ಸೋಮವಾರ, ಡಿಸೆಂಬರ್ 9, 2019

ಇಂದು ಎಸಿಬಿ ಅಧಿಕಾರಿಗಳಿಂದ ಅಹವಾಲು ಸ್ವೀಕಾರ
ಯಾದಗಿರಿ, ಡಿಸೆಂಬರ್ 09 (ಕರ್ನಾಟಕ ವಾರ್ತೆ): ಯಾದಗಿರಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಡಿಸೆಂಬರ್ 10ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಗುರುಮಠಕಲ್ ತಾಲ್ಲೂಕಿನ ಗಾಜರಕೋಟ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಜನಸಂಪರ್ಕ ಸಭೆ ನಡೆಸಿ ಅರ್ಜಿ ಅಹವಾಲು ಸ್ವೀಕಾರ ಮಾಡಲಿದ್ದು, ಸಾರ್ವಜನಿಕರು ಅಧಿಕಾರಿಗಳಿಗೆ ಭೇಟಿಯಾಗಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.
ಭ್ರಷ್ಟಾಚಾರ ನಿಗ್ರಹ ದಳದ ಡಿಎಸ್‍ಪಿ ಡಾ.ಸಂತೋಷ ಕೆ.ಎಂ. (ಮೊ:94808 06242), ಪೊಲೀಸ್ ಇನ್‍ಸ್ಪೆಕ್ಟರ್ ಬಾಬಾಸಾಹೇಬ ಪಾಟೀಲ್ (ಮೊ:94808 06313), ಪೊಲೀಸ್ ಇನ್‍ಸ್ಪೆಕ್ಟರ್ ಗುರುಪಾದ ಎಸ್.ಬಿರಾದಾರ (ಮೊ:94808 06314) ಅವರು ಅಹವಾಲು ಸ್ವೀಕರಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕುರಿ, ಆಡು ಮರಿಗಳ ವಿಲೇವಾರಿಗೆ ಅರ್ಜಿ ಆಹ್ವಾನ
ಯಾದಗಿರಿ, ಡಿಸೆಂಬರ್ 09 (ಕರ್ನಾಟಕ ವಾರ್ತೆ): ಯಾದಗಿರಿ ತಾಲ್ಲೂಕಿನ ಮೈಲಾಪುರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ 2020ರ ಜನವರಿ 10ರಿಂದ 15ರವರೆಗೆ ಭಕ್ತಾದಿಗಳಿಂದ ಕುರಿ, ಆಡು ಮರಿಗಳನ್ನು ಮಲ್ಲಯ್ಯನ ಸನ್ನಿಧಿಗೆ/ಪಲ್ಲಕ್ಕಿಗೆ ಎಸೆಯುವುದನ್ನು ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ -1960 ರಡಿ ಜಿಲ್ಲಾಡಳಿತವು ನಿಷೇಧಿಸಿದೆ. ಅದರಂತೆ ಭಕ್ತರು ಜಾತ್ರೆಗೆ ತರುವ ಮರಿಗಳನ್ನು ಜಿಲ್ಲಾಡಳಿತದ ಆದೇಶದಂತೆ ವಶಪಡಿಸಿಕೊಂಡು ಟೆಂಡರ್ ಮೂಲಕ ಸೂಕ್ತವಾಗಿ ವಿಲೇವಾರಿ ಮಾಡುವ ಸಂಬಂಧ ಅರ್ಹ ಖರೀದಿದಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರತಿವರ್ಷದಂತೆ ಈ ವರ್ಷವು ಕೂಡ ಸುಮಾರು 1,000 ಮರಿಗಳನ್ನು ವಶಪಡಿಸಿಕೊಳ್ಳಬಹುದೆಂದು ಅಂದಾಜಿಸಲಾಗಿದೆ. ಕಳೆದ ಮೂರು ವರ್ಷಗಳ ಸರಾಸರಿ ದರದಂತೆ ಜಿಲ್ಲಾಡಳಿತವು ಪ್ರತಿಮರಿಯ ಕನಿಷ್ಠ ಬೆಲೆ 1,050 ರೂ.ಗಳನ್ನು ನಿಗದಿಪಡಿಸಿದೆ. ಇಚ್ಚೆಯುಳ್ಳ ಖರೀದಿದಾರರು ನಿಗದಿಪಡಿಸಿದ ಷರತ್ತಿಗಳಿಗೊಳಪಟ್ಟು ಅರ್ಜಿಗಳನ್ನು ಡಿಸೆಂಬರ್ 10ರಿಂದ 20ರವರೆಗೆ ಯಾದಗಿರಿ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರಿಂದ ನಿಗದಿತಶುಲ್ಕ ಪಾವತಿಸಿ ಪಡೆಯತಕ್ಕದ್ದು. ಡಿ.21ರಂದು ಸಂಜೆ 5 ಗಂಟೆಯವರೆಗೆ ಭರ್ತಿ ಮಾಡಿದ ಅರ್ಜಿ ಸಲ್ಲಿಸಬಹುದು. ಟೆಂಡರ್ ತೆರೆಯುವ ಡಿಸೆಂಬರ್ 23ರಂದು ಬೆಳಿಗ್ಗೆ 12 ಗಂಟೆಗೆ ಜಿಲ್ಲಾಡಳಿತ ನೇಮಿಸಿದ ತಂಡದ ಮುಖಾಂತರ ಪ್ರಕಟಣೆ ಹೊರಡಿಸಿ ಅತಿ ಹೆಚ್ಚು ದರ ಪ್ರತಿ ಮರಿಗೆ ನಮೂದಿಸಿದವರನ್ನು (ಸಾಗಾಣಿಕೆ ವೆಚ್ಚ ಸೇರಿ) ಅಂತಿಮಗೊಳಿಸಿ ಆದೇಶ ನೀಡಲಾಗುವುದು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ.ಶರಣಭೂಪಾಲರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...