ಮಂಗಳವಾರ, ಡಿಸೆಂಬರ್ 10, 2019

ಇಂದಿನಿ0ದ ವಿಶೇಷ ಶಾಲಾ ಲಸಿಕಾ ಅಭಿಯಾನ
ಯಾದಗಿರಿ, ಡಿಸೆಂಬರ್ ೧೦ (ಕರ್ನಾಟಕ ವಾರ್ತೆ): ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಜಿಲ್ಲೆಯಾದ್ಯಂತ ವಿಶೇಷ ಶಾಲಾ ಲಸಿಕಾ ಅಭಿಯಾನ ಅಡಿಯಲ್ಲಿ ಡಿಸೆಂಬರ್ ೧೧ರಿಂದ ೩೧ರ ವರೆಗೆ ೧ನೇ ತರಗತಿಯಿಂದ ೧೦ನೇ ತರಗತಿಯ ಎಲ್ಲಾ ಮಕ್ಕಳಿಗೆ ಶಾಲೆಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಲಕ್ಷಿö್ಮಕಾಂತ ಅವರು ತಿಳಿಸಿದ್ದಾರೆ.
“ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು ಹಾಗೂ ಲಸಿಕೆಗಳನ್ನು ಕೊಡಿಸುವುದು ಪೋಷಕರ ಕರ್ತವ್ಯ” ಎಂಬುದು ಶಾಲಾ ಲಸಿಕಾ ಅಭಿಯಾನದ ಘೋಷಣೆಯಾಗಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಆರೋಗ್ಯಕರ ದೇಹ ಮುಖ್ಯ. ಅದಕ್ಕಾಗಿ ಮಕ್ಕಳಿಗೆ ಪೋಷಕರು ತಮ್ಮ ಮಗು ಓದುತ್ತಿರುವ ಶಾಲೆಗೆ ಭೇಟಿ ನೀಡಿ ಲಸಿಕಾ ದಿವಸದಂದು ತಾವು ಭಾಗವಹಿಸಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದ್ದಾರೆ.
ಭಾರತ ಸರ್ಕಾರವು ಟಿ.ಟಿ ಲಸಿಕೆ ಬದಲಾಗಿ ಟಿ.ಡಿ. ಲಸಿಕೆಯನ್ನು ಏಪ್ರಿಲ್-೨೦೧೯ರಿಂದ ರಾಜ್ಯದಲ್ಲಿ ಪ್ರಾರಂಭಿಸಿದೆ. ರೋಗ ನಿರೋಧಕ ರಕ್ಷಣೆಯನ್ನು ಮುಂದುವರೆಸಲು ಡಿಪಿಟಿ- ವರ್ಧಕ ಲಸಿಕೆ ನೀಡುವುದು ಅತ್ಯಗತ್ಯ. ರಾಜ್ಯದಲ್ಲಿ ಡಿಪ್ತೀರಿಯಾ (ಗಂಟಲು ಮಾರಿ) ಪ್ರಕರಣಗಳು ಹೆಚ್ಚಾಗಿ ಕಂಡುಬAದಿದ್ದು, ಇದರಿಂದ ಮಕ್ಕಳನ್ನು ರಕ್ಷಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ೧ನೇ ತರಗತಿ ಮಕ್ಕಳಿಗೆ ಡಿ.ಪಿ.ಟಿ ಲಸಿಕೆ ಹಾಗೂ ೨ರಿಂದ ೧೦ನೇ ತರಗತಿ ಮಕ್ಕಳಿಗೆ (ಸರ್ಕಾರಿ, ಖಾಸಗಿ ಶಾಲೆಗಳು) ಟಿ.ಡಿ ಲಸಿಕೆ ನೀಡುವ ಸಲುವಾಗಿ ಅಭಿಯಾನ ನಡೆಸಲು ಯೋಜನೆ ರೂಪಿಸಲಾಗಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆರೋಗ್ಯ ಕೇಂದ್ರ ಹತ್ತಿರದ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆಯನ್ನು ನೀಡಲಾಗುವುದು. ಹಾಗೂ ವಸತಿ ಶಿಕ್ಷಣ ಸಂಸ್ಥೆಗಳು ಹಾಸ್ಟೆಲ್ ಮತ್ತು ಇನ್ನಿತರ ಶಾಲಾ ಮಕ್ಕಳಿಗೆ ಲಸಿಕೆಯನ್ನು ನೀಡಲಾಗುವುದು. ಮುಖ್ಯವಾಗಿ ಈ ಲಸಿಕೆಯು ವಿಶ್ವ ಆರೋಗ್ಯ ಸಂಸ್ಥೆಯಿAದ ಪೂರ್ವ ಅರ್ಹತೆ ಪಡೆದಿದ್ದು ಸುರಕ್ಷಿತವಾಗಿ, ಈ ಲಸಿಕೆಯಿಂದ ಗಂಭೀರ, ಪ್ರತಿಕೂಲ ಪರಿಣಾಮಗಳು ಅಪರೂಪ. ಚುಚ್ಚುಮದ್ದು ನೀಡಿದ ಸ್ಥಳದಲ್ಲಿ ಸ್ವಲ್ಪ ನೋವು ಮತ್ತು ಊತ ಉಂಟಾಗುತ್ತದೆ. ಕೆಲವು ಮಕ್ಕಳಲ್ಲಿ ಸ್ವಲ್ಪ ಮಟ್ಟಿನ ಜ್ವರ ಕಾಣಿಸಬಹುದು. ಜ್ವರ ಕಾಣಿಸಿದಲ್ಲಿ ವೈದ್ಯರ ಸಲಹೆ ಮೇರೆಗೆ ಪ್ಯಾರಾಸಿಟಮಲ್ ಮಾತ್ರೆಯನ್ನು ನೀಡಬಹುದು. ಚುಚ್ಚುಮದ್ದು ನೀಡಿದ ಸ್ಥಳದಲ್ಲಿ ಏನನ್ನು ಹಚ್ಚಬಾರದು ಎಂದು ಅವರು ಸಲಹೆ ನೀಡಿದ್ದಾರೆ.
೧ನೇ ತರಗತಿಯ ಜಿಲ್ಲೆಯ ಒಟ್ಟು ೫೦,೦೫೯ ಮಕ್ಕಳಿಗೆ ಡಿ.ಪಿ.ಟಿ ಲಸಿಕೆ ಹಾಕುವ ಗುರಿ ಹೊಂದಿದೆ. ೭ರಿಂದ ೧೬ ವರ್ಷದ ಜಿಲ್ಲೆಯ ಒಟ್ಟು ೨,೧೯,೬೬೪ ಮಕ್ಕಳಿಗೆ ಟಿ.ಡಿ ಲಸಿಕೆ ಹಾಕುವ ಗುರಿ ಹೊಂದಿದೆ. ಒಟ್ಟು ೧ರಿಂದ ೧೦ನೇ ತರಗತಿಯ ಒಟ್ಟು ೨,೬೯,೭೨೩ ಮಕ್ಕಳಿಗೆ ಲಸಿಕೆಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿ, ಶಾಲಾ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡಿ ಅಥವಾ ೨೪*೭ ಉಚಿತ ಆರೋಗ್ಯ ಸಹಾಯವಾಣಿ ೧೦೪ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...