾರ್ತೆ): ಗುರುಮಠಕಲ್ ತಾಲ್ಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲಾ ಬಗೆಯ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಸಾಧನೆ ಸಲಕರಣೆಗಳನ್ನು ವಿತರಿಸುವ ಶಿಬಿರವನ್ನು ಡಿಸೆಂಬರ್ ೨೦ರಂದು ಏರ್ಪಡಿಸಲಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಶರಣಪ್ಪ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು, ವಿಕಲಚೇತನರಿಂದ ಅರ್ಜಿ ಆಹ್ವಾನ
ಯಾದಗಿರಿ, ಡಿಸೆಂಬರ್ ೧೯ (ಕರ್ನಾಟಕ ವಾರ್ತೆ): ಗುರುಮಠಕಲ್ ಪುರಸಭೆ ವತಿಯಿಂದ ೨೦೧೯-೨೦ನೇ ಸಾಲಿನ ಶೇ.೭.೨೫ರ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹೊರತುಪಡಿಸಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ವಿಕಲಚೇತನರಿಗೆ ತ್ರಿಚಕ್ರ ವಾಹನ ಹಾಗೂ ವಿಕಲಚೇತನರಿಗೆ ಆರೋಗ್ಯ ಚಿಕಿತ್ಸೆ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ.ಪ್ರಸ್ತುತ ವಿದ್ಯಾಭ್ಯಾಸ ಮಾಡುತ್ತಿರುವ ಎಸ್‌ಎಸ್‌ಎಲ್‌ಸಿ ಯಲ್ಲಿ ಉತ್ತೀರ್ಣರಾದ ೧೦ ವಿಧ್ಯಾರ್ಥಿಗಳಿಗೆ ತಲಾ ೩೦೦೦ ರೂ., ಪಿ.ಯು.ಸಿಯಲ್ಲಿ ಉತ್ತೀರ್ಣರಾದ ೨೦ ವಿದ್ಯಾರ್ಥಿಗಳಿಗೆ ತಲಾ ೪೫೦೦ ರೂ. ಹಾಗೂ ಬಿಎ., ಬಿ.ಎಸ್.ಸಿ., ಬಿ.ಕಾಂ ಇತರೆ ಉತ್ತೀರ್ಣರಾದ ೧೨ ವಿದ್ಯಾರ್ಥಿಗಳಿಗೆ ತಲಾ ೫೦೦೦ ರೂ.ಗಳ ಆರ್ಥಿಕ ನೆರವು ನೀಡಲಾಗುವುದು. ಇಬ್ಬರು ವಿಕಲಚೇತನರಿಗೆ ತ್ರಿಚಕ್ರ ವಾಹನ ಹಾಗೂ ಐವರು ವಿಕಲಚೇತನರಿಗೆ ಆರೋಗ್ಯ ಚಿಕಿತ್ಸೆ ನೆರವು ನೀಡಲಾಗುವುದು. ಫಲಾನುಭವಿಗಳು ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ ೩೧ರಂದು ಸಂಜೆ ೫ ಗಂಟೆ ಒಳಗಾಗಿ ಅರ್ಜಿ ಸಲ್ಲಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.೨೬ರಂದು ಜಿಲ್ಲಾಮಟ್ಟದ ಯುವಜನೋತ್ಸವ
ಯಾದಗಿರಿ, ಡಿಸೆಂಬರ್ ೧೯ (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ ೨೬ರಂದು ಬೆಳಿಗ್ಗೆ ೧೦ ಗಂಟೆಗೆ ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ಆಯೋಜಿಸಲಾಗಿದೆ.
ಸ್ಪರ್ಧೆಗಳ ವಿವರ: ಜನಪದ ನೃತ್ಯ ೧೫ರಿಂದ ೨೦ ಜನರ ಗುಂಪು, ಭರತ ನಾಟ್ಯ (ಒಡಿಸ್ಸಿ, ಮಣಿಪುರಿ, ಕೂಚುಪುಡಿ) ವೈಯಕ್ತಿಕ, ತಬಲಾ, ಸಿತಾರ, ಕೊಳಲು, ವೀಣೆ, ಮೃದಂಗ (ವೈಯಕ್ತಿಕ), ಹಾರ್ಮೋನಿಯಂ, ಗೀಟಾರ (ವೈಯಕ್ತಿಕ), ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ (ವೈಯಕ್ತಿಕ), ಆಶುಭಾಷಣ ಸ್ಪರ್ಧೆ (ಹಿಂದಿ, ಇಂಗ್ಲಿಷ್ ಮಾತ್ರ) ವೈಯಕ್ತಿಕ, ಏಕಾಂತ ನಾಟಕ (ಹಿಂದಿ, ಇಂಗ್ಲಿಷ್‌ನಲ್ಲಿ ಮಾತ್ರ) ವೈಯಕ್ತಿಕ, ಜನಪದ ಗೀತೆ (೧೦ ಜನರ ಗುಂಪು), ಜನಪದ ನೃತ್ಯ (೫ರಿಂದ ೨೦ ಜನರ ಗುಂಪು), ಭಾವಗೀತೆ (ಯುವಕ- ಯುವತಿಯರಿಗೆ ಪ್ರತ್ಯೇಕ), ರಂಗಗೀತೆ (೧೦ ಜನರ ಗುಂಪು ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ), ಏಕ ಪಾತ್ರಾಭಿನಯ (ವೈಯಕ್ತಿಕ), ಗೀಗೀ ಪದ (೧೦ ಜನರ ಗುಂಪು), ಕೋಲಾಟ (೧೦ ಜನರ ಗುಂಪು) ಸ್ಪರ್ಧೆಗಳು ನಡೆಯಲಿದ್ದು, ಜಿಲ್ಲೆಯ ಆಸಕ್ತ ಯುವಜನರು ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ:೯೯೪೫೬೨೬೧೦೪, ೯೮೮೬೬೭೫೨೬೩ ಸಂಪರ್ಕಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಚನಬಸಪ್ಪ ಕುಳಗೇರಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...