ಬುಧವಾರ, ಡಿಸೆಂಬರ್ 18, 2019

ಇಂದಿನಿAದ ಹಿರಿಯ ನಾಗರಿಕರ, ವಿಕಲಚೇತನರ ತಪಾಸಣಾ ಶಿಬಿರ
ಯಾದಗಿರಿ, ಡಿಸೆಂಬರ್ ೧೮ (ಕರ್ನಾಟಕ ವಾರ್ತೆ): ರಾಷ್ಟಿçÃಯ ವಯೋಶ್ರೀ ಯೋಜನೆ ಅಡಿಯಲ್ಲಿ ಅಲಿಮ್ಕೋ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಿರಿಯ ನಾಗರಿಕರಿಗೆ ಹಾಗೂ ವಿಕಲ ಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳನ್ನು ವಿತರಿಸಲು ತಪಾಸಣಾ ಶಿಬಿರವನ್ನು ಡಿಸೆಂಬರ್ ೧೯ರಿಂದ ೩೦ರವರೆಗೆ ನಿಗದಿತ ದಿನಾಂಕಗಳAದು ಬೆಳಿಗ್ಗೆ ೧೦ರಿಂದ ಸಂಜೆ ೫ ಗಂಟೆಯವರೆಗೆ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಡಿಸೆಂಬರ್ ೧೯ರಂದು ಯಾದಗಿರಿ ಜಿಲ್ಲಾ ಆಸ್ಪತ್ರೆ, ಡಿ.೨೦ರಂದು ಗುರುಮಠಕಲ್ ತಾಲ್ಲೂಕು ಆಸ್ಪತ್ರೆ, ಡಿ.೨೧ರಂದು ಶಹಾಪುರ ತಾಲ್ಲೂಕು ಆಸ್ಪತ್ರೆ, ಡಿ.೨೬ರಂದು ಸುರುಪುರ ತಾಲ್ಲೂಕು ಆಸ್ಪತ್ರೆ, ಡಿ.೨೭ರಂದು ವಡಗೇರಾ ತಾಲ್ಲೂಕು ಆಸ್ಪತ್ರೆ, ಡಿ.೩೦ರಂದು ಹುಣಸಗಿ ತಾಲ್ಲೂಕು ಆಸ್ಪತ್ರೆಯಲ್ಲಿ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ.
ವಯೋಶ್ರೀ ಯೋಜನೆಯಡಿಯಲ್ಲಿ ವೀಲ್‌ಚೇರ್, ಫೋಲ್ಡಿಂಗ್ ವಾಕರ್, ಎಲ್ಬೋಸ್ಟಿಕ್, ಊರುಗೋಲು, ಕನ್ನಡಕ, ಶ್ರವಣ ಸಾಧನ, ಕೃತಕ ಹಲ್ಲು ಜೋಡಣೆ ಮುಂತಾದ ಪರಿಕರಗಳನ್ನು ವಿತರಿಸುವ ಸಲುವಾಗಿ ತಪಾಸಣೆ ಮಾಡಲಾಗುತ್ತದೆ. ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸಾಧನ ಸಲಕರಣೆಗಳನ್ನು ಪಡೆಯಲು ಆಧಾರ್ ಕಾರ್ಡ್, ಫೋಟೋ, ಬಿಪಿಎಲ್ ಕಾರ್ಡ್ ಪ್ರತಿಗಳನ್ನು ತರಬೇಕು. ವಿಕಲಚೇತನರು ಸಾಧನಾ ಸಲಕರಣೆಗಳನ್ನು ಪಡೆಯಲು ಶೇ.೪೦ರಷ್ಟು ವಿಕಲತೆ ಹೊಂದಿದ ವಿಕಲಚೇತನರು ಗುರುತಿನ ಚೀಟಿ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಫೋಟೋ ಪ್ರತಿಗಳನ್ನು ತರಬೇಕು. ಹೆಚ್ಚಿನ ಮಾಹಿತಿಗಾಗಿ ಯಾದಗಿರಿಯ ಎಮ್.ಆರ್.ಡಬ್ಲೂö್ಯ ಭೀಮರಾಯ ಮೊ:೯೭೪೨೮೬೫೮೫೩, ಸುರಪುರ ಮಾಳಪ್ಪ ಮೊ:೯೯೪೫೩೭೩೮೪೭, ಶಹಾಪುರ ನಾಗರಾಜ ಮೊ:೮೨೯೬೧೦೭೪೬೨ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಂದು, ನಾಳೆ ವಿದ್ಯುತ್ ವ್ಯತ್ಯಯ
