ಮಂಗಳವಾರ, ಡಿಸೆಂಬರ್ 10, 2019

ಇಂದು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ
ಯಾದಗಿರಿ, ಡಿಸೆಂಬರ್ ೧೦ (ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ೨೦೧೯-೨೦ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಡಿಸೆಂಬರ್ ೧೧ರಂದು ಬುಧವಾರ ಬೆಳಿಗ್ಗೆ ೧೦.೩೦ ಗಂಟೆಗೆ ಯಾದಗಿರಿ ನಗರದ ಡಾನ್‌ಬಾಸ್ಕೊ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಪಶುಸಂಗೋಪನೆ, ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ಹಜ್ ಮತ್ತು ವಕ್ಫ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕರಾದ ವೆಂಕಟರಡ್ಡಿಗೌಡ ಮುದ್ನಾಳ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್, ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ, ಡಾ.ಉಮೇಶ ಜಿ.ಜಾಧವ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ವಿಧಾನಸಭಾ ಸದಸ್ಯರಾದ ಶರಣಬಸಪ್ಪಗೌಡ ದರ್ಶನಾಪೂರ, ನರಸಿಂಹ ನಾಯಕ (ರಾಜುಗೌಡ), ನಾಗನಗೌಡ ಕಂದಕೂರ, ಶರಣಪ್ಪ ಮಟ್ಟೂರ, ಚಂದ್ರಶೇಖರ ಪಾಟೀಲ್, ಬಿ.ಜಿ.ಪಾಟೀಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿನೋದ ಪಾಟೀಲ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಭೀಮವ್ವ ಮಲ್ಲೇಶಪ್ಪ ಅಚ್ಚೋಲಾ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.
ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಡಾನ್‌ಬಾಸ್ಕೋ ಶಾಲೆ ಮುಖ್ಯಗುರು ಫಾದರ್ ಆಂಟೋನಿ ಪ್ರಾನ್ಸಿಸ್ ಅವರು ಆಹ್ವಾನಿತರಾಗಿ ಭಾಗವಹಿಸುವರು.
ನಾಳೆ ಪ್ರೌಢಶಾಲಾ ಮಕ್ಕಳ ಕಾರ್ಯಕ್ರಮ: ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಯಾದಗಿರಿ ನಗರದ ಡಾನ್‌ಬಾಸ್ಕೋ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಡಿಸೆಂಬರ್ ೧೧ರಂದು ಪ್ರಾಥಮಿಕ ಶಾಲಾ ಮಕ್ಕಳ ಕಾರ್ಯಕ್ರಮಗಳು ಹಾಗೂ ೧೨ರಂದು ಪ್ರೌಢ ಶಾಲಾ ಮಕ್ಕಳ ಕಾರ್ಯಕ್ರಮಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿ ವೀರಪ್ಪ ಮೊ:೮೧೦೫೪೧೯೧೯೭ ಅವರನ್ನು ಸಂಪರ್ಕಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದರಪಟ್ಟಿ ಆಹ್ವಾನ
ಯಾದಗಿರಿ, ಡಿಸೆಂಬರ್ ೧೦ (ಕರ್ನಾಟಕ ವಾರ್ತೆ): ಯಾದಗಿರಿ ತಾಲ್ಲೂಕಿನ ಮೈಲಾಪುರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಜಾತ್ರೆಯು ೨೦೨೦ರ ಜನವರಿ ೧೨ರಿಂದ ೧೮ರವರೆಗೆ ನಡೆಯಲಿದ್ದು, ಜಾತ್ರೆಯ ಪ್ರಚಾರಕ್ಕಾಗಿ ಭಿತ್ತಿ ಪತ್ರಗಳುಹಾಗೂ ವಿವಿಧ ಬಟ್ಟೆ ಬ್ಯಾನರ್, ನೇರ ದರ್ಶನ ರಸೀದಿ ಪುಸ್ತಕ, ಗುರುತಿನ ಚೀಟಿಗಳನ್ನು ಒದಗಿಸಲು ದರಪಟ್ಟಿ ಆಹ್ವಾನಿಸಲಾಗಿದೆ.
