ಸಕಾಲ ಅರ್ಜಿ ವಿಲೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ
ಯಾದಗಿರಿ, ಡಿಸೆಂಬರ್ ೦೫ (ಕರ್ನಾಟಕ ವಾರ್ತೆ): ಸಕಾಲ ಅರ್ಜಿಗಳ ವಿಲೆಯಲ್ಲಿ ನವೆಂಬರ್ ೨೦೧೯ರ ಮಾಹೆಯಲ್ಲಿ ಯಾದಗಿರಿ ಜಿಲ್ಲೆಯು ರಾಜ್ಯಮಟ್ಟದಲ್ಲಿ ಒಂದನೇ ಸ್ಥಾನ ಪಡೆದಿದೆ. ಈ ಸಾಧನೆಗಾಗಿ ಜಿಲ್ಲಾಡಳಿತವು ಜಿಲ್ಲೆಯ ಎಲ್ಲ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರನ್ನು ಅಭಿನಂದಿಸುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯು ಸಕಾಲ ಅರ್ಜಿಗಳ ವಿಲೆಯಲ್ಲಿ ೫ನೇ ಸ್ಥಾನ, ಅರ್ಜಿಗಳ ಸ್ವೀಕೃತಿಯಲ್ಲಿ ೪ನೇ ಹೊಂದಿದ್ದು, ಒಟ್ಟಾರೆ ರಾಜ್ಯಮಟ್ಟದಲ್ಲಿ ಒಂದನೇ ಸ್ಥಾನದಲ್ಲಿರುತ್ತದೆ. ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ- ೨೦೧೧ ತಿದ್ದುಪಡಿ ಅಧಿನಿಯಮ- ೨೦೧೪ರಡಿಯಲ್ಲಿ ರಾಜ್ಯ ಸರಕಾರದ ವಿವಿಧ ೯೧ ಇಲಾಖೆ, ಸಂಸ್ಥೆಗಳ ಒಟ್ಟು ೧೦೧೩ ಸೇವೆಗಳ ಸಕಾಲ ಅಧಿನಿಯಮಕ್ಕೆ ಒಳಪಟ್ಟಿರುತ್ತವೆ. ನವೆಂಬರ್ ತಿಂಗಳಲ್ಲಿ ಜಿಲ್ಲೆಯ ಕಂದಾಯ ಇಲಾಖೆ, ಗೃಹ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೃಷಿ, ಪಶುಸಂಗೋಪನೆ ಇಲಾಖೆಗಳನ್ನು ಒಳಗೊಂಡು ಒಟ್ಟು ೫೮,೯೮೧ ಅರ್ಜಿಗಳು ಸ್ವೀಕೃತಿಯಾಗಿದ್ದು, ಇವುಗಳಲ್ಲಿ ೫೫,೮೧೨ ಅರ್ಜಿಗಳನ್ನು ನಿಗದಿತ ಕಾಲಾವಧಿಯೊಳಗೆ ವಿಲೆಗೊಳಿಸಲಾಗಿರುತ್ತದೆ. ನವೆಂಬರ್ ೨೦೧೯ರ ಮಾಹೆಯಲ್ಲಿ ಒಟ್ಟು ೬೧,೬೨೯ ಅರ್ಜಿಗಳು ವಿಲೆಗೊಳಸಲಾಗಿರುತ್ತದೆ. ಜಿಲ್ಲೆಯ ನಾಗರಿಕರು ಸಕಾಲ ಅಧಿನಿಯಮಡಿ ಒಳಪಡುವ ವಿವಿಧ ಇಲಾಖೆಗಳ ಸೇವೆಗಳನ್ನು ಸಕಾಲದಲ್ಲಿ ಅರ್ಜಿ ಸಲ್ಲಿಸಿ ಉಪಯೋಗ ಮಾಡಿಕೊಳ್ಳಲು ಅವರು ಕೋರಿದ್ದಾರೆ.