ಯಾದಗಿರಿ, ಡಿಸೆಂಬರ್ ೧೮ (ಕರ್ನಾಟಕ ವಾರ್ತೆ): ಸುರಪೂರ ೧೧೦/೩೩/೧೧ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ಪರಿವರ್ತಕಗಳ ನಿರ್ವಹಣೆ ಕೆಲಸ ಕೈಗೊಳ್ಳುತ್ತಿರುವ ಪ್ರಯುಕ್ತ ವಿವಿಧ ಪಟ್ಟಣ, ಗ್ರಾಮಗಳಿಗೆ ವಿದ್ಯುತ್ ಸರಬರಾಜು ನಿಲುಗಡೆ ಮಾಡಲಾಗುವುದು ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೨೦ ಎಂ.ವಿ.ಎ ವಿದ್ಯುತ್ ಪರಿವರ್ತಕ-೩ರ ನಿರ್ವಹಣೆ ಕೆಲಸ ಇರುವ ಕಾರಣ, ೩೩ ಕೆ.ವಿ ಫೀಡರ್‌ಗಳಾದ ಕಕ್ಕೇರಾ, ಪರಂಪೂಜ್ಯಾ ಸೋಲಾರ, ಸುಗೂರ ಮತ್ತು ತಿಪ್ಪನಟಗಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವ ಪ್ರಯುಕ್ತ ಡಿಸೆಂಬರ್ ೧೯ರಂದು ಬೆಳಿಗ್ಗೆ ೯ರಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ಸರಬರಾಜು ನಿಲುಗಡೆಗೊಳಿಸಲಾಗುವುದು. ಸದರಿ ವಿದ್ಯುತ್ ಮಾರ್ಗಗಳಿಂದ ವಿದ್ಯುತ್ ಸರಬರಾಜಾಗುವ ಗ್ರಾಮಗಳಾದ ಕಕ್ಕೇರಾ, ದೇವಾಪೂರ, ತಿಂಥಣಿ, ದೇವತ್ಕಲ್, ಕೋನಾಳ, ಚನ್ನಪಟ್ನ, ತಿಪ್ಪನಟಗಿ, ಚಿಗರಿಹಾಳ, ದೇವರಗೋನಾಳ ಮತ್ತು ಮಾಲಗತ್ತಿ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
೧೦ ಎಂ.ವಿ.ಎ ವಿದ್ಯುತ್ ಪರಿವರ್ತಕ-೪ರ ನಿರ್ವಹಣೆ ಕೆಲಸ ಇರುವ ಕಾರಣ ೩೩ ಕೆವಿ ಫೀಡರ್ ಅಮ್ಮಾಪೂರ ವಿದ್ಯುತ್ ವ್ಯತ್ಯಯ ಉಂಟಾಗುವ ಪ್ರಯುಕ್ತ ಡಿಸೆಂಬರ್ ೨೦ರಂದು ಬೆಳಿಗ್ಗೆ ೯ರಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ಸರಬರಾಜು ನಿಲುಗಡೆಗೊಳಿಸಲಾಗುವುದು. ಸದರಿ ವಿದ್ಯುತ್ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಗ್ರಾಮಗಳಾದ ಪೇಠಅಮ್ಮಾಪೂರ, ಮಂಗಳೂರು, ಜಾಲಿಬೆಂಚಿ, ಬೋನಾಳ, ವಾಗಣಗೇರಾ ಮತ್ತು ಕೂಡಲಗಿ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಜೆಸ್ಕಾಂನೊAದಿಗೆ ಸಹಕರಿಸಬೇಕಾಗಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...