ಮಂಗಳವಾರ, ಡಿಸೆಂಬರ್ 10, 2019

ಜಿ.ಪಂ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ
ಯಾದಗಿರಿ, ಡಿಸೆಂಬರ್ ೧೦ (ಕರ್ನಾಟಕ ವಾರ್ತೆ): ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-೧೯೯೩ ಪ್ರಕರಣ ೧೮೬ (೨)ರ ಪ್ರಕಾರ ಜಿಲ್ಲಾ ಪಂಚಾಯಿತಿಯ ವಿವಿಧ ಸ್ಥಾಯಿ ಸಮಿತಿಗಳ ೩ನೇ ಅವಧಿಗೆ ಸದಸ್ಯರ ಆಯ್ಕೆಗೆ ಡಿ.೭ರಂದು ನಡೆದ ಚುನಾವಣೆಯಲ್ಲಿ ಒಟ್ಟು ೩೩ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಣಕಾಸು, ಲೆಕ್ಕ ಪರಿಶೋಧನೆ ಹಾಗೂ ಯೋಜನಾ ಸ್ಥಾಯಿ ಸಮಿತಿಗೆ ಮರಿಲಿಂಗಪ್ಪ ತಿಮ್ಮಣ್ಣ ಕನ್ನಳ್ಳಿ, ಲಕ್ಷಿö್ಮÃ ದೇಸಾಯಿ, ರಾಜಶ್ರೀ, ಬಸನಗೌಡ ಪಾಟೀಲ ಯಡಿಯಾಪೂರ, ಅಶೋಕ ರೆಡ್ಡಿ, ಅರುಣ ಶಾಂತಿಲಾಲ ಅವರು ಆಯ್ಕೆಯಾಗಿದ್ದಾರೆ.
ಸಾಮಾನ್ಯ ಸ್ಥಾಯಿ ಸಮಿತಿಗೆ ಬಸವರಾಜ ಸ್ಥಾವರಮಠ, ಶಶಿಕಲಾ ಬಿ.ಕ್ಯಾತನಾಳ, ಕಿಶನ ರಾಠೋಡ, ಶರಣಮ್ಮ ನಾಗಪ್ಪ, ಭೀಮಬಾಯಿ ಮಲ್ಲಿಕಾರ್ಜುನ ಪೂಜಾರಿ, ಅರುಣ ಶಾಂತಿಲಾಲ ಅವರು ಆಯ್ಕೆಯಾಗಿದ್ದಾರೆ.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ವಿನೋದ ಪಾಟೀಲ ಸಂತಾಜಿರಾವ್ ಪಾಟೀಲ್, ಅನಿತಾಬಾಯಿ, ನಾರಾಯಣ ದೇವಲನಾಯಕ, ನಾಗಮ್ಮ ಬಸನಗೌಡ ಶಹಾಪೂರ, ಬಸನಗೌಡ ಪಾಟೀಲ ಯಡಿಯಾಪೂರ, ಸರಸ್ವತಿ ಹೊನಿಗೇರಾ, ಅಶೋಕರೆಡ್ಡಿ ಅವರು ಆಯ್ಕೆಯಾಗಿದ್ದಾರೆ.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಗೆ ಬಸವರಾಜ ಸ್ಥಾವರಮಠ, ಶಿವಲಿಂಗಪ್ಪ, ಬಸರೆಡ್ಡಿ ಅನಪೂರ, ಕಿಶನ ರಾಠೋಡ, ರಾಜಶ್ರೀ, ಶಶಿಕಲಾ, ಮರಿಲಿಂಗಪ್ಪ ತಿಮ್ಮಣ್ಣ ಕನ್ನಳ್ಳಿ ಅವರು ಆಯ್ಕೆಯಾಗಿದ್ದಾರೆ.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗೆ ಭೀಮರೆಡ್ಡಿಗೌಡ, ಲಕ್ಷಿö್ಮÃ ದೇಸಾಯಿ, ದೇವಕಮ್ಮ ಹೊನ್ನಪ್ಪ ಮುನಮುಟಗಿ, ಅಮರದೀಪ, ಚಂದ್ರಕಲಾ ಶರಣಗೌಡ ಹೊಸಮನಿ, ಶರಣಮ್ಮ ನಾಗಪ್ಪ, ಭೀಮಬಾಯಿ ಮಲ್ಲಿಕಾರ್ಜುನ ಪೂಜಾರಿ ಅವರು ಆಯ್ಕೆಯಾಗಿದ್ದಾರೆ.
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ ೧೯೯೩ ಪ್ರಕರಣ ೧೮೬ (೨)ರನ್ವಯ ಎರಡನೇಯ ಅವಧಿಗೆ ಯಾದಗಿರಿ ಜಿಲ್ಲಾ ಪಂಚಾಯಿತಿಯ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರುಗಳನ್ನು ೨೦೧೮ರ ಮಾರ್ಚ್ ೧೬ರಂದು ಜರುಗಿದ ಚುನಾವಣೆಯಲ್ಲಿ ಆಯ್ಕೆ ಮಾಡಲಾಗಿರುತ್ತದೆ. ಸದರಿ ಸದಸ್ಯರ ಅವಧಿಯು ಚುನಾಯಿತ ದಿನಾಂಕದಿAದ ೨೦ ತಿಂಗಳು ಅಥವಾ ಅವರು ಜಿಲ್ಲಾ ಪಂಚಾಯಿತಿ ಸದಸ್ಯನಾಗಿರುವುದು ನಿಂತು ಹೋಗುವವರೆಗೆ ಇದರಲ್ಲಿ ಯಾವುದು ಮೊದಲೊ ಆ ಅವಧಿಯಾಗಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...