ಇಂದು ಎಸಿಬಿ ಅಧಿಕಾರಿಗಳಿಂದ ಅಹವಾಲು ಸ್ವೀಕಾರ
ಯಾದಗಿರಿ, ಡಿಸೆಂಬರ್ ೦೩ (ಕರ್ನಾಟಕ ವಾರ್ತೆ): ಯಾದಗಿರಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಡಿಸೆಂಬರ್ ೪ರಂದು ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಯಾದಗಿರಿ ತಾಲ್ಲೂಕಿನ ಠಾಣಗುಂದಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಜನಸಂಪರ್ಕ ಸಭೆ ನಡೆಸಿ ಅರ್ಜಿ ಅಹವಾಲು ಸ್ವೀಕಾರ ಮಾಡಲಿದ್ದು, ಸಾರ್ವಜನಿಕರು ಅಧಿಕಾರಿಗಳಿಗೆ ಭೇಟಿಯಾಗಿ ಭ್ರಷ್ಟಾಚಾರಕ್ಕೆ ಸಂಬAಧಿಸಿದAತೆ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.
ಭ್ರಷ್ಟಾಚಾರ ನಿಗ್ರಹ ದಳದ ಡಿಎಸ್‌ಪಿ ಡಾ.ಸಂತೋಷ ಕೆ.ಎಂ. (ಮೊ:೯೪೮೦೮ ೦೬೨೪೨), ಪೊಲೀಸ್ ಇನ್‌ಸ್ಪೆಕ್ಟರ್ ಬಾಬಾಸಾಹೇಬ ಪಾಟೀಲ್ (ಮೊ:೯೪೮೦೮ ೦೬೩೧೩), ಪೊಲೀಸ್ ಇನ್‌ಸ್ಪೆಕ್ಟರ್ ಗುರುಪಾದ ಎಸ್.ಬಿರಾದಾರ (ಮೊ:೯೪೮೦೮ ೦೬೩೧೪) ಅವರು ಅಹವಾಲು ಸ್ವೀಕರಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉಚಿತ ಜಾನುವಾರು ವಿಮೆ
ಯಾದಗಿರಿ, ಡಿಸೆಂಬರ್ ೦೩ (ಕರ್ನಾಟಕ ವಾರ್ತೆ): ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ಉಚಿತ ಜಾನುವಾರು ವಿಮೆ ಕಾರ್ಯಕ್ರಮ ಜಾರಿಯಲ್ಲಿದ್ದು, ಜಿಲ್ಲೆಯ ರೈತಬಾಂಧವರು ತಮ್ಮ ಜಾನುವಾರುಗಳಿಗೆ (ಹಸು, ಎಮ್ಮೆ, ಎತ್ತು) ಉಚಿತವಾಗಿ ಗರಿಷ್ಠ ೩ ವರ್ಷಗಳ ಅವಧಿಗೆ ವಿಮೆ ಮಾಡಲಾಗುತ್ತಿದೆ.
ವಿಮೆ ಪ್ರಿಮಿಯಂ ಮೊತ್ತವನ್ನು ಸಹಾಯಧನವಾಗಿ ಇಲಾಖೆಯಿಂದ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಈ ಕಾರ್ಯಕ್ರಮದ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಲು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ.ಶರಣಭೂಪಾಲರೆಡ್ಡಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