ನಾಳೆ ಸಶಸ್ತç ಪಡೆಗಳ ಧ್ವಜ ದಿನಾಚರಣೆ
ಯಾದಗಿರಿ, ಡಿಸೆಂಬರ್ ೦೪ (ಕರ್ನಾಟಕ ವಾರ್ತೆ): ಸಶಸ್ತç ಪಡೆಗಳ ಧ್ವಜ ದಿನಾಚರಣೆಯನ್ನು ಡಿಸೆಂಬರ್ ೬ರಂದು ಬೆಳಿಗ್ಗೆ ೧೧ ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಯಾದಗಿರಿ, ಕಲಬುರಗಿ, ಬೀದರ್, ರಾಯಚೂರು ಜಿಲ್ಲೆಗಳ ಮಾಜಿ ಸೈನಿಕರು ಮತ್ತು ಅವರ ಅವಲಂಭಿತರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಸಶ್ವಿಗೊಳಿಸಬೇಕೆಂದು ಎಂದು ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಡಿ.೯ರಂದು ಮುಖ್ಯಗುರುಗಳ ಬಡ್ತಿಗೆ ಕೌನ್ಸಲಿಂಗ್
ಯಾದಗಿರಿ, ಡಿಸೆಂಬರ್ ೦೪ (ಕರ್ನಾಟಕ ವಾರ್ತೆ): ಪ್ರಾಥಮಿಕ ಶಾಲಾ ಮುಖ್ಯಗುರುಗಳ ಹುದ್ದೆಯಿಂದ ಹಿರಿಯ ಮುಖ್ಯಗುರುಗಳ ಹುದ್ದೆಗೆ ಬಡ್ತಿ ನೀಡಲು ಅರ್ಹವಿರುವ ಮುಖ್ಯಗುರುಗಳ ಜೇಷ್ಠತಾ ಪಟ್ಟಿಯನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಪ್ರಯುಕ್ತ ಅರ್ಹ ಮುಖ್ಯಗುರುಗಳು ಡಿಸೆಂಬರ್ ೯ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯದಲ್ಲಿ ನಡೆಯಲಿರುವ ಕೌನ್ಸಲಿಂಗ್‌ಗೆ ಹಾಜರಾಗಲು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.
ಡಿ.೧೨ರಂದು ನೇರ ಸಂದರ್ಶನ
ಯಾದಗಿರಿ, ಡಿಸೆಂಬರ್ ೦೪ (ಕರ್ನಾಟಕ ವಾರ್ತೆ): ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಹಾಗೂ ಜಿಲ್ಲಾ ಎನ್.ಸಿ.ಡಿ ಸೆಲ್‌ನಲ್ಲಿ ಖಾಲಿ ಇರುವ ಜಿಲ್ಲಾ ಮೈಕ್ರೊಬಯಾಲಜಿಸ್ಟ್ (ಐಡಿಎಸ್‌ಪಿ) ಮತ್ತು ಜಿಲ್ಲಾ ಫೈನಾನ್ಸ್ ಕಮ್ ಲಾಜಿಸ್ಟಿಕ್ ಕನ್ಸಲ್ಟ್ಂಟ್ (ಎನ್‌ಪಿಸಿಡಿಸಿಎಸ್) ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮೆರೀಟ್ ಕಮ್ ರೋಸ್ಟರ್ ಆಧರಿಸಿ ನೇಮಕಾತಿ ಮಾಡಿಕೊಳ್ಳಲು ನೇರ ಸಂದರ್ಶನವನ್ನು ಡಿಸೆಂಬರ್ ೧೨ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಮೂಲ ಹಾಗೂ ನಕಲು ಒಂದು ಸೆಟ್ ದೃಢೀಕೃತ ಪ್ರತಿಗಳೊಂದಿಗೆ ಹಾಜರಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಉಪಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.೧೬ರಂದು ಮುಂಗಡಪತ್ರ ಪೂರ್ವಭಾವಿ ಸಭೆ
