ಟೆಲಿವಿಷನ್ ನೆಟ್‌ವರ್ಕ್ ಅಧಿನಿಯಮ ಮೇಲ್ವಿಚಾರಣೆಯ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆ
ಕೇಬಲ್ ಟಿ.ವಿಗಳಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುವ ದೃಶ್ಯ ಪ್ರಸಾರ ಮಾಡುವಂತಿಲ್ಲ
-ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್
ಯಾದಗಿರಿ, ಡಿಸೆಂಬರ್ ೦೭ (ಕರ್ನಾಟಕ ವಾರ್ತೆ): ಕೇಬಲ್ ಹಾಗೂ ಸೆಟಲೈಟ್ ಮೂಲಕ ಪ್ರಸಾರ ಹೊಂದಿರುವ ಟೆಲಿವಿಷನ್ ನ್ಯೂಸ್ ಮತ್ತು ಮನರಂಜನೆ ಟಿ.ವಿ ಚಾನೆಲ್‌ಗಳಲ್ಲಿ ಜಾತಿ-ಧರ್ಮ ಹಾಗೂ ಸಾಮಾಜಿಕ ಸಾಮರಸ್ಯೆಗೆ ಧಕ್ಕೆಯಾಗುವ ಮತ್ತು ಆಕ್ಷೇಪಾರ್ಹ ದೃಶ್ಯಗಳು ಪ್ರಸಾರವಾದಲ್ಲಿ ಸಾರ್ವಜನಿಕರು ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಟೆಲಿವಿಷನ್ ನೆಟ್‌ವರ್ಕ್ (ರೆಗ್ಯುಲೇಷನ್) ಅಧಿನಿಯಮ-೧೯೯೫ ಮತ್ತು ಅದರ ಮೇರೆಗೆ ಮಾಡಲಾದ ನಿಯಮಗಳ ಜಾರಿಯ ಮೇಲ್ವಿಚಾರಣೆಗೆ ರಚಿಸಲಾಗಿರುವ ಜಿಲ್ಲಾಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ, ಅವರು ಮಾತನಾಡಿದರು.
ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿಗಳು, ಇನ್ನು ಮುಂದೆ ಜಿಲ್ಲಾಮಟ್ಟದಲ್ಲಿ ದೂರುಗಳನ್ನು ದಾಖಲಿಸಲು ಅನುವಾಗುವಂತೆ ದೂರು ಕೋಶಗಳಾಗಿಯೂ ಕಾರ್ಯನಿರ್ವಹಿಸುವಂತೆ ಸರ್ಕಾರದಿಂದ ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಗ್ರಾಹಕರಿಂದ ದೂರು ಪಡೆಯಲು ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ತಹಶೀಲ್ದಾರ್ ಕಚೇರಿಗಳಲ್ಲಿ ಸಂಬAಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣವೇ ದೂರು ಪೆಟ್ಟಿಗೆ ಸ್ಥಾಪಿಸಲು ಕ್ರಮ ವಹಿಸಬೇಕು ಎಂದು ಅವರು ಸೂಚಿಸಿದರು.
ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿಯ ಇ-ಮೇಲ್ ವಿಳಾಸ: dcydg123@gmail.com ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಇ-ಮೇಲ್ ವಿಳಾಸ: varthabhavanyadagiri@gmail.com ಜೊತೆಗೆ ದೂರು ಪೆಟ್ಟಿಗೆ ಅಥವಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಖುದ್ದಾಗಿ ಬಂದು ದೂರು ದಾಖಲಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕೇಬಲ್ ಟೆಲಿವಿಷನ್ ನೆಟ್‌ವರ್ಕ್ (ರೆಗ್ಯುಲೇಷನ್) ಅಧಿನಿಯಮ-೧೯೯೫ರ ವ್ಯಾಪ್ತಿಗೊಳಪಡುವ ಕಾರ್ಯಕ್ರಮ ಸಂಕೇತ ಹಾಗೂ ಜಾಹೀರಾತು ಸಂಕೇತದ ಉಲ್ಲಂಘನಾ ಪ್ರಕರಣಗಳು, ಆಕ್ಷೇಪಾರ್ಹ ಅಂಶಗಳು, ಕೇಬಲ್ ಟಿ.ವಿ.ನಲ್ಲಿ ಪ್ರಸಾರವಾಗುವ ಕಾರ್ಯಕ್ರಮ ವೀಕ್ಷಿಸಲು ಮತ್ತು ಕೇಳಲು ಸಂಕೇತಾಕ್ಷರಗಳು ಗುಣಮಟ್ಟದಿಂದ ಕೂಡಿರದಿದ್ದಲ್ಲಿ ದೂರು ನೀಡಬಹುದು. ಅಲ್ಲದೆ, ಜಿಲ್ಲೆಯ ಕೇಬಲ್ ಆಪರೇಟರ್‌ಗಳು ಟ್ರಾಯ್ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಕೇಬಲ್ ಶುಲ್ಕ ವಿಧಿಸಿದಲ್ಲಿ ದೂರು ದಾಖಲಿಸಬಹುದು ಎಂದು ಅವರು ತಿಳಿಸಿದರು.
