ಗುರುವಾರ, ಡಿಸೆಂಬರ್ 26, 2019

ಭತ್ತ ಖರೀದಿ ಕೇಂದ್ರಗಳ ಸ್ಥಾಪನೆ
ಯಾದಗಿರಿ, ಡಿಸೆಂಬರ್ 26 (ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2019-20ನೇ ಸಾಲಿನಲ್ಲಿ ಭತ್ತ ಖರೀದಿಸಲು ಜಿಲ್ಲೆಯಲ್ಲಿ ಮೂರು ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ತಿಳಿಸಿದ್ದಾರೆ.
ಪ್ರತಿ ಕ್ವಿಂಟಲ್ ಭತ್ತ  (ಸಾಮಾನ್ಯ)ಕ್ಕೆ 1815 ರೂ. ಮತ್ತು ಭತ್ತ  (ಗ್ರೇಡ್ ಎ) 1835 ರೂ. ದರ ನಿಗದಿಪಡಿಸಿದೆ. ಜಿಲ್ಲೆಗೆ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ, ಯಾದಗಿರಿ (ಕೆಎಫ್‍ಸಿಎಸ್‍ಸಿ) ಸಂಗ್ರಹಣಾ ಮೂಲಕ ರೈತರಿಂದ ಭತ್ತ ಖರೀದಿಸಲು ನಿಯೋಜಿಸಲಾಗಿದೆ. ಯಾದಗಿರಿ ನಗರದ ಎಪಿಎಂಸಿ ಪ್ರದೇಶದಲ್ಲಿರುವ ಕೆಎಫ್‍ಸಿಎಸ್‍ಸಿ ಸಗಟು ಗೋದಾಮು, ಶಹಾಪೂರ ನಗರದ ಯಾದಗಿರಿ ರಸ್ತೆಯಲ್ಲಿರುವ ಟಿಎಪಿಸಿಎಂಎಸ್ ಸಗಟು ಗೋದಾಮು ಮತ್ತು ಸುರಪುರ ನಗರದ ಮಹ್ಮದ್ ಮುಸಾ ಸಾಬ ದಖನಿ ವೆಂಕಟಪೂರ ಕೆಎಫ್‍ಸಿಎಸ್‍ಸಿ ಸಗಟು ಗೋದಾಮುಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಈ ಖರೀದಿ ಕೇಂದ್ರಗಳಲ್ಲಿ ಆಯಾ ತಾಲ್ಲೂಕಿನ ರೈತರು ಡಿಸೆಂಬರ್ 30ರಿಂದ ಜನವರಿ 10ರವರೆಗೆ ಹೆಸರು ನೋಂದಾಯಿಸಬಹುದಾಗಿದೆ. ರೈತರ ನೋಂದಣಿ ಕಾರ್ಯ ಮುಗಿದ ನಂತರ ಜಿಲ್ಲೆಯಲ್ಲಿ ಲಭ್ಯವಿರುವ ರೈಸ್ ಮಿಲ್‍ಗಳಲ್ಲಿ ರೈತರ ನೋಂದಣಿಗೆ ಅನುಗುಣವಾಗಿ ಜಿಲ್ಲೆಯಾದ್ಯಂತ ಖರೀದಿಸಲು ಕ್ರಮ ವಹಿಸಲಾಗುವುದು. ರೈತರು ಕಡ್ಡಾಯವಾಗಿ ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿರುವ ನೋಂದಣಿ ಸಂಖ್ಯೆ ಮತ್ತು ತಮ್ಮ ಐಎಫ್‍ಎಸ್‍ಸಿ ಕೋಡ್ ಹೊಂದಿರುವ ಬ್ಯಾಂಕ್ ಪಾಸ್‍ಬುಕ್ ಪ್ರತಿ ನೀಡಿ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...