ಯಾದಗಿರಿ, ಡಿಸೆಂಬರ್ ೦೪ (ಕರ್ನಾಟಕ ವಾರ್ತೆ): ಯಾದಗಿರಿ ನಗರಸಭೆಯ ೨೦೨೦-೨೧ನೇ ಸಾಲಿನ ಮುಂಗಡ ಪತ್ರವನ್ನು ತಯಾರಿಸಲು ಪೂರ್ವಭಾವಿಯಾಗಿ ಸಲಹೆ-ಸೂಚನೆ ಪಡೆಯಲು ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರು, ನಗರಸಭೆ ಪ್ರತಿನಿಧಿಗಳು, ಜನಪ್ರತಿನಿಧಿಗಳು, ನೋಂದಾಯಿತ ಸ್ಥಳೀಯ ಸಂಘ-ಸAಸ್ಥೆಗಳು, ವ್ಯಾಪಾರ ಮತ್ತು ಉದ್ಯಮ ಸಂಸ್ಥೆಗಳು, ಎನ್‌ಜಿಒ ಹಾಗೂ ಸ್ಥಳೀಯ ನಾಗರಿಕರ ಸಭೆಯನ್ನು ಡಿಸೆಂಬರ್ ೧೬ರಂದು ಸಂಜೆ ೪ ಗಂಟೆಗೆ ನಗರಸಭೆಯ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಪೌರಾಯುಕ್ತರಾದ ರಮೇಶ ಸುಣಗಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಸತಿ ರಹಿತರಿಂದ ಅರ್ಜಿ ಆಹ್ವಾನ
ಯಾದಗಿರಿ, ಡಿಸೆಂಬರ್ ೦೪ (ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆ ಹೌಸಿಂಗ್ ಫಾರ್ ಆಲ್-೨೦೨೨ (ನಗರ) ಸ್ವಯಂ ಮನೆ ನಿರ್ಮಾಣ ಯೋಜನೆಯಡಿ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಖಾಯಂ ನಿವಾಸಿಗಳಾಗಿರುವ ಅರ್ಹ ಬಡ ಮತ್ತು ಮಧ್ಯಮ ವರ್ಗದ ಸ್ವಂತ ನಿವೇಶನ ಹೊಂದಿರುವ ವಸತಿ ರಹಿತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ೧.೫೦ ಲಕ್ಷ ರೂ. ಅನುದಾನ ನೀಡಲಾಗುವುದು. ೩ ಲಕ್ಷ ರೂ.ವರೆಗೆ ವಾರ್ಷಿಕ ಆದಾಯದ ಮಿತಿಯಲ್ಲಿರುವ ಅರ್ಹ ಅಭ್ಯರ್ಥಿಗಳು ಸಂಬAಧಿಸಿದ ನಗರಸಭೆ ಮತ್ತು ಪುರಸಭೆಗಳಿಗೆ ಡಿಸೆಂಬರ್ ೧೦ರೊಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಮೀನುಗಾರಿಕೆಗಾಗಿ ಅರ್ಜಿ ಆಹ್ವಾನ
ಯಾದಗಿರಿ, ಡಿಸೆಂಬರ್ ೦೪ (ಕರ್ನಾಟಕ ವಾರ್ತೆ): ೨೦೧೯-೨೦ನೇ ಸಾಲಿಗೆ ಶಹಾಪುರ ತಾಲ್ಲೂಕಿನ ಸರ್ಕಾರಿ ಸ್ವಾಮ್ಯದ ಭೀಮಾನದಿ ಭಾಗದ ಜೋಳದಡಗಿಯಿಂದ ಸಂಗA ವರೆಗೆ ೧೫ ಕಿ.ಮೀ. ವ್ಯಾಪ್ತಿಯ ಜಲಸಂಪನ್ಮೂಲವನ್ನು ಮೀನುಗಾರಿಕೆಗಾಗಿ ಪರವಾನಗಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ವೃತ್ತಿಪರ ಮೀನುಗಾರರು ಶಹಾಪುರದ ಮೀನುಗಾರಿಕೆ ಸಹಾಯಕ ನಿರ್ದೇಶಕರು ಶ್ರೇಣಿ-೨ ಅವರ ಕಚೇರಿಯಿಂದ ನಿಗದಿತ ನಮೂನೆಯ ಅರ್ಜಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉತ್ತಮ ಚಾಲಕ ಸೇವೆ ಪುರಸ್ಕಾರಕ್ಕೆ ಅರ್ಜಿ
ಯಾದಗಿರಿ, ಡಿಸೆಂಬರ್ ೦೪ (ಕರ್ನಾಟಕ ವಾರ್ತೆ): ೨೦೧೯-೨೦ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಚಾಲಕರ ಉತ್ತಮ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಅರ್ಜಿ ಆಹ್ವಾನಿಸಲಾಗಿದೆ.