ಲೋಕಾಯುಕ್ತ ಪೊಲೀಸರಿಂದ ಅಹವಾಲು ಸ್ವೀಕಾರ
ಯಾದಗಿರಿ, ಡಿಸೆಂಬರ್ ೦೫ (ಕರ್ನಾಟಕ ವಾರ್ತೆ): ಯಾದಗಿರಿಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಉಮೇಶ ಬಿ.ಚಿಕ್ಕಮಠ ಅವರು ಜಿಲ್ಲೆಯ ವಿವಿಧೆಡೆ ನಿಗದಿಪಡಿಸಿದ ದಿನಾಂಕಗಳ0ದು ಸಾರ್ವಜನಿಕರಿಂದ ಭ್ರಷ್ಟಾಚಾರ ಮತ್ತು ಸರ್ಕಾರಿ ಕಚೇರಿಗಳಲ್ಲಿನ ಕುಂದುಕೊರತೆಗಳ ಕುರಿತು ಅಹವಾಲು ಸ್ವೀಕರಿಸುವರು.
ಡಿಸೆಂಬರ್ ೧೦ರಂದು ಬೆಳಿಗ್ಗೆ ೧೧ರಂದು ಸುರಪುರ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ, ಡಿ.೧೮ರಂದು ಹುಣಸಗಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಈ ದಿನಾಂಕಗಳ0ದು ಸಂಬ0ಧಪಟ್ಟ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಉಪಸ್ಥಿತರಿರುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೀನುಗಾರಿಕೆ ಮಾಡಲು ಅರ್ಜಿ ಆಹ್ವಾನ
ಯಾದಗಿರಿ, ಡಿಸೆಂಬರ್ ೦೫ (ಕರ್ನಾಟಕ ವಾರ್ತೆ): ೨೦೧೯-೨೦ನೇ ಸಾಲಿಗೆ ಸುರಪುರ ತಾಲ್ಲೂಕಿನ ಸರ್ಕಾರಿ ಸ್ವಾಮ್ಯದ ಕೃಷ್ಣಾ ನದಿ ಭಾಗದ ಜಲಸಂಪನ್ಮೂಲದಲ್ಲಿ ಮೀನುಗಾರಿಕೆಗೆ ಪರವಾನಗಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ನಾರಾಯಣಪುರ ಜಲಾಶಯದಿಂದ ಡೋಣಿ ಅಮ್ಮಾಪುರ ವರೆಗೆ ೨೫ ಕಿ.ಮೀ. ವ್ಯಾಪ್ತಿ, ಡೋಣಿ ಅಮ್ಮಾಪುರದಿಂದ ಬೆಂಚಿಗಡ್ಡಿ ವರೆಗೆ ೨೫ ಕಿ.ಮೀ. ವ್ಯಾಪ್ತಿ, ಬೆಂಚಿಗಡ್ಡಿಯಿAದ ತಿಂಥಣಿ ಬ್ರಿಡ್ಜ್ ವರೆಗೆ ೧೫ ಕಿ.ಮೀ. ವ್ಯಾಪ್ತಿ, ತಿಂಥಣಿ ಬ್ರಿಡ್ಜ್ನಿಂದ ಯಮನೂರ ವರೆಗೆ ೨೫ ಕಿ.ಮೀ. ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ಪರವಾನಿಗೆ ನೀಡಲು ಪ್ರಸ್ತಾಪಿಸಲಾಗಿದೆ. ಆಸಕ್ತಿಯುಳ್ಳ ವೃತ್ತಿಪರ ಮೀನುಗಾರರು ಸುರಪುರದ ಮೀನುಗಾರಿಕೆ ನಿರ್ದೇಶಕರು ಶ್ರೇಣಿ-೨ ಅವರ ಕಚೇರಿಯಿಂದ ನಿಗದಿತ ನಮೂನೆಯ ಅರ್ಜಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಡಿ.೧೭ರಂದು ವಾಹನಗಳ ಬಹಿರಂಗ ಹರಾಜು