ಸುದ್ದಿ ವರದಿಗೆ ನಿರ್ಬಂಧ: ಕೇಬಲ್ ಆಪರೇಟರ್‌ಗಳು ಯಾವುದೇ ಕಾರಣಕ್ಕೂ ಸುದ್ದಿ ವಾಹಿನಿ ರೀತಿಯಲ್ಲಿ ಕೇಬಲ್ ಹೆಸರಿನ ಲೋಗೋ ಸೃಜಿಸಿ ಸಾರ್ವಜನಿಕ ವರದಿ ಮಾಡುವುದು, ಡಿಬೇಟ್ ಆಯೋಜಿಸಲು ಕಾಯ್ದೆಯಲ್ಲಿ ಅವಕಾಶವಿಲ್ಲ. ಇದಲ್ಲದೆ ಕೇಬಲ್ ಆಪರೇಟರ್‌ಗಳು ಹಾಗೂ ಖಾಸಗಿ ಸುದ್ದಿ ವಾಹಿನಿಗಳು ವ್ಯಕ್ತಿ ಸ್ವಾತಂತ್ರ‍್ಯ, ಜಾತಿ-ಧರ್ಮ ಜನಾಂಗಕ್ಕೆ ಧಕ್ಕೆಯಾಗುವ ರೀತಿಯಲಿ,್ಲ ಸಂವಿಧಾನ ಹಾಗೂ ದೇಶದ ಭದ್ರತೆ ವಿರುದ್ಧವಾಗಿ, ಸಾರ್ವಜನಿಕ ಶಾಂತಿಗೆ ಭಂಗವನ್ನುAಟು ಮಾಡುವ, ಚಾರಿತ್ರö್ಯ ವಧೆ, ಸಾಮಾಜಿಕ ಸಾಮರಸ್ಯೆಗೆ ಧಕ್ಕೆ, ನಿರ್ದಿಷ್ಠ ಸಮುದಾಯಕ್ಕೆ ವ್ಯಾಪಕ ಅತೃಪ್ತಿಯನ್ನುಂಟು ಮಾಡುವ, ಆಕ್ಷೇಪಾರ್ಹ ಅಂಶಗಳನ್ನು ಪ್ರಸಾರ ಮಾಡುವಂತಿಲ್ಲ. ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಕಟ್ಟುನಿಟ್ಟಾಗಿ ಸೂಚಿಸಿದರು.
ಅಂಚೆ ಇಲಾಖೆಯಿಂದ ಜಿಲ್ಲೆಯ ಕೇಬಲ್ ಆಪರೇಟರ್‌ಗಳ ಪಟ್ಟಿಯನ್ನು ಪಡೆಯಬೇಕು. ನಂತರ ಗ್ರಾಹಕರಿಗೆ ಪ್ಲ್ಯಾನ್‌ಗನುಗುಣವಾಗಿ ಆಪರೇಟರ್‌ಗಳು ವಿಧಿಸುತ್ತಿರುವ ಶುಲ್ಕದ ಮಾಹಿತಿ ಸಂಗ್ರಹಿಸಬೇಕು ಎಂದು ಅವರು ಸೂಚಿಸಿದರು.
ಪ್ರತಿ ೨ ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆ ನಡೆಸಿ ಆ ಅವಧಿಯಲ್ಲಿ ಸ್ವೀಕರಿಸಿದ ದೂರುಗಳನ್ನು ಸಮಿತಿಯು ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಹಿಂದಿನ ಸಭೆಗಳಲ್ಲಿ ತೆಗೆದುಕೊಂಡ ನಿರ್ಧಾರದಂತೆ ಕ್ರಮವಹಿಸಿ ಅನುಪಾಲನಾ ವರದಿಯನ್ನು ಸಂಬ0ಧಪಟ್ಟ ಇಲಾಖೆಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಿಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ್ ಭಗವಾನ್ ಸೋನವಣೆ ಅವರು ಮಾತನಾಡಿ, ಕೆಲ ಕೇಬಲ್ ಆಪರೇಟರ್‌ಗಳು ಮಧ್ಯರಾತ್ರಿ ಅಶ್ಲೀಲ ವೀಡಿಯೊಗಳನ್ನು ಪ್ರಸಾರ ಮಾಡುತ್ತಿರುತ್ತಾರೆ. ಇದರ ಬಗ್ಗೆ ಕೂಡ ಕ್ರಮ ಕೈಗೊಳ್ಳಬೇಕಿದೆ ಎಂಬುದಾಗಿ ಸಭೆಯ ಗಮನಕ್ಕೆ ತಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಸಿದ್ದೇಶ್ವರಪ್ಪ ಜಿ.ಬಿ. ಅವರು ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ಮಂಡಿಸಿದರು.
ಸಮಿತಿ ಸದಸ್ಯರಾದ ಸರಕಾರಿ ಪದವಿ ಪೂರ್ವ ಮಹಿಳಾ ವಿದ್ಯಾಲಯದ ಪ್ರಾಂಶುಪಾಲರಾದ ಚನ್ನಬಸಪ್ಪ ಕುಳಗೇರಿ, ಡಾನ್ ಬಾಸ್ಕೋ ಸಮಾಜ ಸೇವಾ ಕೇಂದ್ರದ ಫಾದರ್ ಜಿ., ಶಿಕ್ಷಣತಜ್ಞರಾದ ಚಂದ್ರಕಾ0ತ ಜೆ.ಹಿಳ್ಳಿ, ಮನಃಶಾಸ್ತçಜ್ಞರಾದ ಶರಣಗೌಡ, ಕಸ್ತೂರಬಾ ಸ್ವಯಂ ಸೇವಾ ಸಂಸ್ಥೆಯ ಸುನಿತಾ ಚವ್ಹಾಣ್ ಅವರು ಸಭೆಯಲ್ಲಿ ಉಪಸ್ಥಿತರಿದ್ದು, ತಮ್ಮ ಸಲಹೆ-ಅಭಿಪ್ರಾಯಗಳನ್ನು ನೀಡಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