ಚಾಲನಾ ಸಮಯದಲ್ಲಿ ಪ್ರಾಮಾಣಿಕವಾಗಿ ಮತ್ತು ಅಪಘಾತ ರಹಿತವಾಗಿ ಸೇವೆ ಸಲ್ಲಿಸಿರುವ ಮ್ಯಾಕ್ಸಿಕ್ಯಾಬ್, ಬಸ್, ಸರಕು ಸಾಗಣೆ ವಾಹನ, ಟ್ಯಾಕ್ಸಿ ಮತ್ತು ಆಟೊರಿಕ್ಷಾ ಇವುಗಳಲ್ಲಿ ಒಬ್ಬ ಚಾಲಕರನ್ನು ಗುರುತಿಸಿ ಪ್ರತಿ ಜಿಲ್ಲೆಗೆ ೧೦ ಚಾಲಕರಂತೆ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ೨೫ ಸಾವಿರ ರೂ.ಗಳ ಪುರಸ್ಕಾರವನ್ನು ಮಾನದಂಡಗಳನ್ವಯ ನೀಡಲಾಗುತ್ತದೆ.
ಅಭ್ಯರ್ಥಿಯು ಸಂಬ0ಧಿಸಿದ ವಾಹನ ವರ್ಗದ ಸಿಂಧುತ್ವವುಳ್ಳ ಚಾಲನಾ ಅನುಜ್ಞಾ ಪತ್ರವನ್ನು ಹೊಂದಿರಬೇಕು. ವಯಸ್ಸು ೪೫ ವರ್ಷ ಮೀರಿರಬೇಕು. ಚಾಲನಾ ಅನುಜ್ಞಾ ಪತ್ರದ ಸಿಂಧುತ್ವವು ೨೦ ವರ್ಷ ಪೂರೈಸಿರಬೇಕು ಮತ್ತು ಅಮಾನತ್ತುಗೊಂಡಿರಬಾರದು. ಅಭ್ಯರ್ಥಿಯ ವಿರುದ್ಧ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಅರ್ಹ ಚಾಲಕರು ಡಿಸೆಂಬರ್ ೧೦ರೊಳಗಾಗಿ ಯಾದಗಿರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ತಮ್ಮ ಹೆಸರನ್ನು ಸೂಚಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮನೆ ನಿರ್ಮಿಸಿಕೊಳ್ಳಲು ಸಹಾಯಧನ: ಅರ್ಜಿ ಆಹ್ವಾನ
ಯಾದಗಿರಿ, ಡಿಸೆಂಬರ್ ೦೪ (ಕರ್ನಾಟಕ ವಾರ್ತೆ): ಸುರಪುರ ನಗರಸಭೆ ವ್ಯಾಪ್ತಿಯ ವಸತಿರಹಿತ ಖಾಲಿ ನಿವೇಶನ ಹೊಂದಿದವರಿಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ೧.೫೦ ಲಕ್ಷ ರೂ.ಗಳ ಸಹಾಯ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಕುಟುಂಬದ ವಾರ್ಷಿಕ ಆದಾಯ ೩ ಲಕ್ಷ ರೂ.ಗಳಿಗಿಂತ ಕಡಿಮೆ ಇರಬೇಕು. ದೇಶದ ಯಾವುದೇ ಪ್ರದೇಶದಲ್ಲಿ ಸೌಲಭ್ಯ ಪಡೆಯದಿರುವ ಬಗ್ಗೆ ಕೋರ್ಟ್ ಅಫಿಡೇವಿಟ್ ದೃಢೀಕರಣ ಪತ್ರ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ ೧೮ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