ಟೆಂಡರ್ ನೀಡುವ ಪ್ರಕ್ರಿಯೆಯನ್ನು ಡಿಸೆಂಬರ್ ೧೬ರಂದು ಮಧ್ಯಾಹ್ನ ೧೨.೩೦ ಗಂಟೆಗೆ ಯಾದಗಿರಿ ತಹಸೀಲ್ ಕಚೇರಿಯಲ್ಲಿ ನಿಗದಿಪಡಿಸಲಾಗಿದ್ದು, ಭಾಗವಹಿಸುವವರು ಅಂದು ಬೆಳಿಗ್ಗೆ ೧೧ ಗಂಟೆಯೊಳಗಾಗಿ ದರಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ಗುರುತಿನ ಚೀಟಿ, ಲೈಸನ್ಸ್ ಜೊತೆಗೆ ಸಲ್ಲಿಸುವಂತೆ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೆಂಗಿನಕಾಯಿ, ಜೋಕಾಲಿ, ಕೂದಲು ಹರಾಜು ಪ್ರಕ್ರಿಯೆ
ಯಾದಗಿರಿ, ಡಿಸೆಂಬರ್ ೧೦ (ಕರ್ನಾಟಕ ವಾರ್ತೆ): ಯಾದಗಿರಿ ತಾಲ್ಲೂಕಿನ ಮೈಲಾಪುರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಜಾತ್ರೆಯು ೨೦೨೦ರ ಜನವರಿ ೧೨ರಿಂದ ೧೮ರವರೆಗೆ ನಡೆಯಲಿದೆ. ಜಾತ್ರೆಯಲ್ಲಿ ಸಗಟು ತೆಂಗಿನಕಾಯಿ ಮಾರಾಟ, ಮನೋರಂಜನೆ ಜೋಕಾಲಿ ಅಳವಡಿಕೆಗಾಗಿ ಮತ್ತು ಕೂದಲು ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಡಿಸೆಂಬರ್ ೧೬ರಂದು ಸಂಜೆ ೪ ಗಂಟೆಯವರೆಗೆ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಡಿ.೧೭ರಂದು ಸಂಜೆ ೪ ಗಂಟೆಯವರೆಗೆ ಅಗತ್ಯ ದಾಖಲೆಗಳೊಂದಿಗೆ ಹರಾಜಿನಲ್ಲಿ ಭಾಗವಹಿಸಬಹುದು. ಡಿ.೧೮ರಂದು ಮಧ್ಯಾಹ್ನ ೨ ಗಂಟೆಯವರೆಗೆ ಗುತ್ತಿಗೆದಾರರ ದಾಖಲಾತಿ ಪರಿಶೀಲನೆ ನಡೆಯಲಿದೆ. ಡಿ.೧೯ರಂದು ಸಂಜೆ ೫ರಿಂದ ರಾತ್ರಿ ೭ ಗಂಟೆಯವರೆಗೆ ಸಗಟು ತೆಂಗಿನಕಾಯಿ ಹರಾಜು/ ಬಿಡ್ ಪ್ರಕ್ರಿಯೆ. ಡಿ.೨೦ರಂದು ಸಂಜೆ ೫ರಿಂದ ರಾತ್ರಿ ೭ ಗಂಟೆಯವರೆಗೆ ಜೋಕಾಲಿ ಹರಾಜು/ ಬಿಡ್ ಪ್ರಕ್ರಿಯೆ. ಡಿ.೨೧ರಂದು ಸಂಜೆ ೫ರಿಂದ ರಾತ್ರಿ ೭ ಗಂಟೆಯವರೆಗೆ ಕೂದಲು ಹರಾಜು/ ಬಿಡ್ ಪ್ರಕ್ರಿಯೆ ನಡೆಸಲಾಗುವುದು. ಹರಾಜಿನಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿ ಮತ್ತು ಷರತ್ತುಗಳಿಗಾಗಿ www.epro.karnataka.gov.in ವೆಬ್‌ಸೈಟ್, ದೂ:೦೮೪೭೩ ೨೫೩೬೧೧ ಅಥವಾ ಯಾದಗಿರಿ ತಹಸೀಲ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯು.ಆರ್.ಡಬ್ಲುö್ಯ ಹುದ್ದೆಗೆ ಅರ್ಜಿ
