ಗುರುವಾರ, ಡಿಸೆಂಬರ್ 12, 2019

ಡಿ.೧೬ಕ್ಕೆ ಜಿ.ಪಂ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ
ಯಾದಗಿರಿ, ಡಿಸೆಂಬರ್ ೧೨ (ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯಿತಿಯ ಮೂರನೇ ಅವಧಿಗೆ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆಗಾಗಿ ಡಿಸೆಂಬರ್ ೧೬ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೀನು ಪಾಶುವಾರು ಪರವಾನಿಗೆ ಅರ್ಜಿ ಆಹ್ವಾನ
ಯಾದಗಿರಿ, ಡಿಸೆಂಬರ್ ೧೨ (ಕರ್ನಾಟಕ ವಾರ್ತೆ): ಯಾದಗಿರಿ ತಾಲ್ಲೂಕಿನ ಉಳಿದ ಭೀಮಾನದಿ ಭಾಗದ ೧೧ ಕಿ.ಮೀ. ಉದ್ದದಲ್ಲಿ ಕಂದಳ್ಳಿಯಿAದ ಗೂಡೂರುವರೆಗೆ ಮೀನು ಪಾಶುವಾರು ಹಕ್ಕನ್ನು ೨೦೧೯-೨೦ನೇ ಮೀನುಗಾರಿಕೆ ಫಸಲಿ ವರ್ಷದವರೆಗೆ (ಅಂದರೆ ೩೦-೦೬-೨೦೨೦ರವರೆಗೆ) ಸರ್ಕಾರದ ನಿಯಮಗಳ ಮೇರೆಗೆ ಪರವಾನಗಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಮೀನು ಪಾಶುವಾರು ಹಕ್ಕನ್ನು ಪಡೆಯಲಿಚ್ಚಿಸುವವರು ಗುರುತಿನ ಚೀಟಿ ಮತ್ತು ಅರ್ಜಿಯನ್ನು ಯಾದಗಿರಿಯ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಷರತ್ತು ಮತ್ತು ನಿಬಂಧನೆಗಳು ಅನ್ವಯಿಸುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ.ಜಾತಿ, ಪ.ಪಂಗಡದ ಜಾಗೃತಿ ಸಮಿತಿ ಪುನರ್ ರಚನೆ
ಯಾದಗಿರಿ, ಡಿಸೆಂಬರ್ ೧೨ (ಕರ್ನಾಟಕ ವಾರ್ತೆ): ಅನುಸೂಚಿತ ಜಾತಿ, ಅನುಸೂಚಿತ ಪಂಗಡ (ದೌರ್ಜನ್ಯ ನಿಯಂತ್ರಣ) ನಿಯಮಗಳು ೧೯೯೫ರ ನಿಯಮ ೧೭ರ ಉಪಲಬ್ದಗಳ ಅನ್ವಯ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿಯನ್ನು ಪುನರ್ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ಸುತ್ತೋಲೆಯಲ್ಲಿ ಸಮಿತಿಯ ರಚನೆ ಹಾಗೂ ಕಾರ್ಯ ವೈಖರಿಯ ಬಗ್ಗೆ ತಿಳಿಸಲಾಗಿದ್ದು, ಸಮಿತಿಯ ಅವಧಿ ೩ ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಅದರಂತೆ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿಯನ್ನು ೨೦೧೬ರ ಸೆಪ್ಟೆಂಬರ್ ೧ರಂದು ರಚಿಸಲಾಗಿತ್ತು. ಸದರಿ ಸಮಿತಿ ಅವಧಿ ೨೦೧೯ರ ಸೆಪ್ಟೆಂಬರ್ ೩೦ಕ್ಕೆ ಮುಕ್ತಾಯಗೊಂಡಿರುವುದರಿAದ ಸಮಿತಿಯನ್ನು ಈ ಕೆಳಕಂಡAತೆ ಪುನರ್ ರಚಿಸಲಾಗಿದೆ.
ಜಿಲ್ಲಾಧಿಕಾರಿಗಳು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ, ಡಾ.ಉಮೇಶ ಜಿ.ಜಾಧವ, ವಿಧಾನಸಭಾ ಸದಸ್ಯರಾದ ಶರಣಬಸಪ್ಪಗೌಡ ದರ್ಶನಾಪೂರ, ವೆಂಕಟರೆಡ್ಡಿಗೌಡ ಮುದ್ನಾಳ, ನರಸಿಂಹ ನಾಯಕ (ರಾಜುಗೌಡ), ನಾಗನಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ, ಶರಣಪ್ಪ ಮಟ್ಟೂರ, ಬಿ.ಜಿ.ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅವರು ಸದಸ್ಯರಾಗಿದ್ದಾರೆ.
ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಕುಮಾರ, ಜಿಲ್ಲಾ ಶಸ್ತçಚಿಕಿತ್ಸಕ ಡಾ.ಭಗವಂತ ಅನವಾರ, ಸುರಪುರ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಭು ದೊರೆ ಅವರು ಸಮಿತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಎ ಗುಂಪಿನ ಸದಸ್ಯರಾಗಿದ್ದಾರೆ. ಸಮಾಜದ ಮುಖಂಡರಾದ ಖಂಡಪ್ಪ ದಾಸನ, ಸಮಾಜ ಸೇವಕರಾದ ನಾಗಣ್ಣ ಬಡಿಗೇರ, ನಾಗರಾಜು ದೊಡ್ಡಮನಿ, ವಾಲ್ಮೀಕಿ ಸಮಾಜ ಸೇವಕರಾದ ರಮೇಶ ದೊರೆ, ರಾಮದೇವಿ ಅವರು ಸಮಿತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಧಿಕಾರೇತರ ಸದ್ಯಸರಾಗಿದ್ದಾರೆ.
ಯಾದಗಿರಿಯ ಆಕ್ಸ್ಪರ್ಡ ಶಿಕ್ಷಣ ಸಂಸ್ಥೆಯ ಪ್ರಕಾಶ, ಶಹಾಪೂರದ ಸ್ವಾಮಿ ವಿವೇಕನಾಂದ ಶಿಕ್ಷಣ ಸಂಸ್ಥೆಯ ನಾರಾಯಣಾಚಾರ್ಯ, ಶಹಾಪೂರ ನಿರ್ಮಲಾ ದೇವಿ ಮಹಿಳಾ ಮಂಡಳದ ವಿಶ್ವನಾಥರೆಡ್ಡಿ ದರ್ಶನಾಪೂರ ಅವರು ಸಮಿತಿಯ ಸರ್ಕಾರೇತರ ಸಂಘ ಸಂಸ್ಥೆಗಳ ಸದಸ್ಯರಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ.
ಈ ಸಮಿತಿಯು ೩ ತಿಂಗಳಿಗೊಮ್ಮೆ ಸಭೆ ಸೇರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆಯಡಿ ಪ್ರಕರಣಗಳ ವಿಚಾರಣೆ, ಪರಿಹಾರ ಮತ್ತು ಪುನರ್ ವಸತಿ ಇತ್ಯಾದಿ ಬಗ್ಗೆ ಪರಿಶೀಲಿಸಿ ತೆಗೆದುಕೊಳ್ಳಲಾದ ಅನುಸರಣಾ ಕ್ರಮಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ವರದಿ ಸಲ್ಲಿಸಬೇಕಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...