ಯಾದಗಿರಿ, ಡಿಸೆಂಬರ್ ೦೫ (ಕರ್ನಾಟಕ ವಾರ್ತೆ): ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ ಒಟ್ಟು ೧೬ ವಾಹನಗಳ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಡಿಸೆಂಬರ್ ೧೭ರಂದು ಸುರಪುರ ವಲಯದ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಹರಾಜಿನ ನಿರ್ವಹಣಾಧಿಕಾರಿಯನ್ನಾಗಿ ಶಹಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರನ್ನು ನೇಮಿಸಲಾಗಿದೆ. ಹರಾಜಿನಲ್ಲಿ ಭಾಗವಹಿಸುವ ಸಾರ್ವಜನಿಕರು ಡಿ.೧೭ರಂದು ಬೆಳಿಗ್ಗೆ ೧೧ ಗಂಟೆಯ ಒಳಗಾಗಿ ದ್ವಿಚಕ್ರ ವಾಹನಗಳಿಗೆ ೫ ಸಾವಿರ ರೂ., ತ್ರಿಚಕ್ರ ವಾಹನಗಳಿಗೆ ೮ ಸಾವಿರ ರೂ. ಮತ್ತು ನಾಲ್ಕು ಚಕ್ರದ ವಾಹನಗಳಿಗೆ ೧೦ ಸಾವಿರ ರೂ. ಮುಂಗಡ ಠೇವಣಿಯನ್ನು ಪಾವತಿಸಿ ರಸೀದಿ ಪಡಯತಕ್ಕದ್ದು. ಯಶಸ್ವಿ ಸವಾಲುದಾರರು ಹರಾಜು ದಿನದಂದು ಸವಾಲು ಮೊತ್ತದ ಶೇ.೨೫ರಷ್ಟು ಹಣವನ್ನು ಪಾವತಿಸಿ ರಸೀದಿ ಪಡೆಯಬೇಕು. ಉಳಿದ ಶೇ.೭೫ರಷ್ಟು ಹಣವನ್ನು ಸ್ಥಿರೀಕರಣ ಆದೇಶ ತಲುಪಿದ ಮೂರು ದಿನಗಳ ಒಳಗಾಗಿ ಪಾವತಿಸಿ ವಾಹನ ಪಡೆಯತಕ್ಕದ್ದು. ತಪ್ಪಿದಲ್ಲಿ ಶೇ.೨೫ರಷ್ಟ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಮರು ಹರಾಜು ಕೈಗೊಳ್ಳುವ ಅಧಿಕಾರವನ್ನು ಯಾದಗಿರಿ ಅಬಕಾರಿ ಉಪ ಆಯುಕ್ತರು ಹೊಂದಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮನೆ ನಿರ್ಮಾಣಕ್ಕೆ ಸಹಾಯಧನ: ಅರ್ಜಿ ಆಹ್ವಾನ
ಯಾದಗಿರಿ, ಡಿಸೆಂಬರ್ ೦೫ (ಕರ್ನಾಟಕ ವಾರ್ತೆ): ಶಹಾಪುರ ನಗರಸಭೆ ವ್ಯಾಪ್ತಿಯ ವಸತಿರಹಿತ ಖಾಲಿ ನಿವೇಶನ ಹೊಂದಿದ ಬಡ ಹಾಗೂ ಮಧ್ಯಮವರ್ಗದವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಸ್ವಂತ ಮನೆ ನಿರ್ಮಿಸಿಕೊಳ್ಳಲು ೧.೫೦ ಲಕ್ಷ ರೂ.ಗಳ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ನೊಂದಿಗೆ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಕುಟುಂಬದ ವಾರ್ಷಿಕ ಆದಾಯ ೩ ಲಕ್ಷ ರೂ.ಗಳಿಗಿಂತ ಕಡಿಮೆ ಇರಬೇಕು. ಅಗತ್ಯ ದಾಖಲಾತಿಗಳೊಂದಿಗೆ ಪ್ರಕಟಣೆ ಹೊರಡಿಸಿದ ೧೫ ದಿನಗಳ ಒಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