ಯಾದಗಿರಿ, ಡಿಸೆಂಬರ್ ೧೦ (ಕರ್ನಾಟಕ ವಾರ್ತೆ): ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿಯಲ್ಲಿ ಸುರಪುರ ನಗರಸಭೆ ವ್ಯಾಪ್ತಿಯಲ್ಲಿ ನಗರ ಪುನರ್ವಸತಿ ಕಾರ್ಯಕರ್ತರ (ಯು.ಆರ್.ಡಬ್ಲುö್ಯ) ೧ ಹುದ್ದೆಯನ್ನು ಗೌರವಧನ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಇಲಾಖೆಯಿಂದ ನಿಗದಿತ ನಮೂನೆಯ ಅರ್ಜಿ ಪಡೆದು ಡಿಸೆಂಬರ್ ೧೭ರೊಳಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮಾಳಪ್ಪ ಪೂಜಾರಿ ಮೊ:೯೯೪೫೩೭೩೮೪೭ ಅಥವಾ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ದೂ:೦೮೪೭೩-೨೫೩೫೩೧ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ
ಯಾದಗಿರಿ, ಡಿಸೆಂಬರ್ ೧೦ (ಕರ್ನಾಟಕ ವಾರ್ತೆ): ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ೨೦೧೯-೨೦ನೇ ಸಾಲಿನಲ್ಲಿ ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾ ಕೀರ್ತನ ಮತ್ತು ಗಮಕ ಕಲಾಕ್ಷೇತ್ರಗಳಲ್ಲಿ ಅಭ್ಯಾಸ ಮಾಡುತ್ತಿರುವ ಅರ್ಹ ಅಭ್ಯರ್ಥಿಗಳಿಂದ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಕಾಡೆಮಿಯ ರಿಜಿಸ್ಟಾçರ್ ಬನಶಂಕರಿ ವಿ.ಅಂಗಡಿ ತಿಳಿಸಿದ್ದಾರೆ.
ಅಭ್ಯರ್ಥಿಗಳ ವಯೋಮಿತಿ ೧೬ ರಿಂದ ೨೪ ವರ್ಷದೊಳಗಿರಬೇಕು. ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ  ೧೦,೦೦೦ ರೂ.ಗಳ ಶಿಷ್ಯವೇತನ ನೀಡಲಾಗುತ್ತದೆ. ಅರ್ಜಿಯನ್ನು ಅಕಾಡೆಮಿಯ ಕಚೇರಿಯಿಂದ ಅಥವಾ ಅಕಾಡೆಮಿಯ  www.karnatakasangeetanrityaacademy.com ವೆಬ್‌ಸೈಟ್‌ದಿಂದ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಉಚಿತವಾಗಿ ಪಡೆದು ಭರ್ತಿ ಮಾಡಿ ರಿಜಿಸ್ಟಾçರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, ೨ನೇ ಮಹಡಿ, ಜೆ.ಸಿ ರಸ್ತೆ, ಬೆಂಗಳೂರು-೫೬೦೦೦೨ ವಿಳಾಸಕ್ಕೆ ೨೦೧೯ರ ಡಿಸೆಂಬರ್ ೨೦ರೊಳಗಾಗಿ ಸಲ್ಲಿಸಬೇಕು.
ಅಂಚೆ ಮೂಲಕ ಅರ್ಜಿ ಮತ್ತು ಪಠ್ಯಕ್ರಮ ಪಡೆಯಲಿಚ್ಛಿಸುವವರು ೧೦ ರೂ. ಸ್ಟಾö್ಯಂಪ್ ಹಚ್ಚಿದ ಸ್ವವಿಳಾಸವುಳ್ಳ ಲಕೋಟೆಯನ್ನು ಅಕಾಡೆಮಿಯ ವಿಳಾಸಕ್ಕೆ ಕಳುಹಿಸಿ ಪಡೆಯಬಹುದಾಗಿದೆ. ಅಕಾಡೆಮಿಯಿಂದ ೨೦೧೯-೨೦ನೇ ಸಾಲಿನಲ್ಲಿ ಗುರುಶಿಷ್ಯ ಪರಂಪರೆಯಡಿ ಕಲಿಕೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ದಿನಾಂಕ:೪-೧೧-೨೦೧೯ರ ಸರ್ವ ಸದಸ್ಯರ ಸಭೆ ತೀರ್ಮಾನದಂತೆ ಸದರಿ ಯೋಜನೆಯನ್ನು ಕೈಬಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...